nammatumakuru

    Subscribe to Updates

    Get the latest creative news from FooBar about art, design and business.

    What's Hot

    ಐಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಣೆ: ಸರ್ಕಾರ ಖಡಕ್ ಎಚ್ಚರಿಕೆ, ಖಾಸಗಿ ಮೀಸಲಾತಿ ವಿಧೇಯಕ ಮತ್ತೆ ಮುನ್ನೆಲೆಗೆ!

    October 26, 2026

    ಕಬ್ಬಿಗೆ ಸೂಕ್ತ ಬೆಲೆ: ಪ್ರತಿಭಟನೆ ವೇಳೆ ರೈತರ ನಡುವೆಯೇ ಬಣ ಬಡಿದಾಟ: ಪ್ರತಿಭಟನಾ ಸಭೆ ರಣರಂಗವಾಯ್ತು!

    October 26, 2026

    ಸಂಜೆ ಚಹಾ ಜೊತೆಗೆ ರುಚಿಕರ ಹಾಗೂ ಗರಿಗರಿಯಾದ ಆಲೂಗಡ್ಡೆ ಫ್ರಿಟರ್ಸ್!

    October 26, 2026
    Facebook Twitter Instagram
    ಟ್ರೆಂಡಿಂಗ್
    • ಐಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಣೆ: ಸರ್ಕಾರ ಖಡಕ್ ಎಚ್ಚರಿಕೆ, ಖಾಸಗಿ ಮೀಸಲಾತಿ ವಿಧೇಯಕ ಮತ್ತೆ ಮುನ್ನೆಲೆಗೆ!
    • ಕಬ್ಬಿಗೆ ಸೂಕ್ತ ಬೆಲೆ: ಪ್ರತಿಭಟನೆ ವೇಳೆ ರೈತರ ನಡುವೆಯೇ ಬಣ ಬಡಿದಾಟ: ಪ್ರತಿಭಟನಾ ಸಭೆ ರಣರಂಗವಾಯ್ತು!
    • ಸಂಜೆ ಚಹಾ ಜೊತೆಗೆ ರುಚಿಕರ ಹಾಗೂ ಗರಿಗರಿಯಾದ ಆಲೂಗಡ್ಡೆ ಫ್ರಿಟರ್ಸ್!
    • ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ
    • ಅನ್ನ ನೀಡುವ ಭೂಮಿಗೆ ಕೃತಜ್ಞತೆ ಸಲ್ಲಿಸುವ ದಿನ; ಭೂಮಿ ಹುಣ್ಣಿಮೆಯ ಮಹತ್ವ ತಿಳಿಯಿರಿ
    • ನವೆಂಬರ್ 1 ರಿಂದ ‘ಮತ ಬಚಾವೋ ದೇಶ ಬಚಾವೋ’ ಅಭಿಯಾನ: ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್
    • ಕೊರಟಗೆರೆ: ಮೋಹನ್‌ ಲಾಲ್ ಅವರ ಅಂತಿಮ ದರ್ಶನ ಪಡೆದ ಡಿಸಿಎಂ ಡಾ.ಜಿ. ಪರಮೇಶ್ವರ್
    • ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
    ಜಿಲ್ಲಾ ಸುದ್ದಿ July 28, 2026

    ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ

    By Ganesh TumkuruJuly 28, 2026No Comments2 Mins Read
    ishwar khandre.jpg

    ಬೀದರ್: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಗ್ರಾಮೀಣ ಭಾಗದ ಜನರು ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ‘ವಿಬಿ–ಜಿ ರಾಮ್ ಜಿ’ (VB–G RAM G) ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವಂತೆ ಅವರು ನಿರ್ದೇಶಿಸಿದ್ದಾರೆ.

    ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ (ಪಿಡಿಒ) ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಮಳೆ ಕೊರತೆಯಿಂದ ಬತ್ತಿಹೋಗಿರುವ ಕೊಳವೆ ಬಾವಿಗಳ ಜಲ ಮರುಪೂರಣ ಕಾರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಂಡು ಉದ್ಯೋಗ ನೀಡುವಂತೆ ತಿಳಿಸಿದರು.

