Author: admin

ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕುರಿತು ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರ ಆಗುತ್ತಿದ್ದು, ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಜನ ವಿಪರೀತ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಸನದಲ್ಲಿ ರೋಡ್ ನಲ್ಲಿ ಸಿಗುತ್ತಿರುವ, ಪಾರ್ಕ್ & ಕ್ರೀಡಾಂಗಣದಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್‌’ಡ್ರೈವ್ ಒಳಗೆ, ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಖಾಸಗಿ ವಿಡಿಯೋ ಇವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೂಡ ಘಟನೆ ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಕೂಡ ಆದೇಶ ನೀಡಿದೆ. ಹೀಗಿದ್ದಾಗಲೇ ವಿದೇಶದಲ್ಲಿ ಕೂಡ, ಪ್ರಜ್ವಲ್ ರೇವಣ್ಣ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಶ್ಲೀಲ ವಿಡಿಯೋ ವೈರಲ್ ಕೇಸ್ ಬಗ್ಗೆ ವಿದೇಶಿ ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಸಿಂಗಪುರದ ಪ್ರಮುಖ ಮಾಧ್ಯಮ ಒಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಿಂದ ಈ ಕೃತ್ಯ ನಡೆದಿರುವ ಬಗ್ಗೆ ಚರ್ಚೆ ಮಾಡಿದೆ. ಅಲ್ಲದೆ…

Read More

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಆತನ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಮೇಲೆ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದರು. ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿತ್ತು. ಈ ಇಬ್ಬರನ್ನೂ ಪಂಜಾಬ್ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಇಬ್ಬರು ವ್ಯಕ್ತಿಗಳಲ್ಲಿ ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಡುವೆ…

Read More

ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ತಮ್ಮ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ತಾವು ಬೆಂಗಳೂರಿನಲ್ಲಿ ಇಲ್ಲದ ಕಾರಣ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ನೀಡಬೇಕು ಎಂದು ಸಿಐಡಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಂಸದ ಪ್ರಜ್ವಲ್‌ ರೇವಣ್ಣ, “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” (As I am not in Bangalore to attend the enquiry, I have communicated to C.I.D Bangalore through my Advocate. Truth will prevail soon) ಎಂದು ಬರೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ವಿಚಾರವಾಗಿ ವಿಚಾರಣೆಗೆ ಹಾಜರಾಗಲು…

Read More

ವಿಜಯಪುರ: ಇಬ್ಬರು ಯುವಕರು ಗೃಹಿಣಿಯೊಬ್ಬಳಿಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದು, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಷಯಕ್ಕೆ ಮನನೊಂದು ಎ.27 ರಂದು ಸಂತ್ರಸ್ತೆ ತನ್ನ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜಿಲ್ಲೆ ವಿಜಯಪುರದ ಬಸವನಬಾಗೇವಾಡಿ ತಾಲೂಕಿನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಅತ್ಯಾಚಾರ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 32 ವರ್ಷದ ಗೃಹಿಣಿಯನ್ನು ಅದೇ ಗ್ರಾಮದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಜೀವಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆಕಾಶ ಹಡಗಲಿ ಹಾಗೂ ಅಭಿಷೇಕ ಸಜ್ಜನ ಎಂಬ ಇಬ್ಬರು ಗೃಹಿಣಿಯನ್ನು ಬೆದರಿಸಿ ಆಕಾಶ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರ ಘಟನೆಯನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ಅತ್ಯಾಚಾರ ಹಾಗೂ ವಿಡಿಯೋ ಮಾಡಿರುವುದನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹಂಚುವುದಾಗಿ ಹಾಗೂ ಕೊಲೆ ಮಾಡಿ ಶವವೂ ಸಿಗದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಸದರಿ ಲೈಂಗಿಕ ದೌರ್ಜನ್ಯದ…

