Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ಕನಕಗುರುಪೀಠಕ್ಕೆ ಇಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿಯವರ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಹಾವೇರಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಹ ಸಾಥ್ ನೀಡಿದ್ದಾರೆ. ಕಾಗಿನೆಲೆಯ ಶ್ರೀಗಳು ಜೆ.ಪಿ ನಡ್ಡಾ ಅವರಿಗೆ ಕರಿ ಕಂಬಳಿ ಹೊದಿಸಿ ಸನ್ಮಾನ ಮಾಡಿದ್ದಾರೆ. ನಂತರ ನಿರಂಜನಾನಂದ ಪುರಿಬಸ್ವಾಮೀಜಿ ಜೊತೆಗೆ ಮಾತುಕತೆಯನ್ನು ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುಂಬಾ ಜನ ಮೊಸರಿಗೆ ಸಕ್ಕರೆ ಕಲಸಿಕೊಂಡು ತಿನ್ನುತ್ತಾರೆ.. ಹೋಟೆಲ್‌ನಲ್ಲಿ ಊಟಕ್ಕೆ ಹೋದರೆ ಮೊಸರು, ಸಕ್ಕರೆ ಕೊಡುತ್ತಾರೆ.. ಆದ್ರೆ ಸಕ್ಕರೆ ಬದಲಾಗಿ ಬೆಲ್ಲ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೌದು, ಮೊಸರು ಮತ್ತು ಬೆಲ್ಲ ಮಿಕ್ಸ್ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೊಸರಿನಲ್ಲಿ ಹಲವಾರು ಆರೋಗ್ಯಕ್ಕೆ ಒಳ್ಳೆಯದಾಗುವ ಉತ್ತಮ ಗುಣಗಳನ್ನು ಹೊಂದಿರುತ್ತೆ.. ಇವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.. ಇದಲ್ಲದೆ, ಇದು ಕ್ಯಾಲ್ಸಿಯಂ ಹೊಂದಿದ್ದು, ಅನೇಕ ಕಾಲೋಚಿತ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ. ಮೊಸರಿಗೆ ಬೆಲ್ಲವನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. 1.ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ.. ಮೊಸರಿನೊಂದಿಗೆ ಬೆಲ್ಲವನ್ನು ಸೇವಿಸಿದರೆ ದೇಹದಲ್ಲಿ ರಕ್ತಹೀನತೆ ಉಂಟಾಗುವುದಿಲ್ಲ, ಬದಲಾಗಿ ರಕ್ತ ವೃದ್ಧಿಯಾಗುತ್ತದೆ.ಇದು ದೇಹದ ದೌರ್ಬಲ್ಯವನ್ನು ಹೋಗಲಾಡಿಸಿ, ದೇಹಕ್ಕೆ ಶಕ್ತಿ ನೀಡುತ್ತದೆ.. 2.ಮೊಸರನ್ನು ಬೆಲ್ಲದ ಜೊತೆ ತಿಂದರೆ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.ಇದರಿಂದ ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ. ಇದು ಹೊಟ್ಟೆಯ ಉಬ್ಬರಕ್ಕೆ ಪರಿಹಾರ ನೀಡುತ್ತದೆ.ಇದು ಜೀರ್ಣಾಂಗ…
