Subscribe to Updates
Get the latest creative news from FooBar about art, design and business.
- ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
- ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
- ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
- ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
- ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
- ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
- ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್ ಕಾರಣ ಆಗ್ತಾ ಇದೆಯೇ?
- ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
Author: admin
ದೆಹಲಿ: ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದೆಹಲಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಈ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ದೆಹಲಿ-ಎನ್ ಸಿಆರ್ ನ ಹಲವೆಡೆ ಸಿಬಿಐ ದಾಳಿ ನಡೆಸಿತ್ತು. ದಾಳಿ ವೇಳೆ ಸಿಬಿಐ ತಂಡ ಕೇಶವಪುರಂನ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಿಸಿದೆ. ಸದ್ಯ ಸಿಬಿಐ ತಂಡ ಈ ಪ್ರಕರಣದಲ್ಲಿ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಹಾಗೂ ಖರೀದಿಸಿದ ವ್ಯಕ್ತಿಯ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಕೆಲವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಸಿಬಿಐ (CBI) ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು 10 ಮಕ್ಕಳನ್ನು ಮಾರಾಟ ಮಾಡಲಾಗಿದೆ. ಈ ಗ್ಯಾಂಗ್ ನ ನಂಟುಗಳು ಹಲವು ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಮಾಹಿತಿ ಪ್ರಕಾರ…
ಚುಣಾವಣಾ ಪ್ರಚಾರ ಮೆರವಣಿಗೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಸಿಎಂ ಮಾತನಾಡಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಕಷ್ಟು ಬಾರಿ ರಾಜಕೀಯ ನಾಯಕರು ಮಾತನಾಡುವಾಗ ಇಲ್ಲಾ, ಭಾಷಣ ಮಾಡುವಾಗ ಮಾತಿನ ಭರದಲ್ಲಿ ವಿರುದ್ಧವಾದ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗುವುದು ಸಾಮಾನ್ಯ. ಆದರೆ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದರು. ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ತಮ್ಮ ಮಾತಿನ ಭರದಲ್ಲಿ ‘ಕಾಂಗ್ರೆಸ್ ಕೆಲಸ ಮಾಡಲ್ಲ, ನುಡಿದಂತೆ ನಡೆಯಲ್ಲ’ ಎಂದು ಹೇಳಿದ್ದಾರೆ. ಜಿಲ್ಲೆಯ ಮುಳಬಾಗಿಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ಪ್ರಚಾರ ವೇಳೆ ಮಾತನಾಡಿದ ಸಿದ್ದರಾಮಯ್ಯ, “ಕಾಂಗ್ರೆಸ್ ನುಡಿದಂತೆ ನಡೆಯಲ್ಲ’ ಎಂದು ಹೇಳಿದ್ದಾರೆ. ಬಳಿಕ ಮತ್ತೆ ನುಡಿದಂತೆ ನಡೆದಿದ್ದೇವೆ” ಎಂದು ಸರಿಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಮಾಸಿಲ್ಲ. ಆತನ ಸಾವು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊಲೆ ಇರಬಹುದು ಅನ್ನುವುದು ಕೂಡ ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸುಶಾಂತ್ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ನಟಿ ಅದಾ ಶರ್ಮಾ ಖರೀದಿಸಿದ್ದಾರೆ. ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ಸಾವನ್ನಪ್ಪಿದ್ದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಯಾರೊಬ್ಬರೂ ಈ ಮನೆಯಲ್ಲಿ ಉಳಿದುಕೊಳ್ಳಲು ಕೂಡ ಮುಂದೆ ಬಂದಿರಲಿಲ್ಲ. ಹೀಗಾಗಿ, ಇದರ ಮಾಲೀಕರು ಈ ಅಪಾರ್ಟ್ಮೆಂಟ್ ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಇದನ್ನು ಖರೀದಿ ಮಾಡಿದ್ದಾರೆ. ಯಾರಿಗೂ ಬೇಡವಾಗಿದ್ದ ಮನೆಯನ್ನು ಆದಾ ಶರ್ಮಾ ಖರೀದಿ ಮಾಡಿದ್ದೇಕೆ ಅನ್ನುವುದರ ಬಗ್ಗೆಯೇ ಇದೀಗ ಭಾರಿ ಚರ್ಚೆ…
