Subscribe to Updates
Get the latest creative news from FooBar about art, design and business.
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
- ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
Author: admin
ನಟಿ ಅನುಪಮಾ ಪರಮೇಶ್ವರನ್ ನಟನೆಯ ಹೊಸ ಸಿನಿಮಾ ಪರದಾ ಚಿತ್ರದ ಫಸ್ಟ್ ಲುಕ್ ಚಿತ್ರ ತಂಡ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಡ್ಡೆಹುಡುಗರ ಕ್ರಶ್ ಅನುಪಮಾ ಪರಮೇಶ್ವರನ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ಆದ ನಂತರ ಅವರಿಗೆ ಕೈ ತುಂಬಾ ಅವಕಾಶಗಳು ಬರುತ್ತಿವೆ. ಹಸಿ ಬಿಸಿ ಬೋಲ್ಡ್ ಸೀನ್ ಗಳಲ್ಲಿ ನಟಿಸಲ್ಲ ಎಂದು ಹೇಳಿದ್ದ ಅನುಪಮಾ ಪರಮೇಶ್ವರನ್ ಇದೀಗ ಮಾತು ಬದಲಾಯಿಸಿ, ಬೋಲ್ಡ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಬಂಡಿ ಸಿನಿಮಾ ಮಾಡಿದ್ದ ಪ್ರವೀಣ್ ಕಂಡ್ರೇಗುಲಾ ಪರದಾ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ದರ್ಶನಾ ರಾಜೇಂದ್ರನ್ ಮತ್ತು ಸಂಗೀತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೀಧರ್ ಮುಕ್ಕುವ, ವಿಜಯ್ ಡೊಂಕದ ಹಾಗೂ ಶ್ರೀನಿವಾಸಲು ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅನುಪಮಾ ಪರಮೇಶ್ವರನ್ ಒಂದೂವರೆ ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಿದ್ದಾರಂತೆ, ಅಲ್ಲದೇ ತಮ್ಮ ಮುಂದಿನ ಚಿತ್ರಗಳಿಗೆ ದುಬಾರಿ ಸಂಭಾವನೆಗೆ…
ರಿಚರ್ಡ್ ಆಂಟನಿ ಚಿತ್ರದ ಸಿನಿಮಾ ಶೂಟಿಂಗ್ ಮೇ 1ರಿಂದ ಆರಂಭವಾಗಲಿದೆ ಎಂದು ನಟ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ನಿನ್ನೆ ಉಡುಪಿಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡುತ್ತಿದ್ದರು. ರಿಚರ್ಡ್ ಆಂಟನಿ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಮ್ ಟೀಮ್ ಉಡುಪಿ ತಲುಪಲಿದೆ. ಮೇ 1 ರಿಂದ ಚಿತ್ರೀಕರಣ ಶುರು ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. 1980–90 ರ ದಶಕದಲ್ಲಿ ನಡೆಯುವ ಕಥೆಯನ್ನು ರಕ್ಷಿತ್ ಶೆಟ್ಟಿ ಹೇಳಲು ಹೊರಟಿದ್ದಾರೆ. ಈ ಸಿನಿಮಾದ ಶೇ.50ರಷ್ಟು ಶೂಟಿಂಗ್ ಉಡುಪಿಯಲ್ಲೇ ನಡೆಯಲಿದೆಯಂತೆ! ಇನ್ನೂ ಈ ಸಿನಿಮಾ ನಿರ್ಮಾಣವನ್ನು ಯಾವ ಸಂಸ್ಥೆ ಮಾಡಲಿದೆ ಎನ್ನುವ ಮಾಹಿತಿಯನ್ನು ಅವರು ನೀಡಲಿಲ್ಲ. ಇತ್ತೀಚೆಗೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕು ಮೂಡಿತ್ತು ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಆಪ್ತರು ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ…
