ಕಾರಿನಲ್ಲಿ ಬರೋಬ್ಬರಿ 30ಕ್ಕೂ ಅಧಿಕ ಕುರಿ, ಆಡುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ವೈರಲ್ ಆದ ಬಳಿಕ ಕುರಿ, ಆಡುಗಳನ್ನು ರಕ್ಷಿಸಿರುವ ಪ್ರಕರಣ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನೆನ್ನೆ ನಡೆದಿದೆ.
ಮಾರುತಿ ಸುಝುಕಿ ಸ್ವಿಫ್ಟ್ ಡಿಝೈರ್ ಕಾರಿನೊಳಗೆ 30ಕ್ಕೂ ಅಧಿಕ ಆಡು, ಕುರಿಗಳನ್ನು ತುಂಬಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕಾರಿನೊಳಗಿದ್ದ ಆಡು, ಕುರಿಗಳನ್ನು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296