Author: admin

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಕೊಡಿಸುತ್ತೇನೆ ಎಂದು 7 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. 54 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಬಾಲಕಿಯ ತಾಯಿ ಮೂಕರಾಗಿದ್ದು, ತಾಯಿ ಹಾಗೂ ಮಗು ಪ್ರತಿಷ್ಠಿತ ಮಾಲ್‌ ವೊಂದರ ಬಳಿ ಭಿಕ್ಷೆ ಬೇಡುತ್ತಿದ್ದರು. ಈ ವೇಳೆ ಬಾಲಕಿ ಮೇಲೆ ನೀಚ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಮಧುಗಿರಿ‌ ತಾಲ್ಲೂಕಿನ ಗುರುವಡೇರಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮತದಾನ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಮತ ಚಲಾವಣೆ ಮಾಡಿದರು. ಸರತಿ ಸಾಲಿನಲ್ಲಿ‌ ನಿಂತು ಮತ ಚಲಾಯಿಸಿದ ಕೆ.ಎನ್.ರಾಜಣ್ಣ, ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದರು. ಪುತ್ರ ಎಂಎಲ್ಸಿ ರಾಜೇಂದ್ರ, ಪುತ್ರಿ ರಶ್ಮಿ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇನ್ನೊಂದೆಡೆ ಗೃಹ ಸಚಿವ ಡಾ. ಪರಮೇಶ್ವರ್ ಪತ್ನಿ ಕನ್ನಿಕಾ ಸಮೇತ ಆಗಮಿಸಿ ತುಮಕೂರಿನ ಸಿದ್ದಾರ್ಥ ನಗರದಲ್ಲಿ ಮತದಾನ ಮಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸ್ಥಾಪಿಸಲಾಗಿರೋ ಮತಗಟ್ಟೆ ಸಂಖ್ಯೆ 57 ರಲ್ಲಿ ಮತದಾನ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ದೇಶದಲ್ಲಿ ಮತದಾನವನ್ನು ಕಡ್ಡಾಯ ಮಾಡಬೇಕಿದೆ. ಹಾಗಾದರೆ ಮಾತ್ರ ಶೇಕಡ 100ರಷ್ಟು ಮತದಾನ ಪ್ರಮಾಣವಾಗಲಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ  ಹೇಳಿದರು. ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಜಾಗೃತಿಯಾಗಿದೆ. ಆದರೆ ಹೆಚ್ಚಿನ ವಿದ್ಯಾವಂತರಾದ ನಗರ ಪ್ರದೇಶದಲ್ಲಿ ಇರುವಂತವರು ಮತದಾನ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಇದು ಆಗಬಾರದು ಎಂದು ಹೇಳಿದರು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ನಿಷ್ಠೆಯಿಂದ ಮತದಾನವನ್ನು ಮಾಡಬೇಕಿದೆ ಎಂದು ಹೇಳಿದರು. ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಂತಹ ಜನರಿಗೆ ಪ್ರಜಾಪ್ರಭುತ್ವ ನೀಡಿದೆ ಎಂದು ಹೇಳಿದರು. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಚುನಾವಣೆಯಲ್ಲಿ ಮತದಾನ ಮಾಡಿರುವಂತಹ ಕೀರ್ತಿ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ತುಮಕೂರು: ಸಿದ್ದಗಂಗಾ ಮಠದ ಪ್ರಾಥಮಿಕ ಶಾಲಾ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೊದಲ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 113ರಲ್ಲಿ ಸ್ವಾಮೀಜಿ ತಮ್ಮ ಹಕ್ಕು ಚಲಾಯಿಸಿದರು. ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠದಲ್ಲಿ, ಮೊದಲಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ  ಹಸುವಿಗೆ ಹಣ್ಣು ತಿನ್ನಿಸಿ ಬಳಿಕ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಲೇಬಲ್ ಅಂಟಿಸಿರುವ ಮದ್ಯದ ಪೌಚುಗಳು ಪತ್ತೆಯಾಗಿದೆ. ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಲೇಬಲ್ ಅಂಟಿಸಿರುವ ಮದ್ಯದ ಪೌಚುಗಳ ಹಂಚಿಕೆ ಮಾಡಲಾಗಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಸುನೀಲ್ ಬೋಸ್, ಕ್ರಮ ಸಂಖ್ಯೆ 3 ಎಂಬ ಲೇಬಲ್ ಇರುವ ಮದ್ಯದ ಪೌಚುಗಳನ್ನು ಹಂಚಿಕೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಈ ಘಟನೆ ನಡೆದ ಸ್ಥಳದ ಬಗ್ಗೆ ನಿಖರತೆ ಇಲ್ಲ ಮತ್ತು ಹಂಚಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮತದಾನದ ಹಿನ್ನೆಲೆಯಲ್ಲಿ ಏ.24 ರಿಂದ ಏ.26 ರ ಮಧ್ಯರಾತ್ರಿವರೆಗೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ. ರಾಜಕೀಯ ಗುಂಪುಗಳು ಸೇರುವಂತಿಲ್ಲ. ಅಲ್ಲದೆ, ಶುಕ್ರವಾರ(ಎ.25 ದಿಂದ ಮತದಾನ ಮುಕ್ತಾಯವಾಗುವ ತನಕ ಮದ್ಯ…

