Author: admin

ಚಾಲಕನ ನಿಯಂತ್ರಣ ತಪ್ಪಿ, ಖಾಸಗಿ ಬಸ್‌ ವೊಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೊರಕೋಡು ಕ್ರಾಸ್‌ ಬಳಿ ಕೆರೆಗೆ ಇಳಿದಿದೆ. ಕೆರೆಯಲ್ಲಿ ನೀರು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್‌ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಬಸ್‌ ಆನವಟ್ಟಿಯಿಂದ ಸೊರಬಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬಸ್‌ ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಸ್ತೆ ತಿರುವು ಇದ್ದ ಕಾರಣ ಚಾಲಕ ನಿಯಂತ್ರಣ ತಪ್ಪಿದ್ದು, ನೇರವಾಗಿ ಕೆರೆಗೆ ಇಳಿದಿದೆ. ಬಸ್‌ ನ ಮುಂಭಾಗ ಹಾನಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಸಿಸಿಬಿ ಮಾದಕವಸ್ತುಗಳ ನಿಗ್ರಹದಳ ಕಾರ್ಯಚರಣೆ ನಡೆಸಿ ನಿಷೇಧಿತ ಡ್ರಗ್​ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ. ಸ್ಟೂಡೆಂಟ್​ ವೀಸಾದಡಿ ಭಾರತಕ್ಕೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆ ಹೆನ್ರಿ ಚುಕ್ ​ವ್ಯುಮೆಕ್​, ವೀಸಾ ಅವಧಿ ಮುಗಿದಿದ್ದರು ಸಹ ಅಕ್ರಮವಾಗಿ ನಗರದಲ್ಲಿ ನೆಲಸಿದ್ದ ಆರೋಪಿಗಳಾಗಿದ್ದಾರೆ. ವಿದೇಶದಲ್ಲಿನ ಪರಿಚಯಸ್ಥ ಪೆಡ್ಲರ್​ ಗಳಿಂದ ಡ್ರಗ್​ ತರಿಸಿಕೊಂಡು ಹೆಚ್ಚಿನ ಬೆಲೆ ನಗರದಲ್ಲಿರುವ ವಿದ್ಯಾರ್ಥಿಗಳಿಗೆ, ಪರಿಚಯಸ್ಥರಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಬಾಗಲಕುಂಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು, ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕವಸ್ತುಗಳ ನಿಗ್ರಹದಳ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ ನಾಲ್ಕು ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್​ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಕೆಆರ್​ ಪುರದ ಗಣೇಶ ದೇವಸ್ಥಾನದ ಬಳಿ ಶೋಭಾ ಕರಂದ್ಲಾಜೆ ಕಾರಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನಿಗೆ ಗಂಭೀರ ಗಾಯವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಆರ್​ ಪುರ ನಿವಾಸಿ ಪ್ರಕಾಶ್​(35) ಸಾವಿಗೀಡಾದ ಬೈಕ್​ ಸವಾರನಾಗಿದ್ದಾನೆ. ಕೆಆರ್​ ಪುರದ ಗಣೇಶ ದೇವಸ್ಥಾನದ ಬಳಿ ನಿಂತಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರು ಡೋರ್​ ತೆಗೆದು ನಿಂತಿದ್ದು, ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್​ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಕೂಡಲೆ ಕೆಆರ್​ ಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೇ, ಚಿಕಿತ್ಸೆ ಫಲಕಾರಿಯಾಗದೇ ಬೈಕ್​ ಸವಾರ ಸಾವನ್ನಪ್ಪಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ತುಮಕೂರು ನಗರ ವಿಧಾನಸಭೆ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಬೆಳಗ್ಗೆ ಶಿರಾಗೇಟ್ ಬಳಿ ಕನಕದಾಸರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಇಂದು ಬೆಳಗ್ಗೆಯಿಂದಲೇ ಚುನಾವಣಾ ಪ್ರಚಾರ ಕಾರ್ಯ  ಆರಂಭಿಸಿದ್ದು ಮತಯಾಚನೆಯಲ್ಲಿ ತೊಡಗಿದ್ದಾರೆ. ಇಂದು ಸಂಜೆವರೆಗೂ ನಡೆಯಲಿರುವ ಪ್ರಚಾರ ಕಾರ್ಯದಲ್ಲಿ ನಗರ ವಿಧಾನಸಭಾ ಕ್ಷೇತ್ರದ ಜ್ಯೋತಿ ಗಣೇಶ್ ಸ್ಥಳೀಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ ಜೆಡಿಎಸ್ ಮುಖಂಡರು ಹಾಗೂ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿ ನಾಯಕರ್ ಕೂಡ ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಬಣಗಳ ನಡುವೆ ಮಾರಾಮಾರಿ ನಡೆದಿದೆ. ತುಮಕೂರಿನ ತಿಪಟೂರಿನ ನೊಣವಿನಕೆರೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಪ್ರಚಾರದ ವೇಳೆ ಜೆಡಿಎಸ್ ಬಣಗಳ ನಡುವೆ ಮಾರಾಮಾರಿ ನಡೆಯಿತು. ನೊಣವಿನಕೆರೆಯಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿದ್ದಾಗ ಜೆಡಿಎಸ್ ಮುಖಂಡ ರಾಕೇಶ್ ಗೌಡ ಸೇರಿದಂತೆ, ಅನೇಕ  ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಗುಂಪು  ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರಚಾರ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು. ರಾಕೇಶ್ ಗೌಡ ಗುಂಪು ಹಾಗೂ ಕೆ.ಟಿ. ಶಾಂತಕುಮಾರ್ ಗುಂಪುಗಳ ನಡುವೆ ಭಾರೀ ವಾಗ್ವಾದ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಅಭ್ಯರ್ಥಿ ವಿ. ಸೋಮಣ್ಣ ಪರಿಸ್ಥಿತಿ ತಿಳಿಗೊಳಿಸಿದರು. ಇನ್ನೂ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಗೊಂದಲಕ್ಕೆ ಕಾರಣವಾಯಿತು. ಜೆಡಿಎಸ್ ಗುಂಪುಗಳ ನಡುವೆ ಬಣ ರಾಜಕೀಯ ಬೂದಿ ಮುಚ್ಚಿದ…

