Author: admin

ಬೃಹತ್‌ ಮಾನವ ಕಳ್ಳ ಸಾಗಾಟ ಜಾಲವೊಂದು ಬೆಳಕಿಗೆ ಬಂದಿದೆ. ಬಿಹಾರದಿಂದ ಉತ್ತರಪ್ರದೇಶಕ್ಕೆ ಸಾಗಾಟವಾಗುತ್ತಿದ್ದ 95ಕ್ಕೂ ಅಧಿಕ  ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಸರ್ವೇಶ್ ಅವಸ್ಥಿ ಮಾಹಿತಿ ನೀಡಿದ್ದಾರೆ, ಇವರು ಹೇಳಿರುವ ಪ್ರಕಾರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಉತ್ತರಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ಸದಸ್ಯೆ ಸುಚಿತ್ರಾ ಚತುರ್ವೇದಿ ಕರೆ ಮಾಡಿ, ಬಿಹಾರದಿಂದ ಸಹರಾನ್ ಪುರಕ್ಕೆ ಮಕ್ಕಳನ್ನು ಅಕ್ರಮವಾಗಿ ಸಾಗಾಟ ಆಗುತ್ತಿದೆ. ಮಕ್ಕಳು ಸದ್ಯ ಗೋರಖ್ ಪುರದಲ್ಲಿದ್ದು, ಅಯೋಧ್ಯೆ ಮೂಲಕ ಅವರನ್ನು ಬೇರೆಡೆ ಸಾಗಿಸಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದರು. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸರ್ವೇಶ್ ಅವಸ್ಥಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಿಸಿದ್ದು, ಅವರಿಗೆ ಆಹಾರ ಮತ್ತು ಔಷಧ ಪೂರೈಕೆ ಮಾಡಿದ್ದಾರೆ. ಇನ್ನು ಈ ಮಕ್ಕಳು 4-12 ವರ್ಷ ವಯೋಮಿತಿಯವರಾಗಿದ್ದು, ಅವರನ್ನು ಕರೆದುಕೊಂಡು ಬಂದವರ ಬಳಿಕ ಮಕ್ಕಳ ಪೋಷಕರ ಒಪ್ಪಿಗೆ ಪತ್ರವಾಗಲೀ, ಇತರೆ ಯಾವುದೇ ದಾಖಲೆಗಳು ಇರಲಿಲ್ಲ. ಅಷ್ಟೇ ಅಲ್ಲದೇ ಮಕ್ಕಳನ್ನು…

Read More

ಉತ್ತರ ಪತ್ರಿಕೆಯನ್ನು ಸೂಕ್ತ ಉತ್ತರ ಬರೆಯುವುದನ್ನು ನೋಡಿದ್ದೇವೆ. ಉತ್ತರ ಗೊತ್ತಿಲ್ಲದಿದ್ದರೂ ಕೆಲವರು ಪುಟಗಟ್ಟಲೆ ಬಾಯಿಗೆ ಬಂದದ್ದನ್ನೆಲ್ಲ ಬರೆಯುವುದರ ಬಗ್ಗೆಯೂ ಕೇಳಿದ್ದೇವೆ. ಆದರೆ ಇಲ್ಲಿ ಕೆಲವರು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ವಿಶೇಷವೆನೆಂದರೆ ಹೀಗೆ ಬರೆದ ವಿದ್ಯಾರ್ಥಿಗಳನ್ನು ಅಧ್ಯಾಪಕರು ಹೆಚ್ಚಿನ ಅಂಕ ನೀಡಿ ಪಾಸ್ ಮಾಡಿದ್ದಾರೆ. ಇದೀಗ ಈ ಘಟನೆಯೇ ಭಾರಿ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಗಳ ಬದಲು “ಜೈ ಶ್ರೀ ರಾಮ್” ಘೋಷಣೆ ಮತ್ತು ಕ್ರಿಕೆಟಿಗರ ಹೆಸರನ್ನು ಬರೆದು ಪರೀಕ್ಷೆ ಮುಗಿಸಿದ್ದಾರೆ. ಅವರೇನೋ ಪಾಸಾಗಿದ್ದಾರೆ. ಆದರೆ ನಂತರ ಕಾನೂನು ಉರುಳು ಪ್ರಾಧ್ಯಾಪಕರನ್ನು ಸುತ್ತಿಕೊಂಡಿದೆ. ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು, ಮ್ಯೂಸಿಕ್‌ ಮತ್ತು ಧಾರ್ಮಿಕ ಘೋಷಣೆಗಳನ್ನು ಬರೆದು, ಅದಕ್ಕೆ ಅಂಕಗಳನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳಿಂದ ಹಣವನ್ನು ಲಂಚ ಪಡೆದ ಆರೋಪದ ಮೇಲೆ ಜೌನ್ ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.…