Read More

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಲ್ಲಿದ್ದಾರೆ.ಯಶ್ ರಾವಣನ ಪಾತ್ರ ಮಾಡೋಕೆ ರೆಡಿಯಾಗಿದ್ದಾರೆ. 15ಕೆಜಿ ತೂಕ ಹೆಚ್ಚಿಸಿ ವಿಭಿನ್ನವಾಗಿ ಕಾಣಲಿದ್ದಾರೆ. ನಿತೇಶ್ ತಿವಾರಿ ಅವರ ʼರಾಮಾಯಣʼ ದಲ್ಲಿ  ರಾವಣನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾಗಾಗಿ ನಟ ಯಶ್‌,  15  ಕೆಜಿ  ತೂಕ ಹೆಚ್ಚಿಸಲಿದ್ದಾರೆ. ರಾಮಾಯಣದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ ನಟಿಸಿದರೆ, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಮಾತಾ ಸೀತೆ ಮತ್ತು ಭಗವಾನ್ ಹನುಮಾನ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಶ್ ,  ತಮ್ಮ ಎರಡು ಚಿತ್ರಗಳಾದ ಟಾಕ್ಸಿಕ್ ಮತ್ತು ರಾಮಾಯಣಕ್ಕೆ ಎರಡು ವಿಭಿನ್ನ ನೋಟವನ್ನು ಹೊಂದಿದ್ದಾರೆ. ಟಾಕ್ಸಿಕ್‌  ನಂತರವೇ ಯಶ್‌ ಅವರು  ರಾಮಾಯಣದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಟಾಕ್ಸಿಕ್ ಮುಗಿಸಿದ ತಕ್ಷಣ ಸಿಕ್ಸ್ ಪ್ಯಾಕ್‌ಗಳೊಂದಿಗೆ ರಾವಣನನ್ನು ಹೊಂದಲು ಸಾಧ್ಯವಿಲ್ಲ . ಆದ್ದರಿಂದ ಯಶ್‌  ಅವರು ಕನಿಷ್ಠ 15 ಕೆಜಿ ತೂಕ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ನಟ ಪ್ರಸ್ತುತ ಬೆಂಗಳೂರು, ಮುಂಬೈ ಮತ್ತು ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಗೀತು ಮೋಹನ್‌ದಾಸ್ ಅವರ…