ಬಿಹಾರ: ವ್ಯಕ್ತಿಯೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನೇ ಮದುವೆಯಾಗಿರುವ ಘಟನೆ ಬಿಹಾರದ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್ಮೋತಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ., ನಂತರ ಮಗಳ ಗಂಡನ ಜೊತೆ ಆತನ ಆತ್ತೆ ಸಲುಗೆ ಬೆಳೆಸಿದ್ದ.ನಂತರ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತು ಒಂದು ದಿನ ಅಳಿಯ ಆತನ ಅತ್ತೆಯೊಂದಿಗೆ ಹಾಸಿಗೆಯನ್ನು ಹಂಚಿಕೊಂಡಿದ್ದ. ಈ ದೃಶ್ಯವನ್ನು ಆತನ ಮಾವ ನೋಡಿದ್ದಾನೆ. ಇದರಿಂದಾಗಿ ಇವರ ನಡುವೆ ಗಲಾಟೆ ನಡೆದಿದ್ದು, ಈ ವಿಚಾರ ಪಂಚಾಯ್ತಿ ಕಟ್ಟೆಗೂ ಏರಿತ್ತು. ನಂತರ ಮಾವನೇ ಆತನ ಹೆಂಡತಿ ಹಾಗೂ ಆಳಿಯನಿಗೆ ಮದುವೆ ಮಾಡಿಸಿದ್ದಾರೆ. ಸಿಕಂದರ್ ಯಾದವ್ ಎಂಬ ಅಳಿಯನೇ ಅತ್ತೆ ಗೀತಾ ದೇವಿ (45)ಯನ್ನು ಮದುವೆಯಾದ ಆಳಿಯನಾಗಿದ್ದಾರೆ. ಮಾವ ದಿಲೇಶ್ವರ್ ದರ್ವೆ (55) ಅವರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿದ್ದಾರೆ. ದಿಲೇಶ್ವರ್ ದರ್ವೆ ಹಾಗೂ ಗೀತಾದೇವಿ ದಂಪತಿ ಕೆಲ ವರ್ಷಗಳ ಹಿಂದೆ ಸಿಕಂದರ್ ಯಾದವ್‌ಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು.. ಆದ್ರೆ ಅನಾರೋಗ್ಯದ ಕಾರಣದಿಂದಾಗಿ ಸಿಕಂದರ್ ಪತ್ನಿ ಸಾವನ್ನಪ್ಪಿದ್ದಳು.. ಇದಾದ…
ತಮಿಳುನಾಡು: ಪತ್ನಿಯನ್ನು ಫ್ಲೈಓವರ್ ಮೇಲೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿದರೂ ಬಿಡದೇ ಹಲ್ಲೆ ಮಾಡಿದ್ದಾನೆ ಆ ದೃಶ್ಯಗಳನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ.ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಈ ಘಟನೆಯು ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಕೊಯಂಬೆಡಿ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ. ಆರೋಪಿಯನ್ನು ರೋಷನ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಜಗಳವಾಡಿದ್ದಾನೆ ಇಷ್ಟಕ್ಕೆ ಸುಮ್ಮನಾಗದೆ ಗಂಡ ತನ್ನ ಹೆಂಡತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಫ್ಲೈಓವರ್ ಮೇಲೆ ಬಂದಿದ್ದಾನೆ.. ಬೈಕ್‌ನಲ್ಲಿ ಹೋಗುವಾಗಲೂ ಜಗಳ ಮುಂದುವರಿಸಿದ್ದಾನೆ. ಮತ್ತೆ ತನ್ನ ಹೆಂಡತಿಯನ್ನು ಫ್ಲೈಓವರ್ ಮೇಲೆ ತಂದು ಚೆನ್ನಾಗಿ ಥಳಿಸಿದ್ದಾನೆ.. ಆಕೆ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದರೂ ಬಿಡದೇ ಹೀನಾಯವಾಗಿ ಹೊಡೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತರ ಬೈಕ್ ಸವಾರರು ತಡೆಯಲು ಬಂದರೂ ಪ್ರಯೋಜನವಾಗಿಲ್ಲ.. ಕೊನೆಗೆ ಬೈಕ್ ಸವಾರನೊಬ್ಬ ಪೊಲೀಸರು ಬರುತ್ತಿದ್ದಾರೆ ಎಂದು ಬೆದರಿಸಿದ್ದಾನೆ.. ಆಗ ತನ್ನ ಹೆಂಡತಿಯನ್ನು ಮತ್ತೆ ಎಳೆದು ಬೈಕ್ ಮೇಲೆ ಕೂರಿಸಿಕೊಂಡು…
