Subscribe to Updates
Get the latest creative news from FooBar about art, design and business.
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
- ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
- ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ
- ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
- ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
Author: admin
ಸರಗೂರು: ಮಂಗಳವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಪುತ್ರ ಸುನೀಲ್ ಬೋಸ್ ಪರ ರೋಡ್ ನಡೆಸಿ ಸಚಿವ ಎಚ್.ಸಿ. ಮಹದೇವಪ್ಪ ಮತಯಾಚನೆ ಮಾಡಿದರು. ಸರಗೂರು ಪಟ್ಟಣದ ಮಹಾವೀರ ಸರ್ಕಲ್ ಬಳಿ ಸಾಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಹೂವಿನ ಹಾರ ಹಾಕಿ ಹೂ ಚೆಲ್ಲಿ, ನಂತರ ರೋಡ್ ಶೋ ನಲ್ಲಿ ಒಂದನೇ ಮುಖ್ಯ ರಸ್ತೆ ಹಾಗೂ ಎರಡನೇ ಮುಖ್ಯ ಮೆರವಣಿಗೆ ಮೂಲಕ ಮತಯಾಚನೆ ಮಾಡಿ, ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ನನ್ನನ್ನು ಹತ್ತಿರದಿಂದ ಬಲ್ಲ ಜನರಿಗೆ, ಎಲ್ಲರನ್ನೂ ಪ್ರೀತಿಸುವ ನನ್ನ ಸ್ವಭಾವ ಗೊತ್ತು. ಈ ಕ್ಷೇತ್ರಕ್ಕೆ ಒಳ್ಳೆಯ, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ನಿಸ್ವಾರ್ಥವಾಗಿ ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕೆಲಸ ಮಾಡಬೇಕೆಂಬ ಆಶಯ ಹೊಂದಿದ್ದೇನೆ ಎಂದರು. ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರು ಬಿಜೆಪಿ ಸರ್ಕಾರದ ವಿರೋದಿಯಾಗಿದ್ದಾರೆ.. ಬಡಜನರಿಗೆ ಅನ್ಯಾಯವಾಗಿದೆ. ಬಡವರ ಪರ ಮುಖ್ಯಮಂತ್ರಿಯವರ ಬಜೆಟ್,…
ತುಮಕೂರು: ಮಾಜಿ ಸಿಎಂ ಯಡಿಯೂರಪ್ಪ ಇಂದು ತಿಪಟೂರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಬಂದಿದ್ದ ಹೆಲಿಕ್ಯಾಪ್ಟರ್ ಅನ್ನು ಚುನಾವಣೆ ಅಧಿಕಾರಿಗಳು ತಿಪಟೂರಿನ ಕಲ್ಪತರು ಹೆಲಿಪ್ಯಾಡ್ ನಲ್ಲಿ ಪರಿಶೀಲನೆ ನಡೆಸಿದರು. ಇಂದು ಬಹಿರಂಗ ಪ್ರಚಾರಕ್ಕೆ ಕೊನೆ ದಿನ ಹಿನ್ನೆಲೆ, ಬೆಂಗಳೂರಿನಿಂದ ತಿಪಟೂರಿಗೆ ಯಡಿಯೂರಪ್ಪ, ವಿ. ಸೋಮಣ್ಣ ಪರ ಮತಯಾಚನೆಗೆ ಹೆಲಿಕಾಪ್ಟರ್ ಮೂಲಕ ತಿಪಟೂರಿಗೆ ಆಗಮಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪ್ರಜಾಧ್ವನಿ-2 ಯಾತ್ರೆಯಲ್ಲಿ ಬೃಹತ್ ಜನಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಡುಗೊಲ್ಲ ಸಮುದಾಯವನ್ನು ST ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆಗೆ ನಾವು ಸಂಪೂರ್ಣವಾಗಿ ಸ್ಪಂದಿಸಿದ್ದೇವೆ. ಈ ಬಗ್ಗೆ ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾಗಿದೆ. ಆದರೆ ಈವರೆಗೂ ಇದಕ್ಕೆ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಆಗ್ರಹಕ್ಕೆ ಧ್ವನಿಗೂಡಿಸಿ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ತಮ್ಮ ಭಾಷಣದಲ್ಲೂ ಇದೇ ಮಾತನ್ನು ಪುನರುಚ್ಛರಿಸಿದರು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು. ಹಾಗೆಯೇ ಪ್ರಧಾನಿ ಮೋದಿ ವಿರುದ್ದ ಗುಡುಗಿದ ಪ್ರಿಯಾಂಕ್ ಗಾಂಧಿ, ಮೋದಿ ದೇಶದ ಕೆಲ ಬಂಡವಾಳಶಾಹಿ ಜೊತೆ ಇದ್ದಾರೆ. ಬಂಡವಾಳ ಶಾಹಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಮೋದಿ ತಮ್ಮ ಗೆಳೆಯರಗಾಗಿ ಎಲ್ಲವನ್ನು ಕೊಡುತ್ತಿದ್ದಾರೆ. ದೇಶದ ಆಸ್ತಿ ತಮ್ಮ…
ಚಿತ್ರಕಲೆಗೆ ಒಂದು ಡಾಲರ್ ಅಂಕಿ ಅಂಶವು ಹರಾಜಿಗೆ -ಹಾಕಿದರೆ ಅದನ್ನು 5700 ಮಿಲಿಯನ್‌ಗಿಂತಲೂ ಹೆಚ್ಚು (ಭಾರತೀಯ ಕರೆನ್ಸಿಯಲ್ಲಿ 57,94,60,00,000) ಹಾಕುತ್ತದೆ. ಇದು ತುಂಬಾ ಅಮೂಲ್ಯವಾಗಿದೆ. ಸುಂದರವಾದ ಸ್ಟೈಲ್ ಹೊಂದಿರುವ ಸ್ತ್ರೀ ಆಕೃತಿಯ ಚಿತ್ರವೇ ಈ ಮೊನಾಲಿಸಾ. ಸಾಮಾನ್ಯವಾಗಿ ಟಿವಿ ಗಳಲ್ಲಿ ಮೋನಾಲಿಸಾ ಚಿತ್ರವನ್ನು ನೋಡಿರುತ್ತೇವೆ. ಆಕೆಯ ಚಿತ್ರವನ್ನು ನೋಡಿದರೆ ಒಂದೊಂದು ಸಲ ಒಂದೊಂದು ರೀತಿ ಕಾಣುತ್ತದೆ. ಕೆಲವೊಮ್ಮೆ ಮುಗುಳು ನಗುವುದು, ಕೆಲವೊಮ್ಮೆ ಬೇಸರದಲ್ಲಿರುವಂತೆ ಕಂಡು ಬರುತ್ತದೆ. ಅಸಲಿಗೆ ಯಾರು ಈ ಮೊನಾಲಿಸಾ? ಇದು ನೂರಾರು ವರ್ಷಗಳಿಂದ ಸಂಶೋಧಕರಿಗೆ ಉತ್ತರಿಸದ ಪ್ರಶ್ನೆಯಾಗಿಯೇ ಉಳಿದಿದೆ. ಮೊನಾಲಿಸಾ ಚಿತ್ರವನ್ನು ಇಟಾಲಿಯನ್ ವಿಜ್ಞಾನಿ ಲಿಯೊನಾರ್ಡೊ ಡಾ ವಿನ್ಸಿ ಚಿತ್ರಿಸಿದ್ದಾರೆ. ಆ -ಚಿತ್ರದಲ್ಲಿನ ಮೂಲ ಮೊನಾಲಿಸಾ ಯಾರು? ಶತಮಾನಗಳಿಂದ ಸಂಶೋಧಕರನ್ನು ಗೊಂದಲಕ್ಕೀಡಾದ ಪ್ರಶ್ನೆಯಾಗಿದೆ. ಮೊನಾಲಿಸಾ ಅವರ ನಿಜವಾದ ಹೆಸರು ಲಿಸಾ ಡೆಲ್ ಜಿಯೊಕೊಂಡೊ. ಅವಳು ಇಟಲಿಯ ಫ್ಲಾರೆನ್ಸ್ ನ ರೇಷ್ಮೆ ವ್ಯಾಪಾರಿ ಗೆರಾರ್ಡಿಯನ್ನು ಮದುವೆಯಾದಳು. ಆಗ ಆಕೆಗೆ 15 ವರ್ಷ ವಯಸ್ಸಾಗಿತ್ತು, ತನ್ನ ಎರಡನೇ ಮಗನ ಜನನದ ಸಂದರ್ಭದಲ್ಲಿ…
ಮಲಯಾಳಂ ಹಿಟ್ ಸಿನಿಮಾ, ನೈಜ ಘಟನೆಯಾಧಾರಿತ, 200 ಕೋಟಿ ರೂಪಾಯಿ ಗಳಿಕೆ ಮಾಡಿದ ಚಿತ್ರ ʼಮಂಜುಮ್ಮೇಲ್ ಬಾಯ್ಸ್ʼ ಸಿನಿಮಾ ಒಟಿಟಿಗೆ ಎಂಟ್ರಿ ನೀಡಲು ಅಧಿಕೃತವಾಗಿ ಸಜ್ಜಾಗಿದೆ. ಹೌದು, ಈ ಕುರಿತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಕಡೆಯಿಂದಲೇ ಅಧಿಕೃತ ಮಾಹಿತಿ ದೊರಕಿದೆ. ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡಿದವರು ಒಟಿಟಿಯಲ್ಲಿ ವೀಕ್ಷಿಸಬಹುದು. ಸಿನಿಮಾ ಪ್ರಿಯರಂತೂ ಈ ಸುದ್ದಿ ಕೇಳಿ ಭಾರೀ ಥ್ರಿಲ್ ಆಗಿದ್ದಾರೆ. ವರದಿಗಳ ಪ್ರಕಾರ, ಮೇ.3 ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆಯೆಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸೌಬಿನ್ ಶಬೀರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಪೊಡುವಲ್ ಮೊದಲಾದ ಘಟಾನುಘಟಿ ನಾಯಕರುಗಳು ನಟಿಸಿದ್ದಾರೆ. ಈ ಚಿತ್ರ ನಿರ್ಮಾಣ ಮಾಡಿದ್ದು ಸೌಬೀರ್ ಶಬೀರ್. ಕೊಡೆಕೆನಲ್ ನಲ್ಲಿರುವ ‘ಗುಣಕೇವ್ʼ ಗೆ ಭೇಟಿ ನೀಡುವ ಮಂಜುಮ್ಮೆಲ್ ಊರಿನ ಫ್ರೆಂಡ್ಸ್ ಗುಂಪೊಂದು ಟ್ರಿಪ್ ತೆರಳಿದ್ದು, ಅಲ್ಲಿ ಓರ್ವ ಫ್ರೆಂಡ್ ತಪ್ಪಿ ಗುಹೆ ಒಳಗೆ ಬಿದ್ದು ಹೋಗುತ್ತಾನೆ. ಆತನನ್ನು ರಕ್ಷಿಸೋ ಕೆಲಸದಲ್ಲಿ ಉಳಿದ ಫ್ರೆಂಡ್ಸ್ ಪಾತ್ರವೇನು? ಇದು ಈ…
ಭಾರತವು ತನ್ನ ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಹೊಸ ರೂಪಾಂತರವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಸ್ಟ್ರೈಕ್ ರೇಂಜ್ ಏರ್-ಲಾಂಚ್ ಬ್ಯಾಲಿಸ್ಟಿಕ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಕ್ಷಿಪಣಿಯು 250 ಕಿ.ಮೀ. ಕ್ಷಿಪಣಿಯನ್ನು ಅಂಡಮಾನ್‌ನಲ್ಲಿ ಪರೀಕ್ಷಿಸಲಾಯಿತು. ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ನೇತೃತ್ವದಲ್ಲಿ ಗುಂಡಿನ ದಾಳಿ ನಡೆಸಲಾಯಿತು. ಕ್ಷಿಪಣಿಯ ಸಾಮರ್ಥ್ಯ ಮತ್ತು ಅಪ್ಲಿಕೇಶನ್ ಅನ್ನು ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕ್ಷಿಪಣಿಯನ್ನು ‘ಅಗ್ನಿ’ ಅಸ್ತ್ರಗಳ ವರ್ಗಕ್ಕೆ ಸೇರಿಸಿಲ್ಲ ಎಂಬುದು ಸದ್ಯದ ಮಾಹಿತಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೇಸಿಗೆ ಕಾಲವನ್ನು ಮಾವಿನಕಾಯಿಗಾಗಿಯೇ ಅನೇಕರು ಎದುರು ನೋಡುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಭಾರತದಲ್ಲಿ ಬೇಸಿಗೆ ಕಾಲ ನಡೆಯುತ್ತಿರುವಾಗಲೇ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ಇವುಗಳಲ್ಲಿ ಬಂಗಿನಪಲ್ಲಿ, ತೋತಾಪುರಿ, ರಸ ಹೀಗೆ ಹಲವು ವಿಧಗಳಿವೆ. ಅವರ ಅತ್ಯುತ್ತಮ ರುಚಿಯಿಂದಾಗಿ ಅವರು ಅನೇಕ ಜನರ ನೆಚ್ಚಿನ ಹಣ್ಣುಗಳಾಗಿ ಮಾರ್ಪಟ್ಟಿದ್ದಾರೆ. ಆದ್ದರಿಂದಲೇ ಮಾವನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಬಾಯಲ್ಲಿ ನೀರೂರಿಸುವ ಈ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಆದರೆ ಅನೇಕರು ಈ ಹಣ್ಣುಗಳನ್ನು ನೇರವಾಗಿ ತಿನ್ನುತ್ತಾರೆ. ಇದನ್ನು ನೆನೆಸಿಟ್ಟು ತೊಳೆದು ತಿನ್ನುವುದು ಉತ್ತಮ ಎನ್ನುತ್ತಾರೆ ತಜ್ಞರು. ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಅವರ ಚರ್ಮದ ಮೇಲೆ ಫೈಟಿಕ್ ಆಸಿಡ್ ಎಂಬ ವಸ್ತುವಿದೆ. ಈ ಸಂಯುಕ್ತವು ನಮ್ಮ ದೇಹವು ಸತು, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಮಾವಿನ ಚರ್ಮದ ಮೇಲಿನ ಈ ವಸ್ತುವು ಪೋಷಕಾಂಶಗಳನ್ನು ಹೀರಿಕೊಳ್ಳುವ ಹಣ್ಣಿನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದು ತಲೆನೋವು ಮತ್ತು…
ಸ್ವ ಪಕ್ಷದ ವಿರುದ್ಧವೇ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆಗಿಳಿದಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರನ್ನು ರಾಜ್ಯ ಬಿಜೆಪಿ ಶಿಸ್ತುಪಾಲನಾ ಸಮಿತಿಯು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ. ಇದೀಗ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ವರಿಷ್ಠ ಯಡಿಯೂರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಿಂದ ಹೊರ ಹೋಗುವುದು ಈಶ್ವರಪ್ಪನವರಿಗೆ ಬೇಕಾಗಿತ್ತು. ಹೀಗಾಗಿ ಈಶ್ವರಪ್ಪನವರು ಅಪೇಕ್ಷೆ ಪಟ್ಟಂತೆ ಉಚ್ಚಾಟನೆ ಆಗಿದೆ. ಅದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ರಾಜ್ಯದ ನಾಯಕರು ಯಾರೂ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಪೂರಕ ವಾತಾವರಣವಿದೆ. 28 ಸ್ಥಾನಗಳನ್ನು ಗೆಲ್ಲಲಿದ್ದೇವೆ. ನರೇಂದ್ರ ಮೋದಿ ಪರ ಅಲೆ ನೆರವಿನಿಂದ ಬಿಜೆಪಿಗೆ ಹೆಚ್ಚು ಸ್ಥಾನ ಪಡೆಯಲಿದ್ದೇವೆ ಎಂದಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡುವ ಮುನ್ನ ಅವರಿಗೆ ಸಾಕಷ್ಟು ಅವಕಾಶ ನೀಡಲಾಗಿತ್ತು. ಪ್ರತಿ ರಾಜ್ಯದಲ್ಲಿ ಇರುವಂತೆ ಶಿಸ್ತು ಸಮತಿ ನಮ್ಮ ರಾಜ್ಯದಲ್ಲೂ ಇದೆ. ಈಶ್ವರಪ್ಪ ತಿದ್ದಿಕೊಳ್ಳದ ಕಾರಣ ಶಿಸ್ತು ಕ್ರಮ ಜರುಗಿದೆ. ಬಿಜೆಪಿ…
ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ. ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ. ಹೈಕಮಾಂಡ್ಗೆ ಡಿ.ಕೆ. ಶಿವಕುಮಾರ್ ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ. ಶಿವಕುಮಾರ್ ರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ. ಮಂಡ್ಯ ಸಮಾವೇಶದಲ್ಲಿ ರಾಹುಲ್ ಈ ಸಂದೇಶ ರವಾನೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಎ. 26 ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ಮುಂದೆ ಬಂದಿದ್ದಾರೆ. ಮತದಾನವು ಶುಕ್ರವಾರ ಇರುವುದರಿಂದ ಅಂದು ರಜೆ ಇದೆ. ಶನಿವಾರ, ಭಾನುವಾರ ರಜೆಯಾಗಿದ್ದರಿಂದ ಮತದಾರರು ಪ್ರವಾಸದ ಯೋಜನೆ ಹಾಕಿಕೊಂಡು ತೆರಳಿದರೆ ಮತದಾನದ ಪ್ರಮಾಣ ಕಡಿಮೆಯಾದೀತು ಎಂಬ ಆಲೋಚನೆಯೊಂದಿಗೆ ಅಧಿಕಾರಿಗಳು ಈ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣ ಮುಚ್ಚಲಾಗುವುದು. ಎ.26 ರಂದು ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296