Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಬ್ರಿಜ್ ಭೂಷಣ್ ಒಪ್ಪಿದರೆ ಅವರ ಕುಟುಂಬದಲ್ಲಿ ಬೇರೆ ಯಾರಿಗಾದರೂ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ತೊಂದರೆಗೆ ಸಿಲುಕಿದ್ದರು. ಕೇಸರ್‌ಗಂಜ್ ಕ್ಷೇತ್ರದಿಂದ ಅವರಿಗೆ ಲೋಕಸಭೆ ಚುನಾವಣೆಗೆ ಪಕ್ಷ ಟಿಕೆಟ್ ನೀಡದಿರುವ ಬಗ್ಗೆ ಮೊದಲಿನಿಂದಲೂ ಊಹಾಪೋಹ ಇತ್ತು ಎನ್ನಲಾಗಿದೆ. ಮತ್ತೊಂದೆಡೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಪಾಳಯದಲ್ಲಿ ಸಂಸದರ ಕಿರಿಯ ಪುತ್ರ ಹಾಗೂ ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯ ಅಧ್ಯಕ್ಷ ಕರಣ್ ಭೂಷಣ್ ಶರಣ್ ಸಿಂಗ್ ಹೆಸರು ಚರ್ಚೆಯಲ್ಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್…
ಸರಗೂರು: ಆಗತ್ತೂರು ಗ್ರಾಮದಲ್ಲಿ 133 ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಗುರುವಾರ ಗ್ರಾಮದಲ್ಲಿ ಸಂಭ್ರಮ ಸಡಗರ ತುಂಬಿದ್ದವು. ತಾಲ್ಲೂಕಿನ ಸಾಗರೆ ಗ್ರಾ.ಪಂ ವ್ಯಾಪ್ತಿಯ ಆಗತ್ತೂರು ಬಿದರಹಳ್ಳಿ ಸರ್ಕಲ್ ಬಳಿ ಇರುವ ಕಬಿನಿ ಜಲಾಶಯದಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಬೆಳ್ಳಿ ರಥಕ್ಕೆ ಅಂಬೇಡ್ಕರ್ ರವರ ಪುತ್ಥಳಿಯನ್ನು ಕೂರಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಯಿತು. ಗ್ರಾಮದ ಮಹಿಳೆಯರು ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಾಲಂಕಾರ ಮಾಡಿದರು. ಬಿಸಿಲಿನ ತಾಪ ಹೆಚ್ಚಾಗುತ್ತಿದರೂ ಅಂಬೇಡ್ಕರ್ ಅಭಿಮಾನಿಗಳು ಬಿಸಿಲನ್ನು ಲೆಕ್ಕಿಸದೆ ಡ್ಯಾನ್ಸ್ ಮಾಡಿಕೊಂಡು ಬರುವವರಿಗೆ ಮಜ್ಜಿಗೆ ವಿತರಣೆ ಮಾಡಿದರು. ಅಂಬೇಡ್ಕರ್ ಹಬ್ಬಕ್ಕೆ ಎಲ್ಲಾ ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳ್ಳಿ ರಥದ ಜೊತೆಯಲ್ಲಿ ಆಟೋ ಹಾಗೂ ಬೈಕ್ ಮೂಲಕ ಅಂಬೇಡ್ಕರ್ ರವರ ಪೋಟೋ ಹಾಗೂ ನೀಲಿ ಬಾವುಟವನ್ನು ಕಟ್ಟಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ…
ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರುವ ಬೇಲದ ಹಣ್ಣು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದ ಬರುವ ದುರ್ವಾಸನೆ ತಡಗಟ್ಟಲು ವಸಡುಗಳ ತೊಂದರೆ ಇದ್ದವರು ಹಾಗೂ ಆಮಶಂಕೆ ಭೇಧಿಯ ನಿವಾರಣೆಗೆ ಹಣ್ಣಾದ ಬೇಲದ ಹಣ್ಣಿನ್ನು ಬಳಸಬಹುದು. ಇದನ್ನು ಮೂಲವ್ಯಾಧಿ ಹಾಗೂ ಸಕ್ಕರೆ ಖಾಯಿಲೆಯವರು ಸಹ ಬಳಸಬಹುದು. ಈ ಬೇಲದ ಹಣ್ಣಿನ ಉಪಯೋಗಗಳನ್ನು ನೋಡೋಣ ಬನ್ನಿ… ಬೇಲದ ಹಣ್ಣಿನ ರಸಕ್ಕೆ ಒಣಶುಂಠಿ ಪುಡಿ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ ತಾಯಿಯ ಎದೆಹಾಲು ವೃದ್ಧಿಸುತ್ತದೆ. ಶರೀರವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡಲು ಬೇಲದ ಹಣ್ಣಿನ ಪಾನಕವನ್ನು ಸೇವಿಸಬೇಕು. ಬೇಲದ ಹಣ್ಣಿಗೆ ಸಮಪ್ರಮಾಣ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ. ಆಮಶಂಕೆ ಭೇದಿಯಾಗುತ್ತಿದ್ದರೆ ಬೀಜಗಳನ್ನು ತೆಗೆದ ಬೇಲದ ಕಾಯಿಯ ತಿರುಳನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಬೇಲದ ಎಳೆಗಳ ರಸಕ್ಕೆ ಸೈನದವ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಸೇವಿಸಿದರೆ ಅಸ್ತಮಾ ಕಡಿಮೆಯಾಗುತ್ತದೆ.…
ದೆಹಲಿಯ ಎನ್ ಸಿಆರ್ ಪ್ರದೇಶದ 12 ಪ್ರತಿಷ್ಠಿತ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ನೆನ್ನೆ ಬೆಳಗ್ಗೆ ದೆಹಲಿಯ ಹಲವು ಶಾಲೆಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ಷಿಪ್ರವಾಗಿ ಸ್ಥಳಾಂತರಿಸಲಾಯಿತು ಎಂದು ವರದಿ ತಿಳಿಸಿದೆ. ಬಾಂಬ್ ಬೆದರಿಕೆ ಇ–ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ –- ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಶಾಲಾ ಆವರಣವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಶಾಲೆಗಳಲ್ಲಿ ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್ ಕೂಡ ಒಂದಾಗಿದೆ. ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಕೂಡಲೇ ನೋಯ್ಡಾ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು. ಬಾಂಬ್…
ಅರ್ಕಾನ್ಸಸ್ ಚರ್ಚ್ ನಲ್ಲಿ ಭೇಟಿಯಾದ 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಮೆರಿಕದ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ. 26 ವರ್ಷ ವಯಸ್ಸಿನ ರೇಗನ್ ಗ್ರೇ ಎಂಬಾಕೆಯನ್ನು ಬಂಧಿಸಲಾಗಿದೆ. ಲಿಟ್ಲ್ ರಾಕ್ ಇಮ್ಯಾನ್ಯುಯಲ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುವ ವೇಳೆ 2020ರಿಂದೀಚೆಗೆ 15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಮಗನ ಮೊಬೈಲ್ ಫೋನ್ ನಲ್ಲಿದ್ದ ಸಂದೇಶಗಳನ್ನು ನೋಡಿದ ಬಳಿಕ ಬಾಲಕನ ಪೋಷಕರು ಮಹಿಳೆ ಬಗ್ಗೆ ಹಿರಿಯ ಪಾಸ್ಟರ್ ಗೆ ದೂರು ನೀಡಿದ್ದರು. ಬಾಲಕನಿಗೆ ನಗ್ನ ಚಿತ್ರಗಳನ್ನು ಹೇರಳವಾಗಿ ಕಳುಹಿಸುತ್ತಿದ್ದುದು ಕಂಡುಬಂದಿತ್ತು. ಲಿಟ್ಲ್ ರಾಕ್ ಕ್ರಿಶ್ಚಿಯನ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ, ಕೌನ್ಸಿಲಿಂಗ್ ವೇಳೆ ಬಾಲಕನ ಜೊತೆಗೆ ದೈಹಿಕ ಸಂಬಂಧವಾಗಿರಲಿಲ್ಲ ಎಂದು ಚರ್ಚ್ ಅಧಿಕಾರಿಗಳಿಗೆ ತಿಳಿಸಿದ್ದಳು. ಈ ವರ್ಷದ ಫೆಬ್ರುವರಿಯಲ್ಲಿ ಸ್ನ್ಯಾಪ್ ಚಾಟ್ ಮೂಲಕ 15 ವರ್ಷದ ಬಾಲಕನಿಗೆ ಅಶ್ಲೀಲ…
