ಸರಗೂರು: ಆಗತ್ತೂರು ಗ್ರಾಮದಲ್ಲಿ 133 ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಗುರುವಾರ ಗ್ರಾಮದಲ್ಲಿ ಸಂಭ್ರಮ ಸಡಗರ ತುಂಬಿದ್ದವು.
ತಾಲ್ಲೂಕಿನ ಸಾಗರೆ ಗ್ರಾ.ಪಂ ವ್ಯಾಪ್ತಿಯ ಆಗತ್ತೂರು ಬಿದರಹಳ್ಳಿ ಸರ್ಕಲ್ ಬಳಿ ಇರುವ ಕಬಿನಿ ಜಲಾಶಯದಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಬೆಳ್ಳಿ ರಥಕ್ಕೆ ಅಂಬೇಡ್ಕರ್ ರವರ ಪುತ್ಥಳಿಯನ್ನು ಕೂರಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಯಿತು.
ಗ್ರಾಮದ ಮಹಿಳೆಯರು ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಾಲಂಕಾರ ಮಾಡಿದರು. ಬಿಸಿಲಿನ ತಾಪ ಹೆಚ್ಚಾಗುತ್ತಿದರೂ ಅಂಬೇಡ್ಕರ್ ಅಭಿಮಾನಿಗಳು ಬಿಸಿಲನ್ನು ಲೆಕ್ಕಿಸದೆ ಡ್ಯಾನ್ಸ್ ಮಾಡಿಕೊಂಡು ಬರುವವರಿಗೆ ಮಜ್ಜಿಗೆ ವಿತರಣೆ ಮಾಡಿದರು. ಅಂಬೇಡ್ಕರ್ ಹಬ್ಬಕ್ಕೆ ಎಲ್ಲಾ ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೆಳ್ಳಿ ರಥದ ಜೊತೆಯಲ್ಲಿ ಆಟೋ ಹಾಗೂ ಬೈಕ್ ಮೂಲಕ ಅಂಬೇಡ್ಕರ್ ರವರ ಪೋಟೋ ಹಾಗೂ ನೀಲಿ ಬಾವುಟವನ್ನು ಕಟ್ಟಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಯಿತು.
ನಂತರ ಮಾತನಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಆಗತ್ತೂರು ಶಾಂತರಾಜ್ ನಮ್ಮ ಬೃಹತ್ ಸಂವಿಧಾನಕ್ಕೆ ಶ್ರಮ ಹಾಕಿ ಅಪಾರ ಕೊಡುಗೆ ನೀಡಿದ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.
ಡಾ ಬಿ ಆರ್ ಅಂಬೇಡ್ಕರ್ ರವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ ಅರ್ಥಿಕ ಪ್ರಗತಿಗಾಗಿ ನಿರಂತರವಾಗಿ ಹೋರಾಟ ಮಾಡಿದರು. ಬ್ರಿಟಿಷರ ವರ್ಣವ್ಯವಸ್ಥೆಯ ವಿರುದ್ಧವು ಹೋರಾಟ ಮಾಡಿದರು. 1935 ರಲ್ಲಿ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರ್ ರವರು ತಾನೂ ಹಿಂದೂ ಧರ್ಮದಲ್ಲಿ ಇರುವುದಿಲ್ಲ, ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತವಾಗಿ ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಜಮಾನರು ಸಣ್ಣಯ್ಯ, ಚೆಲುವರಾಜು, ಅಂಬೇಡ್ಕರ್ ಸಂಘದ ಶಾಂತರಾಜ್, ಮಹೇಶ್, ವೈಕುಂಠ, ಕಾಂತರಾಜು,ಚಲುವರಾಜು, ಆನಂದ, ಗೋಪಾಲ್, ನಂಜಯ್ಯ, ಪ್ರವೀಣ್,ಭರತ್ ಸುನಿಲ್ ಕುಮಾರ್, ಚಂದ್ರ ಪಾಟಿಲ್ ಚಿಕ್ಕಣ್ಣ, ರಮೇಶ್, ಸಿದ್ದಯ್ಯ, ಚೆಲುವರಾಜು ಬಸವಯ್ಯ,ಚಲುವಯ್ಯ, ಶಿವಣ್ಣ, ಶಿವಪ್ಪ, ಇನ್ನೂ ಮುಖಂಡರು ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA