2024ರ ಲೋಕಸಭಾ ಚುನಾವಣೆಯ ಪ್ರಯುಕ್ತ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯಿತು. ಮತದಾನ ಮಾಡುವಲ್ಲಿ ಯುವಕರಿಗಿಂತ ಹಿರಿಯರೇ ಮೊದಲಿಗರಾಗಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಎಲ್ಲ ಮತಗಟ್ಟೆಗಳಲ್ಲೂ ಕುಡಿಯುವ ನೀರಿನಿಂದ ಹಿಡಿದು ಎಲ್ಲಾ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ. 240 ಮತಗಟ್ಟೆಗಳಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ಮತದಾನ ನಡೆಯುತ್ತಿದೆ.
ತನ್ನ ತಾತನ ಜೊತೆ ಮತಗಟ್ಟೆಗೆ ಬಂದ ಮೊಮ್ಮಗಳು ತಾತನ ಮತದಾನ ಮಾಡಿಸಿದಳು. ಕೊರಟಗೆರೆ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಯಿಂದ ಮತದಾನದ ಮಾಹಿತಿ ಪಡೆಯುತ್ತಿರುವ ಸಿಬ್ಬಂದಿ, ವಿಕಲಚೇತನ ಮತದಾರರಿಗೆ ಮತದಾನದ ಅರಿವು ಮೂಡಿಸಿ ವಿಶೇಷ ವಾಹನದ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿದ ಘಟನೆಗಳು ನಡೆದಿವೆ. ಇಲ್ಲಿಯವರೆಗೂ ಶೇಕಡಾ 65 ರಷ್ಟೇ ಮತದಾನ ನಡೆದಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296