ಪ್ರಧಾನಿ ನರೇಂದ್ರ ಮೋದಿ ತೀರಿಕೊಂಡರೆ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ವಿರುದ್ಧ ಈ ರೀತಿ ಮಾತನಾಡಿದ್ದಾರೆ ಎನ್ನಲಾಗಿದೆ. ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಪ್ರಧಾನಿ ಆಗೋದೇ ಇಲ್ಲವಾ? ಮೋದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನೋಡುತ್ತಾರಾ? ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರುವುದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ 3,000 ಕೋಟಿ ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ…
ಕಳೆದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ 11 ತಿಂಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಂಡ ಕಾರಣದಿಂದಾಗಿ ಭಾರತಕ್ಕೆ ಸುಮಾರು 790 ಕೋಟಿ ಡಾಲರ್ ತೈಲ ಆಮದು ಬಿಲ್ ಉಳಿತಾಯವಾಗಿದೆ. 2022-23ರಲ್ಲಿ ರಷ್ಯಾ ತೈಲದಿಂದಾಗಿ 510 ಶತಕೋಟಿ ಡಾಲರ್ ಉಳಿತಾಯವಾಗಿತ್ತು. ದೊಡ್ಡ ಪ್ರಮಾಣದ ರಿಯಾಯ್ತಿದರದಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತಕ್ಕೆ ಸರಬರಾಜು ಮಾಡುತ್ತಿದ್ದು ಈ ಅಂಶ ಐಸಿಆರ್ ಎ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಉಳಿತಾಯದಿಂದಾಗಿ ಭಾರತದ ಚಾಲ್ತಿ ಖಾತೆಯ ಜಿಡಿಪಿಗೆ ಹೋಲಿಸಿದರೆ ಕೊರತೆ ಅನುಪಾತ 2023-24ರಲ್ಲಿ 15-22 ಮೂಲ ಪಾಯಿಂಟ್ ಗೆ ಇಳಿದಿದೆ. ಕನಿಷ್ಟ ಮಟ್ಟದ ರಿಯಾಯ್ತಿ ಉಳಿದರೆ, ಸರಾಸರಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯರಲ್ಗೆ 85 ಡಾಲರ್ ಎಂದು ಅಂದಾಜಿಸಿದರೆ 2024-25ರಲ್ಲಿ ಭಾರತದ ನಿವ್ವಳ ತೈಲ ಆಮದು ಬಿಲ್ 101-104 ಡಾಲರ್ ಗೆ ಹೆಚ್ಚುವ ಸಾಧ್ಯತೆ ಇದ್ದು, 2023-24ರಲ್ಲಿ ಇದು 96 ಶತಕೋಟಿ ಡಾಲರ್ ಆಗಿತ್ತು ಎನ್ನಲಾಗಿದೆ. ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಆಧಾರದಲ್ಲಿ, 2023ರ…
ಕಾನ್ಪುರ ಮೂಲದ ದೀಪೇಂದ್ರ ಸಿಂಗ್(20) ಎನ್ನುವ ಯುವಕನೊಬ್ಬ ಕಳೆದ ಕೆಲ ಸಮಯದಿಂದ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಮೆಸೇಜ್ ಮಾಡುತ್ತಿದ್ದ. ಪರಿಚಯವಾದ ಮಹಿಳೆ ತನ್ನ ಪ್ರೊಫೈಲ್ ಪಿಕ್ಚರ್ ನಲ್ಲಿ ಅಂದವಾದ ಫೋಟೋವನ್ನು ಹಾಕಿದ್ದರು. ದೀಪೇಂದ್ರ ಈ ಫೋಟೋವನ್ನು ನೋಡಿ ಇದು ಆಕೆಯದೇ ಫೋಟೋವೆಂದು ಭಾವಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸ್ನೇಹ ಬೆಳೆಸಿಕೊಂಡ ದೀಪೇಂದ್ರ ಪ್ರತಿನಿತ್ಯ ಮಹಿಳೆಯೊಂದಿಗೆ ಮಸೇಜ್ ಮಾಡುತ್ತಾ,ಪ್ರೀತಿಸಲು ಶುರು ಮಾಡಿದ್ದಾನೆ. ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದು, ದೀಪೇಂದ್ರನಿಗೆ ಪ್ರಿಯತಮೆಯನ್ನು ನೋಡುವ ಆಸೆಯಿಂದಾಗಿ, ಆಕೆಯನ್ನು ಭೇಟಿ ಆಗಲು ಹೇಳಿದ್ದಾನೆ. ಭೇಟಿ ವೇಳೆ ತನ್ನ ಇನ್ ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಯುವತಿಯಂತೆ ಕಾಣಿಸಿಕೊಂಡಿದ್ದ ಮಹಿಳೆ ಹೆಚ್ಚು ವಯಸ್ಸಾದುದನ್ನು ನೋಡಿ ದೀಪೇಂದ್ರ ಆಘಾತಕ್ಕೊಳಗಾಗುತ್ತಾರೆ. