Author: admin

ಮತಗಟ್ಟೆಯಲ್ಲಿ ಎಪಿಆರ್ ಒ ಆಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿ ಯಶೋಧಮ್ಮ (58) ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಮೀಪದ ಗೊಲ್ಲರಗಟ್ಟಿ ಎಂಬಲ್ಲಿ ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆ ನಡೆದಿದೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ ಬಿ. ಆನಂದ್, ಮತದಾನಕ್ಕೆ ತೊಂದರೆಯಾಗದ ರೀತಿ ಬೇರೆ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಯಶೋಧಮ್ಮ ಅವರು ನಮ್ಮಲ್ಲಿ ಅರೋಗ್ಯ ಸಮಸ್ಯೆಯ ಕುರಿತು ಏನು ಹೇಳಿಕೊಂಡಿರಲಿಲ್ಲ ಅಲ್ಲದೆ ಮತದಾನ ಆರಂಭದಲ್ಲಿ ಲವಲವಿಕೆಯಿಂದಲೇ ಕರ್ತವ್ಯ ನಿರ್ವಹಿಸಿದ್ದರು. ದಿಢೀರನೆ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಯಶೋದಮ್ಮ ಚಳ್ಳಕೆರೆ ತಾಲೂಕಿನ ಬೊಮ್ಮಸಂದ್ರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ಸಮಯ : ಮಧ್ಯಾಹ್ನ 3 ಗಂಟೆ. ಒಟ್ಟು ಮತದಾನ ಶೇಖಡಾವಾರು : 56.62% ಚಿಕ್ಕನಾಯಕನಹಳ್ಳಿ : 56.15 ಗುಬ್ಬಿ : 60.78 ಕೊರಟಗೆರೆ : 57.84 ಮಧುಗಿರಿ : 55.25 ತಿಪಟೂರು : 60.19 ತುಮಕೂರು ನಗರ : 48.73 ತುಮಕೂರು ಗ್ರಾಮಾಂತರ : 57.35 ತುರುವೇಕೆರೆ : 58.72 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮತದಾನದ ಬಳಿಕ ಕುಸಿದು ಬಿದ್ದು ಮತದಾರರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ರಮೇಶ್ ಮೃತ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಯೂರ ಯುವ ವೇದಿಕೆಯ ಸದಸ್ಯರಾಗಿರುವ ಎಚ್.ಕೆ. ರಮೇಶ್, ದಂಪತಿ ಸಮೇತವಾಗಿ ಇಂದು ಮತದಾನದಲ್ಲಿ ಪಾಲ್ಗೊಂಡಿದ್ದರು. ತುಮಕೂರಿನ ಎಸ್ .ಎಸ್. ಪುರಂ ಮತ ಕೇಂದ್ರದಿಂದ ಮತದಾನ ಮಾಡಿ ಬಂದಿದ್ದ ರಮೇಶ್‌, ಮತದಾನ ಮಾಡಿದ ಬಳಿಕ ತಮ್ಮದೇ ಮಾಲಿಕತ್ವದ ಬಟ್ಟೆ ಅಂಗಡಿ ಎಫ್ ಸ್ಕೊಯರ್’ಗೆ ತೆರಳಿದ್ದಾಗ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆಯೆಂದು ಶಂಕಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

