Subscribe to Updates
Get the latest creative news from FooBar about art, design and business.
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
- ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘ ಮನವಿ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ವ್ಯವಸ್ಥೆ: ಮೂಲ ಸೌಕರ್ಯಕ್ಕೆ ಸೂಚನೆ
- ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ: ಡಾ.ಜಿ.ಪರಮೇಶ್ವರ
- ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
Author: admin
ಸಿನಿಮಾಗಳಲ್ಲಿ ಶೃಂಗಾರ ದೃಶ್ಯಗಳು ಅಂದರೆ, ಹಾ ಏನಿದೆ Easy ಎಂದು ಹಲವರು ಭಾವಿಸಿದ್ದಾರೆ. ಆದರೆ ತೆರೆ ಹಿಂದೆ ನಡೆಯುವುದಕ್ಕೂ ನಾವು ಸಿನಿಮಾಗಳಲ್ಲಿ ನೋಡುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ನಿಜವಾಗಲೂ ಅಂತಹ ದೃಶ್ಯಗಳನ್ನು ಹೇಗೆ ಮಾಡಲಾಗುತ್ತದೆ? ಪ್ರಿಪರೇಶನ್ ಹೇಗಿರುತ್ತದೆ ಎಂಬ ಬಗ್ಗೆ ಹಲವು ಕುತೂಹಲಗಳಿವೆ. ಈಗ ಆ ವಿಷಯದ ಕುರಿತು ‘ಮಂಗಳವಾರಂ’ ಫೇಮ್ ನಟಿ ದಿವ್ಯ ಪಿಳ್ಳೈ ಅದನ್ನು ವಿವರಿಸಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರೊಮ್ಯಾಂಟಿಕ್ ಸೀನ್ ಅಂದರೆ ಇಬ್ಬರು ಮುದ್ದುಮಾಡುವುದು. ರೊಮ್ಯಾನ್ಸ್ ಮಾಡುವುದೇ ಪ್ರೇಕ್ಷಕರಿಗೆ ಅನಿಸುತ್ತದೆ. ಆದರೆ ಸೆಟ್ ಗಳಲ್ಲಿ ಎಲ್ಲರಮುಂದೆ ಈ ದೃಶ್ಯಗಳಲ್ಲಿ ನಟಿಸುವುದು ಅಷ್ಟು ಸುಲಭದ ವಿಷಯವಲ್ಲ, ಏಕೆಂದರೆ ನುಮಾರು 75 ಕೆ.ಜಿ. ತೂಕದ ಮನುಷ್ಯ ದೇಹದ ಮೇಲೆ ಮಲಗಿದಾಗ ಕ್ಯಾಮರಾಗೆ ಕಾಣುವ ರೀತಿಯಲ್ಲಿ ಎಕ್ಸ್ ಪ್ರೆಶನ್ಸ್ ನೀಡಬೇಕಾಗುತ್ತದೆ. ಆಗ ಮೈಂಡ್ ನಲ್ಲಿ ಬೇರೆ ಆಲೋಚನೆ ಇರುವುದಿಲ್ಲ’. ಆ ರೋಮ್ಯಾನ್ಸ್ ಅನ್ನು ಎಂಜಾಯ್ ಮಾಡುವುದು ಕೂಡ ಸಾಧ್ಯವಾಗುವುದಿಲ್ಲ, ಇದು ಎಷ್ಟು ಕಷ್ಟ ಎಂಬುದು…
ಪ್ಯಾನ್ ಇಂಡಿಯಾದ ಬಿಗ್ ಬಜೆಟ್ ‘ರಾಮಾಯಣ’ ಶೂಟಿಂಗ್ ಶುರುವಾಗಿದೆ. ಚಿತ್ರತಂಡ ಯಾವುದೇ ಘೋಷಣೆ ಇಲ್ಲದೆ ಚಿತ್ರೀಕರಣ ಆರಂಭಿಸಿದ್ದಾರೆ. ರಾಮನ ಗೆಟಪ್ ನಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಮೇಕಿಂಗ್ ದೃಶ್ಯಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದೀಗ ಚಿತ್ರದ ಪ್ರಮುಖ ಪಾತ್ರಗಳಾದ ರಾಮ ಸೀತೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರನ್ನು ನೋಡಿ ನೆಟ್ಟಿಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಸೌಂದರ್ಯ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದೆ. ಪ್ರತಿಷ್ಠಿತ ರಾಮಾಯಣವನ್ನು ಆಧರಿಸಿ ಇದುವರೆಗೆ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಬಹುತೇಕ ಇವೆಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಕಳೆದ ವರ್ಷ ಬಿಡುಗಡೆಯಾದ ‘ಆದಿಪುರುಷ’ ಚಿತ್ರ ತೀವ್ರ ಟ್ರೋಲಿಂಗ್ ಗೆ ಒಳಗಾಗಿತ್ತು. ಇತ್ತೀಚೆಗೆ ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾ ಆಗುತ್ತಿದೆ ಎಂದು ಈ ಹಿಂದೆಯೂ ವರದಿಗಳು ಬಂದಿದ್ದರೂ ಯಾರೂ ಇದನ್ನು ಖಚಿತಪಡಿಸಿರಲಿಲ್ಲ. ಶ್ರೀರಾಮ ನವಮಿಯಲ್ಲಾದರೂ ಅಧಿಕೃತ ಘೋಷಣೆ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಂಥದ್ದೇನೂ…
ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಭಯಾನಕ ಸತ್ಯಗಳು ಬಯಲಾಗುತ್ತಿವೆ. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪೋಟಕ ಸತ್ಯ ಹೊರಹಾಕಿದ್ದು ಪ್ರಜ್ವಲ್ ರೇವಣ್ಣ ಅಧಿಕಾರ ದುರುಪಯೋಗ ಮಾಡಿಕೊಂಡು 16ರಿಂದ 50 ವರ್ಷ ವಯಸ್ಸಿನ 300ಕ್ಕೂ ಅಧಿಕ ಮಹಿಳೆಯರ ಮೇಲೆ ನೀಚ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆ ಇದು. ಇದು ದೇಶದಲ್ಲೇ ಅತೀ ದೊಡ್ಡ ಅತ್ಯಾಚಾರ ಹಗರಣ. ಪ್ರಜ್ವಲ ರೇವಣ್ಣ ಸಂಸದರಾಗಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರ ದರ್ಪ, ಆಸೆ ಆಮಿಷ ತೋರಿಸಿ ನೂರಾರು ಮಹಿಳೆಯರನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಡಿಯೋ ನೋಡಿದ್ರೆ ಮಹಿಳೆಯರ ಜೀವಂತ ಕೊಲೆ ಆಗಿದೆ ಅನಿಸುತ್ತದೆ. ವಿಡಿಯೋ ಶೇರ್ ಮಾಡಲು ಹೋಗಬೇಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಮ್ಮ ಇಲಾಖೆಯೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇಂಟರ್…
ಪ್ರಧಾನಿ ಮೋದಿಯವರನ್ನು 6 ವರ್ಷ ಚುನಾವಣೆಯಿಂದ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರನ್ನು ಚುನಾವಣೆಯಿಂದ 6 ವರ್ಷ ಅನರ್ಹಗೊಳಿಸಬೇಕಂದು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಕೋರ್ಟ್ ವಜಾ ಮಾಡಿದೆ. ವಕೀಲ ಆನಂದ್ ಎಸ್. ಜೊಂಧಳೆ ಅವರು ಉತ್ತರಪ್ರದೇಶದ ಪಿಲಿಬಿತ್‌ನಲ್ಲಿ ಏ.6ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸಿಖ್ ಮತ್ತು ಹಿಂದೂ ಭಕ್ತರ ಭಕ್ತಿ ಬಗ್ಗೆ ಉಲ್ಲೇಖಸಿದ್ದರು ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಎಫ್ ಐಆರ್ ದಾಖಲಿಸಲು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಆರು ವರ್ಷಗಳ ಕಾಲ ಚುನಾವಣೆಯಿಂದ ಅನರ್ಹಗೊಳಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಮನವಿ ಮಾಡಲಾಗಿತ್ತು. ನ್ಯಾಯಾಲಯ ಹೇಳಿದ್ದೇನು? ಅರ್ಜಿ ವಿಚಾರಣೆ…