Read More

ತುಮಕೂರು: ಅಶ್ವಿನಿ ಪುನೀತ್ ರಾಜಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಇಂದು ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸಚಿವ ಪರಮೇಶ್ವರ್ ಅವರಿಗೆ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಮನವಿ ಪತ್ರ ಸಲ್ಲಿಸಿದ್ದರು. ಕೂಡಲೇ ಅವರ ಮನವಿಗೆ ಸ್ಪಂದಿಸಿದ ಸಚಿವ ಪರಮೇಶ್ವರ್ ಈ ಕುರಿತಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಕೃತ್ಯವೆಸಗಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆನೀಡಲಾಗುವುದು ಎಂದು ಸಚಿವ ಪರಮೇಶ್ವರ್  ಭರವಸೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಳ್ಳಾರಿ: ‘ಬಳ್ಳಾರಿ ಡಿವೈಎಸ್‌ ಪಿ ಚಂದ್ರಕಾಂತ ನಂದ ರೆಡ್ಡಿ ಮತ್ತು ಬ್ರೂಸ್‌ ಪೇಟೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ.ಎನ್‌ ಸಿಂಧೂರ್‌ ಖಚಿತ ಮಾಹಿತಿ ಆಧರಿಸಿ ನಗರದ ಕಂಬಳಿ ಬಜಾರ್‌ ನ ಹೇಮಾ ಜ್ಯುವೆಲರ್ಸ್ ಮಾಲೀಕರಾದ ನರೇಶ್ ಸೋನಿ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ, ಆಭರಣ ಸಿಕ್ಕವು’ ಎಂದು ಎಸ್‌ ಪಿ ಹೇಳಿದರು. ‘ಬಳ್ಳಾರಿಯ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ಹಣ ಪತ್ತೆಯಾಗಿದ್ದು, ಜೊತೆಗೆ, ₹1.4 ಕೋಟಿ ಮೌಲ್ಯದ 3 ಕೆ.ಜಿ ಚಿನ್ನ, ₹42 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತು ಗಟ್ಟಿಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ ₹7.5 ಕೋಟಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದ್ದಾರೆ. ‘ಈಗ ಸಿಕ್ಕಿರುವ ಹಣ ಮತ್ತು ಆಭರಣ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿಟ್ಟಿದ್ದೋ, ಹವಾಲದಿಂದ ಬಂದದ್ದೋ ಅಥವಾ ನರೇಶ್‌ ಸೋನಿ ಅವರ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ್ದೋ ಖಚಿತವಾಗಿಲ್ಲ.…

Read More

ಲೋಕಸಭೆ ಚುನಾವಣೆ 2024: ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ಅಭ್ಯರ್ಥಿ ಕಿನ್ನರ ಮಹಾಮಂಡಲೇಶ್ವರ ಹಿಮಾಂಗಿ ಸಖಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ 2024 ರಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಅವರ ಹಕ್ಕುಗಳು ಮತ್ತು ಗೌರವವನ್ನು ನೀಡಲು ಹಿಮಂಗಿ ಸಖಿ ಅವರು ಕಣಕ್ಕೆ ಇಳಿದಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, 2024 ರಲ್ಲಿ 48,044 ತೃತೀಯ ಲಿಂಗ ಮತದಾರರು ECI ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆ 2019 ರಲ್ಲಿ 39,683 ರಿಂದ ಹೆಚ್ಚಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ. 5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಹಿಮಾಂಗಿ ಅವರು ಏಪ್ರಿಲ್ 10 ರೊಳಗೆ ವಾರಾಣಸಿಗೆ ಬರಲಿದ್ದಾರೆ. ಹಿಮಾಂಗಿ ಅವರೇ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಿಷಿ ಕುಮಾರ್…

