Subscribe to Updates
Get the latest creative news from FooBar about art, design and business.
- ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
- ಪಾವಗಡ ಗಡಿ ಗ್ರಾಮಗಳಲ್ಲಿ ಜಾನುವಾರು, ಕೇಬಲ್ ಕಳ್ಳರ ಹಾವಳಿ: ರೈತರು ಕಂಗಾಲು!
- ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
- ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ
- ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ
- ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!
- ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
Author: admin
ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಅಂದಾಕ್ಷಣ ಹೆಂಗಸರಿಗೆ ಬರುವ ಭೀಕರ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಮಸ್ಯೆ ಪುರುಷರನ್ನೂ ಬಾಧಿಸುತ್ತಿದೆ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ಅಮೆರಿಕದಂಥ ದೇಶಗಳಲ್ಲಿ ನೂರು ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಒಬ್ಬರು ಪುರುಷರಿದ್ದಾರೆ ಎನ್ನುತ್ತವೆ ಅಂಕಿ-ಅಂಶಗಳು. ಹೀಗಾಗಿ ಪ್ರಕರಣಗಳು ಅಪರೂಪ ಎನಿಸಿದರೂ, ಬೆಳಕಿಗೆ ಬರುತ್ತಲೇ ಇವೆ. ಭಾರತದಲ್ಲಿ ಈ ಸಮಸ್ಯೆ ಸಣ್ಣ ಪ್ರಾಯದವರನ್ನೂ ಬಾಧಿಸುತ್ತಿದ್ದು, ರೋಗ ತೀವ್ರವಾಗಿಯೂ ಇರುತ್ತದೆ ಎಂಬುದಾಗಿ ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಇದು ಮಹಿಳೆಯರಿಗೆ ಹೇಗೆ ಕಾಣಿಸಿಕೊಳ್ಳುತ್ತದೆ, ಅದೇ ರೀತಿ ಇರುತ್ತದೆ ಎಂದು ಹೇಳಲಾಗಿದೆ. ಮೊದಲನೆಯದಾಗಿ ಸ್ತನದ ಅಂಗಾಂಶಗಳಲ್ಲಿ ವ್ಯತ್ಯಾಸ ಕಾಣುತ್ತವೆ ಎಂದು ಹೇಳಲಾಗಿದೆ. ಎರಡನೆಯದಾಗಿ ನೋವು ಸಹಿತ ಅಥವಾ ನೋವಿಲ್ಲದಂಥ ಗಡ್ಡೆಗಳು ಕಂಡುಬರಬಹುದು, ಮೂರನೆಯದಾಗಿ ಅಸ್ವಾಭಾವಿಕವಾಗಿ ಗಾತ್ರ ಹಿಗ್ಗಬಹುದು, ನಾಲ್ಕನೆಯದಾಗಿ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದು, ಐದನೆಯದಾಗಿ ಸ್ತನದ ತೊಟ್ಟುಗಳು ಒಳ ಸರಿಯಬಹುದು, ಆರನೆಯದಾಗಿ ತೊಟ್ಟುಗಳಿಂದ ದ್ರವ ಒಸರಬಹುದು ಹಾಗೂ ತೋಳಿನ ಅಡಿಗಿನ ಸ್ವೇದ ಗ್ರಂಥಿಗಳು ಹಿಗ್ಗಬಹುದು, ಕಂಕುಳಿನಲ್ಲಿ…
ಕೆಲ ಸಮಯದಿಂದ ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ ಕಂಡಿದ್ದು ಜನತೆಗೆ, ಬಡ-ಬಗ್ಗರಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೀಗ ಏಕಾಏಕಿ ಎನ್ನುವಂತೆ ಗಗನಕ್ಕೇರಿದ್ದ ಅಕ್ಕಿ ದರದಲ್ಲಿ ಭರ್ಜರಿ 10 ರೂ ಇಳಿಕೆಯಾಗಿದೆ. ಹೌದು, ಅಕ್ಕಿದರ ಸ್ವಲ್ಪ ಇಳಿಕೆ ಕಂಡಿದ್ದು ಸ್ಟೀಮ್ ರೈಸ್ ದರ ಕಡಿಮೆಯಾಗಿದೆ. ಬೇಡಿಕೆಯ ರಾ ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಸದ್ಯ ಇದೀಗ ಬೇಸಿಗೆ ಬೆಳೆ ಬಂದಿರುವುದರಿಂದ ಅಕ್ಕಿದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಟೀಮ್ ರೈಸ್ ದರ ಕೆಜಿಗೆ 8 ರೂಪಾಯಿವರೆಗೆ ಕಡಿಮೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್.ಎನ್.ಆರ್. ಸ್ಟೀಮ್ ರೈಸ್ ದರ ಕೆಜಿಗೆ 57 -58 ರೂ. ಇತ್ತು. ಈಗ 48 -49 ರೂಪಾಯಿ ಇದೆ. ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 56 ರೂ. ನಿಂದ 47 ರೂ.ಗೆ ಇಳಿಕೆಯಾಗಿದೆ. ರಾ ರೈಸ್ ದರ 55 -57 ರೂ. ಇದೆ. ಇನ್ನು ಈ ಬೆಲೆ ಇಳಿಕೆ ಬೆನ್ನಲ್ಲೇ, ಇದು ತಾತ್ಕಾಲಿಕ ಎನ್ನುವ ಸುದ್ದಿ ಕೂಡ ಹೊರಬಿದ್ದಿದೆ. ಜೊತಗೆ…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಪರೀಕ್ಷೆಯು ಮಾರ್ಚ್ 1 ರಿಂದ 22 ರವರೆಗೆ ನಡೆದಿತ್ತು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯ-1 ರ ಫಲಿತಾಂಶ ಎಪ್ರಿಲ್ ಎರಡನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಎಪ್ರಿಲ್ 10 ರ ಆಸುಪಾಸಿನಲ್ಲಿ ಫಲಿತಾಂಶ ಪ್ರಕಟಸ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಯ ಪ್ರಕಾರ ಬಹುತೇಕ ಮೌಲ್ಯಮಾಪನ ಕಾರ್ಯ ಅಂತಿಮ ಘಟಕ್ಕೆ ತಲುಪಿದ್ದು, ಮೌಲ್ಯಮಾಪನ ಮುಗಿದು ಅಂಕಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯ ಕೂಡಾ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಎಪ್ರಿಲ್ ಎರಡನೇ ವಾರ ಫಲಿತಾಂಶ ಪ್ರಕಟಿಸಲು ಮಂಡಳಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 5,8,9 ತರಗತಿಯ ಮಕ್ಕಳ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಕೂಡಾ ಕೊನೇ ಹಂತದಲ್ಲಿದ್ದು, ಇದು ಕೂಡ ಎ.8 ರಿಂದ 10 ರೊಳಗೆ ಪ್ರಕಟಿಸಲು ಮಂಡಳಿ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಕೊರಟಗೆರೆ: ಹಂಚಿಹಳ್ಳಿ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಎರಡು ಚಿರತೆಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮದಲ್ಲಿ ಎರಡು ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದವು. 25 ದಿನದ ಹಿಂದೆ ಇದೇ ಸ್ಥಳದಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿತ್ತು. ಇದೀಗ 25 ದಿನಗಳ ಅಂತರದಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಇನ್ನೆರಡು ಚಿರತೆಗಳು ಬಿದ್ದಿವೆ. ಆದ್ರೆ, ಇನ್ನೂ ಕೂಡ ಎರಡು ಚಿರತೆಗಳು ಬೆಟ್ಟದಲ್ಲಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿದಿನ ಗ್ರಾಮಗಳಿಗೆ ನುಗ್ಗಿ ಚಿರತೆ ಮೂಕ ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇನ್ನುಳಿದ ಚಿರತೆಗಳನ್ನು ಹಿಡಿಯುವಂತೆ ಹಂಚಿಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ರೈತರು ತಮ್ಮ ಜಮೀನುಗಳ ಕಡೆ ಓಡಾಡಲು ಭಯದ ವಾತವರಣ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹಂಚಿಹಳ್ಳಿ ಗ್ರಾಮಕ್ಕೆ ಅರಣ್ಯ ಇಲಾಖೆಗಳ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರವಧಿಯ ಬಗ್ಗೆ ಆಗಾಗ ಚರ್ಚೆ ಆಗುತ್ತದೆ. ಕೆಲವು ರಾಜಕೀಯ ನಾಯಕರುಗಳು, ಶಾಸಕರುಗಳು ಇದರ ಬಗ್ಗೆ ನಾಲಿಗೆ ಹರಿಬಿಡುತ್ತ, ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರ ಮುಖ್ಯಮಂತ್ರಿ ಆಗಿರುತ್ತಾರೆ, ಮುಂದಿನ ಅವಧಿ ಡಿಕೆಶಿ ಅವರಿಗೆ ಬಿಟ್ಟುಕೊಡುತ್ತಾರೆ ಎಂದು ಬೇರೆ ಬೇರೆ ಚರ್ಚೆಗಳು ಆಗಾಗ ಶುರುವಾಗುವಂತೆ ಮಾಡುತ್ತಾರೆ. ಆದರೆ ಈಗ ಅಚ್ಚರಿಯ ಎಂಬಂತೆ ಈ ಕುರಿತು