ಸರಗೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ ಬಣ) ವತಿಯಿಂದ ತಾಲೂಕಿನ ನುಗು ಜಲಾಶಯದ ಪ್ರವಾಸಿ ಮಂದಿರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಖಾಲಿ ಇದ್ದ ತಾಲೂಕು ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕಿನ ವಿವಿಧ ಪ್ರಮುಖ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿ, ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.
ಮೈಸೂರು ವಿಭಾಗದ ವಿಭಾಗೀಯ ಸಂಚಾಲಕರಾದ ರಾಜಶೇಖರ್ ಕೋಟೆ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು. ಸಭೆಯಲ್ಲಿ ತಾಲೂಕು ಹಾಗೂ ಪಟ್ಟಣ ಮಟ್ಟದ ಸಂಘಟನಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕು ಘಟಕ:
- ತಾಲೂಕು ಸಂಚಾಲಕರು: ಗೋಪಾಲಕೃಷ್ಣ ಬಿಡುಗಲು
- ತಾಲೂಕು ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರು: ಸೋಮೇಶ್ ನೇರಳೆ
- ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿಭಾಗದ ಸಂಚಾಲಕರು: ಮಲ್ಲಿಕಾರ್ಜುನ ಉಯ್ಯಂಬಳ್ಳಿ
- ತಾಲೂಕು ಸಾಂಸ್ಕೃತಿಕ ಸಂಘಟನಾ ಸಂಚಾಲಕರು: ಚೆನ್ನಯ್ಯ ಕಾಳೇಗೌಡನ ಹುಂಡಿ
- ಖಜಾಂಚಿ: ಶಾಂತಿಪುರ ಗೋಪಾಲ್
ಪಟ್ಟಣ ಪಂಚಾಯಿತಿ ಶಾಖೆ (ಟೌನ್ ಘಟಕ):
- ಟೌನ್ ಸಂಚಾಲಕರು: ಕಾರಯ್ಯ ಎಸ್.ಎಂ.
- ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರು: ವಿಜಯ್ ಕುಮಾರ್
- ಹಿಂದುಳಿದ ಹಾಗೂ ಪೌರಕಾರ್ಮಿಕ ವಿಭಾಗದ ಸಂಚಾಲಕರು: ಶಿವಮೂರ್ತಿ
- ಅಸಂಘಟಿತ ಮತ್ತು ಪೌರಕಾರ್ಮಿಕ ವಿಭಾಗದ ಸಂಚಾಲಕರು: ಆನಂದ್
- ಖಜಾಂಚಿ: ಪ್ರವೀಣ್
- ಕಾರ್ಯಕಾರಿ ಸಮಿತಿ ಸದಸ್ಯರು: ಸುಂದರ್
“ದಲಿತ ಸಂಘರ್ಷ ಸಮಿತಿಯು ಸಮಾಜದ ನೊಂದವರ ಪರ ನ್ಯಾಯ ದೊರಕಿಸುವ ಉದ್ದೇಶದಿಂದ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಕಾರ್ಯನಿರ್ವಹಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಪ್ರಾಮಾಣಿಕ ಸೇವೆ ಸಲ್ಲಿಸಿ, ಬಾಬಾಸಾಹೇಬರ ಕನಸನ್ನು ನನಸು ಮಾಡೋಣ.”
— ಸೋಮೇಶ್ ನೇರಳೆ, ತಾಲೂಕು ಆಂತರಿಕ ಶಿಸ್ತು ಮತ್ತು ತರಬೇತಿ ಸಂಚಾಲಕರು
ಎಸ್.ಡಿ. ಸಣ್ಣಸ್ವಾಮಿ (ದಸಂಸ ಜಿಲ್ಲಾ ಸಂಚಾಲಕರು) ಮಾತನಾಡಿ, ಸರಗೂರು ತಾಲೂಕಿನಲ್ಲಿ ದಸಂಸ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಬೇಕು. ಗ್ರಾಮ ಮಟ್ಟದಲ್ಲೂ ಸಂಘಟನೆಯನ್ನು ವಿಸ್ತರಿಸಿ, ದಲಿತರು ಹಾಗೂ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ಕೆಲಸವಾಗಬೇಕು ಎಂದರು.
ಮಲ್ಲಿಕಾರ್ಜುನ ಉಯ್ಯಂಬಳ್ಳಿ (ಹಿರಿಯ ಮುಖಂಡರು ಮಾತನಾಡಿ, ಸಂಘಟನೆಯ ಏಳಿಗೆ ಹಾಗೂ ಬೆಳವಣಿಗೆಗೆ ಎಲ್ಲರೂ ಒಂದಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ರಾಜಶೇಖರ್ ಕೋಟೆ (ವಿಭಾಗೀಯ ಸಂಚಾಲಕರು): ನೂತನ ಪದಾಧಿಕಾರಿಗಳಿಗೆ ಸಂಘಟನೆಯ ತತ್ವ-ಸಿದ್ದಾಂತಗಳು, ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ಹೋರಾಟಗಳ ರೂಪುರೇಷೆ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಗೋಪಾಲಕೃಷ್ಣ ಬಿಡುಗಲು (ತಾಲೂಕು ಸಂಚಾಲಕರು) ಮಾತನಾಡಿ, ತಾಲೂಕಿನ ರೈತರ ಸಮಸ್ಯೆಗಳು ಸೇರಿದಂತೆ ವಿವಿಧ ಜನಪರ ವಿಷಯಗಳ ಕುರಿತು ಚರ್ಚಿಸಿ, ಮುಂದಿನ ದಿನಗಳಲ್ಲಿ ಸಂಘಟನೆ ಪರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರೈತರ ಹಾಗೂ ಶೋಷಿತರ ಪರವಾಗಿ ಹೋರಾಟ ರೂಪಿಸುವ ನಿರ್ಧಾರದೊಂದಿಗೆ ಸಭೆಯು ಸೌಹಾರ್ದಯುತವಾಗಿ ಮುಕ್ತಾಯಗೊಂಡಿತು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