ದೇಶದಲ್ಲಿ ಕಾಂಡೋಮ್ ಗಳನ್ನು ಹೆಚ್ಚು ಬಳಸುವವರೇ ಮುಸ್ಲಿಮರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಮುಸ್ಲಿಂ ಹಾಗೂ ಹಿಂದೂ ಸಮುದಾಯದ ನಡುವೆ ದ್ವೇಷವನ್ನು ಹರಡಲು ಪ್ರಧಾನಿ ಮೋದಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಓವೈಸಿ ಗಂಭೀರ ಆರೋಪ ಮಾಡಿದಲ್ಲದೇ ಪ್ರಧಾನಿ ಮೋದಿಯ ಆರೋಪಕ್ಕೆ ಓವೈಸಿ ತಿರುಗೇಟು ನೀಡಿದರು. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಹೇಳುತ್ತಾ, ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ ಎನ್ನುವ ಸುಳ್ಳನ್ನು ಬಿತ್ತಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ ಎಂದರು. ಕಾಂಗ್ರೆಸ್ ದೇಶದ ಸಂಪತ್ತನ್ನು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ ಹಾಗೆಯೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು. ಭಾರತದಲ್ಲಿ ಕಾಂಡೋಮ್ಗಳನ್ನು ಹೆಚ್ಚು ಬಳಸುತ್ತಿರುವವರೇ ಮುಸ್ಲಿಮರು, ಸರ್ಕಾರಿ ಅಂಕಿ-ಅಂಶಗಳೇ ಹೇಳುವಂತೆ ಮುಸ್ಲಿಮರ ಫಲವತ್ತತೆಯ ಪ್ರಮಾಣ ಕುಸಿದಿದೆ ಎಂದು ಹೇಳುತ್ತಿದ್ದರೆ, ಇವರು ನಾವು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಭಯವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಓವೈಸಿ 2002ರಿಂದ ಮುಸ್ಲಿಂ-ದಲಿತ ದ್ವೇಷವನ್ನು ಹರಡುತ್ತಿದ್ದಾರೆ…
ಮಣಿಪುರದ ಆರು ಬೂತ್ ಗಳಲ್ಲಿ ಇಂದು ಮರು ಮತದಾನ ನಡೆಯಲಿದೆ. ಹೊರ ಮಣಿಪುರ ಲೋಕಸಭಾ ಕ್ಷೇತ್ರದ 6 ಬೂತ್ ಗಳಲ್ಲಿ ಮರು ಚುನಾವಣೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಎರಡನೇ ಹಂತದ ಚುನಾವಣೆ ವೇಳೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಮರು ಮತದಾನ ನಡೆದಿದೆ. ಸಂಘರ್ಷದ ಕಾರಣ ಮೊದಲ ಹಂತದಲ್ಲಿ ಚುನಾವಣೆ ನಡೆದ ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ಎಲ್ಲಾ 11 ಬೂತ್ ಗಳಲ್ಲಿ ಮರುಮತದಾನ ನಡೆಸಲಾಯಿತು. ಮರು ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಮತದಾನದ ಸಮಯದಲ್ಲಿ, ಮಣಿಪುರವು ಗುಂಡಿನ ದಾಳಿ ಮತ್ತು ವ್ಯಾಪಕ ಹಿಂಸಾಚಾರದಿಂದ ಮುಳುಗಿತು. ದಾಳಿಕೋರರು ಮತಗಟ್ಟೆ ಸಾಮಗ್ರಿಗಳನ್ನೂ ಧ್ವಂಸಗೊಳಿಸಿದ್ದಾರೆ. ಇವಿಎಂಗಳಿಗೂ ಹಾನಿಯಾಗಿದೆ. ಮರು ಮತದಾನಕ್ಕೆ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇನ್ನರ್ ಮಣಿಪುರ ಮತ್ತು ಔಟರ್ ಮಣಿಪುರ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಶೇ.72ರಷ್ಟು ಮತದಾನವಾಗಿದೆ. ಬೂತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ 47 ಮತಗಟ್ಟೆಗಳಲ್ಲಿ ಮರು ಮತದಾನ…
