Author: admin

ಇರಾಕ್ ನ ಖ್ಯಾತ ಸಾಮಾಜಿಕ ಜಾಲತಾಣ ತಾರೆ ಘುಫ್ರಾನ್ ಸವಾದಿಯನ್ನು ಬಾಗ್ಧಾದ್ ನಿವಾಸದ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘುಫ್ರಾನ್ ಸವಾದಿ ಉಮ್ ಫಾಹದ್ ಹೆಸರಿನಲ್ಲಿ ಖ್ಯಾತರಾಗಿದ್ದರು. ಬಾಗ್ದಾದ್‌ ನ ಪೂರ್ವದ ಝಯೌನಾ ಪ್ರದೇಶದಲ್ಲಿ ನಡೆದ ಈ ಘಟನೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್‌ ನಲ್ಲಿ ಸ್ಥಳಕ್ಕಾಗಮಿಸುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಅವನು ತನ್ನ ಬೈಕನ್ನು ನಿಲ್ಲಿಸಿ ಕಾರಿನ ಕಡೆಗೆ ಓಡಿ, ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗುತ್ತಾನೆ. ಪ್ರಕರಣದ ತನಿಖೆಗಳು ನಡೆಯುತ್ತಿದ್ದು, ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಸವಾದಿ ಟಿಕ್ ಟಾಕ್ ಮೂಲಕ ಖ್ಯಾತಿ ಗಳಿಸಿದ್ದರು. ಅವರ ಕೆಲವು ವೀಡಿಯೊಗಳನ್ನು “ಅಶ್ಲೀಲ ಮತ್ತು ಅಸಭ್ಯ, ಸಾರ್ವಜನಿಕ ಸಭ್ಯತೆ ಮತ್ತು ನೈತಿಕತೆಯನ್ನು ಉಲ್ಲಂಘಿಸುವ” ಎಂದು ಪರಿಗಣಿಸಿದ ನಂತರ ಅವರು ಆರು ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಆದರೂ, ಅವರು ಪಾಪ್ ಸಂಗೀತಕ್ಕೆ ನೃತ್ಯ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದರು. ಹಿಂದಿನ ಸೆಪ್ಟೆಂಬರ್…

Read More

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗಾಗಿ ಇಂದಿನಿಂದ ಪರೀಕ್ಷೆ ಆರಂಭವಾಗಲಿದೆ. ಕಳೆದ ತಿಂಗಳಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ. 29 ರಿಂದ ಮೇ 16ರವರೆಗೆ ಪಿಯುಸಿ ಪರೀಕ್ಷೆ –2 ನಡೆಯಲಿದ್ದು, ದಾಖಲೆಯ ಪ್ರಮಾಣದಲ್ಲಿ ಪಿಯು ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಿದ್ರೂ ಕೂಡಾ ಹಳೆಯ ಫಲಿತಾಂಶ ಚಾಲೆಂಜ್ ಮಾಡಲು 32 ಸಾವಿರ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಸೋಮವಾರದಿಂದ ಶುರುವಾಗುವ ದ್ವಿತೀಯ ಪಿಯುಸಿ –2 ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು 149300 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 32 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ರೂ ಫಲಿತಾಂಶ ಹೆಚ್ಚಿಸಲು ಮರು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರತಿಯೊಂದು ವಿಷಯದ ಪರೀಕ್ಷೆಯು ಮಧ್ಯಾಹ್ನ 2:15 ರಿಂದ ಸಂಜೆ 4:30 ಗಂಟೆವರೆಗೆ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಚಾಮರಾಜನಗರ ಕ್ಷೇತ್ರದ ಸಂಸದ ಶ್ರೀನಿವಾಸ್‌ ಪ್ರಸಾದ್ (76) ವಿಧಿವಶರಾಗಿದ್ದಾರೆ. ತಡರಾತ್ರಿ 1:20ಕ್ಕೆ ಅವರು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆ ಹಾಗೂ ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೇ ತೀವ್ರ ಹೃದಯಾಘಾತ ನಿಧನರಾಗಿದ್ದಾರೆ. ಕಳೆದೊಂದು ವಾರದಿಂದ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ರೀನಿವಾಸ್‌ ಪ್ರಸಾದ್‌ ಅವರು ಪಾರ್ಥಿವ ಶರೀರವನ್ನು ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ರವಾನೆ ಮಾಡಲಾಗಿದೆ. ಇಂದು ಮೈಸೂರಿನಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದ ಅವರು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೆಯೇ, ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಬೆಂಗಳೂರು:  ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್‌ ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ವಿಚಾರ ಮೆಜೆಸ್ಟಿಕ್‍ ನಲ್ಲಿ ಬೆಳಕಿಗೆ ಬಂದಿದೆ. ಪಾರ್ಕ್ ಮಾಡಿ ಐದಾರು ತಿಂಗಳಾದರೂ ಬೈಕ್‍ ಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ಅನುಮಾನ ಮೂಡಿ ಅಲ್ಲಿನ ಸಿಬ್ಬಂದಿ ಸುಮಾರು 30 ಬೈಕ್‍ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ. ಹಿಂದೆ ಬೈಕ್ ಕಳ್ಳತನ ಮಾಡಿದ ಬಳಿಕ ಕಳ್ಳರು ಬೈಕಿನ ಜೊತೆಯೇ ಪರಾರಿಯಾಗುತ್ತಿದ್ದರು. ಆದರೆ ಈಗ ಸಿಸಿಟಿವಿಗಳು ಎಲ್ಲೆಡೆ ಇರುವ ಕಾರಣ ಸುಲಭವಾಗಿ ಸಿಕ್ಕಿ ಬೀಳುತ್ತಿದ್ದಾರೆ. ಹೀಗಾಗಿ ಬಂಧನಗೊಳ್ಳುವ ಭಯದಲ್ಲಿ ಪಾರ್ಕಿಂಗ್‌ ನಲ್ಲಿ ಕಳ್ಳರು ಬೈಕ್ ಪಾರ್ಕ್ ಮಾಡಿ ಹೋಗುತ್ತಿದ್ದಾರೆ. ಈ ರೀತಿ ಪಾರ್ಕ್ ಮಾಡಿ ಹೋದವರು ಆರು ತಿಂಗಳು ಕಳೆದರು ಮರಳಿ ಬರದೇ ಇರುವ ಕಾರಣ ಪಾರ್ಕಿಂಗ್ ಸಿಬ್ಬಂದಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಕೆಲವು ಬೈಕ್‍ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾರ್ಕಿಂಗ್ ಸಿಬ್ಬಂದಿ ಒಪ್ಪಿಸಿರುವ…