2024ರ ಲೋಕಸಭಾ ಚುನಾವಣೆಯ ಪ್ರಯುಕ್ತ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯಿತು. ಮತದಾನ ಮಾಡುವಲ್ಲಿ ಯುವಕರಿಗಿಂತ ಹಿರಿಯರೇ ಮೊದಲಿಗರಾಗಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲೂ ಕುಡಿಯುವ ನೀರಿನಿಂದ ಹಿಡಿದು ಎಲ್ಲಾ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ. 240 ಮತಗಟ್ಟೆಗಳಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ಮತದಾನ ನಡೆಯುತ್ತಿದೆ. ತನ್ನ ತಾತನ ಜೊತೆ ಮತಗಟ್ಟೆಗೆ ಬಂದ ಮೊಮ್ಮಗಳು ತಾತನ ಮತದಾನ ಮಾಡಿಸಿದಳು. ಕೊರಟಗೆರೆ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಯಿಂದ ಮತದಾನದ ಮಾಹಿತಿ ಪಡೆಯುತ್ತಿರುವ ಸಿಬ್ಬಂದಿ, ವಿಕಲಚೇತನ ಮತದಾರರಿಗೆ ಮತದಾನದ ಅರಿವು ಮೂಡಿಸಿ ವಿಶೇಷ ವಾಹನದ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿದ ಘಟನೆಗಳು ನಡೆದಿವೆ. ಇಲ್ಲಿಯವರೆಗೂ ಶೇಕಡಾ 65 ರಷ್ಟೇ ಮತದಾನ ನಡೆದಿದೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಶ್ರೀನಗರ: ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಚೆಕ್ ಮೊಹಲ್ಲಾ ನೌಪೋರಾದಲ್ಲಿ ಗುರುವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ ಕೌಂಟರ್ ಪ್ರಾರಂಭಗೊಂಡು, ಶುಕ್ರವಾರ ಮುಂಜಾನೆಯೂ ಗುಂಡಿನ ದಾಳಿ ಮುಂದುವರೆದಿದೆ. ಇದುವರೆಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ ಕೌಂಟರ್ ‌ನಲ್ಲಿ ಗಾಯಗೊಂಡ ಇಬ್ಬರು ಸೇನಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಎನ್‌ಕೌಂಟರ್‌ನಲ್ಲಿ ಸಮೀಪದ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಎನ್‌ ಕೌಂಟರ್ ನಡೆದ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಿಸಿಲಿಗೆ ದೇಹವನ್ನು ತಂಪಾಗಿಸುತ್ತೆ ಸೋರೆ ಕಾಯಿ ಜ್ಯೂಸ್: ಬೇಸಿಗೆ ಶಾಖಕ್ಕೆ ದಾಹವೂ ಹೆಚ್ಚಾಗುತ್ತಿದ್ದಂತೆ ತಂಪಾಗಿರುವ ಉಲ್ಲಾಸಕರವಾದ ಏನನ್ನಾದರೂ ಸೇವಿಸಬೇಕೆಂದೆನಿಸುವುದು ಸಹಜ. ಹಾಗಾದಾಗ ನೀವು ಸೋರೆಕಾಯಿ ಜ್ಯೂಸ್ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಇರುವಂತಹ ನೈಸರ್ಗಿಕ ಸಕ್ಕರೆ ಅಂಶವು ಗೈಕೊಜನ್ ಮಟ್ಟವನ್ನು ಮರುಸ್ಥಾಪಿಸುವುದು ಮತ್ತು ದೇಹದಲ್ಲಿ ವ್ಯಾಯಾಮದಿಂದ ಕಾರ್ಬೋಹೈಡ್ರೆಟ್ಸ್ ನ್ನು ಇದು ಮರಳಿ ನೀಡುವುದು. ಅಧಿಕ ಪ್ರೋಟೀನ್ ಹಾಗೂ ಪೋಷಕಾಂಶಗಳು ಇರುವಂತಹ ಇದು ಸ್ನಾಯುಗಳ ಕಾರ್ಯಕ್ಷಮತೆ ವೃದ್ಧಿಸುತ್ತದೆ. ಗಸಗಸೆ ತಿಂದರೆ ಈ ಪ್ರಯೋಜನಗಳು..! ಗಸಗಸೆ ಬೀಜಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಮಹಿಳೆಯರಿಗೆ ಇವುಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಗಸಗಸೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು ಇದನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಗಸಗಸೆಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಎಂಬಂತೆ, ಕೈಗಳಿಲ್ಲದಿದ್ದರೂ ಕೊರಗುತ್ತಾ ಕೂರದೆ, ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಳೆ ಕೇರಳದ ಜಿಲುಮೋಲ್​​ ಮರಿಯೆಟ್ ಥಾಮಸ್. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದ ಮರಿಯೆಟ್ ಥಾಮಸ್ ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಳು. ಇದೀಗ ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ದೇಶದ ಗಮನ ಸೆಳೆದಿದ್ದಾಳೆ. ಇದಲ್ಲದೇ ಎರಡು ಕೈಗಳಿಲ್ಲದೇ ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮರಿಯೆಟ್ ಥಾಮಸ್, ಇತ್ತೀಚೆಗಷ್ಟೇ ತಾನು ಕಾರು ಚಲಾಯಿಸುತ್ತಿರುವ ವೀಡಿಯೋ ಹಂಚಿಕೊಂಡಿದ್ದಾಳೆ. ಮಾರ್ಚ್​​ 28ರಂದು @jilumolmarietthomas ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ಈ ವೀಡಿಯೋ ಇದೀಗಾಗಲೇ 60ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೆ, 2.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸುವುದರ ಜೊತೆಗೆ ಚಿತ್ರಕಲೆಯಲ್ಲೂ…

