Subscribe to Updates
Get the latest creative news from FooBar about art, design and business.
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
- ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
Author: admin
ಹುಬ್ಬಳ್ಳಿ: ನೇಹಾ ತಂದೆ ನಿರಂಜನ ಹಿರೇಮಠ ಅವರಿಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ನೇಹಾ ಹಿರೇಮಠ ಹತ್ಯೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇಹಾ ತಂದೆ ನಿರಂಜನ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಜೀವಬೆದರಿಕೆ ಇದ್ದರೆ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ನೇಹಾ ತಂದೆಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೋ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡುಬಂದಿದೆ. ಈ ವಿಷಯನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ. ಅವರು ಭದ್ರತೆ ಕೊಡುವುದಾಗಿ ಹೇಳಿದ್ದು ಪೊಲೀಸರನ್ನು ನಿಯೋಜಿಸಿದ್ದಾರೆಂದು ನಿರಂಜನ್ ತಿಳಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ದೆಹಲಿ: ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ-ಸಮವಸ್ತ್ರ ಪೂರೈಕೆ ವಿಳಂಬಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜೈಲಿನಿಂದ ಅಧಿಕಾರ ನಡೆಸುತ್ತಿರುವ ಕೇಜ್ರಿವಾಲ್ ಗೆ ದೇಶಕ್ಕಿಂತ ಅಧಿಕಾರವೇ ಮುಖ್ಯವಾಯಿತೆ ಎಂದು ಚಾಟಿ ಬೀಸಿರುವ ಹೈಕೋರ್ಟ್, ಸರ್ಕಾರ ಮಕ್ಕಳ ಶಿಕ್ಷಣದ ಬಗ್ಗೆ ಅವರ ಭವಿಷ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲ. ಮಕ್ಕಳಿಗೆ ಪಠ್ಯ ಪುಸ್ತಕ ಸಿಗುತ್ತಿಲ್ಲ. ಮೂಲಭೂತ ಹಕ್ಕಾದ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದೆ. ದೆಹಲಿಯಲ್ಲಿ ಆಡಳಿತ ಮಾಡುತ್ತಿರುವ ಎಎಪಿ ಪಕ್ಷ ಕೇವಲ ಅಧಿಕಾರಕ್ಕೆ ಅಂಟಿಕೊಂಡಿದೆ. ಸಿಎಂ ಕೇಜ್ರಿವಾಲ್ ಗೆ ಜನರ ಹಿತಕ್ಕಿಂತ ವೈಯಕ್ತಿಕ ರಾಜಕೀಯ ಮೇಲಾಟವೇ ಮುಖ್ಯವಾಗಿದೆ ಎಂದು ಎಎಪಿ ಪರ ವಕೀಲರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವೈಯಕ್ತಿಕ ಪ್ರತಿಷ್ಠೆಗೆ ಜೋತು ಬಿದ್ದಿರುವ ಕೇಜ್ರಿವಾಲ್ ರಾಜೀನಾಮೆ ನೀಡದೆ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ. ಮುಖ್ಯಮಂತ್ರಿ, ಸಚಿವರು ಜೈಲಿನಲ್ಲಿದ್ದುಕೊಂಡು ಉತ್ತಮ ಆಡಳಿತ, ಜನರಿಗೆ ಸ್ಪಂದನೆ ನೀಡಲು ಸಾಧ್ಯವೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಿಗೆ ದಿಡೀರ್ ಚುನಾವಣಾ ಜನರಲ್ ಅಬ್ಸರ್ವರ್ ಭೇಟಿ ನೀಡಿ ಮತಕಟ್ಟೆಯಲ್ಲಿ ಏನಾದರು ಸಮಸ್ಯೆಗಳು ಇದೇಯೆ ಎಂದು ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಜೂನಿಯರ್ ಕಾಲೇಜ್ ಹಾಗೂ ತುಂಬಾಡಿ ಗ್ರಾಮದ ಮತಗಟ್ಟೆಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಹಾಗೂ ಸ್ಥಳೀಯ ಚುನಾವಣಾ ಅಧಿಕಾರಿಯಿಂದ ಚುನಾವಣಾ ಜನರಲ್ ಅಬ್ಸರ್ವರ್ ಅಧಿಕಾರಿಗಳು ಮಾಹಿತಿಯನ್ನು ಪಡೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ಮತದಾನ ನಡೆಯಿತು. ಲೋಕಸಭೆ ಚುನಾವಣೆ ಹಿನ್ನೆಲೆ, ನೂತನ ವಧು ವರ ಮದುವೆಯಾದ ಬಳಿಕ ಮತದಾನ ಮಾಡಿದರು. ನೂತನ ವಧು ವರರು ಮತಗಟ್ಟೆ ಸಂಖ್ಯೆ 253 ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾವಣೆ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯಲ್ಲಿ ಗುಡಿಸಲುಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಭಾರೀ ಅನಾಹುತವೊಂದು ತಪ್ಪಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ ಹತ್ತಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಗುಡಿಸಲಿನಲ್ಲಿದ್ದ ದಿನಸಿ, ಬಟ್ಟೆ, ವಸ್ತುಗಳು ಭಸ್ಮವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳವರು ಬೆಂಕಿ ನಂದಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಲೋಕ ಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಪತ್ನಿ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬಾಲೇನ ಹಳ್ಳಿ ಮತಗಟ್ಟೆ ಸಂಖ್ಯೆ 224ರಲ್ಲಿ ಟಿ.ಬಿ.ಜೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರ ಮಾತನಾಡಿದ ದೇಶದ ಪ್ರಜೆಯಾಗಿ ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಟಿ.ಬಿ.ಜೆ ಮನವಿ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪಾವಗಡ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಟಿ.ಎನ್. ಬೆಟ್ಟದ ನವ ದಂಪತಿ ಲಕ್ಷ್ಮೀ ಪತಿ ಪಿ.ಹೆಚ್. ಮತ್ತು ನವ್ಯಶ್ರೀ ಇಂದು ಹಸೆಮಣೆ ತುಳಿದು ನವ ಸಂಸಾರಕ್ಕೆ ಕಾಲಿಟ್ಟರು. ಮತದಾನವೂ ಇಂದೇ ಇರುವುದರಿಂದ, ಇದು ನಮ್ಮ ಹಕ್ಕು ನಮ್ಮ ಕರ್ತವ್ಯ. ಯಾರೂ ಕೂಡ ಮತದಾನದಿಂದ ದೂರ ಉಳಿಯದಿರಿ. ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದು ಸಂದೇಶ ರವಾನಿಸಿದರು. ಪ್ರಜಾಪ್ರಭುತ್ವದ ಭದ್ರ ಬುನಾದಿ ಈ ಮತದಾನ ಅಂತಹ ಮತದಾನದ ಮೌಲ್ಯ ಅರಿತ ಈ ನವ ದಂಪತಿಗಳ ಕಾರ್ಯ ಕಂಡ ನೆಟ್ಟಿಗರು, ಚುನಾವಣಾ ಅಧಿಕಾರಿಗಳು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವನದ ಮುಖ್ಯ ಘಟ್ಟ ತಲುಪಿದ ನವ ದಂಪತಿಗಳಾದ ಲಕ್ಷ್ಮೀಪತಿ ಹಾಗೂ ನವ್ಯಶ್ರೀ ಅವರಿಗೆ ಬದುಕಲ್ಲಿ ಭಗವಂತ ಒಳಿತು ಮಾಡಲಿ.. ಒಬ್ಬೊಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವ ಶಕ್ತಿ ತಾಳ್ಮೆ ಕರುಣಿಸಲಿ ಎಂದು ಹಾರೈಸೋಣ. ವರದಿ: ನಂದೀಶ್ ನಾಯ್ಕ ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಲೋಕಸಭಾ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ. ಅಚ್ಚರಿಯೆಂಬಂತೆ ಒಂದೇ ಕುಟುಂಬದ 85 ಮಂದಿ ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಹೌದು. ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ ವಾರ್ಡ್ ನಂಬರ್ 19ರ ನಿವಾಸಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಾಯಿ-ಮಗಳು-ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ 85 ಮಂದಿ ಮತ ಹಾಕಿದ್ದಾರೆ. ಮತದಾನಕ್ಕಾಗಿ ಎಲ್ಲರೂ ಒಂದೆಡೆ ಸೇರಿ ಮತದಾನ ಮಾಡುವ ಸಂಪ್ರದಾಯವಿದೆ. ಅಂತೆಯೇ ಬಾದಾಮ್ ಫ್ಯಾಮಿಲಿಯಿಂದ ಒಂದೇ ಸಮಯದಲ್ಲಿ ಮತದಾನ ನಡೆದಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ. ಸುಧಾಕರ್ ಹಾಗೂ ಕಾಂಗ್ರೆಸ್‍ನಿಂದ ರಕ್ಷಾ ರಾಮಯ್ಯ ಚುನಾವಣಾ ಅಖಾಡದಲ್ಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮತಗಟ್ಟೆಗೆ ಕೇಸರಿ ಶಾಲು ಧರಿಸಿ ಬಂದಿದ್ದ ಪಕ್ಷದ ಏಜೆಂಟ್ ಒಬ್ಬರನ್ನು ಪೊಲೀಸರು ವಾಪಸ್ ಕಳಿಸಿದ ಪ್ರಸಂಗ ಬೆಂಗಳೂರಿನ ಆರ್ ಆರ್ ನಗರದ ಮತಗಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮತಗಟ್ಟೆಗೆ ಕೇಸರಿ ಶಾಲು ಧರಿಸಿ ಬಂದಿದ್ದ ವ್ಯಕ್ತಿಯನ್ನು, ಪರೋಕ್ಷವಾಗಿ ಪಕ್ಷದ ಪ್ರಚಾರ ಆಗಲಿದೆ ಎಂಬ ಕಾರಣಕ್ಕೆ ಪೊಲೀಸರು ವಾಪಸ್ ಕಳಿಸಿದರು. ಶಾಲು ತೆಗೆದಿಟ್ಟು ಬಂದ ನಂತರ ಮತಗಟ್ಟೆ ಒಳಗೆ ಬಿಡಲಾಯಿತು. ಬೆಂಗಳೂರು ನಗರದಲ್ಲಿ ಎಂದಿನಂತೆ ನಿಧಾನಗತಿಯಲ್ಲಿ ಮತದಾನ ಮುಂದುವರಿದಿದೆ. ಆದರೆ ವಿಧಾನಸಭಾ ಚುನಾವಣೆಗಿಂತ ವೇಗವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಬೆಳಗ್ಗೆ 10 ಗಂಟೆವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ. 8.5ರಷ್ಟು ಮತದಾನವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸದಾನಂದ ಗೌಡ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಚಿತ್ರನಟಿ ಅಮೂಲ್ಯ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಚಿವ ಜಮೀರ್…
ನೋಡ ನೋಡುತ್ತಲೇ ಬೃಹತ್ ಮರವೊಂದು ನೆಲಕ್ಕುರುಳಿದೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಸಮೀಪದಲ್ಲೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಇದೇ ವೇಳೆ ಮತಗಟ್ಟೆ ಸಮೀಪ ಬೃಹತ್ ಮರವೊಂದು ಬುಡ ಸಮೇತ ಕಿತ್ತು ಬಂದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಆಗಷ್ಟೇ ಮತದಾನ ಮಾಡಲು ಮತದಾರರು ಆ ರಸ್ತೆ ಮೂಲಕ ಹಾದು ಹೋಗಿದ್ದರು. ಅದೃಷ್ಟವಶಾತ್ ಮರ ಬೀಳುವಾಗ ಆ ಸಂದರ್ಭದಲ್ಲಿ ಜನರ ಓಡಾಟ ಇರಲಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. ಮರದ ಪಕ್ಕದಲ್ಲೇ ಇದ್ದ ಮಾರುತಿ ಕಾರ್ ಬೋನೆಟ್ ಮೇಲೆ ಮರ ಬಿದ್ದಿದೆ. ಹೀಗಾಗಿ ಕಾರಿನ ಮುಂಭಾಗದ ಲೈಟ್ ಜಖಂ ಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿತ್ತು. ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿರುವ ಮತಗಟ್ಟೆಯ ಕೂದಲಳತೆ ದೂರದಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…