Author: admin

ರಾಜ್ಯದಲ್ಲಿ ಉಷ್ಣತೆ ಹೆಚ್ಚಳವಾಗಿದೆ. ತಾಪಮಾನದ ಏರಿಕೆ ಇನ್ನೂ ಕೆಲ ದಿನಗಳ ಕಾಲ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪುಟ್ಟ ಪುಟ್ಟ ಮಕ್ಕಳು ರಣ ಬಿಸಿಲಿಗೆ ಅಂಗನವಾಡಿಗೆ ಹೋಗಲು ಹಿಂದೇಟು ಹಾಕುತ್ತಿರುವ ಕುರಿತು ಅರಿತ ಸರಕಾರ ಇದೀಗ ಅಂಗನವಾಡಿಗಳ ಸಮಯವನ್ನು ಎರಡು ತಿಂಗಳ ಕಾಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಿತ್ತೂರು ಕರ್ನಾಟಕ ಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಎಂಟು ಜಿಲ್ಲೆಯಲ್ಲಿನ ಅಂಗನವಾಡಿಗಳು. ಬದಲಾದ ವೇಳಾಪಟ್ಟಿಗೆ ತಕ್ಕಂತೆ ಐಸಿಡಿಎಸ್‌ ಸೇವೆ ನಿಯಮಾನುಸಾರ ಅಡೆತಡೆಗಳಿಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಗುಜರಾತ್: 11 ವರ್ಷದ ಬಾಲಕನೊಬ್ಬ ತನ್ನ ನೆರೆಹೊರೆಯ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಗುಜರಾತ್‌ನ ಸೂರತ್‌ ನಗರದಲ್ಲಿ ನಡೆದಿದೆ. ಮಾ.29 ರಂದು ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ತಮ್ಮ ಮನೆಗಳ ಬಳಿ ಆಟವಾಡುತ್ತಿದ್ದು, ಬಾಲಕ ಬಾಲಕಿಗೆ ಆಮಿಷವೊಡ್ಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ನಂತರ ಯಾರ ಬಳಿ ಹೇಳಿದರೆ ಚಪ್ಪಲಿಯಿಂದ ಹೊಡೆದು ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಈಕೆ ಯಾರಲ್ಲೂ ಈ ವಿಷಯವನ್ನು ಹೇಳಲಿಲ್ಲ. ಆದರೆ ಮರುದಿನ ಈಕೆಯ ಗುಪ್ತಾಂಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಆಘಾತಕಾರಿ ಸತ್ಯವನ್ನು ಹೇಳಿದ್ದಾರೆ. ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಆಕೆಯ ಜನನಾಂಗದಲ್ಲಿ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಮನೆಯವರು ಆಘಾತಗೊಂಡಿದ್ದು, ಕೂಡಲೇ ಬಾಲಕಿಯನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ಹೇಳಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಆಸ್ಪತ್ರೆಗೆ…

Read More

ಯುವತಿಯೋರ್ವಳು ವೃದ್ದನಿಗೆ ವಿಡಿಯೋ ಕಾಲ್ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವಂಚಕರು ಮೊದಲಿಗೆ ಯುವತಿಯಿಂದ ವಿಡಿಯೋ ಕಾಲ್ ಮಾಡಿಸುತ್ತಾರೆ.  ನಂತರ ವಿಡಿಯೋ ಕಾಲ್ನಲ್ಲಿ ಯುವತಿ ನಗ್ನವಾಗಿ ಬಳಿಕ ವೃದ್ಧರನ್ನು ನಗ್ನವಾಗುವಂತೆ ತಿಳಿಸುತ್ತಾರೆ.ನಂತರ  ಕೆಲವು ಸಮಯಗಳ ಬಳಿಕ ನೀನು ನನ್ನ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೀಯಾ ನಾನು ನಿನ್ನ ಮೇಲೆ ಪೊಲೀಸರಿಗೆ ದೂರು ನೀಡುತ್ತೆನೆ‌ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಇದಾದ ಕೆಲವೆ ಗಂಟೆಗಳಲ್ಲಿ ಡೆಲ್ಲಿ ಸೈಬರ್ ಪೊಲೀಸ್ ಎಸಿಪಿ ವಿಕ್ರಮ್ ರಾಥೋಡ್ ಎಂದು ಕರೆ ಮಾಡುತ್ತಾರೆ. ನಿಮ್ಮ ಮೇಲೆ ಯುವತಿ ಒಬ್ಬರು ದೂರು ನೀಡಿದ್ದಾರೆ. ನೀವು ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದೀರಿ ಎಂದು ದೂರು ಬಂದಿದೆ. ನಾನು ನಿಮಗೆ ಸಹಾಯ ಮಾಡುತ್ತೇನೆ 50 ಸಾವಿರ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ನಂತರ ವಂಚಕರು ವೃದ್ದನಿಗೆ ಕಾಲ್ ಮಾಡಿ ಪುಣೆ ಎಸಿಪಿ ಅರುಣ ಎಂದು ನಂಬಿಸಿ ನಿಮ್ಮ ಹೆಸರು…

