ನಿಟ್ಟೂರು: ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಪತ್ರೆಮತ್ತಿಘಟ್ಟದಲ್ಲಿ ಮೇ 3 ಮತ್ತು 4 ರಂದು ಶ್ರೀ ಜೋಡಿಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದೆ.
ಇದರ ಅಂಗವಾಗಿ ಮೇ 3 ರಂದು ಸಂಜೆ 5 ಗಂಟೆಗೆ ಧ್ವಜಾರೋಹಣ, ಮೇ 4 ರಂದು ಬೆಳಗ್ಗೆ 7ಕ್ಕೆ ಪೂರ್ಣ ಕುಂಭಾಭಿಷೇಕ, ರುದ್ರಾಭಿಷೇಕ, ಮಧ್ಯಾಹ್ನ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ, ಶ್ರೀ ತೀರ್ಥರಾಮೇಶ್ವರಸ್ವಾಮಿ, ಶ್ರೀ ಸಿದ್ಧೇಶ್ವರಸ್ವಾಮಿ ದೇವರುಗಳ ಆಗಮನ, ರಾತ್ರಿ 3 ಗಂಟೆಗೆ ಶ್ರೀ ಜೋಡಿ ಬಸವೇಶ್ವರಸ್ವಾಮಿಯವರಿಗೆ ಹೋಮ, ನಂತರ ಗ್ರಾಮಸ್ಥರಿಂದ ಆರತಿ ನಡೆಯಲಿದೆ.
ಡಾ.ಶ್ರೀ ಅಭಿನವಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮಿಗಳು, ಶ್ರೀ ವಿಭವ ವಿದ್ಯಾಶಂಕರಸ್ವಾಮಿಗಳ ಆಗಮನದೊಂದಿಗೆ ದೇವಸ್ಥಾನದ ಆವರಣ, ರಸ್ತೆ ಉದ್ಘಾಟನೆಯನ್ನು ಸಚಿವ ವಿ.ಸೋಮಣ್ಣ ನೆರವೇರಿಸುವರು.
ರಾತ್ರಿ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9ಕ್ಕೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಗೆ ಶಾರದಾ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾತ್ರಿ 10ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 11ಕ್ಕೆ ವಿವಿಧ ಕಲಾ ತಂಡದೊಂದಿಗೆ ದೇವರುಗಳ ಮೆರವಣಿಗೆ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