ನವದೆಹಲಿ: ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಬಾರದ ಹಿನ್ನೆಲೆ ರಾಜ್ಯ ಸರ್ಕಾರದ ನಿರಂಗತರ ಹೋರಾಟದ ಬಳಿಕ ಇದೀಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಚಂಡಮಾರುತ ಹಾಗೂ ಪ್ರವಾಹ ಪರಿಹಾರವೆಂದು 275 ಕೋಟಿ ರೂ. ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,174 ಕೋಟಿ ರೂ. ಹಣದ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನ ಮೊರೆ ಹೋಗಿತ್ತು. ಬಳಿಕ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್‍ಗೆ ಹೇಳಿತ್ತು. ಅದರಂತೆ ಇದೀಗ ಕೇಂದ್ರ ಸರ್ಕರ ಬರ ಪರಿಹಾರ ಘೋಷಣೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bu0PpuFHlmt705QwiTL3vv ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಪಾವಗಡ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರು ಹತ್ಯೆಗೀಡಾದ ಘಟನೆ ಪಾವಗಡದ ಭೂಪೂರು ತಾಂಡಾದಲ್ಲಿ ನಡೆದಿದೆ. ಭೂಪೂರು ಗ್ರಾಮಕ್ಕೆ ಸೇರಿದ 40 ವರ್ಷದ ಗೋಪಾಲ ನಾಯ್ಕ್ ಎಂಬುವವರು ಚಾಕು ಇರಿತದಿಂದ ಮೃತಪಟ್ಟಿವರಾಗಿದ್ದಾರೆ.,ಮೃತರು ಪತ್ನಿ ಮತ್ತು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಸಂಬಂಧಿಕರನ್ನು ಅಗಲಿದ್ದಾರೆ.ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಲ್ಲಿ ನಾಗರಾಜ ನಾಯ್ಕ, ಹೇಮಂತ್ ನಾಯ್ಕ್, ತರುಣ್ ನಾಯ್ಕ್, ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಪೋಲಿಸರು ಬಂಧಿಸಿ ಬಿಗಿ ಭದ್ರತೆಯೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತದೆ. ತಿರುಮಣಿ ಗ್ರಾಮಾಂತರ ಪೋಲಿಸ್ ಠಾಣೆಯ ಸಿಪಿಐ ಗಿರೀಶ್ ಮತ್ತು ಪಾವಗಡ ಠಾಣೆಯ ಸಿಪಿಐ ಸುರೇಶ್ ಗಾಯಳುಗಳಿಂದ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ: ನಂದೀಶ್ ನಾಯ್ಕ ಪಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bu0PpuFHlmt705QwiTL3vv ಯೂಟ್ಯೂಬ್ ಚಾನೆಲ್…
ಜನರು 5,000 ವರ್ಷಗಳಿಂದ ಚಹಾವನ್ನು ಕುಡಿಯುತ್ತಿದ್ದಾರೆ. ಇದು ನೀರಿನ ನಂತರ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಎಲ್ಲಾ ವಿಧದ ಚಹಾವು ಪ್ರಯೋಜನಗಳನ್ನು ನೀಡುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲದಿದ್ದರೂ, ಸಂಶೋಧಕರು ಇನ್ನೂ ಕಪ್ಪು ಚಹಾದ ಸಂಪೂರ್ಣ ಶಕ್ತಿ ಮತ್ತು ಆರೋಗ್ಯವನ್ನು ಸುಧಾರಿಸುವ ಹಲವಾರು ವಿಧಾನಗಳ ಬಗ್ಗೆ ಅಧ್ಯಯನಗಳ ಮೂಲಕ ಕಲಿಯುತ್ತಿದ್ದಾರೆ. ಕಪ್ಪು ಚಹಾವು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಚಹಾವಾಗಿದೆ. ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಎಲೆಗಳನ್ನು ಬಳಸಿ ತಯಾರಿಸಿದ ನಾಲ್ಕು ವಿಧದ ಚಹಾಗಳಲ್ಲಿ ಇದು ಒಂದಾಗಿದೆ. ಇತರ ಚಹಾಗಳಿಗಿಂತ ಭಿನ್ನವಾಗಿ, ಕಪ್ಪು ಚಹಾ ಎಲೆಗಳು ವ್ಯಾಪಕವಾದ -ಆಕ್ಸಿಡೀಕರಣ ಪ್ರಕ್ರಿಯೆಗೆ ಒಳಗಾಗುತ್ತವೆ, ಎಲೆಗಳೊಳಗಿನ ಜೀವಕೋಶಗಳನ್ನು ಆಮ್ಲಜನಕಕ್ಕೆ ಒಡ್ಡುತ್ತವೆ. ಈ ಆಕ್ಸಿಡೀಕರಣವು ಕಪ್ಪು ಚಹಾಕ್ಕೆ ಹಸಿರು ಚಹಾಕ್ಕಿಂತ ವಿಭಿನ್ನ ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞರು ನಂಬುತ್ತಾರೆ. ಚಹಾದ ಪ್ರಯೋಜನಗಳು ಪಾಲಿಫಿನಾಲ್‌ಗಳಿಂದ ಬರುತ್ತವೆ. ಅನೇಕ ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುವ ಉತ್ಕರ್ಷಣ ನಿರೋಧಕಗಳು, ಕಪ್ಪು ಚಹಾವು ಥಿಯೋಫ್ಲಾವಿನ್ ಎಂಬ ಪಾಲಿಫಿನಾಲ್ಗಳ ಗುಂಪನ್ನು ಹೊಂದಿರುತ್ತದೆ.…
ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್ ಅವರು ನೆನ್ನೆ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ ಎಂದು ಒತ್ತಾಯಿಸಿದರು. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ ಎಂದು ಅವರು ಒತ್ತಾಯಿಸಿದರು. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು?. ಇಲ್ಲಿ ಯುವಕರು, ಹಿರಿಯರು ಎನ್ನುವ ಪ್ರಶ್ನೆ ಇಲ್ಲ ಎಂದು ಅನಂತ್ ನಾಗ್ ಹೇಳಿದರು. ಎಲ್ಲರನ್ನೂ ಒಂದೇ ತರಹ ನೋಡಿ. 75 ವರ್ಷಗಲ್ಲಿ ಆಗದ ಕೆಲಸ ಮುಂದೆ ಬರುವ ಸರ್ಕಾರ ಮಾಡಬೇಕು”ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಇವಿಎಂ–ವಿವಿ ಪ್ಯಾಟ್ ತಾಳೆಯ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ವಿಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ತಿಳಿಸಿದ್ದಾರೆ. ಮತಪತ್ರ ವ್ಯವಸ್ಥೆ ಮರುಜಾರಿಗೆ ಒತ್ತಾಯಿಸುವ ಮೂಲಕ ಕಾಂಗ್ರೆಸ್ ಮತಗಟ್ಟೆ ವಶದಂತಹ ಅಕ್ರಮ ಎಸಲು ಬಯಸಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ವಿಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದರು. ಚುನಾವಣಾ ಅಕ್ರಮ ತಡೆಯಲು ಮತ್ತು ಪಾರದರ್ಶಕತೆ ಕಾಯ್ದಕೊಳ್ಳಲು ವಿದ್ಯುನ್ಮಾನ ಮತಯಂತ್ರಗಳಲ್ಲಿ ಚಲಾವಣೆಯಾದ ಮತಗಳ ಪರಿಶೀಲನೆಗೆ ವಿವಿಪ್ಯಾಟ್ ವ್ಯವಸ್ಥೆ ಒದಗಿಸಲಾಗಿದೆ. ಆದರೆ ಇದರಲ್ಲಿ ದೋಷಗಳಿದ್ದು ಚಲಾವಣೆಯಾದ ಎಲ್ಲ ವಿವಿಪ್ಯಾಟ್ ಚೀಟಿಗಳ ಪರಿಶೀಲಿನೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಿಲಿಕಾನ್ ಸಿಟಿಯ ಮತದಾರರು ಮತದಾನಕ್ಕೆ ನಿರುತ್ಸಾಹ ತೋರಿದ್ದಾರೆ. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅರ್ಧದಷ್ಟು ಮತದಾರರು ಮತವನ್ನೇ ಚಲಾಯಿಸಿಲ್ಲ. ಈ ಮೂರು ಕ್ಷೇತ್ರಗಳಲ್ಲಿ ಬರೋಬ್ಬರಿ 79,91,410 ಮತದಾರರಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿಲು ನಿರುತ್ಸಾಹ ತೋರಿದ್ದಾರೆ. ರಾಜ್ಯ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಮತದಾನ ಹೆಚ್ಚಳಕ್ಕೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಫಲ ಸಿಕ್ಕಿಲ್ಲ. ಸರ್ಕಾರಿ, ಖಾಸಗಿ ಕಂಪನಿಗಳ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಮತದಾನ ಮಾಡಲು ರಜೆ ನೀಡಿದರೂ, ಮತದಾರ ಮಾತ್ರ ಮತಗಟ್ಟೆಯ ಹತ್ತಿರ ಸುಳಿಯಲಿಲ್ಲ. 2014 ಮತ್ತು 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯೂ ಕಡಿಮೆ ಮತದಾನವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2014ರಲ್ಲಿ 56.53 ರಷ್ಟು, 2019ರಲ್ಲಿ 54.76ರಷ್ಟು ಹಾಗೂ 2024ರಲ್ಲಿ 54.42ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರದಲ್ಲಿ 2014ರಲ್ಲಿ 55.64 ರಷ್ಟು, 2019ರಲ್ಲಿ 54.32ರಷ್ಟು ಹಾಗೂ 2024ರಲ್ಲಿ 52.81ರಷ್ಟು ಮತದಾರರು ಮತದಾನ…