Read More

ಬಾಲಿವುಡ್ ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ನಮಗೆಲ್ಲರಿಗೂ ಗೊತ್ತು. ಎಂ. ಎಸ್. ಧೋನಿ ಸಿನಿಮಾದಲ್ಲಿ ಅತ್ಯದ್ಭುತ ನಟನೆಯ ಮೂಲಕ ನಮ್ಮೆಲ್ಲರ ಗಮನ ಸೆಳೆದವರು. ಅವರ ನಿಗೂಢ ಸಾವಿನ ಬಗ್ಗೆ ಇನ್ನೂ ಹಲವಾರು ಅನುಮಾನಗಳು ಕಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಇನ್ನಷ್ಟು ಬಿಗಿಯಾಗಿ ನಡೆಯಬೇಕೆಂಬ ಕಾರಣಕ್ಕೆ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ನ್ಯಾಯಕ್ಕಾಗಿ ಆನ್‌ ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಇನ್‌ ಸ್ಟಾದಲ್ಲಿ ‘ನ್ಯಾನಿ 4 ಎಸ್‌ ಎಸ್‌ ಆರ್ ಜಾನ್ ಆಂದೋಲನ್’ (Nany 4 SSR Jan Andolan) ಎಂದು ಘೋಷಿಸಿದ್ದಾರೆ. ಈ ಅಭಿಯಾನದ ಭಾಗವಾಗಿ, ಪ್ರತಿಯೊಬ್ಬರೂ ತಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಬೇಕೆಂದು ಶ್ವೇತಾ ಒತ್ತಾಯಿಸಿದ್ದಾರೆ. ಜತೆಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನಟನಿಗೆ ನ್ಯಾಯ ನೀಡುವಂತೆ ವಿನಂತಿಸಿದ್ದಾರೆ, ಪೋಸ್ಟ್‌ ನ ಶೀರ್ಷಿಕೆಯಲ್ಲಿ ʻʻಸಿಬಿಐ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಮತ್ತು ಸತ್ಯವನ್ನು…

Read More

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಏರುತ್ತಿದ್ದಾಗ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೆಲಿಕಾಪ್ಟರ್ ಏರಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಮುಂದಾದಾಗ ನಿಯಂತ್ರಣ ಕಳೆದುಕೊಂಡು ಮಮತಾ ಬಿದ್ದುಬಿಟ್ಟರು. ಮುಖ್ಯಮಂತ್ರಿಗೆ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣ ಅವರ ಭದ್ರತಾ ಸಿಬ್ಬಂದಿ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ನಂತರ ಮಮತಾ ತಮ್ಮ ಮುಂದಿನ ಪ್ರಯಾಣವನ್ನು ಅಸನ್ಸೋಲ್ ಗೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಆರು ವಾರಗಳಲ್ಲಿ ಮಮತಾ ಬ್ಯಾನರ್ಜಿ ಬಿದ್ದು ಗಾಯಗೊಂಡಿರುವುದು ಇದು ಎರಡನೇ ಬಾರಿ. ಮಾರ್ಚ್ 14ರಂದು, 69 ವರ್ಷದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಕೋಲ್ಕತ್ತಾದ ತಮ್ಮ ಕಾಲಿಘಾಟ್ ನಿವಾಸದೊಳಗೆ ಬಿದ್ದು ಹಣೆ ಮತ್ತು ಮೂಗಿನ ಮೇಲೆ ಗಂಭೀರವಾದ ಗಾಯ ಮಾಡಿಕೊಂಡಿದ್ದರು. ಮಮತಾ ಅವರನ್ನು ಹಲವು ಗಂಟೆಗಳ ಕಾಲ ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ಬಾವನ ಮದುವೆಯಲ್ಲಿ ಪತ್ನಿ ಡ್ಯಾನ್ಸ್ ಮಾಡಿದ್ದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ತನ್ನ ತಲೆಯನ್ನು ರೈಲಿಗೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬಿಹಾರದ ಬದಾರಿಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌ ರಸೂಲ್ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್ ಹಾಲ್ಟರ್ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲ್‌ ಸಿಂಗ್‌ ಬೇನತ್ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ತೆರಳಿದ್ದ. ಈ ವೇಳೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡಿದ್ದ ಗೋಪಾಲ್‌ ಆಕೆಯನ್ನು ತಡೆದಿದ್ದಾನೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದ. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ಆಗಿತ್ತು. ಅಷ್ಟೇ ಅಲ್ಲದೇ ಪತಿ ಪತ್ನಿಯರ ಜಗಳಕ್ಕೆ ಗೋಪಾಲ್‌ ಬಾವ ಕೂಡ ಎಂಟ್ರಿ ಕೊಟ್ಟಿದ್ದ. ಆಗ ಬಾವ–ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು…

Read More

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಡಿಯೋಗಳ ಕುರಿತ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರ ದೂರಿಗೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಎಸ್‌ ಐಟಿ ರಚನೆ ಮಾಡಿ, ತನಿಖೆ ಮಾಡುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್ 26ರಂದು ಮತದಾನ ಚಲಾಯಿಸಿದ ಪ್ರಜ್ವಲ್, ಏಪ್ರಿಲ್ 27ರ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಪೆನ್‌ಡ್ರೈವ್ ವೈರಲ್ ಆಗಿರುವ ಹಿನ್ನಲೆ ಮುಜುಗರದಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗಿದ್ದಾರಾ? ಅಥವಾ ಪೂರ್ವ ನಿಯೋಜಿತ ಕಾರ್ಯಕ್ರಮದ ನಿಮಿತ್ತ ವಿದೇಶಕ್ಕೆ ಹೋದರಾ? ಎನ್ನುವ ಕುರಿತು ಚರ್ಚೆಗಳು ಆರಂಭವಾಗಿವೆ. ಪ್ರಜ್ವಲ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ನೇತೃತ್ವದಲ್ಲಿ ಎಸ್‌ಐಟಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಪ್ರಸ್ತುತ…

Read More

ಭಾರೀ ಸುಂಟರಗಾಳಿಯಿಂದಾಗಿ ಐವರು ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಚೀನಾದ ಗುವಾಂಗ್‌’ಝನಲ್ಲಿ ನಡೆದಿದೆ. ಚೀನಾದ ಸರ್ಕಾರಿ ಮಾಧ್ಯಮ ಪ್ರಕಾರ, 19 ಮಿಲಿಯನ್ ಜನರಿರುವ ಗುವಾಂಗ್‌ ಝ ನಗರದಲ್ಲಿ, ಮೂರರ ತೀವ್ರತೆಯಲ್ಲಿ ಸುಂಟರಗಾಳಿ ಅಪ್ಪಳಿಸಿದೆ. 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ. ಆದರೆ ಯಾವುದೇ ವಸತಿ ಮನೆಗಳು ಕುಸಿದಿಲ್ಲ ಎಂದು ತಿಳಿಸಿದೆ. ಸುಂಟರಗಾಳಿಯ ನಂತರ ದಕ್ಷಿಣ ಚೀನಾದಲ್ಲಿ ಭಾರೀ ಮಳೆ ಸುರಿದಿದ್ದು, ಮಾರಣಾಂತಿಕ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಲಕ್ಷಾಂತರ ಜನರನ್ನು ರಕ್ಷಣೆ ಮಾಡಲಾಗಿದೆ. 127 ಮಿಲಿಯನ್ ಜನರಿಗೆ ಆರ್ಥಿಕ ಶಕ್ತಿ ನೆಲೆಯಾಗಿರುವ ಗುವಾಂಗ್‌ ಡಾಂಗ್ ಪ್ರಾಂತ್ಯವು ವ್ಯಾಪಕ ಪ್ರವಾಹವನ್ನು ಕಂಡಿದೆ. ಈ ಪ್ರದೇಶದಲ್ಲಿ 110,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ವಾರದ ಆರಂಭದಲ್ಲಿ ಗುವಾಂಗ್‌ ಡಾಂಗ್‌ ನಲ್ಲಿ ಪ್ರವಾಹದಿಂದಾಗಿ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಇನ್ನೂ, ಚೀನಾದ ಹವಾಮಾನ ಸಂಸ್ಥೆಯು ತಿಂಗಳ ಅಂತ್ಯದವರೆಗೆ ಭಾರೀ ಮಳೆ ಮತ್ತು ಬಲವಾದ ಬಿರುಗಾಳಿ…