Read More

ಕರ್ನಾಟಕದಲ್ಲಿ ‘ಲೋಕ’ ರಾಜಕೀಯ ಚಿತ್ರಣವೇ ಬೇರೆ ಇದೆ. ಈ ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಜೊತೆಗೆ ಯಡಿಯೂರಪ್ಪನವರ ನಂತರದ ಕರ್ನಾಟಕದಲ್ಲಿ ಬಿಜೆಪಿ ಉಳಿವು ತುಂಬಾ ಕಷ್ಷವಿದೆ ಎನ್ನಲಾಗಿದೆ. ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ರಂಗೇರಿದಿ. ಪಕ್ಷಗಳ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಒಂದೆಡೆ ಮೋದಿ ಅಲೆಯ ಮೂಲಕ ಬಿಜೆಪಿ ಚುನಾವಣೆಯಲ್ಲಿ ಸೆಣೆಸಲು ಅಣಿಯಾಗಿದ್ದರೆ, ತನ್ನದೇ ಗ್ಯಾರಂಟಿ, ಜೋಡೋ ಯಾತ್ರೆಗಳ ಮೂಲಕ ಕಾಂಗ್ರೆಸ್ ಹೋರಾಡಲು ತಯಾರಾಗಿದೆ. ಇದೆಲ್ಲದರ ನಡುವೆ ದಕ್ಷಿಣ ಭಾರತದತ್ತ ತನ್ನ ಚಿತ್ತ ನೆಟ್ಟಿರುವ ಬಿಜೆಪಿ ಕರ್ನಾಟಕ ಹೊರತಾಗಿ ಇತರ ದಕ್ಷಿಣ ರಾಜ್ಯಗಳಲ್ಲಿ ತನ್ನ ಖಾತೆ ತೆರೆಯಲು ಶತಾಯ-ಗತಾಯ ಪ್ರಯತ್ನ ನಡೆಸಿದೆ. ಏನೇನು ತಯಾರಿ ಬೇಕು ಎಲ್ಲಾ ಮಾಡಿಕೊಂಡಿದೆ. ಹೀಗಾಗಿ ಕೆಲವು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆ.…

Read More

ತುಮಕೂರು: ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಮತಗಟ್ಟೆ ಸಂಖ್ಯೆ 82 ರಲ್ಲಿ ಕುದುರೆ ಏರಿ ಬಂದು ವೈದ್ಯರೊಬ್ಬರು ಮತದಾನ ಮಾಡಿದರು. ಕುದುರೆ ಏರಿ ಬಂದು ಮತದಾರರ ಗಮನಸೆಳೆದ ಡಾ. ಶ್ರೀಧರ್, ಈ ಮಧ್ಯೆ ಮತದಾನ ಮಾಡಿ ಬಂದವರಿಗೆ ಉಚಿತ ಸಮೋಸ ಹಾಗೂ ಟೀ ವಿತರಣೆ ಮಾಡಿದರು. ಇವರು ಮತದಾರರಿಗೆ ವಿನೂತನ ರೀತಿಯಲ್ಲಿ ಅರಿವು ಮೂಡಿಸುತ್ತಿರುವ ವೈದ್ಯರಾಗಿದ್ದಾರೆ. ಸತ್ಯಕುಮಾರ್ ಫೌಡೇಂಶನ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ಡಾ. ಶ್ರೀಧರ್, ಆಸ್ಪತ್ರೆ, ಉಚಿತ ದಾಸೋಹ ಸೇರಿದಂತೆ ಹಲವಾರು ಸೇವೆ ಒದಗಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಗಾಂಧಿನಗರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ತೆರೆಯಲಾಗಿರುವ ವಿಶೇಷವಾದ ಸಖಿ ಮತಗಟ್ಟೆ ಕೇಂದ್ರವು ಮತದಾರರನ್ನು ಸಾಕಷ್ಟು ಆಕರ್ಷಣೆಗೆ ಒಳಗಾಗಿಸಿದೆ. ಹೊರಭಾಗದ ಗೋಡೆಯಲ್ಲಿ ಮಹಿಳೆಯರ ಚಿತ್ರಗಳನ್ನು ಚಿತ್ರಿಸಲಾಗಿದ್ದು ಮತದಾನಕ್ಕೆ ಪ್ರೇರೇಪಿಸಲಾಗುತ್ತಿದೆ. ಅಲ್ಲದೆ ವಿಶೇಷವಾಗಿ ಈ ಮತಗಟ್ಟೆ ಕೇಂದ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕೂಡ ಗಮನಾರ್ಹ ಅಂಶವಾಗಿದೆ. ಮತಗಟ್ಟೆ ಮುಂಭಾಗ ಬಲೂನ್ ಗಳನ್ನು ಕಟ್ಟಿ ವಿಭಿನ್ನವಾಗಿ ಅಲಂಕರಿಸಲಾಗಿದೆ. ಮತಗಟ್ಟೆ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳು ಕೂಡ ಮಹಿಳೆಯರೇ ಆಗಿರುವುದು ವಿಶೇಷವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More