ನಟಿ ಅನುಪಮಾ ಪರಮೇಶ್ವರನ್ ನಟನೆಯ ಹೊಸ ಸಿನಿಮಾ ಪರದಾ ಚಿತ್ರದ ಫಸ್ಟ್ ಲುಕ್ ಚಿತ್ರ ತಂಡ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪಡ್ಡೆಹುಡುಗರ ಕ್ರಶ್ ಅನುಪಮಾ ಪರಮೇಶ್ವರನ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ಆದ ನಂತರ ಅವರಿಗೆ ಕೈ ತುಂಬಾ ಅವಕಾಶಗಳು ಬರುತ್ತಿವೆ. ಹಸಿ ಬಿಸಿ ಬೋಲ್ಡ್ ಸೀನ್ ಗಳಲ್ಲಿ ನಟಿಸಲ್ಲ ಎಂದು ಹೇಳಿದ್ದ ಅನುಪಮಾ ಪರಮೇಶ್ವರನ್ ಇದೀಗ ಮಾತು ಬದಲಾಯಿಸಿ, ಬೋಲ್ಡ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ಈ ಹಿಂದೆ ಬಂಡಿ ಸಿನಿಮಾ ಮಾಡಿದ್ದ ಪ್ರವೀಣ್ ಕಂಡ್ರೇಗುಲಾ ಪರದಾ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ದರ್ಶನಾ ರಾಜೇಂದ್ರನ್ ಮತ್ತು ಸಂಗೀತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೀಧರ್ ಮುಕ್ಕುವ, ವಿಜಯ್ ಡೊಂಕದ ಹಾಗೂ ಶ್ರೀನಿವಾಸಲು ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅನುಪಮಾ ಪರಮೇಶ್ವರನ್ ಒಂದೂವರೆ ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಿದ್ದಾರಂತೆ, ಅಲ್ಲದೇ ತಮ್ಮ ಮುಂದಿನ ಚಿತ್ರಗಳಿಗೆ ದುಬಾರಿ ಸಂಭಾವನೆಗೆ ಬೇಡಿಕೆಯಿಡಲು ಮುಂದಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bu0PpuFHlmt705QwiTL3vv
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA