ಸರಗೂರು: ನಮಗೆ ಸಮಾಜಕ್ಕೆ ಬೆಂಬಲ ನೀಡುವ ಪಕ್ಷಕ್ಕೆ ಬೆಂಬಲ ನೀಡಿ ಎಂದು ಟೌನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆರ್ಯ ಈಡಿಗ ಸಮಾಜದ ಮುಖಂಡ ನಾಗರಾಜು ಕರೆ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಸಮಯದಲ್ಲಿ ಸಾರಾಯಿ, ಶೇಂದಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರು. ಇದರಿಂದಾಗಿ ಆರ್ಯ ಈಡಿಗ ಸಮುದಾಯದ ಮುಖಂಡರು ಬೀದಿ ಪಾಲಾಗಿದ್ದಾರೆ. ಅವರಿಗೆ ಏನು ಪರಿಹಾರ ಕೊಟ್ಟಿದ್ದೀರಿ ಹೇಳಿ ಸ್ವಾಮಿಜೀಗಳೇ ಎಂದು ಪ್ರಶ್ನಿಸಿದ್ದಾರೆ.
ಸರಗೂರು ತಾಲ್ಲೂಕಿನ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಮಾತನಾಡಿದ ಟೌನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆರ್ಯ ಈಡಿಗ ಸಮಾಜದ ಮುಖಂಡ ನಾಗರಾಜು ಮಾತನಾಡಿ, ನಾನು ನನ್ನ ಸಮುದಾಯದ ಪರವಾಗಿ ಮುಂದೆ ಹೋಗುತ್ತಿರುವಾಗ ನಿಮ್ಮ ಗಮನಕ್ಕೆ ಬಂದ ಕೂಡಲೇ ಸ್ವಾಮೀಜಿಗಳೇ ನನ್ನ ಮೇಲೆ ದೂರು ದಾಖಲಾಗಿಸಿದ್ದೀರಿ. ಇದು ನ್ಯಾಯವೇ? ನಮ್ಮ ಸಮುದಾಯಕ್ಕೆ ಬೆಂಬಲವಾಗಿ ನಿಂತ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದರು.
ಮೊದಲು ನಮ್ಮ ಸಮಾಜ ಯುವಕರು ಸಾರಾಯಿ ಶೇಂದಿ ಮಾರಾಟ ಮಾಡುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೇ ನಮ್ಮ ಸಮುದಾಯದ ಜನರನ್ನು ಬೀದಿಪಾಲು ಮಾಡಿದ್ದೀರಿ. ಅದನ್ನು ಗಮನದಲ್ಲಿ ಇಟ್ಟುಕೊಂಡು ಯಾರಿಗೆ ಬೆಂಬಲ ನೀಡಬೇಕು ಎಂದು ಯೋಚಿಸಿ ಮತ ನೀಡಲು ಮುಂದಾಗಿ ಎಂದರು.
ನಮ್ಮ ಸಮುದಾಯದ ಅನೇಕ ಯುವಕರು ಮನೆ ಆಸ್ತಿ ಹಾಗೂ ತಂದೆ ತಾಯಿ ಬಿಟ್ಟು ಜೈಲಿನಲ್ಲಿ ಇದ್ದಾರೆ. ಅವರ ಬಗ್ಗೆ ಚಿಂತನೆ ಮಾಡಿ. ಆಮೇಲೆ ಬೆಂಬಲ ನೀಡಿ. ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸಾಮಾಜಕ್ಕೆ ಅನ್ಯಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಸಮುದಾಯಕ್ಕೆ ಬೆಂಬಲಿಸಿ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಸಮುದಾಯ ಬಂಧುಗಳಿಗೆ ಮನವಿ ಮಾಡಿಕೊಂಡರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296