Read More

ಕಾಡೆಮ್ಮೆಯನ್ನು ಶೂಟ್‌ ಮಾಡಿ ಕೊಂದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಮಾಂಸಕ್ಕಾಗಿ ಶೂಟ್‌ ಮಾಡಿದ್ದು,ಅದನ್ನು ತಿನ್ನುತ್ತಿರುವ ವೇಳೆಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಹೊಸೂರು ಎಸ್ಟೇಟ್‌ನ ಉಮೇಶ್, ರವಿ ಬಂಧಿತ ಆರೋಪಿಗಳು. ಸಕಲೇಶಪುರ ತಾಲೂಕಿನ ಹೊಸೂರು ಎಸ್ಟೇಟ್‌ನಲ್ಲಿ ಘಟನೆ ನಡೆದಿತ್ತು. ಹೊಸೂರು ಎಸ್ಟೇಟ್ ಸಮೀಪ ಮಾಂಸಕ್ಕಾಗಿ ಬಂದೂಕಿನಿಂದ ಕಾಡೆಮ್ಮೆ ಮೇಲೆ ಉಮೇಶ್ ಹಾಗೂ ರವಿ ಶೂಟ್ ಮಾಡಿದ್ದರು. ನಂತರ ಕಾಡೆಮ್ಮೆಯನ್ನು ಕತ್ತರಿಸಿ ಮಾಂಸ ಸೇವನೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ಮಾಡಿದೆ. ಕಾಡೆಮ್ಮೆಯ ಸುಮಾರು 10 ಕೆಜಿ ಮಾಂಸ ವಶವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ಸಂಬಂಧ ‌ಮಧು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR…

Read More

ಪಾವಗಡ: ಬುಧವಾರ ಬೆಳಗ್ಗೆ ಸುಮಾರು 7:30ರ ಸಮಯದಲ್ಲಿ ಪಾವಗಡ ಪಟ್ಟಣದಿಂದ ಚಿತ್ರದುರ್ಗದ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಖಾಸಗಿ KA 16 D 4333 ನಂಬರಿನ ಮಾಧವಿ ಬಸ್ ಮತ್ತು ಚಳ್ಳಕೆರೆಯಿಂದ ಪಾವಗಡದ ಕಡೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ KA 40 F 1174 ನಂಬರ್ ನ ಬಸ್ ಗಳ ನಡುವೆ ಕೋಟಗುಡ್ಡ ಗ್ರಾಮದ ಎಸ್. ಬಿ .ಐ ಬ್ಯಾಂಕ್ ಸಮೀಪದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕೆ.ಎಸ್.ಆರ್.ಟಿ. ಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ ಕೋಟಗುಡ್ಡ  ಗ್ರಾಮದ ಎಸ್ ಬಿ ಐ ಬ್ಯಾಂಕ್ ಬಳಿ ಎರಡು ಬಸ್ ಗಳು ಬಂದ ಸಮಯದಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ, ಪರಿಣಾಮವಾಗಿ ಎರಡು ಬಸ್ ಗಳ ಮುಂಭಾಗದಲ್ಲಿರುವ ಗಾಜು ಪುಡಿಪುಡಿ ಆಗಿದ್ದು, ಕೆ.ಎಸ್.ಆರ್.ಟಿ. ಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಕೆ.ಎಸ್.ಆರ.ಟಿ‌.ಸಿ ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ  ಘಟನೆ ಸಂಭವಿಸಿ ಸುಮಾರು 30…

Read More

ತುಮಕೂರು:  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಅಪರಾಧಿಗಳಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್. ಟಿ.ಎಸ್.ಸಿ.(ಪೋಕ್ಸೋ)ವು ಜೀವಾವಧಿ ಶಿಕ್ಷೆ  ಹಾಗೂ ತಲಾ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.  ನೊಂದ ಬಾಲಕಿ 14 ವರ್ಷ ವಯಸ್ಸಿನವಳಾಗಿದ್ದಾಳೆ. ಆಕೆಯ ತಾಯಿ ತವರು ಮನೆಗೆ ಹೋಗಿದ್ದ ವೇಳೆ ಬಾಲಕಿ ಹಾಗೂ ತಂದೆ ಮಾತ್ರವೇ ಮನೆಯಲ್ಲಿದ್ದರು. ಬಾಲಕಿಯ ತಂದೆ ಕುಡಿತದ ಚಟ ಹೊಂದಿದ್ದರು. ಇದೇ ಸಂದರ್ಭದಲ್ಲಿ 1ನೇ ಆರೋಪಿ ಬ್ಯಾಡರಹಳ್ಳಿಯ ರಾಮಚಂದ್ರಯ್ಯ(55) ನೊಂದ ಬಾಲಕಿಗೆ ತಿನ್ನಲು ತಿಂಡಿಗೆ ಹಣ ನೀಡುವುದಾಗಿ ಪುಸಲಾಯಿಸಿ ಬಲವಂತವಾಗಿ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು, ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು. ಬಳಿಕ ಆಕೆಯನ್ನು ರಾಮಣ್ಣ ಎಂಬ ವ್ಯಕ್ತಿಯ ಉಪ್ಪು ನೇರಳೆ ತೋಟಕ್ಕೆ ಕರೆದೊಯ್ದು ಅಲ್ಲಿಯೂ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದನು. ಈ ದೃಶ್ಯವನ್ನು 2ನೇ ಆರೋಪಿ ಹೊಸವಿರಾಮಯ್ಯ…

Read More

ಉತ್ತರಾಖಂಡ: ಅಧಿಕಾರದಿಂದ ಹೊರಗುಳಿದು 10 ವರ್ಷಗಳು ಕಳೆದ ಬಳಿಕ ದೇಶದಲ್ಲಿ ಕಿಚ್ಚು ಹೊತ್ತಿಸುವ ಮಾತನಾಡುತ್ತಾರೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡುವ ಮಾತೇ? ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರಾಖಂಡದ ರುದ್ರಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ನೀಡಿದ್ದ ದೇಶ ವಿಭಜನೆ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಕರ್ನಾಟಕದ ಓರ್ವ ನಾಯಕ ದಕ್ಷಿಣ ಭಾರತವನ್ನು ದೇಶದಿಂದ ಬೇರ್ಪಡಿಸುವ ಬಗ್ಗೆ ಮಾತನಾಡುತ್ತಾರೆ. ಅಂತವರಿಗೆ ಶಿಕ್ಷೆ ನೀಡುವ ಬದಲು ಲೋಕಸಭೆ ಟಿಕೆಟ್‌ ನೀಡಿದ್ದಾರೆ. ಕಾಂಗ್ರೆಸ್‌ ಈ ದೇಶವನ್ನು ಅರಾಜಕತೆಗೆ ದೂಡಲು ಪ್ರಯತ್ನಿಸುತ್ತಿದೆ ಅವರನ್ನು ಈ ಬಾರಿ ಅಧಿಕಾರಕ್ಕೆ ಬರಲು ಬಿಡಬೇಡಿ ಎಂದು ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಡಿ.ಕೆ. ಸುರೇಶ್‌ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ, ‘ ಕರ್ನಾಟಕಕ್ಕೆ ಕೇಂದ್ರದಿಂದ ಸಾಕಷ್ಟು ಅನುದಾನ ಬರುತ್ತಿಲ್ಲ, ದಕ್ಷಿಣ ಭಾರತವನ್ನು ಪ್ರತ್ಯೇಕಿಸುವುದು ಬಿಟ್ಟು ಬೇರೆ ದಾರಿ ಕಾಣುತ್ತಿಲ್ಲ’ ಎಂಬ…

Read More

ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ಪಕ್ಷದ 3,500 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೀಡಲಾಗಿದ್ದ ನೋಟಿಸ್‌ ಗೆ ಸಂಬಂಧಿಸಿದಂತೆ, ಜುಲೈ 24 ರವರೆಗೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು, ಇಡಿ ಪರ ವಾದ ಮಂಡಿಸಿದ ಸಾಲಿಸಿಟ‌ರ್ ಜನರಲ್ ತುಷಾ‌ರ್ ಮೆಹ್ರಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಐಟಿ ಅಧಿಕಾರಿಗಳ ಪರವಾಗಿ ಹಾಜರಾದ ಮೆಹ್ರಾ ಅವರು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವುದರಿಂದ, ಇಲಾಖೆಯು ವಸೂಲಾತಿ ಪ್ರಕ್ರಿಯೆಗಳನ್ನು ಅಥವಾ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಫ್ಟಿ ಅವರು ಆದಾಯ ತೆರಿಗೆ ಇಲಾಖೆಯ ಈ ಕ್ರಮವನ್ನು ಶ್ಲಾಘಿಸಿದರು. ಮಾರ್ಚ್‌ನಲ್ಲಿ ಮತ್ತು ಅದಕ್ಕೂ ಮೊದಲು ಅನೇಕ ವರ್ಷಗಳಿಂದ ಸುಮಾರು 3,500 ಕೋಟಿ ರೂ.ಗೆ ಸಂಬಂಧಿಸಿದಂತೆ ನೋಟಿಸ್‌ ಗಳನ್ನು ನೀಡಲಾಗಿದೆ. ಕಾಂಗ್ರೆಸ್, ಮಾರ್ಚ್ 29 ರಂದು ಐಟಿ…

