ಮಲಯಾಳಂ ಹಿಟ್ ಸಿನಿಮಾ, ನೈಜ ಘಟನೆಯಾಧಾರಿತ, 200 ಕೋಟಿ ರೂಪಾಯಿ ಗಳಿಕೆ ಮಾಡಿದ ಚಿತ್ರ ʼಮಂಜುಮ್ಮೇಲ್ ಬಾಯ್ಸ್ʼ ಸಿನಿಮಾ ಒಟಿಟಿಗೆ ಎಂಟ್ರಿ ನೀಡಲು ಅಧಿಕೃತವಾಗಿ ಸಜ್ಜಾಗಿದೆ. ಹೌದು, ಈ ಕುರಿತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಕಡೆಯಿಂದಲೇ ಅಧಿಕೃತ ಮಾಹಿತಿ ದೊರಕಿದೆ.
ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡಿದವರು ಒಟಿಟಿಯಲ್ಲಿ ವೀಕ್ಷಿಸಬಹುದು. ಸಿನಿಮಾ ಪ್ರಿಯರಂತೂ ಈ ಸುದ್ದಿ ಕೇಳಿ ಭಾರೀ ಥ್ರಿಲ್ ಆಗಿದ್ದಾರೆ.
ವರದಿಗಳ ಪ್ರಕಾರ, ಮೇ.3 ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆಯೆಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸೌಬಿನ್ ಶಬೀರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಪೊಡುವಲ್ ಮೊದಲಾದ ಘಟಾನುಘಟಿ ನಾಯಕರುಗಳು ನಟಿಸಿದ್ದಾರೆ. ಈ ಚಿತ್ರ ನಿರ್ಮಾಣ ಮಾಡಿದ್ದು ಸೌಬೀರ್ ಶಬೀರ್.
ಕೊಡೆಕೆನಲ್ ನಲ್ಲಿರುವ ‘ಗುಣಕೇವ್ʼ ಗೆ ಭೇಟಿ ನೀಡುವ ಮಂಜುಮ್ಮೆಲ್ ಊರಿನ ಫ್ರೆಂಡ್ಸ್ ಗುಂಪೊಂದು ಟ್ರಿಪ್ ತೆರಳಿದ್ದು, ಅಲ್ಲಿ ಓರ್ವ ಫ್ರೆಂಡ್ ತಪ್ಪಿ ಗುಹೆ ಒಳಗೆ ಬಿದ್ದು ಹೋಗುತ್ತಾನೆ. ಆತನನ್ನು ರಕ್ಷಿಸೋ ಕೆಲಸದಲ್ಲಿ ಉಳಿದ ಫ್ರೆಂಡ್ಸ್ ಪಾತ್ರವೇನು? ಇದು ಈ ಚಿತ್ರದ ಜೀವಾಳ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296