    ಆರ್ಥಿಕ ಅನುದಾನ ಸುಲಭ ಲಭ್ಯತೆ: ಜುಲೈ 1ರಿಂದ ಜಾರಿಗೆ ಬಂದಿರುವ ವಿಬಿ–ಜಿ ರಾಮ್ ಜಿ ಯೋಜನೆಗೆ 60:40ರ ಅನುಪಾತದಲ್ಲಿ ಅನುದಾನ ಲಭ್ಯವಿದೆ. ಮೊದಲ ತ್ರೈಮಾಸಿಕಕ್ಕಾಗಿ ಕೇಂದ್ರ ಸರ್ಕಾರ ₹1,700 ಕೋಟಿ ಹಾಗೂ ರಾಜ್ಯ ಸರ್ಕಾರ ₹1,200 ಕೋಟಿ ಸೇರಿದಂತೆ ಒಟ್ಟು ₹2,900 ಕೋಟಿ ಹಣವನ್ನು ನೀಡಿದೆ.

    ಉದ್ಯೋಗ ಸೃಷ್ಟಿ ಲಕ್ಷ್ಯ: ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 5 ಲಕ್ಷ ಗ್ರಾಮೀಣ ಜನರಿಗೆ ಕೆಲಸ ನೀಡಿ, 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿಸುವಷ್ಟು ಹಣಕಾಸಿನ ನೆರವು ಲಭ್ಯವಿದೆ.

    ಉದ್ಯೋಗ ಕಾರ್ಡ್ ವಿತರಣೆ: ಈ ಹಿಂದೆ ಮನರೇಗಾ (MGNREGA) ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಮೀಣ ಕುಟುಂಬಗಳಿಗೆ ‘ವಿಬಿ-ಜಿ ರಾಮ್ ಜಿ’ ಜಾಬ್ ಕಾರ್ಡ್ಗಳನ್ನು ನೀಡಿ, ಕೆಲಸ ಬಯಸುವ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ತಕ್ಷಣವೇ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಜಿಲ್ಲೆಯಲ್ಲಿ ಕೊಳವೆ ಬಾವಿ ಜಲ ಮರುಪೂರಣ, ಕೆರೆ-ಕಾಲುವೆ ಅಭಿವೃದ್ಧಿ ಹಾಗೂ ಚೆಕ್ ಡ್ಯಾಂ ನಿರ್ಮಾಣದಂತಹ ಕೃಷಿ ಮತ್ತು ಸಮುದಾಯ ಕಾಮಗಾರಿಗಳಿಗೆ ಆದ್ಯತೆ ನೀಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜೊತೆಗೆ ಬಡ ಕುಟುಂಬಗಳಿಗೆ ಆಸರೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

    ವರದಿ: ಅರವಿಂದ ಮಲ್ಲೀಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    Ganesh Tumkuru
    • Website

    Related Posts

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

    October 24, 2026

    ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು

    October 23, 2026

    Leave A Reply Cancel Reply

    Our Picks

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಐಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಣೆ: ಸರ್ಕಾರ ಖಡಕ್ ಎಚ್ಚರಿಕೆ, ಖಾಸಗಿ ಮೀಸಲಾತಿ ವಿಧೇಯಕ ಮತ್ತೆ ಮುನ್ನೆಲೆಗೆ!

    October 26, 2026

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಐಟಿ (IT) ಕಂಪನಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಮತ್ತು ಮಾತೃಭಾಷೆ ಕನ್ನಡ ಎಂಬ ಕಾರಣಕ್ಕೆ ಉದ್ಯೋಗಾವಕಾಶಗಳನ್ನು ನಿರಾಕರಿಸಲಾಗುತ್ತಿದೆ…

    ಕಬ್ಬಿಗೆ ಸೂಕ್ತ ಬೆಲೆ: ಪ್ರತಿಭಟನೆ ವೇಳೆ ರೈತರ ನಡುವೆಯೇ ಬಣ ಬಡಿದಾಟ: ಪ್ರತಿಭಟನಾ ಸಭೆ ರಣರಂಗವಾಯ್ತು!

    October 26, 2026

    ಸಂಜೆ ಚಹಾ ಜೊತೆಗೆ ರುಚಿಕರ ಹಾಗೂ ಗರಿಗರಿಯಾದ ಆಲೂಗಡ್ಡೆ ಫ್ರಿಟರ್ಸ್!

    October 26, 2026

    ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ

    October 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.