Read More

ಕೋವಿಡ್-19 ನಿಯಂತ್ರಣಕ್ಕಾಗಿ ಪಡೆದುಕೊಂಡವರು ಕೋವಿಶೀಲ್ಡ್‌ ಲಸಿಕೆ ಪಡೆದವರು ಥ್ರೊಂಬೋಸಿಸ್‌ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸುದ್ದಿಯು ಲಸಿಕೆ ಪಡೆದವರಲ್ಲಿ ಆತಂಕಕ್ಕೆ ಕಾರಣವಾಗಿದೆ. ವೈದ್ಯರ ಪ್ರಕಾರ, ‘ಲಸಿಕೆ ತೆಗೆದುಕೊಂಡ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಪ್ಯಾನಿಕ್ ರಿಯಾಕ್ಷನ್ ಅಗತ್ಯವಿಲ್ಲ, ಆದರೆ ಸಿಂಡ್ರೋಮ್‌ ಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ಜಾಗರೂಕರಾಗಿರಿ’ ಎಂದಿದ್ದಾರೆ. ನಿರಂತರವಾದ ರೋಗಿಯ ಮೇಲ್ವಿಚಾರಣೆಯಿಂದ ಸರಿಯಾದ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯಿಂದ ರೋಗಿಯನ್ನು ಬದುಕುಳಿಸಬಹುದಾಗಿದೆ. ಲಸಿಕೆ ಪಡೆದವರಲ್ಲಿ ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಹಾಗೂ ಮೊದಲ ಡೋಸ್ ಸ್ವೀಕರಿಸುವವರಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೆಲವೊಮ್ಮೆ ರಕ್ತಸ್ರಾವದಿಂದ ಕಾಣಿಸಿಕೊಳ್ಳಬಹುದು’ ಎಂದಿದ್ದಾರೆ. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ದೇಹದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯ ಪರಿಣಾಮವಾಗಿ ಪಾರ್ಶ್ವವಾಯು, ಹೃದಯಘಾತವಾಗುವ ಸಾಧ್ಯತೆಯು ಅಧಿಕವಾಗಿದೆ. ಅದಲ್ಲದೇ ಪ್ಲೇಟ್​ಲೆಟ್​ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ತಾನು ಅಭಿವೃದ್ಧಿಪಡಿಸಿದ್ದ ‘ಕೋವಿಶೀಲ್ಡ್‌’ ಲಸಿಕೆಯಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ…

Read More

ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳ ಬಳಕೆ ಮಾಡಲು ಕೈದಿಗಳು ಒಂದಿಲ್ಲೊಂದು ತಂತ್ರಗಾರಿಕೆ ಮಾಡುತ್ತಾರೆ. ಮೇಲಾಧಿಕಾರಿಗಳ ತಪಾಸಣೆ ವೇಳೆ ನಿಷೇಧಿತ ವಸ್ತುಗಳನ್ನು ಮುಚ್ಚಿಡಲು ಹೊಸ ಹೊಸ ಐಡಿಯಾ ಹುಡುಕುವುದು ಸಾಮಾನ್ಯ. ಇಲ್ಲೊಬ್ಬ ಕೈದಿ ಜೈಲಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಳ್ಳಲು ಆಗದೆ ಅದನ್ನು ನುಂಗಿದ್ದು ಇದೀಗ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ. ಶಿವಮೊಗ್ಗ ರಾಜೀವ್‌ ಗಾಂಧಿ ಬಡಾವಣೆಯ ನಿವಾಸಿ, ಸೋಗಾನೆಯ ಕೇಂದ್ರ ಕಾರಗೃಹದ ಕೈದಿ ಪರಶುರಾಮ ಅಲಿಯಾಸ್ ಚಿಂಗಾರಿ ಮೊಬೈಲ್ ನುಂಗಿದ್ದವರು. ಮಾ.28ರಂದು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಆತನಿಗೆ ಜೈಲಿನ ಸಿಬ್ಬಂದಿ ಕಾರಾಗೃಹದೊಳಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಹೊಟ್ಟೆನೋವು ಜಾಸ್ತಿ ಆಗುತ್ತಿರುವುದಾಗಿ ಪರಶುರಾಮ ತಿಳಿಸಿದ್ದ. ಅದೇ ದಿನ ರಾತ್ರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಕಲ್ಲಿನಂತಹ ವಸ್ತು ನುಂಗಿರುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದರು. ಏ.1ರಂದು ಜೈಲಿನ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಏ.3ರಂದು ಬೆಂಗಳೂರು ಕೇಂದ್ರ ಕಾರಾಗೃಹದ…

