ವಿಜಯಪುರ: ಬಿ.ಎಸ್.ಯಡಿಯೂರಪ್ಪನವರ ಪುತ್ರ ಪ್ರೇಮದ ವಿಚಾರವಾಗಿ ಸ್ವಪಕ್ಷದವರೇ ನೀಡಿರುವ ಹೇಳಿಕೆಗೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆ ಪ್ರಚಾರ ಸಭೆಯಲ್ಲಿ ಬಿಎಸ್ ವೈ ಟಕ್ಕರ್ ಕೊಟ್ಟರು.
ನನಗೆ ಮಗ ಬಿ.ವೈ. ರಾಘವೇಂದ್ರ ಆದ್ಯತೆ ಅಲ್ಲ. ನನಗೆ ನೀವು ಮುಖ್ಯ, ನೀವು ಅಗತ್ಯ ಎಂದು ಯಡಿಯೂರಪ್ಪ ಹೇಳಿದ್ದು, ನನ್ನ ಮಗ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದಾನೆ. ಅಲ್ಲಿ ನಾನು ಸಭೆಯಲ್ಲಿ ಇರಬೇಕಾಗಿತ್ತು. ಆದ್ರೆ, ಅದನ್ನೆಲ್ಲ ಬಿಟ್ಟು ನಾನು ಮುದ್ದೇಬಿಹಾಳಕ್ಕೆ ಬಂದಿದ್ದೇನೆ. ನನಗೆ ನನ್ನ ಮಗ ಆದ್ಯತೆ ಅಲ್ಲ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿ ಆಗಿ 10 ವರ್ಷವಾಯಿತು. ಒಂದೇ ದಿನ ಕೂಡಾ ಅವರು ವಿಶ್ರಾಂತಿ ತಗೆದುಕೊಂಡಿಲ್ಲ. ಈ ಬಾರಿ ರಾಜ್ಯದಲ್ಲಿ 28 ಕ್ಕೆ 28 ಮತಕ್ಷೇತ್ರ ಗೆಲ್ಲುವ ವಾತಾವರಣ ಇದೆ. ನಿನ್ನೆ ನಡೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರಗಳನ್ನು ಸಹ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296