Read More

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಾನಾಗಲಿ, ಹೆಚ್‌.ಡಿ. ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ ಕುರಿತು ಮಾತನಾಡಿದ ಅವರು, ಈಗಾಗಲೇ ಸಿಎಂ ಎಸ್‌ ಐಟಿ (SIT) ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ. ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಆರಂಭವಾಗಿದೆ. ವಾಸ್ತವಾಂಶ ಹೊರಬರಲಿ. ತನಿಖೆ ಆದಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನೆಲದ ಕಾನೂನಲ್ಲಿ ತಪ್ಪು ಮಾಡಿದವನು, ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ಹೀಗಾಗಿ ತನಿಖೆ ವರದಿ ಬರಲಿ. ಬಂದ ಮೇಲೆ ಮಾತನಾಡುತ್ತೇನೆ. ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ. ಎಸ್‌ ಐಟಿ ತನಿಖೆಗೆ ಆದೇಶಿಸಿದ್ದಾರೆ. ಎಸ್‌ ಐಟಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ವಿದೇಶಕ್ಕೆ ಹೋಗಿದ್ದರೆ ಕರೆದುಕೊಂಡು ಬರುವ ಜವಾಬ್ದಾರಿ ಅವರದ್ದು, ನಾನು ಉತ್ತರಿಸಲ್ಲ…

Read More

ಲೋಕ ಸಭಾ ಚುನಾವಣೆ ಕರ್ನಾಟಕದಲ್ಲಿ ಮೊದಲ ಹಂತದ ಯಶಸ್ವಿಯಾಗಿ ನಡೆದಿದೆ. ಈ ಬೆನ್ನಲ್ಲೇ ಒಕ್ಕಲಿಗ ನಾಯಕರ ಚಿತ್ತ ಹಳೆ ಮೈಸೂರಿನ ಕಡೆ ಹೊರಳಿದೆ. ಈ ನಡುವೆ ಸಮುದಾಯದ ನಾಯಕರ ಪರಸ್ಪರ ರಾಜಕೀಯ ಕೆಸರೆರಚಾಟ, ಟೀಕೆಗಳ ಸುರಿಮಳೆ ನಡೆದಿದೆ. ಒಕ್ಕಲಿಗ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಚೆಲುವರಾಯ ಸ್ವಾಮಿ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಮಾಧ್ಯಮಗಳ ಮುಂದೆ ಮಾತನಾಡಿರುವ ಸಚಿವ ಚೆಲುವರಾಯ ಸ್ವಾಮಿ, ‘ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ್ದು ಯಾರು..? ಜೆಡಿಎಸ್ ಸರ್ಕಾರ ಅಲ್ವಾ..? ಇದನ್ನು ಮಾಡಿಸಿದ್ದು ಯಾಕೆ..? ಇದಕ್ಕಿಂತ ದೊಡ್ಡ ಅಪಚಾರ ಒಕ್ಕಲಿಗರ ಪೀಠಕ್ಕೆ ಬೇಕಾ..? ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಪಕ್ಷದಿಂದ ಸ್ಪರ್ಧೆಗಿಳಿದಿರುವ ಅವರು ಬಹಳಷ್ಟು ತೀಕ್ಷ್ಣ ಪದಗಳಿಂದ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.…