ಲೋಕಸಭಾ ಚುನಾವಣಿ ಸಮೀಪಿಸುತ್ತಿದ್ದಂತೆ ಹಲವು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಅಭಿಮಾನಿಯೊಬ್ಬ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ತುಂಡು ಮಾಡಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ. ಸೋನಾರವಾಡದ ಅರುಣ್ ವರ್ಣೇಕರ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದ್ದಾರೆ ಎನ್ನಲಾಗಿದೆ. ಅರುಣ್ ಈಗಾಗಲೇ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಬೆರಳು ತುಂಡುಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ”. “ಮೋದಿ ಬಾಬಾ ಪಿ.ಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್” ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು ಎನ್ನಲಾಗಿದೆ. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು…
ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಭಾರತ ನೆರವಿನ ಹಸ್ತ ನೀಡುವುದನ್ನು ಮುಂದುವರಿಸಿದ್ದು, ಅಗತ್ಯ ವಸ್ತುಗಳನ್ನು ಪೂರೈಸಲು ಒಪ್ಪಿಕೊಂಡಿದೆ ಎನ್ನಲಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ 2024-2025 ರ ಅವಧಿಯಲ್ಲಿ ಸರ್ಕಾರವು ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, ಧಾನ್ಯ, ನದಿ ಮರಳನ್ನು ಒಳಗೊಂಡಂತೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಒಪ್ಪಿಗೆ ನೀಡಿದೆ ಎಂದು ವರದಿ ತಿಳಿಸಿದೆ. ಈ ವಸ್ತುಗಳ ರಫ್ತು 2024-25 ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ ಯಾವುದೇ ನಿರ್ಬಂಧ/ನಿಷೇಧದಿಂದ ವಿನಾಯಿತಿ ಪಡೆಯುತ್ತದೆ. ಇದಕ್ಕಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ ಜೊತೆಗೆ ದೀರ್ಘಕಾಲ ಇಂತಹ ಗೆಳೆತನ ಬಯಸುವುದಾಗಿ ಹೇಳಿದೆ. ಮಾಲ್ಡೀವ್ಸ್ ನಿಂದ ಭಾರತ ಸ್ಕ್ರ್ಯಾಪ್ ಲೋಹಗಳು ಆಮದು ಮಾಡುತ್ತದೆ. ಆದರೆ ಮಾಲ್ಡೀವ್ಸ್ ಗೆ ಭಾರತ ವಿವಿಧ ಎಂಜಿನಿಯರಿಂಗ್ ಮತ್ತು ಕೈಗಾರಿಕಾ ಉತ್ಪನ್ನಗಳು, ಔಷಧಗಳು, ರಾಡಾರ್ ಉಪಕರಣಗಳು,…
ವ್ಯಕ್ತಿಯೊಬ್ಬರು ತಮ್ಮ ನೆಚ್ಚಿನ ಪಕ್ಷದ ಬಗ್ಗೆ ವಿಚಿತ್ರ ಅಭಿಮಾನ ತೋರುವ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ನಿವಾಸಿಯೊಬ್ಬರ ಮದುವೆ ಕಾರ್ಡ್‌ನಲ್ಲಿ ಜನಸೇನಾ ಪಕ್ಷದ ಪ್ರಣಾಳಿಕೆಯನ್ನು ಮುದ್ರಿಸಲಾಗಿದೆ. ವ್ಯಕ್ತಿ ಪಕ್ಷದ ನಾಯಕ ಪವನ್ ಕಲ್ಯಾಣ್ ಬೆಂಬಲಿಗರಾಗಿದ್ದು, ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ಗೆ ಮತ ನೀಡುವಂತೆ ಆಹ್ವಾನಿತರನ್ನು ಒತ್ತಾಯಿಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿ ಜನರಿಗೆ ಮದುವೆ ಕಾರ್ಡ್‌ಗಳನ್ನು ವಿತರಿಸುತ್ತಿರುವುದನ್ನು ಕಾಣಬಹುದಾಗಿದೆ. ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ ಎಂಬುದು ಗಮನಾರ್ಹ. ಇತ್ತೀಚಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿತ್ತು. ಪಕ್ಷವು ಮುಂಬರುವ ಲೋಕಸಭಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ-ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ (ಬಿಎಂಸಿಆರ್ಐ) ಮಹಿಳಾ ಹಾಸ್ಟೆಲ್ ನಲ್ಲಿ ತಂಗಿದ್ದ 47 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥರಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ ನಲ್ಲಿ 29 ವಿದ್ಯಾರ್ಥಿನಿಯರು, ಐವರು ಎಚ್ ಬ್ಲಾಕ್ ನಲ್ಲಿ ಹಾಗೂ ನಾಲ್ವರು ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ವಿದ್ಯಾರ್ಥಿನಿಯರು ವಾಂತಿ, ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಯರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥರಾಗಲು ಕಾರಣ ಇನ್ನೂ ನಿಗೂಢವಾಗಿದ್ದು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಅಮೆರಿಕದ ಓಹಿಯೊ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಮೆರಿಕದ ಪೊಲೀಸರು ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ವಿದ್ಯಾರ್ಥಿ ಸಾವಿನ ಬಗ್ಗೆ ಖಚಿತಪಡಿಸಿದೆ. ಆದರೆ ಸಾವಿನ ಕಾರಣ ತಿಳಿದು ಬಂದಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದೆ. ಮೃತ ವಿದ್ಯಾರ್ಥಿಯನ್ನು ಉಮಾ ಸತ್ಯಸಾಯಿ ಗದ್ದೆ ಎಂದು ಗುರುತಿಸಲಾಗಿದೆ. ಓಹಿಯೊದ ವಿಶ್ವವಿದ್ಯಾಲಯವೊಂದರಲ್ಲಿ ಉಮಾ ಸತ್ಯಸಾಯಿ ಅಭ್ಯಾಸ ಮಾಡುತ್ತಿದ್ದರು. ವಿದ್ಯಾರ್ಥಿ ಸಾವು ದುರದೃಷ್ಟಕರ. ಉಮಾ ಸತ್ಯಸಾಯಿ ನಿಧನದಿಂದ ತೀವ್ರ ದುಃಖವಾಗಿದೆ. ಮೃತ ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸುವುದು ಸೇರಿದಂತೆ ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯ ಮಾಡಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಮೆರಿಕ ಪೊಲೀಸರು ತನಿಖೆ ಆರಂಭಿಸಿದ್ದು ಮೃತ ವಿದ್ಯಾರ್ಥಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಭಾರತೀಯ ವಿದ್ಯಾರ್ಥಿ ಮೊಹಮ್ಮದ್ ಅರಾಫತ್ ನಿಗೂಢವಾಗಿ ಮೃತಪಟ್ಟಿದ್ದ. ಈ ವರ್ಷದ…
ಹಾವೇರಿ: ಈ ಹತ್ತು ತಿಂಗಳಿನಲ್ಲಿ ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿಂದು ಬಸವರಾಜ ಬೊಮ್ಮಾಯಿಯವರು ಬಿಜೆಪಿ ಕಾರ್ಯಕರ್ತರೊಡನೆ ಬಹಿರಂಗ ಪ್ರಚಾರ ಸಭೆ ನಡೆಸಿ ಮತದಾರರಲ್ಲಿ ಮತಯಾಚನೆ ಮಾಡಿದರು. ಕರ್ನಾಟಕದಲ್ಲಿ ಒಂದು ಸರ್ಕಾರವಿದೆ ಅಷ್ಟೇ. ಆದರೆ ಸಿದ್ದರಾಮಣ್ಣನ ಆಡಳಿತದ ಈ ಸರ್ಕಾರಕ್ಕೂ ಸಿದ್ದರಾಮಯ್ಯಗಿರುವ ಅನುಭವವೇ ಬೇರೆಯಾಗಿದೆ. ಈ ಸಿದ್ದರಾಮಣ್ಣನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಿಯೂ ಒಂದು ಸಣ್ಣ ಕೆಲಸವೂ ಕೂಡ ಆಗಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಜನರ ಕೆಲಸಗಳನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು. ಇನ್ನು ಗ್ಯಾರಂಟಿ ಯೋಜನೆಗಳಿಗೆ ಈ ಕಾಂಗ್ರೆಸ್ ಸರ್ಕಾರ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡಲೇ ಇಲ್ಲ. ಸರಿಯಾದ ವ್ಯವಸ್ಥೆ ಮಾಡದೆಯೇ ಕಾಂಗ್ರೆಸ್‌ನವರು ಗ್ಯಾರೆಂಟಿಗಳನ್ನು ಕೊಡುತ್ತೇವೆ ಎಂದರು. ಆದರೆ, ಇದ್ದ ಹಣಕಾಸಿಗೆ ಕೈ ಹಾಕಿ…
ಬೆಂಗಳೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುವ ಅಧಿಕಾರವಿಲ್ಲ. ಒಂದು ವೇಳೆ ಅವರು ಬಳಕೆ ಮಾಡಿದರೆ ಅದು ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ಬಿ.ವೈ.ರಾಘವೇಂದ್ರ ನಡುವೆ ನಡೆದ ಮೋದಿ ಫೋಟೋ ವಿವಾದ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರಧಾನಿ ಆಗಿರುವುದರಿಂದ ಮೋದಿ ಫೋಟೊ ಬಳಕೆ ಮಾಡಿಕೊಳ್ಳಬಹುದಿತ್ತು. ಬಿಜೆಪಿ ಪಕ್ಷಕ್ಕೆ ಮಾತ್ರ ರಾಜಕೀಯದ ಸಂದರ್ಭದಲ್ಲಿ ಮೋದಿ ಅವರ ಫೋಟೋ ಬಳಸುವ ಅಧಿಕಾರವಿದೆ. ಆದರೆ ಈಶ್ವರಪ್ಪ ಅವರು ಅನಧಿಕೃತವಾಗಿ ಮೋದಿ ಅವರ ಫೋಟೋವನ್ನು ಬಳಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಈ ಬಾರಿ ಈಶ್ವರಪ್ಪ ಅವರಿಗೆ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದರು. ಇನ್ನು…