ಸಿದ್ದರಾಮಯ್ಯ ಅವರ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಮೈಸೂರು -ಕೊಡಗು ಮೈಸೂರು ಕ್ಷೇತ್ರದ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನು ಯದುವೀರ್ ಅವರ ವಿರುದ್ಧ, ಭರ್ಜರಿ ಲೀಡ್ ನಲ್ಲಿ ಗೆಲ್ಲಿಸಲು ಪಣತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿಧಾನಸಭೆ ಕ್ಷೇತ್ರವಾದ ವರುಣದಿಂದ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಕ್ಷ್ಮಣ್ ಅವರನ್ನು ನಮ್ಮ ಕ್ಷೇತ್ರದಿಂದಲೇ ಬರೋಬ್ಬರಿ 60,000 ವೋಟು ಲೀಡ್ನಲ್ಲಿ ಗೆಲ್ಲಿಸಬೇಕು. ಹೀಗಾದರೆ ಮಾತ್ರ ನಾನು ಮುಖ್ಯಮಂತ್ರಿ ಆಗಿ ಮುಂದುವರೆಯಲು ಸಾಧ್ಯ ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು…
ಕೊರಟಗೆರೆ: ಕರ್ನಾಟಕ ಸೇರಿದಂತೆ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ ಇದು ಪ್ರಜಾ ಪ್ರಭುತ್ವಕ್ಕೆ ವಿರುದ್ದವಾದ ಅಜೆಂಡಾವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು. ಕೊರಟಗೆರೆ ಪಟ್ಟಣದ ರಾಜೀವ ಭವನದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರ ಜೋತೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ಬರ ಪರಿಹಾರ ಅನುದಾನ ಹಂಚಿಕೆ, ಯೋಜನೆ ನೀಡುವುದರಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅವರು ಹೇಳಿದರು.ದೇಶದಲ್ಲಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರು ಜನರ ಸಂಕಷ್ಠಕ್ಕೆ ಈವರೆಗೂ ಸ್ಪಂದಿಸಿಲ್ಲ, ಅನುದಾನ ನಿಡುವಂತೆ ಸುಪ್ರೀಂ ಕೋರ್ಟ್ ಮೋರೆ ಹೋಗಬೇಕಾದ ಪರಿಸ್ಥತಿ ಬಂದಿದೆ ಇದು ಒಳ್ಳೆಯ ಬೆಳವಣೆಗೆಯಲ್ಲ. ಜನರು ಬಿಜೆಪಿ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಡುವ ಮಾತುಗಳು ಗಮನಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನಿಸುತ್ತದೆ.…
ನಿಮ್ಮ ಗ್ಯಾಸ್ ಬರ್ನರ್ ನ ಜ್ವಾಲೆಯು ಕಡಿಮೆ ಉರಿಯುತ್ತಿದೆಯೇ? ಹೀಗೆ ಉಂಟಾಗಲು ಕಾರಣ ಬರ್ನರ್ ನಲ್ಲಿ ಹೆಪ್ಪುಗಟ್ಟಿದ ಎಣ್ಣೆ ಮತ್ತು ಕಾರ್ಬನ್. ಈ ಕೆಳಗೆ ನೀಡಿದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಬರ್ನರ್ ನಲ್ಲಿ ಸಂಗ್ರಹವಾದ ಕೊಳೆಯನ್ನು ನೀವು ಸುಲಭವಾಗಿ ಸ್ವಚ್ಛಗೊಳಿಸಬಹುದು. ಬನ್ನಿ ತಿಳಿಯೋಣ. ಲಿಕ್ವಿಡ್ ಸೋಪ್ ಮತ್ತು ಬಿಸಿ ನೀರು: ಈ ವಿಧಾನವು ತುಂಬಾ ಸರಳ ಮತ್ತು ಪರಿಣಾಮಕಾರಿಯಾಗಿದೆ. ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಲವು ಹನಿ ಸೋಪ್ ಅನ್ನು ಸೇರಿಸಿ. ಈಗ ಗ್ಯಾಸ್ ಬರ್ನರ್ ಅನ್ನು ಈ ಮಿಶ್ರಣದಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿಡಿ. ಇದರ ನಂತರ, ಬರ್ನರ್ ಅನ್ನು ತೆಗೆದುಹಾಕಿ ಮತ್ತು ಮೃದುವಾದ ಸ್ಪಾಂಜ್ ಅಥವಾ ಬ್ರಷ್ನಿಂದ ಉಜ್ಜುವ ಮೂಲಕ ಅದನ್ನು ಸ್ವಚ್ಛಗೊಳಿಸಿ. ಬರ್ನರ್ನಲ್ಲಿ ಸಂಗ್ರಹವಾದ ಬೆಳಕಿನ ಕೊಳಕು ಮತ್ತು ಗ್ರೀಸ್ ಅನ್ನು ತೆಗೆದುಹಾಕುವಲ್ಲಿ ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿದೆ. ಅಡಿಗೆ ಸೋಡಾ ಮತ್ತು ವಿನೆಗರ್ ನ ಉಪಯೋಗಗಳು: ಮೊದಲನೆಯದಾಗಿ, ಗ್ಯಾಸ್ ಸ್ಟೌವ್ ನಿಂದ…
ಸರಗೂರು: ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದುಕೊಳ್ಳುತ್ತೇವೆ. ನೂರು ನೂರಕ್ಕೂ ಅಷ್ಟು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ನನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು. ತಾಲ್ಲೂಕಿನ ನಾಡ ದೇವತೆ ಚಿಕ್ಕದೇವಮ್ಮನ ಬೆಟ್ಟಕ್ಕೆ ಮಂಗಳವಾರದಂದು, ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಸುನೀಲ್ ಬೋಸ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು, ಕಾರ್ಯಕರ್ತರ ಜೊತೆಗೂಡಿ ತಾಯಿ ಚಿಕ್ಕದೇವಮ್ಮನ ದೇವಸ್ಥಾನದ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಸರಗೂರು ಮತ್ತು ಕೋಟೆ ತಾಲ್ಲೂಕಿನ ಜನತೆ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತಿಹೆಚ್ಚು ಮತಗಳನ್ನು ನೀಡಿ ಆರ್ಶೀವಾದ ನೀಡಿ ಗೆಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ, ನನ್ನ ರಾಜಕೀಯ ಗುರುಗಳಾದ ಆರ್. ಧ್ರುವನಾರಾಯಣ್ ಹಾಗೂ ನಮ್ಮ ತಂದೆ ಚಿಕ್ಕಮಾದುರವರನ್ನು ಸ್ಮರಣೆ ಮಾಡಿಕೊಳ್ಳುತ್ತಾ, ನಮ್ಮ ಎಸಿಸಿ ರಾಷ್ಟ್ರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಚ್ ಸಿ ಮಹದೇವಪ್ಪ…
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಜುಭಾಗಲ್ಲಿ ತನ್ನ ಇಚ್ಚೆಯಂತೆ ನಡೆದುಕೊಳ್ಳಲು ನಿರಾಕರಿಸಿದ ಪ್ರೇಯಸಿಗೆ, ಪ್ರಿಯಕರ ಚಾಕುವಿನಿಂದ ಇರಿದ ಘಟನೆ ನಡೆದಿದೆ. ರವಿಶಂಕರ್(42) ಆರೋಪಿಯಾಗಿದ್ದಾನೆ. ಆಟೋ ಚಾಲಕನಾಗಿರುವ ನಂದನಗದ್ದಾ ನಿವಾಸಿ ರವಿಶಂಕರ್ (42) ಮತ್ತು ಕಾಜುಭಾಗ್ ನಿವಾಸಿಯಾದ ಮಹಿಳೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ತಿಂಗಳಿನಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಾ, ಗುಪ್ತವಾಗಿ ಭೇಟಿಯಾಗುತ್ತಿದ್ದರು. ಆದರೆ, ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇದೇ ವೇಳೆ ಕುಪಿತಗೊಂಡು ರವಿಶಂಕರ್, ಚಾಕುವಿನಿಂದ ಪ್ರೇಯಸಿಯ ಎದೆಗೆ ಇರಿದಿದ್ದಾನೆ. ಸದ್ಯ, ಆರೋಪಿ ರವಿಶಂಕರ್ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತ, ಚಾಕು ಇರಿತಕ್ಕೊಳಗಾದ ಮಹಿಳೆಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯುವತಿ ಕಾರನ್ನು ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ರಾತ್ರಿ ನಡೆದಿದೆ. ಮಡಿವಾಳ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಕಿರಿಕ್ ನಡೆದಿದೆ. ನಂತರ ಕಾರನ್ನು ಚೇಸ್ ಮಾಡಿದ ಮೂವರು ಕಿರುಕುಳ ನೀಡಿದ್ದಾರೆ. ಮಡಿವಾಳ ಅಂಡರ್ ಪಾಸ್ ಸೇತುವೆಯಿಂದ ಕೋರಮಂಗಲ 5ನೇ ಬ್ಲಾಕ್ ವರೆಗೆ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲದೇ ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿ ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಪರಾರಿಯಾಗಿದ್ದಾರೆ. ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ ಅಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ತೇಜಸ್, ಜಗನ್ನಾಥ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…