ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಿಲಿಕಾನ್ ಸಿಟಿಯ ಮತದಾರರು ಮತದಾನಕ್ಕೆ ನಿರುತ್ಸಾಹ ತೋರಿದ್ದಾರೆ. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅರ್ಧದಷ್ಟು ಮತದಾರರು ಮತವನ್ನೇ ಚಲಾಯಿಸಿಲ್ಲ.
ಈ ಮೂರು ಕ್ಷೇತ್ರಗಳಲ್ಲಿ ಬರೋಬ್ಬರಿ 79,91,410 ಮತದಾರರಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿಲು ನಿರುತ್ಸಾಹ ತೋರಿದ್ದಾರೆ. ರಾಜ್ಯ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಮತದಾನ ಹೆಚ್ಚಳಕ್ಕೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಫಲ ಸಿಕ್ಕಿಲ್ಲ. ಸರ್ಕಾರಿ, ಖಾಸಗಿ ಕಂಪನಿಗಳ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಮತದಾನ ಮಾಡಲು ರಜೆ ನೀಡಿದರೂ, ಮತದಾರ ಮಾತ್ರ ಮತಗಟ್ಟೆಯ ಹತ್ತಿರ ಸುಳಿಯಲಿಲ್ಲ.
2014 ಮತ್ತು 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯೂ ಕಡಿಮೆ ಮತದಾನವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2014ರಲ್ಲಿ 56.53 ರಷ್ಟು, 2019ರಲ್ಲಿ 54.76ರಷ್ಟು ಹಾಗೂ 2024ರಲ್ಲಿ 54.42ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರದಲ್ಲಿ 2014ರಲ್ಲಿ 55.64 ರಷ್ಟು, 2019ರಲ್ಲಿ 54.32ರಷ್ಟು ಹಾಗೂ 2024ರಲ್ಲಿ 52.81ರಷ್ಟು ಮತದಾರರು ಮತದಾನ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2014ರಲ್ಲಿ 55.75 ರಷ್ಟು, 2019ರಲ್ಲಿ 53.70ರಷ್ಟು ಹಾಗೂ 2024ರಲ್ಲಿ 53.15ರಷ್ಟು ಮತದಾನವಾಗಿದೆ. ಬೆಂಗಳೂರನ್ನು ಐಟಿ ಸಿಟಿ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಅತೀ ಬುದ್ದಿವಂತರು ಎಂಬ ಹಣೆಪಟ್ಟಿಯನ್ನೂ ಹೊಂದಿದ್ದಾರೆ. ಆದರೆ, ಮತದಾನದ ವಿಚಾರಕ್ಕೆ ಬಂದರೆ, ಬೆಂಗಳೂರು ಮಂದಿ ನಿರುತ್ಸಾಹ ತೋರುವುದೇಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸಾಮಾಜಿಕ ಕಾರ್ಯಕರ್ತರು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ವೋಟರ್ ಲಿಸ್ಟ್ ಯಿಂದ ತೆಗೆದುಹಾಕಿ ಸರ್ಕಾರದಿಂದ ಸಿಗುವ ಯಾವ ಸೌಲಭ್ಯಗಳು ಸಿಗಬಾರದು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296