Read More

ಹನುಮಂತನನ್ನು ಪೂಜಿಸುವ ಭಕ್ತರು ಆಂಜನೇಯನ ಗಾತ್ರ ಬದಲಾವಣೆ, ತಾಂತ್ರಿಕ ವಿಚಾರಗಳ ಬಗ್ಗೆ ನಂಬಿಕೆ ಇಟ್ಟಿರುವುದು ಸಹಜ. ಆಂಜನೇಯನ ಹಲವು ದೇವಾಲಯಗಳು ತನ್ನ ಪವಾಡಗಳಿಗೆ ಹೆಸರುವಾಸಿಯಾಗಿದೆ. ಇದೇ ರೀತಿ ಛತ್ತೀಸ್ ‌ಗಢದ ಬಲೋಡ್ ಜಿಲ್ಲಾ ಕೇಂದ್ರದಿಂದ 15 ಕಿ. ಮೀ. ದೂರದಲ್ಲಿರುವ ಕಮ್ರೌಡ್ ಗ್ರಾಮದಲ್ಲಿರುವ ಹನುಮಂತನ ದೇವಾಲಯವು ಇದಕ್ಕೆ ಉದಾಹರಣೆಯಾಗಿದೆ. ಹನುಮ ಭಕ್ತರಿಗೆ ಇದೊಂದು ಪವಾಡಸದೃಶ ದೇವಾಲಯ ಎಂಬ ನಂಬಿಕೆಯಿದೆ. ಛತ್ತೀಸ್‌ ಗಢದ ಕಮ್ರೌಡ್ ಗ್ರಾಮದಲ್ಲಿರುವ ಈ ದೇವಾಲಯದಲ್ಲಿ 400 ವರ್ಷಗಳಷ್ಟು ಹಳೆಯದಾದ ಹನುಮಂತನ ವಿಗ್ರಹವಿದೆ. ಜನರು ಇಲ್ಲಿರುವ ದೇವರನ್ನು ಪವಾಡ ಹನುಮಂತ ಎಂದು ಕರೆಯುತ್ತಾರೆ. ದೂರದ ಊರುಗಳಿಂದ ಜನರು ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಈ ದೇವಾಲಯ ಈಗ ಇಡೀ ಛತ್ತೀಸ್ ಗಢದಲ್ಲಿ ಮಾತ್ರವಲ್ಲದೆ ಇತರ ಅನೇಕ ರಾಜ್ಯಗಳಲ್ಲಿಯೂ ಪ್ರಸಿದ್ಧವಾಗಿದೆ. ಸುಮಾರು 400 ವರ್ಷಗಳ ಹಿಂದೆ ಕಮ್ರೌಡ್ ಗ್ರಾಮದ ಸುತ್ತ- ಮುತ್ತಲೂ ಸಾಕಷ್ಟು ಬರಗಾಲವಿತ್ತು. ಆ ಕಾರಣದಿಂದಾಗಿ ಅಲ್ಲಿನ ಜನ ತುಂಬಾ ಚಿಂತಿತರಾಗಿದ್ದರು. ಅದೇ ರೀತಿ ಒಂದು ದಿನ ಒಬ್ಬ…