Read More

ಪತ್ನಿಯು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಗಂಡನನ್ನು ಕೊಂದವರಿಗೆ ಬಹುಮಾನ ಘೋಷಣೆ ಮಾಡಿದ ವಿಚಿತ್ರ ಘಟನೆ ಆಗ್ರಾದ ಬಹ್ ಜಿಲ್ಲೆಯಲ್ಲಿ ವರದಿಯಾಗಿದೆ. ಪತಿಯು ಪತ್ನಿಯ ಸ್ಟೇಟಸ್ ನೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪತ್ನಿಯ ಸ್ನೇಹಿತರೊಬ್ಬರು ಬೆದರಿಕೆ ಹಾಕಿದ್ದರು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ ಭಿಂಡ್‌ ನ ಹಳ್ಳಿಯೊಂದರ ಮಹಿಳೆಯನ್ನು ವಿವಾಹವಾಗಿದ್ದ ಆತ. ಸ್ವಲ್ಪ ಸಮಯದ ನಂತರ, ಅವರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದು, ಐದು ತಿಂಗಳ ಕಾಲ ಅತೃಪ್ತಿಕರ ದಾಂಪತ್ಯದ ನಂತರ, ಡಿಸೆಂಬರ್ 2022 ರಲ್ಲಿ, ಮಹಿಳೆ ಬಹ್‌ ನಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಗೆ ಹಿಂದಿರುಗಿದ್ದಳು. ದೂರಿನ ಪ್ರಕಾರ ಮಹಿಳೆ ಭಿಂಡ್ ‌ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ ಎನ್ನಲಾಗಿದೆ. ‘ಪತಿಯನ್ನು ಕೊಂದವರಿಗೆ ₹ 50,000 ಬಹುಮಾನ…

Read More

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಇತ್ತೀಚೆಗೆ ದೇಶದ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಸದಸ್ಯರಿಗೆ- ‘ನಿಮ್ಮ ಹೆಂಡತಿಯರಲ್ಲಿರುವ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ’ ಎಂದು ಕರೆ ನೀಡಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ವಿರೋಧ ಪಕ್ಷವು ಭಾರತೀಯ ಉತ್ಪನ್ನಗಳ ವಿರುದ್ಧ ಅಭಿಯಾನವನ್ನು ನಡೆಸುತ್ತಿರುವುದರ ಬಗ್ಗೆ ಸಿಡಿಮಿಡಿಗೊಂಡ ಹಸೀನಾ, “BNP ನಾಯಕರು ನಿಜವಾಗಿಯೂ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ಅವರು ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನು ಸುಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಹೊಸದಿಲ್ಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಹಸೀನಾ, ತಮ್ಮ ಭಾಷಣದಲ್ಲಿ ವಿರೋಧ ಪಕ್ಷದವರಿಗೆ ಸಾಕಷ್ಟು ಪ್ರಶ್ನೆಗಳನ್ನು ಹಾಕಿ- ‘ನೀವು ಭಾರತೀಯ ಮಸಾಲೆಗಳಿಲ್ಲದ ಆಹಾರ ತಿನ್ನಬಹುದೇ? ಬಹಿಷ್ಕಾರ ಪ್ರಚಾರಕರ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಅವರು ತಮ್ಮ ಹೆಂಡತಿಯರಿಂದ ಸೀರೆಗಳನ್ನು ತೆಗೆದುಕೊಂಡು ಅವುಗಳನ್ನು ಏಕೆ ಸುಡುವುದಿಲ್ಲ? ಭಾರತದ ಉತ್ಪನ್ನಗಳನ್ನು ವಿರೋಧಿಸುವವರು ನಿಜವಾಗಿಯೂ ಅವರ ಜೀವನದಲ್ಲಿ ಬಹಿಷ್ಕರಿಸಿದ್ದಾರೆಯೇ ಎಂದು ತಿಳಿಯಲು ನಾನು ಬಯಸುತ್ತೇನೆ” ಎಂದಿದ್ದಾರೆ. ಈ ವರ್ಷದ ಆರಂಭದಲ್ಲಿ, ಬಾಂಗ್ಲಾದಲ್ಲಿ ಒಬ್ಬ ದೇಶಭ್ರಷ್ಟ ಬ್ಲಾಗರ್‌ ಎಕ್ಸ್‌…

Read More