Read More

ಭಾರತದಲ್ಲಿ ‘777 ಚಾರ್ಲಿ’ (777 Charlie) ಸಿನಿಮಾ ಬಹಳ ಮೋಡಿ ಮಾಡಿತ್ತು. ಪ್ರಾಣಿಪ್ರಿಯರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ತುಳುನಾಡಿನ ನಟ ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದರು. ‘ಪರಂವಃ ಸ್ಟುಡಿಯೋಸ್’ ಮೂಲಕ ನಿರ್ಮಾಣವಾದ ‘777 ಚಾರ್ಲಿ’ ಸಿನಿಮಾ ತಂಡದಿಂದ ಒಂದು ವಿಶೇಷ ಸುದ್ದಿ ಕೇಳಿಬಂದಿದೆ. ಈಗ ಜಪಾನ್ ನಲ್ಲಿ ಈ ಚಿತ್ರ ಬಿಡುಗಡೆ ಆಗಲು ಸಿದ್ಧವಾಗಿದೆ. ಕನ್ನಡದ ಈ ಸಿನಿಮಾ ಜಪಾನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಜೂನ್ 28ರಂದು ಜಪಾನ್ (Japan) ದೇಶದ ಹಲವು ನಗರಗಳಲ್ಲಿ ‘777 ಚಾರ್ಲಿ’ ರಿಲೀಸ್ ಆಗಲಿದೆ ಎಂದು ವರದಿ ತಿಳಿಸಿದೆ. ಬಾಲಿವುಡ್ ಹಾಗೂ ಟಾಲಿವುಡ್ ನ ಸಿನಿಮಾಗಳು ಜಪಾನ್ ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದ್ದವು. ಈಗ ಕನ್ನಡದ ಒಂದು ಸಿನಿಮಾ ಜಪಾನ್ ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ. ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ಕಿರಣ್ ರಾಜ್ ನಿರ್ದೇಶನದ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ…

Read More

ವಿಜಯಪುರ:  ಬಿ.ಎಸ್.ಯಡಿಯೂರಪ್ಪನವರ ಪುತ್ರ ಪ್ರೇಮದ ವಿಚಾರವಾಗಿ ಸ್ವಪಕ್ಷದವರೇ ನೀಡಿರುವ ಹೇಳಿಕೆಗೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆ ಪ್ರಚಾರ ಸಭೆಯಲ್ಲಿ ಬಿಎಸ್ ವೈ ಟಕ್ಕರ್ ಕೊಟ್ಟರು. ನನಗೆ ಮಗ ಬಿ.ವೈ. ರಾಘವೇಂದ್ರ ಆದ್ಯತೆ ಅಲ್ಲ. ನನಗೆ ನೀವು ಮುಖ್ಯ, ನೀವು ಅಗತ್ಯ ಎಂದು ಯಡಿಯೂರಪ್ಪ ಹೇಳಿದ್ದು, ನನ್ನ ಮಗ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದಾನೆ. ಅಲ್ಲಿ ನಾನು ಸಭೆಯಲ್ಲಿ ಇರಬೇಕಾಗಿತ್ತು. ಆದ್ರೆ, ಅದನ್ನೆಲ್ಲ ಬಿಟ್ಟು ನಾನು ಮುದ್ದೇಬಿಹಾಳಕ್ಕೆ ಬಂದಿದ್ದೇನೆ. ನನಗೆ ನನ್ನ ಮಗ ಆದ್ಯತೆ ಅಲ್ಲ ಎಂದರು. ನರೇಂದ್ರ ಮೋದಿ ಅವರು ಪ್ರಧಾನಿ ಆಗಿ 10 ವರ್ಷವಾಯಿತು. ಒಂದೇ ದಿನ ಕೂಡಾ ಅವರು ವಿಶ್ರಾಂತಿ ತಗೆದುಕೊಂಡಿಲ್ಲ. ಈ ಬಾರಿ ರಾಜ್ಯದಲ್ಲಿ 28 ಕ್ಕೆ 28 ಮತಕ್ಷೇತ್ರ ಗೆಲ್ಲುವ ವಾತಾವರಣ ಇದೆ. ನಿನ್ನೆ ನಡೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರಗಳನ್ನು ಸಹ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಬೀದರ್: ಔರಾದ ಮತ ಕ್ಷೇತ್ರದ  ಬೆಳಕುಣಿ ಚೌಧರಿ  ಚಿಕ್ಲಿ, ಜಂಬಗಿ, ಮಾಹಾರಾಜವಾಡಿ, ವಲ್ಲೆಪೂರ, ಸೋರಳ್ಳಿ, ಕಂದಗೂಳ, ವಡಗಾಂವ, ಮಸ್ಕಲ, ನಾಗೂರ (ಬಿ)  ಗ್ರಾಮದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಾಗರ್ ಖಂಡ್ರೆ ಪರ ಮನೆಮನೆಗಳಿಗೆ ತೆರಳಿ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಡಾ.ಭೀಮಸೇನರಾವ ಸಿಂಧೆ, ರಾಜಕುಮಾರ ಹಲ್ಬುರ್ಗೆ, ಮಲ್ಲಿಕಾರ್ಜುನ ಪಾಟೀಲ, ಶಿವರಾಜ ದೇಶಮುಖ, ಪರಮೇಶ್ವರ ಮೆತ್ರ,  ಗ್ರಾಮ ಪಂಚಾಯತ್ ಸದಸ್ಯರು ದೇವಿದಾಸ ಮಾಳಗೆ ಗ್ರಾ.ಪಂ. ಸದಸ್ಯ ಕರಬಸಪ್ಪಾ ಸೊರಾಳೆ, ಎಂ.ಡಿ. ನಯೂಮ್, ಅಲಾವವುದ್ದೀನ್, ಮಾಜಿ ಗ್ರಾ.ಪಂ. ಅಧ್ಯಕ್ಷರು  ದೇವಿದಾಸ ಧೋಳ ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಯಾವ ದೊಣ್ಣೆ ನಾಯಕ ನೀನು. ನಿನ್ನ ಮನೆಯಿಂದ ದುಡ್ಡು ತಂದಿಯೇನಪ್ಪಾ. ಯಾವ ದೇಶದ ಮಹಾರಾಜ ನೀನು. ರಾಮ ಮಂದಿರ ಕಟ್ಟು, ಆದ್ರೆ ನಾನ್ ಕೇಳ್ತಿರೋದು ರಾಮ ರಾಜ್ಯ ಎಲ್ಲಿ ಅಂತ. ನಮ್ಮ ಮಕ್ಕಳಿಗೆ ಉದ್ಯೋಗ, ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಯಾಕಿಲ್ಲ ಒಳ್ಳೆಯ ಶಿಕ್ಷಣ. ನೀನು ನಿಜವಾಗಲೂ ಕೆಲಸ ಮಾಡಿದ್ರೆ ಇಷ್ಟು ದುಡ್ಡು ಖರ್ಚು ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಈಗ ಬರ ಪರಿಹಾರ ಘೋಷಿಸಿದೆ. ಡಿಸೆಂಬರ್‌ನಲ್ಲಿ ಬರ ಪರಿಹಾರ ಕೊಡಿ ಅಂದ್ರು ಯಾಕೆ ಕೊಡಲಿಲ್ಲ. ನಮ್ಮ 28 ಸಂಸದರು ಯಾಕೆ ಮಾತಾಡಲಿಲ್ಲ. ಹಲ್ಲು ಕಿಸಿದುಕೊಂಡು ನಿಂತಿದ್ರು ಎಂದು ಕಿಡಿಕಾರಿದ್ದಾರೆ. ಮಹಾಪ್ರಭುಗಳು 2015ರಲ್ಲಿ ನೂರು ಸ್ಮಾರ್ಟ್ ಸಿಟಿ ಕೊಡ್ತೀನಿ ಅಂದ್ರಲ್ಲ. ಈಗ ಹತ್ತಾದ್ರು ಸ್ಮಾರ್ಟ್ ಸಿಟಿಯನ್ನ ತೋರಿಸಿ. ಯಾಕೆ ಸುಳ್ಳು ಹೇಳಿಕೊಂಡು ಓಡಾಡುತ್ತೀರಿ. ಈಗ ಮತ್ತೊಂದು ಗ್ಯಾರಂಟಿ ಹೇಳ್ತಿದ್ದೀರಿ. ಮೊದಲು…

Read More