Read More

ಬೆಂಗಳೂರು: ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಎಚ್‌.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರದ ಟೌನ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಲು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾಗಿರುವ ಬಿ.ಎನ್‌.ಜಗದೀಶ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಮುಂದಿನ ಆದೇಶದವರೆಗೆ ನೇಮಕ ಮಾಡಿ ಮಂಗಳವಾರ ಆದೇಶಿಸಲಾಗಿದೆ. ದಂಡ ಪ್ರಕ್ರಿಯಾ ಸಂಹಿತೆ 1975ರ ಸೆಕ್ಷನ್‌ 24ರ ಉಪ ಸೆಕ್ಷನ್‌ 8ರ ಅಡಿಯಲ್ಲಿ ಜಗದೀಶ್‌ ಅವರ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…

Read More

ಬೆಂಗಳೂರು: ಹಾಸನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಡಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಸಂಸದ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ಅನ್ನು ಕೂಡಲೇ ರದ್ದುಪಡಿಸಿ, ದೇಶಕ್ಕೆ ಕರೆತರಲು ಅಂತರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಒದಗಿಸಿಕೊಡಲು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ( SIT) ಕೂಡ ತನಿಖೆ ಕೈಗೊಂಡಿದ್ದು. ನಿಮಗೆ ತನಿಖೆಯ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರೇ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅವರು ಹಾಲಿ ಹಾಸನದ ಸಂಸದ ಹಾಗೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯೂ ಹೌದು. ಪ್ರಜ್ವಲ್ ರೇವಣ್ಣ ಅವರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ರೀತಿ ನಿಜಕ್ಕೂ ಭೀಕರ ಹಾಗೂ…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ವೈ.ಎನ್.ಹೊಸಕೋಟೆ ಪುಟ್ ಬಾಲ್ ಕ್ಲಬ್ ನ ವತಿಯಿಂದ ಮೂರನೇ ವರ್ಷದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪಂದ್ಯಾವಳಿಯನ್ನು ನಿವೃತ್ತ ದೈಹಿಕ ಶಿಕ್ಷಕರಾದ ಫಕೃದ್ಧೀನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೈಮನಸ್ಸುಗಳನ್ನು ಮರೆಸಿ ಆರೋಗ್ಯವನ್ನು ನೀಡುವುದು ಆರೋಗ್ಯ ಕ್ಷೇತ್ರ. ಕ್ರೀಡಾಪಟುಗಳು ಸಹಜವಾಗಿ ಆರೋಗ್ಯವಂತರಾಗಿರುತ್ತಾರೆ ಮತ್ತು ಮಾನಸಿಕವಾಗಿ ಸಧೃಢರಾಗಿರುತ್ತಾರೆ. ತಾವು ಬೆಳೆಯುತ್ತಾ ಗ್ರಾಮಕ್ಕೆ ನಾಡಿಗೆ ದೇಶಕ್ಕೆ ಕೀರ್ತಿ ತಂದು ಕೊಡುವ ಶಕ್ತಿಯನ್ನು ಹೊಂದುತ್ತಾರೆ ಎಂದರು. ಗ್ರಾಮದಲ್ಲಿ ನಡೆಯುತ್ತಿರುವ ಪುಟ್ ಬಾಲ್ ಕ್ರೀಡಾಕೂಟದಲ್ಲಿ ಅನೇಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿನ ತೊಡಗಿಸಿಕೊಳ್ಳುವ ಗುಣವನ್ನು ತೋರಿಸುತ್ತದೆ. ಜೊತೆಗೆ ಪಂದ್ಯಾವಳಿಗಳ ಮೂಲಕ ನೋಡುಗರಿಗೆ ಮನೋರಂಜನೆಯನ್ನು ಉತ್ಸಾಹವನ್ನು ತುಂಬುತ್ತದೆ ಎಂದರು. ಹಿರಿಯ ಕ್ರೀಡಾಪಟು ಅಬ್ದುಲ್ ಶುಕೂರ್ ಮಾತನಾಡಿ, ತಾಲ್ಲೂಕಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಹೆಸರು ಗಳಿಸಿರುವುದು ವೈ.ಎನ್.ಹೊಸಕೋಟೆಯಾಗಿದ್ದು, ತಾಲ್ಲೂಕಿನ ಕ್ರೀಡಾ ತವರು ಆಗಿದೆ. ಇಲ್ಲಿ ತಲೆಮಾರುಗಳಿಂದ ವಾಲಿಬಾಲ್, ಕಬಡ್ಡಿ, ಖೋಖೋ ಇತ್ಯಾದಿ ಪಂದ್ಯಾವಳಿಗಳನ್ನು ಆಡುತ್ತಾ ಜನಮನ್ನಣೆ…

