ತುಮಕೂರು: ನೇಹಾ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಆರ್. ಅಶೋಕ್ ಮಾತನಾಡಿ, “ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂತಹ ವಿಚಾರವಾಗಿದ್ದು, ಇದರಲ್ಲಿ ಯಾರೂ ರಾಜಕೀಯ ಮಾಡೋಕೆ ಬಯಸೋದಿಲ್ಲ“ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ತಲೆ ಇದ್ದಿದ್ದಿದ್ರೆ ತಕ್ಷಣವೇ ಕ್ರಮ ತೆಗೆದುಕೊಳ್ತೀನಿ ಅಂತಾ ಹೇಳಬೇಕಿತ್ತು. ಪರಮೇಶ್ವರ್ ಅವರು ಹೇಳ್ತಾರೆ, “ಅವರು ಲವ್ ಮಾಡಿದ್ರು ಅಂತ. ನೀವಿರೋದು ತುಮಕೂರಿನಲ್ಲಿ, ಆ ಹುಡುಗಿ ಇರೋದು ಹುಬ್ಬಳ್ಳಿಯಲ್ಲಿ. ನೀವೇನಾದ್ರು ಅವರು ಪಾರ್ಕ್ ನಲ್ಲಿ ಕೂತಿರೋದನ್ನ ನೋಡಿದ್ರ” ಎಂದು ಟೀಕಿಸಿದರು.
“ಅಥವಾ ನಿಮ್ಮ ಪೊಲೀಸರೇನಾದ್ರೂ ಹೋಗಿ ವೀಡಿಯೋ ಮಾಡಿದ್ರಾ? ಮೊದಲು ತನಿಖೆ ಮಾಡ್ತೀವಿ ನಂತರ ಏನು ಅಂತಾ ಹೇಳ್ತಿವಿ ಅಂತಾ ಹೇಳಬೇಕಿತ್ತು. ನಾನು ಅವರಿಗಿಂತ ಮೊದಲು ಗೃಹ ಸಚಿವನಾಗಿದ್ದೆ. ಯಡಿಯೂರಪ್ಪ ಸರ್ಕಾರದಲ್ಲಿಯೇ ಗೃಹ ಸಚಿವನಾಗಿದ್ದರು. ಅದು ದೇಶದಲ್ಲಿಯೇ ಅತ್ಯಂತ ಶಿಸ್ತುಯುತವಾದ ಇಲಾಖೆ. ಮುಖ್ಯಮಂತ್ರಿಗಿಂತ ಹೆಚ್ಚು ಜವಾಬ್ದಾರಿ ಇರುತ್ತೆ” ಎಂದರು.
“ಅವರು ಇದು ಲವ್ ಕೇಸ್ ಅಂತಾ ಹೇಳ್ತಿದ್ದಾರೆ. ನಾವು ಅದನ್ನೇ ಹೇಳ್ತಿದ್ದೇವೆ ಇದು ಲವ್ ಕೇಸೇ. ಲವ್ ಜಿಹಾದ್ ಕೇಸ್ ಅಂತಾ ಹೇಳ್ತಿರೋದು. ಈ ಲವ್ ಜಿಹಾದ್ ಗೆ ಹೊರದೇಶಗಳಿಂದ ಫಂಡ್ ಬರ್ತಿದೆ” ಎಂದರು.
ಡಿ.ಕೆ. ಶಿವಕುಮಾರ್ ಅವರು ಹೇಳ್ತಾರೆ “ಅವನು ನಮ್ಮ ಬ್ರದರ್ ಅವ್ನು. ಇಂತಹವರೇ ಡಿಕೆಶಿಯವರ ಬ್ರದರ್ ಗಳು ಎಂದರು.
ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ 7 ಜನ ಗ್ಯಾಂಗ್ ರೇಪ್ ಮಾಡಿದ್ರು. ಆಗ ಯಾಕೆ ಹೋಗಿಲ್ಲ, ಯಾಕೆ ಕ್ರಮ ತಗೊಂಡಿಲ್ಲ ಎಂದರು.
ಅವನಿಗೆ ಗುಂಡಿಕ್ಕುತ್ತೇವೆ ಅಂದ್ರೆ ಮುಸ್ಲಿಂ ನೂರು ಓಟ್ ಹಾಕಲ್ಲ. ಗುಂಡು ಹಾಕಲ್ಲ ಅಂದ್ರೆ ಹಿಂದೂ ಗಳು ವೋಟ್ ಹಾಕಲ್ಲ. ಹೀಗಾಗಿ ಕಾಂಗ್ರೆಸ್, ಸಿದ್ದರಾಮಯ್ಯ ನವರ ತಲೆ ಕೆಟ್ಟೋಗಿದೆ ಎಂದರು.
ವೋಟ್ ಗೋಸ್ಕರ ದೇಶಕ್ಕೆ ಏನಾದರೂ ಆಗಲಿ. ಕಾಂಗ್ರೆಸ್ ನವರು ಕಾಂಪ್ರಮೈಸ್ ಆಗೋಕೆ ರೆಡಿ ಇದ್ದಾರೆ. ಮೊನ್ನೆ ಎಂಜಿ ರೋಡ್ ನಲ್ಲಿ ಸಿನೆಮಾ ನಟರು ಹೋದ್ರೆ ಏಯ್ ನೀನೇಕೆ ಕನ್ನಡ ಮಾತಾಡ್ತೀಯಾ ಅಂತಾ ಹಲ್ಲೆ ಮಾಡಿದ್ದಾರೆ ಎಂದರು. ಕರ್ನಾಟಕದಲ್ಲಿ ಕನ್ನಡ ಮಾತಾಡೋಕೆ ಅವಕಾಶ ಇಲ್ಲ. ಇದು ತಾಲಿಬಾನ್ ಸರ್ಕಾರ. ಇಲ್ಲಿ ಹಿಂದೂಗಳ ಜೀವಕ್ಕೆ ಬೆಲೆಯಿಲ್ಲ. ಹಿಂದೂ ಹೆಣ್ಣುಮಕ್ಕಳಿಗೆ ಗೌರವವಿಲ್ಲ, ರಕ್ಷಣೆಯಿಲ್ಲ ಎಂದರು.
ಇವತ್ತು ನಾವು ಕಾಂಗ್ರೆಸ್ ನವರು ಬಂದ್ರೆ ಡೇಂಜರ್ ಅಂತಾ ಜಾಹಿರಾತು ಕೊಟ್ಟಿದ್ದೀವಿ. ಸಿದ್ದರಾಮಯ್ಯ ಸರ್ಕಾರ ಬರ್ತಿದ್ದಂಗೆ ಬರಗಾಲ ಕೂಡ ಬಂತು. ಕಾಂಗ್ರೆಸ್ ನ ಚೊಂಬು ಇದ್ಯಲ್ಲ ಅದಕ್ಕೆ ಸ್ವಲ್ಪ ನೀರಾದ್ರೂ ಹಾಕಿ ಎಂದರು. ನಾಳೆ ಚಿಪ್ಪು ಜಾಹೀರಾತು ಕೊಡ್ತಾ ಇದ್ದೀವಿ ಕಾಂಗ್ರೆಸ್ ನವರಿಗೆ ಚಿಪ್ಪೇ. ಚಿಪ್ಪು ಎಂದು ಘೋಷಣೆ ಕೂಗಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296