nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026
    Facebook Twitter Instagram
    ಟ್ರೆಂಡಿಂಗ್
    • ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?
    • ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?
    • ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು
    • ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?
    • ಸೈಕಲ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ:  5 ವರ್ಷದ ಮಗು ಸಾವು
    • ಟ್ರೆಕ್ಕಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತ: ಯುವತಿ ಸಾವು
    • ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ
    • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೊದಲ ಹಂತದ ಮತದಾನ: ಈ 5 ವಿಷಯಗಳು ನಿಮಗೆ ತಿಳಿದಿರಲಿ
    ರಾಜ್ಯ ಸುದ್ದಿ April 26, 2024

    ಮೊದಲ ಹಂತದ ಮತದಾನ: ಈ 5 ವಿಷಯಗಳು ನಿಮಗೆ ತಿಳಿದಿರಲಿ

    By adminApril 26, 2024No Comments2 Mins Read
    vote

    ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಇಂದು ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಸುಮಾರು 2.9 ಕೋಟಿ ಜನರು ಶುಕ್ರವಾರ 247 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಘಟಾನುಘಟಿಗಳು ಕಣದಲ್ಲಿದ್ದಾರೆ. ಮತದಾರರು ಕೂಡ ತಮ್ಮ ಮತ ನೀಡಿ ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾತರರಾಗಿದ್ದಾರೆ. ಇದರ ನಡುವೆ ಮೊದಲ ಹಂತದ ಮತದಾನ ಪ್ರಕ್ರಿಯೆ ವೇಳೆ ನೀವು ಈ 5 ಅಂಶಗಳನ್ನು ಗಮನಿಸಿ.

    ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶುಕ್ರವಾರ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಹೋರಾಟ ನಡೆಯುತ್ತಿದೆ. ಇದರ ನಡುವೆ ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆ ಒಂದಿಷ್ಟು ಕುತೂಹಲಕಾರಿ ಅಂಶಗಳಿಂದ ಗಮನ ಸೆಳೆದಿವೆ. ಅವುಗಳ ಕುರಿತು ನೋಡೋಣ.

    ಕರ್ನಾಟಕದಲ್ಲಿ ಮೂರು ಪ್ರಮುಖ ಪಕ್ಷಗಳಿದ್ದು, ಚುನಾವಣೆಯಲ್ಲಿ ತ್ರಿಕೋನ ಸಮರ ನಡೆಯುತ್ತಿತ್ತು. ಆದರೆ ಈ ಸಲ ಮೈತ್ರಿ ಪಕ್ಷಗಳು ಹಾಗೂ ಏಕ ಪಕ್ಷದ ನಡುವೆ ಕಾಳಗ ನಡೆಯಲಿದೆ. ಅದೂ ಕೂಡ ಎರಡನೇ ಸಲ. ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಿದ್ದರೆ, ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಅನ್ನು ಎದುರಿಸುತ್ತಿವೆ

    ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. 14 ಕ್ಷೇತ್ರಗಳ ಪೈಕಿ ಚಾಮರಾಜನಗರ, ಕೋಲಾರ ಮತ್ತು ಚಿತ್ರದುರ್ಗ ಮೀಸಲು ಕ್ಷೇತ್ರಗಳಾಗಿವೆ. ಉಳಿದ 11 ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌ ಮತ್ತು ಎನ್‌ಡಿಎ ಎರಡು ಕೂಡ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದ 6 ಕ್ಷೇತ್ರಗಳ ಪೈಕಿ ಇಬ್ಬರು ಒಕ್ಕಲಿಗರು ಸ್ಪರ್ಧಿಸಿದ್ದಾರೆ.

    20 ವರ್ಷಗಳ ಹಿಂದೆ ಕರ್ನಾಟಕದಿಂದ ಕೊನೆ ಬಾರಿ ಮುಸ್ಲಿಂ ಸಂಸದರೊಬ್ಬರು ಆಯ್ಕೆಯಾಗಿದ್ದರು. ಇದೀಗ 14 ಕ್ಷೇತ್ರಗಳ ಪೈಕಿ ಎನ್‌ಡಿಎ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ ಇರುವ ಏಕೈಕ ಮುಸ್ಲಿಂ ಅಭ್ಯರ್ಥಿ ಎಂದರೆ ಅದು ಮನ್ಸೂರ್‌ ಅಲಿ ಖಾನ್‌ ಮಾತ್ರ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಣಕ್ಕಿಳಿಸಿದೆ.

    ಈ ಬಾರಿ 15 ಹಾಲಿ ಸಂಸದರಿಗೆ ಬಿಜೆಪಿ ಕೊಕ್‌ ನೀಡಿದೆ. ಅದರಲ್ಲೂ ನಾಳೆ ಶುಕ್ರವಾರ ನಡೆಯುವ 14 ಲೋಕಸಭಾ ಕ್ಷೇತ್ರಗಳ ಪೈಕಿ ಎ ನಾರಾಯಣಸ್ವಾಮಿ (ಚಿತ್ರದುರ್ಗ), ಮಾಜಿ ಸಿಎಂ ಡಿವಿ ಸದಾನಂದ ಗೌಡ (ಬೆಂಗಳೂರು ಉತ್ತರ), ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (ದಕ್ಷಿಣ ಕನ್ನಡ), ಮುನಿಸ್ವಾಮಿ (ಕೋಲಾರ), ಪ್ರತಾಪ್‌ ಸಿಂಹ (ಮೈಸೂರು – ಕೊಡಗು), ಶ್ರೀನಿವಾಸ್‌ ಪ್ರಸಾದ್‌ (ಚಾಮರಾಜನಗರ), ಸುಮಲತಾ ಅಂಬರೀಶ್‌ (ಮಂಡ್ಯ), ಬಿಎನ್‌ ಬಚ್ಚೇಗೌಡ (ಚಿಕ್ಕಬಳ್ಳಾಪುರ), ಜಿಎಸ್‌ ಬಸವರಾಜ್‌ (ತುಮಕೂರು) ಅವರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

    ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅದಲ್ಲದೇ ಒಂದೇ ಕುಟುಂಬದ ಮೂರು ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಣದಲ್ಲಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ ಸಿಎನ್‌ ಮಂಜುನಾಥ್‌ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಮೂವರು ಕೂಡ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕುಟುಂಬದವರಾಗಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    ರಾಜ್ಯಪಾಲರಿಗೆ ತಿಂಗಳಿಗೆ ಎಷ್ಟು ಸಂಬಳ; ರಾಜಭವನ ಸೇರಿ ಸಿಗುವ ಸೌಲಭ್ಯಗಳೇನು?

    October 16, 2026

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    Comments are closed.

    Our Picks

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ

    October 17, 2026

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026

    ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೆಸರಿನಲ್ಲಿ ನಕಲಿ ಆ್ಯಪ್‌ ವೊಂದು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ…

    ದೃಷ್ಟಿ ದೋಷ ನಿವಾರಣೆಗೆ ಉಪ್ಪು, ಒಣ ಮೆಣಸಿನಕಾಯಿ ಬಳಕೆ! ಈ ಸಂಪ್ರದಾಯದ ಹಿಂದಿನ ನಂಬಿಕೆ ಏನು?

    October 18, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026

    ಆಕಾಶ ನೀಲಿಯಾಗಿ ಕಾಣುವುದೇಕೆ? ಆಕಾಶ ಕೆಂಪಾಗುವುದೇಕೆ?

    October 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.