ಸರಗೂರುತಾಲ್ಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯ ಮಟಕೆರೆ ಗ್ರಾಮದ ಮೊಳೆಯೂರು ಸರ್ಕಲ್ ಬಳಿ ಬೈಕ್ ಹಾಗೂ ಗೂಡ್ಸ್ ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಂಗ್ರೆಸ್ ಪಕ್ಷದ ಸೇವಾದಳ ತಾಲ್ಲೂಕು ಮಠದಕಟ್ಟೆ ಮಣಿಕಂಠ (32) ವರ್ಷ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಮತಯಾಚನೆ ಮಾಡಲು, ವಿವಿಧ ಗ್ರಾಮಗಳಿಗೆ ಬೈಕ್ ಮೂಲಕ ಮತಯಾಚನೆ ನಡೆಸುತ್ತಿದ್ದು, ಮೊಳೆಯೂರು ಸರ್ಕಲ್ ಬಳಿ ಎದುರುಗಡೆಯಿಂದ ಗೂಡ್ಸ್ ಆಟೋ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಅವರ ತಲೆ ಮತ್ತು ಕಾಲುಗೆ ಗಾಯಗಳಾಗಿದ್ದು, ಅವರಿಗೆ ಪಟ್ಟಣದ ವಿವೇಕಾನಂದ ಯೂತ್ ಮೊಮೆಂಟ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಣಿಕಂಠ ಕಾಂಗ್ರೆಸ್ ಪಕ್ಷದ ಅಪ್ಪಟ ಕಾರ್ಯಕರ್ತನಾಗಿದ್ದಾರೆ. ಇವರು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಲು ಬೈಕ್ ಮೂಲಕ ವಿವಿಧ ಗ್ರಾಮಗಳಿಗೆ ಹೋಗಿದ್ದರು. ಮತಯಾಚನೆಗಾಗಿ ಮಠದಕಟ್ಟೆ ಗ್ರಾಮದಿಂದ ಬಿ ಮಟಕೆರೆ ಗ್ರಾಪಂ ವ್ಯಾಪ್ತಿಯ ಮಟಕೆರೆ ವಿವಿಧ ಗ್ರಾಮಗಳಿಗೆ ಚುನಾವಣೆ ಪ್ರಚಾರ ಮಾಡಲು ಹೋಗಿದ್ದ ಸಂದರ್ಭದಲ್ಲಿಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿ, ಮಣಿಕಂಠರವರ ತಾಯಿ ಮತ್ತು ಕುಟುಂಬದವರಿಗೆ ಧೈರ್ಯ ತುಂಬಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದುಲು ಬೇಕಾದ ಸಹಾಯಧನ ಮಾಡಿದರು ಎನ್ನಲಾಗಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296