ತರೀಕೆರೆ: ಪ್ರೀತಿಸಿ ವಿವಾಹವಾಗಿ ದೂರವಾಗಿದ್ದ ಪತ್ನಿ ತವರು ಮನೆಗೆ ಜಾತ್ರೆಗೆ ಬಂದಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತಿ ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಸುವಾಗಲೇ ಆರೋಪಿ ಅತ್ಯಾಚಾರ ಎಸಗಿ ಫೋಕ್ಸ ಪ್ರಕರಣ ಹಾಕಿಸಿಕೊಂಡು ಅದೇ ಬಾಲಕಿಯನ್ನು ವಿವಾಹವಾಗಿ ನಿತ್ಯ ಕಿರುಕುಳ ಕೊಡುತ್ತಿದ್ದ. ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದ ಮೇಘನಾಳನ್ನು ಅದೇ ಗ್ರಾಮದ ಚರಣ್ ಪ್ರೀಸಿಸಿ ವಿವಾಹವಾಗಿದ್ದ ಅಪ್ರಾಪ್ತಿಯಾಗಿದ್ದ ಕಾರಣ ವಿವಾಹಕ್ಕೂ ಮೊದಲು ಅತ್ಯಾಚಾರ ಎಸಗಿದ್ದ ಕಾರಣ ಫೋಕ್ಸ ಪ್ರಕರಣ ದಾಖಲಾಗಿತ್ತು, ನಂತರ ಎರಡೂ ಮನೆಯವರು ಸೇರಿ ಇಬ್ಬರಿಗೂ ಮದುವೆ ಮಾಡಿದ್ದರು. ಕೆಲ ಕಾಲದ ಬಳಿಕ ನಿತ್ಯ ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ ಇದರಿಂದ ಬೇಸತ್ತ ಮೇಘನಾ ಮನೆಯವರು ಅವಳನ್ನು ಅಜ್ಜಿಯ ಮನೆ ಬಿಆರ್.ಪಿ ಗೆ ಕಳುಹಿಸಿದ್ದರು. ಕರಕುಚ್ಚಿಯಲ್ಲಿ ಮುಳಕಟ್ಟಮ್ಮ ಜಾತ್ರೆ ಇರುವ ಕಾರಣ ಯುವತಿ ತವರು ಮನೆಗೆ ಬಂದಿದ್ದುಅವಳು ಹೊಳೆಯಲ್ಲಿ ಬಟ್ಟೆ ಹೊಗೆಯಲು ತೆರಳಿದ್ದ ವೇಳೆ ಹಿಂಬಾಲಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ…
2019ರಲ್ಲಿ ಅಮೆರಿಕದ ಕಾನ್ಸಾಸ್ನ ಹೇಸ್ನಲ್ಲಿ ಒಂದು ಘಟನೆ ನಡೆದಿತ್ತು.. ಕೋಲ್ಬಿ ಟ್ರಿಕಲ್ ಎಂಬ ವ್ಯಕ್ತಿ ತನ್ನ ಪತ್ನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ.ಅನಂತರ 911ಗೆ ಕರೆ ಮಾಡಿ, ಪತ್ನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ.ವೈದ್ಯರು ಕೂಡಾ ಇದನ್ನು ಆತ್ಮಹತ್ಯೆ ಎಂದೇ ಘೋಷಣೆ ಮಾಡಿದ್ದರು. ಕೆಲ ತಿಂಗಳ ಬಳಿಕ ಆರೋಪಿ, ತನ್ನ ಪತ್ನಿಯ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಂಡು, 120,000 ಡಾಲರ್ ಹಣವನ್ನು ಪಡೆದಿದ್ದ.. ಈ ಹಣದಲ್ಲಿ 2,000 ಡಾಲರ್ ಅಂದರೆ ಸುಮಾರು 1.6 ಲಕ್ಷ ರೂಪಾಯಿ ಕೊಟ್ಟು ಸೆಕ್ಸ್ ಡಾಲ್ ಖರೀದಿ ಮಾಡಿದ್ದ.. ಇದಾದ ಮೇಲೆ ಪೊಲೀಸರಿಗೆ ಹಲವು ಅನುಮಾನಗಳು ಹುಟ್ಟು ಹಾಕಿದ್ದವು.. ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದ.. ಇದೀಗ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದರೂ ನಾನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಭಾರತೀಯ ಜನತಾ ಪಕ್ಷ ಶುದ್ದೀಕರಣವಾಗಬೇಕು ಎನ್ನುವ ಸಂಕಲ್ಪ ಇರಿಸಿಕೊಂಡು ಹೋರಾಟ ಮಾಡುತ್ತಿರುವ ನನಗೆ ಪ್ರತಿ ಬೂತ್‌ನಿಂದ ಹೆಚ್ಚಿನ ಬೆಂಬಲ ದೊರೆಯುತ್ತಿದೆ. ಎಲ್ಲಾ ಬೂತ್‌ನಲ್ಲೂ ಹೆಚ್ಚಿನ ಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಗುರುತಾದ ರೈತನ ಚಿಹ್ನೆಗೆ ಮತ ಹಾಕುವುದರ ಮೂಲಕ ನನ್ನನ್ನು ಗೆಲ್ಲಿಸಬೇಕು. ನಿಮ್ಮೆಲ್ಲರ ಮತ ಪರಿವರ್ತನೆ ಕೆಲಸದಿಂದ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ನಿಯಮಿತವಾಗಿ ಲವಂಗ ಸೇವನೆಯಿಂದ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿದಿನ 1 ಲವಂಗ ಜಗಿದರೆ ಸಾಕು. ದೇಹದಲ್ಲಿ ಅದ್ಭುತ ಬದಲಾವಣೆ ಆಗಲಿದೆ. ಪ್ರತಿದಿನ ಲವಂಗ ಜಗಿಯುವುದರಿಂದ ಆಗುವ ಪ್ರಯೋಜನಗಳು: ಆಸ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಗದೀಶ್ ಹಿರೇಮಠ್ ಅವರು ಹೇಳುವ ಪ್ರಕಾರ, ಲವಂಗಗಳಲ್ಲಿರುವ ಔಷಧೀಯ ಗುಣಗಳು ಬಾಯಿಯ ಕಾಯಿಲೆಗಳಾದ ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಲವಂಗದಲ್ಲಿರುವ ಆಂಟಿಮೈಕ್ರೊಬಿಯಲ್, ಉತ್ಕರ್ಷಣ ನಿರೋಧಕ ಅಂಶಗಳು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಲವಂಗದಲ್ಲಿರುವ ಆಂಟಿಆಕ್ಸಿಡೆಂಟ್ಗಳಾದ ಫ್ಲೇವನಾಯ್ಡ್ಗಳು ಮತ್ತು ಐಸೊಫ್ಲೇವೊನ್ಗಳು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ದೀರ್ಘಕಾಲದ ರೋಗಗಳಾದ ಹೃದ್ರೋಗ ಹಾಗೂ ಕ್ಯಾನ್ಸರ್ ನಂತಹ ರೋಗಗಳು ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲ ಸಂಧಿವಾತ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಲವಂಗದಲ್ಲಿರುವ ಔಷಧೀಯ ಗುಣಗಳುಳ್ಳ ಬ್ಯಾಕ್ಟೀರಿಯಾಗಳು ವೈರಸ್, ಶಿಲೀಂಧ್ರಗಳ ವಿರುದ್ಧ ಹೋರಾಡುತ್ತದೆ. ಇದು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಅದರ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಲ್ಲೂ ತಿಳಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.…
