nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ

    April 30, 2026

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು

    April 29, 2026
    Facebook Twitter Instagram
    ಟ್ರೆಂಡಿಂಗ್
    • ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ
    • ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು
    • ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು
    • ತುಮಕೂರು: ಸರ್ಕಾರಿ ಉಪಕರಣಾಗಾರದಲ್ಲಿ ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಸಿ
    • ಧಾರವಾಡ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಮೂವರು ಸಿಬ್ಬಂದಿ ಅಮಾನತು
    • ಕುಡಿಯುವ ನೀರು: ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಲು ಆರ್. ಅಶೋಕ ಆಗ್ರಹ
    • ಅಭಿಮಾನಿಗಳಿಗೆ ಶಾಕ್ ನೀಡಿದ ರಾಕಿಂಗ್ ಸ್ಟಾರ್: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ!
    • ಕಡೂರು: ಕೌಟುಂಬಿಕ ಕಲಹಕ್ಕೆ ಪಿಎಸ್‌ ಐ ಪತ್ನಿ ಬಲಿ: ನೇಣಿಗೆ ಶರಣಾದ ಯುವತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ
    ಚಿಕ್ಕನಾಯಕನಹಳ್ಳಿ April 30, 2026

    ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ

    By adminApril 30, 2026No Comments1 Min Read
    c b suresh

    ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಘಟ್ಟದಲ್ಲಿ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಬದುಕು ಬಿರುಗಾಳಿಯ ಆರ್ಭಟಕ್ಕೆ ತತ್ತರಿಸಿದ್ದು, ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ತಾಲ್ಲೂಕು ಆಡಳಿತವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.

    ದಬ್ಬೇಘಟ್ಟದ ಬಯಲು ಪ್ರದೇಶದಲ್ಲಿ ಟಾರ್ಪಲ್ ಟೆಂಟ್‌ಗಳನ್ನು ಹಾಕಿಕೊಂಡು ಕಳೆದ ಹಲವು ತಿಂಗಳುಗಳಿಂದ ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದವು. ಮಂಗಳವಾರ ಸಂಜೆ ಬೀಸಿದ ಅನಿರೀಕ್ಷಿತ ಬಿರುಗಾಳಿಗೆ ಈ ಹಂಗಾಮಿ ಆಶ್ರಯ ತಾಣಗಳು ಸಂಪೂರ್ಣವಾಗಿ ಹಾರಿಹೋಗಿವೆ. ಇದರಿಂದಾಗಿ ವೃದ್ಧರು ಹಾಗೂ ಮಕ್ಕಳು ಆಶ್ರಯವಿಲ್ಲದೆ ಬೀದಿಗೆ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಮಮತಾ ಎಂ. ಅವರು ಸಂತ್ರಸ್ತ ಕುಟುಂಬಗಳನ್ನು ಪಟ್ಟಣದ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲು ತಕ್ಷಣದ ಕ್ರಮ ಕೈಗೊಂಡರು.


    Provided by
    Provided by

    ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು: ”ಈ ಹಿಂದೆ ಗುಂಡುತೋಪಿನಲ್ಲಿ ವಾಸವಿದ್ದ ಈ ಕುಟುಂಬಗಳಿಗೆ ದಬ್ಬೇಘಟ್ಟದ ಬಳಿ ಜಾಗ ಗುರುತಿಸಲಾಗಿತ್ತು, ನಿವೇಶನ ಹಂಚಿಕೆ ಮತ್ತು ಮನೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು,” ಎಂದು ಭರವಸೆ ನೀಡಿದರು.

    ತಹಶೀಲ್ದಾರ್ ಮಮತಾ ಮಾತನಾಡಿ, “ಅಲೆಮಾರಿ ಕುಟುಂಬಗಳಿಗಾಗಿ ಈಗಾಗಲೇ ಜಾಗ ಕಾಯ್ದಿರಿಸಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರಿಗೆ ಶೀಘ್ರದಲ್ಲೇ ನಿವೇಶನ ಹಂಚಲಾಗುವುದು. ಸದ್ಯಕ್ಕೆ ಅವರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ” ಎಂದರು.

    ಮೃತ ಪುಟ್ಟಯ್ಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ:

    ಇದೇ ಸಂದರ್ಭದಲ್ಲಿ, ಮಂಗಳವಾರ ಸಂಜೆ ಸುರಿದ ಮಳೆ–ಗಾಳಿಯಿಂದಾಗಿ ತೋಟದಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಪುಟ್ಟಯ್ಯ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ವಿತರಿಸಲಾಯಿತು. ಪ್ರಕೃತಿ ವಿಕೋಪದಡಿ ಮಂಜೂರಾದ ₹5 ಲಕ್ಷದ ಪರಿಹಾರದ ಪತ್ರವನ್ನು ಶಾಸಕ ಸಿ.ಬಿ. ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಮಮತಾ ಎಂ ಅವರು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲು ಮಹಿಳೆಯರ ಆಗ್ರಹ: ಕೆಎಸ್‌ ಆರ್‌ ಟಿಸಿ ಅಧಿಕಾರಿಗೆ ಮನವಿ

    April 18, 2026

    ಹುಳಿಯಾರಿನ ವಾರದ ತರಕಾರಿ ಸಂತೆ ಸ್ಥಳಾಂತರ: ಏಪ್ರಿಲ್ 23ರಿಂದ ಹೊಸ ವ್ಯವಸ್ಥೆ ಜಾರಿ

    April 18, 2026

    ಸಂವಿಧಾನ ಪೀಠಿಕೆಯಲ್ಲಿ ಶಿಕ್ಷಣ ಕ್ಷೇತ್ರವನ್ನು ಸೇರಿಸಲು  ಶಾಸಕ ಸಿ.ಬಿ.ಸುರೇಶ್ ಬಾಬು ಒತ್ತಾಯ

    April 16, 2026

    Leave A Reply Cancel Reply

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಬಿರುಗಾಳಿಗೆ ಅಲೆಮಾರಿಗಳ ಟೆಂಟ್ ಛಿದ್ರ: ಸುರಕ್ಷಿತ ಸ್ಥಳಕ್ಕೆ ಕುಟುಂಬಗಳ ಸ್ಥಳಾಂತರ

    April 30, 2026

    ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಘಟ್ಟದಲ್ಲಿ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಬದುಕು ಬಿರುಗಾಳಿಯ ಆರ್ಭಟಕ್ಕೆ ತತ್ತರಿಸಿದ್ದು, ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ತಾಲ್ಲೂಕು ಆಡಳಿತವು ರಕ್ಷಿಸಿ…

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು

    April 29, 2026

    ತುಮಕೂರು: ಸರ್ಕಾರಿ ಉಪಕರಣಾಗಾರದಲ್ಲಿ ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಸಿ

    April 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.