ಹನೂರು: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಹನೂರಿನ ಇಂಡಿಗನಾಥ ಗ್ರಾಮದ ಮತಗಟ್ಟೆಯಲ್ಲಿ ಶಾಂತಿಯುತ ಮರು ಮತದಾನ ನಡೆಯಿತು. ವ್ಯಾಪಕ ಭದ್ರತಾ ವ್ಯವಸ್ಥೆಗಳ ನಡುವೆ ಮರು ಮತದಾನ ನಡೆಯಿತು. ಇಂಡಿಗನಾಥ ಗ್ರಾಮದ ಮತಗಟ್ಟೆಯಲ್ಲಿ ಎಪ್ರಿಲ್ 26ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಧ್ವಂಸಗೊಳಿಸಲಾಗಿತ್ತು. ಹೀಗಾಗಿ ಇಂದು ಮರುಮತದಾನ ನಡೆಯಿತು. ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಮರು ಮತದಾನ ಉತ್ತಮವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪಿಟಿಐಗೆ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಮವಾರ ಆಸ್ಪತ್ರೆ ಪ್ರಕಟಣೆ ತಿಳಿಸಿದೆ. 91 ವರ್ಷ ವರ್ಷದ ಮಾಜಿ ಸಿಎಂ ಆರೋಗ್ಯ ವೈದ್ಯಕೀಯವಾಗಿ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಡಾ. ಸತ್ಯನಾರಾಯಣ ಮೈಸೂರು ಮತ್ತು ವೈದ್ಯಕೀಯ ತಜ್ಞರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚಾಮರಾನಗರ: ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ನಿಧನದ ಹಿನ್ನೆಲೆ ಏಪ್ರಿಲ್ 30ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ. ಪೂರ್ವ ನಿಗಧಿಯಾಗಿರುವ ಪರೀಕ್ಷೆಗಳನ್ನು ಹೊರತುಪಡಿಸಿ. ಸರ್ಕಾರಿ, ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ದಿನಾಂಕ 30.04.2024ರಂದು ರಜೆ ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯ್ ಕುಮಾರ್ ಹೆಚ್.ಬಿ ಈ ಆದೇಶ ಹೊರಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಏಪ್ರಿಲ್ 30 ಮಧ್ಯಾಹ್ನದ ಬಳಿಕ ಮೈಸೂರಿನಲ್ಲೇ ಬೌದ್ಧಧರ್ಮದ ವಿಧಿವಿಧಾನದಂತೆ ಸಕಲ ಗೌರವಗಳೊಂದಿಗೆ ವಿ.ಶ್ರೀನಿವಾಸ ಪ್ರಸಾದ್ ಅವರ ಅಂತ್ಯಕ್ರಿಯೆ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಹ್ಮಣೇಶ್ವರ ದೇಗುಲದ ಬಳಿಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪಶುಪಾಲನಾ ಇಲಾಖೆ ನೇತೃತ್ವದಲ್ಲಿ ತೆರೆಯಲಾಗಿರುವ ಮೇವಿನ ಬ್ಯಾಂಕ್ ಗೆ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇವು ಖರೀದಿಗೆ ಆಗಮಿಸಿದ್ದ ರೈತರೊಂದಿಗೆ ಇದೇ ವೇಳೆ ಮಾತನಾಡಿದ ಅವರು, ಮೇವು ವಿತರಣಾ ಸ್ಥಳದಲ್ಲಿ ಕುಡಿಯುವ ನೀರು, ಅಗ್ನಿ ಶಾಮಕ ದಳ ಸಿಬ್ಬಂದಿ ನೇಮಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ.ಯಂತೆ ವಾರಕ್ಕೆ 42 ಕೆ.ಜಿ. ಮೇವು ವಿತರಿಸಲಾಗುತ್ತಿದ್ದು, ಒಂದು ಕೆ.ಜಿ. ಮೇವಿಗೆ ₹2 ನಿಗದಿಪಡಿಸಲಾಗಿದೆ ಎಂದರು. ಇದೇ ಸಂದರ್ಭ ಮೇವು ಖರೀದಿಸಿ ಹೊರಟಿದ್ದ ತಿಮ್ಮಪುರದ ಉಮಾ ಎಂಬ ಮಹಿಳೆಯನ್ನೂ ಮಾತನಾಡಿಸಿದ ಜಿಲ್ಲಾಧಿಕಾರಿಗಳು, ಮೇವು ಬ್ಯಾಂಕ್ ತೆರೆದಿರುವುದರಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಪಡೆದುಕೊಂಡರು. ಇದಕ್ಕೂ ಮುನ್ನ ಮಿಡಗೇಶಿಯಲ್ಲಿ ತೆರೆಯಲಾಗಿರುವ ಮೇವು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತದ ನಂತರ ಪಾವಗಡ ಪಟ್ಟಣದ…