Read More

ಕಾಮಕಸ್ತೂರಿ ಬೀಜ ಹಾಗೂ ದಾಲ್ಟಿನ್ನಿ ನೀರು ಸೇವಿಸೋದ್ರಿಂದ ತೂಕ ಇಳಿಕೆ ಸಾಧ್ಯ! ದಾಲ್ಟಿನ್ನಿ ನೀರಿನಲ್ಲಿ ಸಬ್ಬಾ ಬೀಜಗಳು ಅಥವಾ ಕಾಮಕಸ್ತೂರಿ ಬೀಜಗಳನ್ನು ನೆನೆಸಿಟ್ಟು ಸೇವಿಸುವುದರಿಂದ ತೂಕ ಇಳಿಕೆಯ ಪ್ರಯತ್ನಗಳು ಶೀಘ್ರವೇ ಫಲಕೊಡುತ್ತವೆ. ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ದೇಹಕ್ಕೆ ನೀರಿನಂಶ, ಆಂಟಿ ಆಕ್ಸಿಡೆಂಟುಗಳು, ಖನಿಜಗಳು ಹಾಗೂ ಇತರ ಪೋಷಕಾಂಶಗಳನ್ನೂ ನೀಡುತ್ತವೆ. ಈ ನೀರನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ತೂಕ ಇಳಿಕೆಯ ಪ್ರಯತ್ನಗಳಿಗೆ ಗರಿಷ್ಟ ಪ್ರಯೋಜನ ಲಭಿಸುತ್ತದೆ. ಮಾನಸಿಕ ಆರೋಗ್ಯಕ್ಕೂ ಬಾಳೆಹಣ್ಣು ಮದ್ದು.! ಬಾಳೆಹಣ್ಣು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಡೋಪಮೈನ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಪ್ರತಿ ದಿನ ನಿಯಮಿತವಾಗಿ ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ನೋವಿಗೆ ಬಾಳೆಹಣ್ಣು ಕೂಡ ಪರಿಣಾಮಕಾರಿಯಾಗಿದೆ. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮಲಗುವ ಮುನ್ನ ಪ್ರತಿದಿನ ಬಾಳೆಹಣ್ಣು ತಿನ್ನುವುದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೂ ಪರಿಹಾರವಾಗಿದೆ. ನಮ್ಮತುಮಕೂರಿನ ಕ್ಷಣ…

Read More

ಆಂಧ್ರಪ್ರದೇಶದಲ್ಲಿ ತಂದೆ 18 ತಿಂಗಳ ಹೆಣ್ಣು ಮಗುವಿಗೆ ವಿಷ ನೀಡಿ ಕೊಂದಿದ್ದಾರೆ. ಕಪ್ಪು ಬಣ್ಣದಿಂದಾಗಿ ಮಗುವಿಗೆ ವಿಷ ನೀಡಿದ್ದಾನೆ. ಘಟನೆಯಲ್ಲಿ ತಂದೆ ಮಹೇಶ್ ವಿರುದ್ಧ ಕರೆಂಪೂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಗುವಿಗೆ ಪ್ರಸಾದದಲ್ಲಿ ವಿಷ ಕುಡಿಸಿದ್ದಾನೆ. ಮಾರ್ಚ್ 31 ರಂದು ಮನೆಯಲ್ಲಿ ಅಕ್ಷಯ ಎಂಬ 18 ತಿಂಗಳ ಮಗು ದುರ್ಬಲ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಮೂಗಿನಿಂದ ರಕ್ತಸ್ರಾವವಾಗಿತ್ತು. ನಂತರ ಮನೆಯವರು ಮಗುವನ್ನು ಕರೆಂಪುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಮಗು ಸಾವನ್ನಪ್ಪಿದೆ. ವಿಷವನ್ನು ಬಚ್ಚಿಟ್ಟ ಮಹೇಶ್, ಮಗುವಿಗೆ ಅನಾರೋಗ್ಯವಿದೆ ಎಂದು ಹೇಳುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ. ಮಗು ಕಪ್ಪಾಗಿ ಹುಟ್ಟಿದೆ ಎಂಬ ಕಾರಣಕ್ಕೆ ಮಹೇಶ್ ಪತ್ನಿಗೆ ನಿತ್ಯ ಥಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ನೋಡಿಕೊಳ್ಳಲು ಅವರಿಗೆ ಅವಕಾಶ ನೀಡಲಿಲ್ಲ. ವಿಷ ಸೇವಿಸಿ ಮಗು ಸಾವನ್ನಪ್ಪಿದ್ದು, ಪೊಲೀಸರು ತನಿಖೆ ಆರಂಭಿಸುವ ಮುನ್ನವೇ ಮಗುವನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡ ಮಹೇಶ್ ಅವರ ಪತ್ನಿ…

Read More