ತುಮಕೂರು: ಪಿಯುಸಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಫಲಿತಾಂಶ ಹೊರಬಿದ್ದಿದ್ದು, ವಾಣಿಜ್ಯ ವಿಭಾಗದಲ್ಲಿ ಗ್ಯಾಸ್ ಸಿಲಿಂಡರ್ ವಿತರಕನ ಪುತ್ರಿ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ್ದಾರೆ. ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ ಜಿ.ಬಿ. ಅವರು ಮರುಮೌಲ್ಯಮಾಪನದಲ್ಲಿ ಮೊದಲಿಗಿಂತ 4 ಅಂಕಗಳನ್ನು ಹೆಚ್ಚು ಪಡೆದಿದ್ದಾರೆ. ಈ ಮೂಲಕ ಒಟ್ಟು 595 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ. ಮೊದಲಿಗೆ ಪ್ರಕಟಗೊಂಡ ಫಲಿತಾಂಶದಲ್ಲಿ ಪವಿತ್ರಾ 591 ಅಂಕಗಳನ್ನು ಪಡೆದಿದ್ದರು. ಕನ್ನಡದಲ್ಲಿ 99, ವ್ಯವಹಾರ ಅಧ್ಯಯನದಲ್ಲಿ 95 ಅಂಕಗಳು ಬಂದಿದ್ದವು. ಈ ಎರಡು ವಿಷಯಗಳನ್ನು ಮರುಮೌಲ್ಯಮಾಪನಕ್ಕೆ ಹಾಕಿದಾಗ ಕನ್ನಡದಲ್ಲಿ 1. ವ್ಯವಹಾರ ಅಧ್ಯಯನದಲ್ಲಿ 3 ಅಂಕಗಳು ಹೆಚ್ಚುವರಿಯಾಗಿ ಬಂದಿವೆ. ಇದರೊಂದಿಗೆ ಒಟ್ಟು 595 ಅಂಕಗಳನ್ನು ಪಡೆದು ವಾಣಿಜ್ಯ ವಿಭಾದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಬಂದಿದ್ದಾರೆ. ಪವಿತ್ರಾ ಅವರ ತಂದೆ ಬಸವರಾಜು ಸಿಲಿಂಡರ್ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಪುತ್ರಿಯ ಸಾಧನೆಗೆ ತಂದೆ ಹಾಗೂ ಕಾಲೇಜಿನ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ…
ಉತ್ತರ ಪ್ರದೇಶ : ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸದಂತೆ ಎಷ್ಟೇ ಜಾಗೃತಿ ಮೂಡಿಸಿದವರು ಜನರು ತಿಳಿದುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಪ್ರತಿದಿನ ಅನಾಹುತಗಳು ಘಟಿಸುತ್ತಲೇ ಇವೆ. ಇದೀಗ ಬೈಕ್ ಓಡಿಸುತ್ತಿದ್ದ ವೇಳೆ ಮೊಬೈಲ್ ಬ್ಲಾಸ್ಟ್ ಆಗಿ ಮಹಿಳೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಸುರದಲ್ಲಿ ಮಹಿಳೆ ಹೆಲೈಟ್ ಧರಿಸದೆ ಸ್ಕೂಟರ್ ಸವಾರಿ ಮಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆಯೇ ಮೊಬೈಲ್ ಬ್ಲಾಸ್ಟ್ ಆಗಿದೆ. ಮೊಬೈಲ್ ಬ್ಲಾಸ್ಟ್ ಆಗುತ್ತಿದ್ದಂತೆಯೇ ಮಹಿಳೆಯ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಅವಳನ್ನು ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಮಹಿಳೆಯನ್ನು ಪೂಜಾ(28) ಎಂದು ಗುರುತಿಸಲಾಗಿದೆ. ನೆಹ್ರರಿಯಾ ಗ್ರಾಮದ ಫರೂಖಾಬಾದ್ ಜಿಲ್ಲೆಯವಳಾಗಿರುವ ಪೂಜಾ ರೈಲು ನಿಲ್ದಾಣಕ್ಕೆ ಸ್ಕೂಟರ್ ನಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…