Read More

ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು 4 ಗಂಟೆಗಳ ಕಾಲ ನಾಪತ್ತೆ. ಪೋಷಕರು, ಸ್ಥಳೀಯರು ಎಲ್ಲರೂ ಹುಡುಕಿದ್ದಾರೆ. ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ಇಬ್ಬರ ಮಕ್ಕಳ ಮೃತದೇಹ ಕಾರಿನಲ್ಲಿ ಪತ್ತೆಯಾದ ಘಟನೆ ಮುಂಬೈನ ಅನೋಟ್ಪ್ ಹಿಲ್‌ ನಲ್ಲಿ ನಡೆದಿದೆ. ಅ5 ವರ್ಷದ ಮುಸ್ಕಾನ್ ಮೊಹಬ್ಬತ್ ಶೇಕ್ ಹಾಗೂ 7 ವರ್ಷದ ಸಾಜಿದ್ ಮೊಹಮ್ಮದ್ ಶೇಕ್ ಎಂದು ಗುರುತಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ಹಲವು ಗುಜುರಿ ಕಾರುಗಳು ಸೇರಿದಂತೆ ಹಲವರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಮೈದಾನದ ರೀತಿ ಪ್ರದೇಶವಾಗಿರುವ ಕಾರಣ ಬಹುತೇಕರು ಇದೇ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಆಟವಾಡುತ್ತಿದ್ದ ಮಕ್ಕಳು, ಕಾರಿನ ಡೋರ್ ಹಿಡಿದು ಎಳೆದಾಗ ತೆರೆದುಕೊಂಡಿದೆ. ಕಾರಿನ ಡೋರ್ ತೆರೆದುಕೊಂಡ ಕಾರಣ ಇಬ್ಬರು ಮಕ್ಕಳು ಕಾರಿನೊಳಗೆ ಕುಳಿತು ಆಡವಾಡಿದ್ದಾರೆ. ಕೆಲ ಹೊತ್ತು ಆಡವಾಡಿದ ಬಳಿಕ ಕಾರಿನ ಡೋರ್‌ ನ್ನು ಹಾಕಿ ಆಡಲು ಆರಂಭಿಸಿದ್ದಾರೆ. ಇತ್ತ ಸಂಜೆಯಾದರೂ ಮಕ್ಕಳು ಮನೆಗೆ ಬರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು…

Read More

ಕಾರಿನಲ್ಲಿ ಬರೋಬ್ಬರಿ 30ಕ್ಕೂ ಅಧಿಕ ಕುರಿ, ಆಡುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ವೈರಲ್ ಆದ ಬಳಿಕ ಕುರಿ, ಆಡುಗಳನ್ನು ರಕ್ಷಿಸಿರುವ ಪ್ರಕರಣ ದೆಹಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿ ನೆನ್ನೆ ನಡೆದಿದೆ. ಮಾರುತಿ ಸುಝುಕಿ ಸ್ವಿಫ್ಟ್‌ ಡಿಝೈರ್‌ ಕಾರಿನೊಳಗೆ 30ಕ್ಕೂ ಅಧಿಕ ಆಡು, ಕುರಿಗಳನ್ನು ತುಂಬಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕಾರಿನೊಳಗಿದ್ದ ಆಡು, ಕುರಿಗಳನ್ನು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಇಂದು ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಸುಮಾರು 2.9 ಕೋಟಿ ಜನರು ಶುಕ್ರವಾರ 247 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಘಟಾನುಘಟಿಗಳು ಕಣದಲ್ಲಿದ್ದಾರೆ. ಮತದಾರರು ಕೂಡ ತಮ್ಮ ಮತ ನೀಡಿ ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾತರರಾಗಿದ್ದಾರೆ. ಇದರ ನಡುವೆ ಮೊದಲ ಹಂತದ ಮತದಾನ ಪ್ರಕ್ರಿಯೆ ವೇಳೆ ನೀವು ಈ 5 ಅಂಶಗಳನ್ನು ಗಮನಿಸಿ. ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶುಕ್ರವಾರ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಹೋರಾಟ ನಡೆಯುತ್ತಿದೆ. ಇದರ ನಡುವೆ ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆ ಒಂದಿಷ್ಟು ಕುತೂಹಲಕಾರಿ ಅಂಶಗಳಿಂದ ಗಮನ ಸೆಳೆದಿವೆ. ಅವುಗಳ ಕುರಿತು ನೋಡೋಣ. ಕರ್ನಾಟಕದಲ್ಲಿ ಮೂರು ಪ್ರಮುಖ ಪಕ್ಷಗಳಿದ್ದು, ಚುನಾವಣೆಯಲ್ಲಿ ತ್ರಿಕೋನ ಸಮರ ನಡೆಯುತ್ತಿತ್ತು. ಆದರೆ…

Read More