Read More

ಮಣಿಪುರದಲ್ಲಿ ಮತ್ತೆ ಮರು ಮತದಾನಕ್ಕೆ ಸಿದ್ಧತೆ ಆರಂಭಗೊಂಡಿದೆ. ಹೊರ ಮಣಿಪುರ ಲೋಕಸಭಾ ಕ್ಷೇತ್ರದಲ್ಲಿ ಸಂಘರ್ಷ ಹಾಗೂ ಮತಗಟ್ಟೆ ವಶಪಡಿಸಿಕೊಂಡ  ಆರು ಬೂತ್‌ ಗಳಲ್ಲಿ ಮರು ಮತದಾನ ನಡೆಯಲಿದೆ. ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಇದೇ ತಿಂಗಳ 26ರಂದು ನಡೆದ ಮತದಾನದ ವೇಳೆ ಸಂಘರ್ಷ ಹಾಗೂ ಮತಗಟ್ಟೆ ವಶವಾಗಿತ್ತು. ಮೊದಲ ಹಂತದಲ್ಲಿ ಚುನಾವಣೆ ನಡೆದ ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ಎಲ್ಲಾ 11 ಬೂತ್‌ಗಳಲ್ಲಿ ಸಂಘರ್ಷದಿಂದಾಗಿ ಮರು ಮತದಾನ ಮಾಡಬೇಕಾಯಿತು. ಮತದಾನದ ಸಮಯದಲ್ಲಿ, ಮಣಿಪುರವು ಗುಂಡಿನ ದಾಳಿ ಮತ್ತು ವ್ಯಾಪಕ ಹಿಂಸಾಚಾರದಿಂದ ಮುಳುಗಿತು. ದಾಳಿಕೋರರು ಮತಗಟ್ಟೆ ಸಾಮಗ್ರಿಗಳನ್ನೂ ಧ್ವಂಸಗೊಳಿಸಿದ್ದಾರೆ. ಇವಿಎಂಗಳಿಗೂ ಹಾನಿಯಾಗಿದೆ. ಇಂದು ಮರು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಶೇ.72ರಷ್ಟು ಮತದಾನವಾಗಿದೆ. ಬೂತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ 47 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕಾಂಗ್ರೆಸ್…

Read More

ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಉಜ್ವಲ್ ನಿಕಮ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಉಜ್ವಲ್ ಅವರು ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ಅವರನ್ನು ಎದುರಿಸಲಿದ್ದಾರೆ. ಉಜ್ವಲ್ 1993ರ ಮುಂಬೈ ಸ್ಫೋಟ, ಗುಲ್ಶನ್ ಕುಮಾರ್ ಹತ್ಯೆ, ಪ್ರಮೋದ್ ಮಹಾಜನ್ ಹತ್ಯೆ ಮತ್ತು 2013ರ ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತಹ ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದರು. 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಉತ್ತರ ಮಧ್ಯದಲ್ಲಿ ಹಾಲಿ ಸಂಸದೆಯಾಗಿದ್ದ ಪೂನಂ ಮಹಾಜನ್ ಅವರಿಗೆ ಸ್ಥಾನ ನಿರಾಕರಿಸಿದ ನಂತರ ಉಜ್ವಲ್ ನಿಕಮ್ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಯಿತು. ಪೂನಂ ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ. ಈ ಬಾರಿ ಪೂನಂ ಗೆಲುವಿನ ಸಾಧ್ಯತೆ ಇಲ್ಲ ಎಂಬ ಮೌಲ್ಯಮಾಪನವೇ ಸೀಟು ಬದಲಾವಣೆಗೆ ಕಾರಣವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ತುಮಕೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಹಿನ್ನೆಲೆಯಲ್ಲಿ ತುಮಕೂರಿನ ಸ್ಟ್ರಾಂಗ್ ರೂಂನಲ್ಲಿ 18 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಸ್ಥಾಪನೆ ಮಾಡಲಾಗಿದೆ. ನಿನ್ನೆ ರಾತ್ರಿ 1,846 ಮತಗಟ್ಟೆಗಳಿಂದ ಡಿಮಸ್ಟರಿಂಗ್ ಸೆಂಟರ್ ಗೆ ಮತಪೆಟ್ಟಿಗೆಗಳನ್ನು ತರಲಾಗಿತ್ತು. ಸ್ಟ್ರಾಂಗ್ ರೂಮ್ ನಲ್ಲಿಯೇ ಮೊಕ್ಕಾಂ ಹೂಡಿರುವ ಭದ್ರತಾ ಪಡೆ ಮತ್ತು ಪೊಲೀಸರು ಹಗಲಿರುಳು ಕಾವಲು ಕಾಯುತ್ತಿದ್ದಾರೆ. ಪ್ರತಿ ಸ್ಟ್ರಾಂಗ್ ರೂಂ ನಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು ಸ್ಟ್ರಾಂಗ್ ರೂಂ ಸುತ್ತ ಮುತ್ತ ಖಾಕಿ ಹದ್ದಿನಕಣ್ಣು ಇರಿಸಲಾಗಿದೆ. ಸ್ಟ್ರಾಂಗ್ ರೂಂಗೆ ಎಸ್ ಪಿ – 1, ಡಿವೈಎಸ್ಪಿ – 1 ಸಿಪಿಐ – 22, ಪಿಎಸ್ ಐ- 440ಪಿಸಿ ಗಳಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ಕೆಎಸ್ ಆರ್ ಪಿ ತುಕಡಿ, ಸೇರಿದಂತೆ ಒಟ್ಟು 100 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿಭದ್ರತೆ ಮಾಡಲಾಗಿದೆ.…

Read More