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ಮಹಿಳೆ ತನಗೆ 45 ವರ್ಷ ಆಗಿದೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ದೀಪೇಂದ್ರ ಮಹಿಳೆಯೊಂದಿಗೆ ವಾಗ್ವಾದ ನಡೆಸಿ ಆಕೆಯ ತಲೆಯನ್ನು ನೆಲಕ್ಕೆ ಬಡಿದು ಥಳಿಸಿ, ಆಕೆಯ ಮೊಬೈಲ್ ಕಿತ್ತುಕೊಂಡು…
ದೇಶಾದ್ಯಂತ ಹೀಟ್ ವೇವ್ ಜೋರಾಗಿದೆ. ಬಿಸಿಲಿನ ತಾಪಕ್ಕೆ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವೆಡೆಗಳಲ್ಲಿ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಿಸಿದ್ದಾರೆ. ಆದರೆ ಉತ್ತರಪ್ರದೇಶದ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ಉಪಾಯವೊಂದನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿ ಕೊಠಡಿಯನ್ನು ಈಜುಕೊಳವನ್ನಾಗಿ ಮಾಡಲಾಗಿದೆ. ಶಾಲಾ ಮಕ್ಕಳು ಸಮವಸ್ತ್ರದಲ್ಲಿಯೇ ನೀರಿನಲ್ಲಿ ಈಜುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಬಿರು ಬೇಸಿಗೆಯ ನಡುವೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಈ ಐಡಿಯಾವನ್ನು ಮಾಡಿದ್ದಾರೆ. ಯುಪಿಯ ಕನೌಜ್‌ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿಯನ್ನು ವಿದ್ಯಾರ್ಥಿಗಳಿಗೆ ಈಜುಕೊಳವನ್ನಾಗಿ ಮಾಡಲಾಗಿದೆ. ಶಾಲಾ ಅಧಿಕಾರಿಗಳ ಪ್ರಕಾರ, ಬೆಳೆ ಕೊಯ್ಲು ಮತ್ತು ವಿಪರೀತ ಬಿಸಿಲಿನಿಂದಾಗಿ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಾಪಾಡಿಕೊಳ್ಳಲು ಇದನ್ನು ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು,…
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ನೆನ್ನೆ ಬಿಸಿಲಿನ ತಾಪಕ್ಕೆ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಬಿದ್ದಿದ್ದಾರೆ. ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿತ್ತು. ಇಲ್ಲಿಗೆ ಜಾಧವ್ ಭೇಟಿ ನೀಡಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕೂ ಮುನ್ನ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾಧವ್, ಕಲಬುರಗಿಯಲ್ಲಿ ಲಾ ಆಂಡ್ ಸಂಪೂರ್ಣವಾಗಿ ಸತ್ತು ಹೋಗಿದೆ. ರಾಮ ಮಂದಿರ ಉದ್ಘಾಟನೆ ಮರುದಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಆಗಿತ್ತು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಆಗಿದೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂದಿದ್ದರು. ಜನವರಿ 23 ರಂದು ಕಲಬುರಗಿ ಬಂದ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆದರೆ ಅಂದು ಗಲಾಟೆ…