ನೋಟು ಅಮಾನ್ಯೀಕರಣ ಮತ್ತು ಡಿಜಿಟಲ್ ಪಾವತಿಗಳ ಹೊರತಾಗಿಯೂ ಭಾರತದಲ್ಲಿ ಕರೆನ್ಸಿ ಬಳಕೆ ಹೆಚ್ಚುತ್ತಿದೆ ನೋಟು ಅಮಾನ್ಯೀಕರಣದ ನಂತರವೂ ಭಾರತೀಯ ಆರ್ಥಿಕತೆಯಲ್ಲಿ ಕರೆನ್ಸಿ ವಿನಿಮಯ ಗಣನೀಯವಾಗಿ ಹೆಚ್ಚಿದೆ ಎಂದು ವರದಿಯಾಗಿದೆ. ನೋಟು ಅಮಾನ್ಯೀಕರಣದ ನಂತರ, ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣವು FY 2016-17 ರಿಂದ ಹೆಚ್ಚಾಗಿದೆ. 2,000 ರೂಪಾಯಿ ನೋಟುಗಳ ಹಂತ-ಹಂತದ ಹೊರತಾಗಿಯೂ, ಚಲಾವಣೆಯಲ್ಲಿರುವ ಕರೆನ್ಸಿ ಮಾರ್ಚ್ 2017 ರಲ್ಲಿ ರೂ 13.35 ಲಕ್ಷ ಕೋಟಿಯಿಂದ ಮಾರ್ಚ್ 2024 ರ ಅಂತ್ಯದ ವೇಳೆಗೆ ರೂ 35.15 ಲಕ್ಷ ಕೋಟಿಗೆ ಏರಿತು. ಇದರರ್ಥ FY 2016 ರಿಂದ ಚಲಾವಣೆಯಲ್ಲಿರುವ ಹಣದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಮೇ 2023 ರಲ್ಲಿ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಹಿಂಪಡೆಯುವಿಕೆಯು ಹಂತಹಂತವಾಗಿ ನಡೆಯಿತು. ವರದಿಗಳ ಪ್ರಕಾರ, 3.56 ಲಕ್ಷ ಕೋಟಿ ಮೌಲ್ಯದ ನೋಟುಗಳಲ್ಲಿ 97.83 ಪ್ರತಿಶತವು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. 2016 ರಲ್ಲಿ ದೇಶದಲ್ಲಿ UPI ಪಾವತಿಗಳನ್ನು ಪ್ರಾರಂಭಿಸಲಾಯಿತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಜನರು ಕರೆನ್ಸಿ…
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿ ಪೊಲೀಸರನ್ನು ಚುನಾವಣೆಯಲ್ಲಿ ಗೆಲ್ಲಲು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವಿಡಿಯೋವನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ರೇವಂತ್ ರೆಡ್ಡಿ ಅವರ ಮನೆಗೆ ತೆರಳಿ ಮರುದಿನ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ದೆಹಲಿ ಪೊಲೀಸರು ತನಿಖೆಯನ್ನು ತೆಲಂಗಾಣಕ್ಕೆ ವಿಸ್ತರಿಸಿದರು ಮತ್ತು ಇಡಿ ಮತ್ತು ಸಿಬಿಐ ನಂತರ ಪಿಸಿಸಿ ಪ್ರಧಾನ ಕಚೇರಿಯಲ್ಲಿ ತಪಾಸಣೆ ನಡೆಸಿದ್ದರು. ಇದರ ಬೆನ್ನಲ್ಲೇ, ಚುನಾವಣಾ ಗೆಲುವಿಗೆ ದೆಹಲಿ ಪೊಲೀಸರನ್ನು ಅಮಿತ್ ಶಾ ಬಳಸಿಕೊಂಡಿದ್ದಾರೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಮೀಸಲಾತಿ ರದ್ದುಪಡಿಸುವಂತೆ ಅಮಿತ್ ಶಾ ಹೇಳುತ್ತಿರುವಂತಹ ವಿಡಿಯೋ ಪ್ರಸಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ವಾರ್ ರೂಮ್ ಸಂಯೋಜಕ ರಿಥೋಮ್ ಸಿಂಗ್ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ದೇಶಾದ್ಯಂತ ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶವನ್ನುಂಟು…