Read More

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾಮದಲ್ಲಿ ಸ್ವಚ್ಚತೆ ಎಂಬುದು ಬಹಳ ದೂರದ ಮಾತಾಗಿದೆ. ಮೂಲಸೌಕರ್ಯಗಳನ್ನು ಒದಗಿಸುವಲ್ಲಿಯೂ ಇಲ್ಲಿನ ಗ್ರಾಮ ಪಂಚಾಯಿತಿ ವಿಫಲವಾಗಿದೆ. ಇಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸ್ವಚ್ಛತೆ ಪದದ ಅರ್ಥವೇ ಗೊತ್ತಿಲ್ಲದ ಹಾಗೆ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿದ್ದಾರೆ. ಇನ್ನು ಇದೇ ಗ್ರಾಮದ ತುರುವೇಕೆರೆ ತಾಲೂಕಿನ ಮಾಜಿ ಶಾಸಕ ಎಂ ಡಿ ಲಕ್ಷ್ಮೀನಾರಾಯಣ್ ಅವರು ಕೂಡ ಇದೇ ಗ್ರಾಮದವರಾಗಿದ್ದು,ಸ್ವಚ್ಚತೆ ಕನಸಿನ ಮಾತಾಗಿದೆ. ಆದರೂ ಮಾಜಿ ಶಾಸಕರ ತವರೂರಲ್ಲೇ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಗೆ ಗಮನಹರಿಸದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗೆ ನಾಚಿಕೆಗೇಡಿನ ಸಂಗತಿ. ಈಗಾಗಲೇ ಮುನಿಯೂರಿನ ಗ್ರಾಮಸ್ಥರು ಮೂಲಸೌಕರ್ಯದ ಬಗ್ಗೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿದರು ಕೂಡ ಸ್ವಚ್ಛತೆಯ ಬಗ್ಗೆ ಕಾಳಜಿ ಇಲ್ಲದೆ ಅಧಿಕಾರದ ಗುಂಗಿನಲ್ಲೇ ಕಾಲ ಕಳೆಯುತ್ತಿದ್ದಾರೆ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು. ಮುನಿಯೂರು ಗ್ರಾಮದ ಚರಂಡಿಯನ್ನು ನೋಡಿದರೆ ಖಂಡಿತ ಈ ಗ್ರಾಮದಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಒಟ್ಟಾರೆ ಈ ಗ್ರಾಮದಲ್ಲಿ…

Read More