ಬೆಂಗಳೂರು: ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಬೈಕ್ ಕಳ್ಳತನ ಮಾಡಿ ಬಸ್ ನಿಲ್ದಾಣದ ಪಕ್ಕದ ಪೇ&ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿ ಕಳ್ಳರು ಪರಾರಿಯಾಗುತ್ತಿರುವ ವಿಚಾರ ಮೆಜೆಸ್ಟಿಕ್ ನಲ್ಲಿ ಬೆಳಕಿಗೆ ಬಂದಿದೆ.
ಪಾರ್ಕ್ ಮಾಡಿ ಐದಾರು ತಿಂಗಳಾದರೂ ಬೈಕ್ ಗಳನ್ನು ತೆಗೆದುಕೊಂಡು ಹೋಗದೇ ಇದ್ದಾಗ ಅನುಮಾನ ಮೂಡಿ ಅಲ್ಲಿನ ಸಿಬ್ಬಂದಿ ಸುಮಾರು 30 ಬೈಕ್ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ. ಹಿಂದೆ ಬೈಕ್ ಕಳ್ಳತನ ಮಾಡಿದ ಬಳಿಕ ಕಳ್ಳರು ಬೈಕಿನ ಜೊತೆಯೇ ಪರಾರಿಯಾಗುತ್ತಿದ್ದರು.
ಆದರೆ ಈಗ ಸಿಸಿಟಿವಿಗಳು ಎಲ್ಲೆಡೆ ಇರುವ ಕಾರಣ ಸುಲಭವಾಗಿ ಸಿಕ್ಕಿ ಬೀಳುತ್ತಿದ್ದಾರೆ. ಹೀಗಾಗಿ ಬಂಧನಗೊಳ್ಳುವ ಭಯದಲ್ಲಿ ಪಾರ್ಕಿಂಗ್ ನಲ್ಲಿ ಕಳ್ಳರು ಬೈಕ್ ಪಾರ್ಕ್ ಮಾಡಿ ಹೋಗುತ್ತಿದ್ದಾರೆ.
ಈ ರೀತಿ ಪಾರ್ಕ್ ಮಾಡಿ ಹೋದವರು ಆರು ತಿಂಗಳು ಕಳೆದರು ಮರಳಿ ಬರದೇ ಇರುವ ಕಾರಣ ಪಾರ್ಕಿಂಗ್ ಸಿಬ್ಬಂದಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೇ ಕೆಲವು ಬೈಕ್ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾರ್ಕಿಂಗ್ ಸಿಬ್ಬಂದಿ ಒಪ್ಪಿಸಿರುವ ಬೈಕ್‍ಗಳಲ್ಲಿ ಐದಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿದ್ದು ಎಂದು ತಿಳಿದು ಬಂದಿದೆ. ಅದರಲ್ಲಿ ಕೆಲವು ಬೈಕ್ ಗಳನ್ನು ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296