nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

    July 3, 2025

    ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್

    July 3, 2025
    Facebook Twitter Instagram
    ಟ್ರೆಂಡಿಂಗ್
    • ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ
    • ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ
    • ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್
    • ಒಳ ಮೀಸಲಾತಿ ಜಾರಿಗೊಳಿಸದೆ ಇರುವ ಹುನ್ನಾರ: ಆ.1ರಿಂದ ಹೋರಾಟ: ಗೋವಿಂದ ಕಾರಜೋಳ
    • ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ: ಡಿ.ಕೆ.ಸುರೇಶ್‌
    • ಅಕ್ರಮ ಪಡಿತರ ಅಕ್ಕಿ ಸಾಗಾಟ: ಕಮಲನಗರ ಪೊಲೀಸರಿಂದ ದಾಳಿ
    • ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ
    • ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ!: ಆರ್.ಅಶೋಕ್ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್
    ಕೊರಟಗೆರೆ April 29, 2024

    ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್

    By adminApril 29, 2024No Comments2 Mins Read
    g parameshwar
    • ನೊಂದ ಕುಟುಂಬಗಳಿಗೆ ಕರುಣೆ ತೋರಿ ಮಾದರಿಯಾದ ಸ್ವಾಮೀಜಿಗಳು

    ಕೊರಟಗೆರೆ : ಚುನಾವಣೆ ನೀತಿಸಂಹಿತೆ ಮುಗಿದ ತಕ್ಷಣವೇ ಚಿಂಪುಗಾನಹಳ್ಳಿಯ 9 ಎಕರೇ 30 ಗುಂಟೆ ಸರಕಾರಿ ಜಮೀನಿನಲ್ಲಿ ಪಶು ಆಸ್ಪತ್ರೆ, ಸರಕಾರಿ ಶಾಲೆ ಮತ್ತು ಬಡವರಿಗೆ ನಿವೇಶನಕ್ಕೆ ಲೇಔಟ್ ನಿರ್ಮಾಣ ಮಾಡ್ತಿನಿ. ಗುಡಿಸಲು ಕಳೆದುಕೊಂಡ ಜನರಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಸೌಲಭ್ಯ ಪೂರೈಸಲು ತಕ್ಷಣ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

    ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪ ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದ ಸ್ಥಳಕ್ಕೆ ಭಾನುವಾರ ಸಿದ್ದರಬೇಟ್ಟ ಶ್ರೀಗಳ ಜೊತೆಯಲ್ಲಿ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.


    Provided by

    ವರ್ಷದಲ್ಲಿ ಎರಡನೇ ಸಲ ಗುಡಿಸಲಿಗೆ ಬೆಂಕಿ ಬಿದ್ದು ಪ್ರಸ್ತುತ 10ಗುಡಿಸಲು ಸುಟ್ಟುಹೋಗಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಧವಸದಾನ್ಯ ನಾಶವಾಗಿವೆ. ಕಳೆದ ವರ್ಷವೇ ಭೇಟಿ ನೀಡಿ ನಿವೇಶನ ನೀಡುವ ಭರವಸೆ ನೀಡಿದ್ದೆ. ಈಗ ಪ್ರತಿ ಕುಟುಂಬಕ್ಕೆ 5 ಸಾವಿರ ಹಣ ನೀಡಿದ್ದೇನೆ. ಅಲೆಮಾರಿ ಕಾರ್ಮಿಕರು ಮತ್ತು ಹಂದಿಜೋಗ ಕುಟುಂಬಗಳಿಗೆ ತ್ವರಿತವಾಗಿ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ  ಎಂದು ಹೇಳಿದರು.

    ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಶಾಖ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ,  ಚಿಂಪುಗಾನಹಳ್ಳಿ ಸಮೀಪ ಎರಡನೇ ಸಲ ಬೆಂಕಿಯ ಅವಗಡ ಸಂಭವಿಸಿದೆ. ಬೆಂಕಿಯ ಅವಘಡದಿಂದ ಗುಡಿಸಲಿನಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಬಾಳುವ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ. ಸಂಕಷ್ಟಕ್ಕೆ ಸಿಲುಕಿದ ಬಡಜನರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ ಎಂದು ಹೇಳಿದರು.

    g parameshwar

     ಶ್ರೀಗಳಿಂದ ಬಡಜನರಿಗೆ ನೆರವಿನ ಆಸರೆ:

    ಎಲೆರಾಂಪುರ ಶ್ರೀಮಠದಿಂದ 11 ಗುಡಿಸಲು ಕಳೆದುಕೊಂಡ ಬಡಜನರಿಗೆ ಆಹಾರದ ಕಿಟ್, ಬಟ್ಟೆ, ಚಾಪೆ  ಮತ್ತು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಡಾ.ಹನುಮಂತನಾಥ ಸ್ವಾಮೀಜಿಗಳು  ವಿತರಣೆ ಮಾಡಿದರು. ಪಾವಗಡ ಶ್ರೀರಾಮಕೃಷ್ಣ ಸೇವಾಮಠದಿಂದ 8 ಸಾವಿರ ಮೌಲ್ಯದ ಪಾತ್ರೆ, ಬಟ್ಟೆ, ಸೀರೆ, ಪಂಚೆ, ಟವಲ್, ಅಕ್ಕಿ, ಬೆಳೆ, ಸಕ್ಕರೆ ಮತ್ತು ಸಾಂಬರ್ ಪದಾರ್ಥಗಳನ್ನು ಶ್ರೀಜಪಾನಂದಾ ಸ್ವಾಮೀಜಿಗಳು ವಿತರಣೆ ಮಾಡಿದರು. ಸಿದ್ದರಬೆಟ್ಟ ಶ್ರೀಮಠದಿಂದ ದಿನಸಿ ಪದಾರ್ಥ, ಪಾತ್ರೆ ಮತ್ತು ಬೇಟ್‍ ಶೀಟ್‍ ಗಳನ್ನು ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳು ವಿತರಣೆ ಮಾಡಿದರು.

    ನಿವೇಶನ ನೀಡಲು ಶ್ರೀಗಳ ಆಗ್ರಹ:

    ಕ್ಯಾಮೇನಹಳ್ಳಿ ಮತ್ತು ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲೆಮಾರಿ ಕಾರ್ಮಿಕರು, ಹಂದಿಜೋಗರು ಕಳೆದ 25 ವರ್ಷದಿಂದ ನೆಲೆಸಿದ್ದಾರೆ. 30ಕ್ಕೂ ಅಧಿಕ ಕುಟುಂಬಗಳಿಗೆ ಸೌಲಭ್ಯಗಳೇ ಮರೀಚಿಕೆ ಆಗಿವೆ. ರಾತ್ರಿ ವೇಳೆ ಕತ್ತಲೆಯ ಜೀವನ ನರಕದಂತಿದೆ. ತಕ್ಷಣ ಸರಕಾರ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕಿದೆ ಎಂದು ಎಲೆರಾಂಪುರದ ಶ್ರೀಹನುಮಂತನಾಥ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮತ್ತು ಪಾವಗಡದ ರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಜೀ ಆಗ್ರಹ ಮಾಡಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ಮೀನಾಮೇಷ:  ಬೈಚಾಪುರ ಗ್ರಾ.ಪಂ.ನಲ್ಲಿ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ಮುಕ್ತಿ!

    July 2, 2025

    30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಿದ ಜಪಾನಂದ ಸ್ವಾಮೀಜಿ

    June 28, 2025

    ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು: ತಹಶೀಲ್ದಾರ್ ಮಂಜುನಾಥ್ ಕೆ.

    June 27, 2025
    Our Picks

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

    July 3, 2025

    ಹೃದಯಾಘಾತದ ಸಾವು ಕೊರೋನಾ ಲಸಿಕೆಗೂ ಸಂಬಂಧವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    July 2, 2025

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಅಕ್ರಾ:  ಪ್ರಧಾನಿ ನರೇಂದ್ರ ಮೋದಿ ಅವರಿಗೆ “ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವ” ಕ್ಕಾಗಿ ದೇಶದ ರಾಷ್ಟ್ರೀಯ ಗೌರವವಾದ…

    ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

    July 3, 2025

    ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್

    July 3, 2025

    ಒಳ ಮೀಸಲಾತಿ ಜಾರಿಗೊಳಿಸದೆ ಇರುವ ಹುನ್ನಾರ: ಆ.1ರಿಂದ ಹೋರಾಟ: ಗೋವಿಂದ ಕಾರಜೋಳ

    July 3, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.