Subscribe to Updates
Get the latest creative news from FooBar about art, design and business.
- ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
- ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ
- ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ
- ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!
- ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
- ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ
- ಕೆಎಸ್ ಆರ್ ಟಿಸಿ ಬಸ್ ದರ ಏರಿಕೆ ಖಚಿತ: ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್
Author: admin
ಕನ್ನಡದ ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವುದರಿಂದ, ಅಭಿನಯಿಸಿರುವ ಚಿತ್ರಗಳು ಮತ್ತು ಇರುವ ಜಾಹಿರಾತುಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು ನೀಡಿದೆ ಎನ್ನಲಾಗಿದೆ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಶಿವರಾಜ್ ಕುಮಾರ್ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೆರವಣಿಗೆ, ಘೋಷಣೆ ಮತ್ತು ಪಕ್ಷದ ಚಿಹ್ನೆಯುಳ್ಳ ಬಾವುಟ ಬಳಸಿದ್ದು ಅಪರಾಧ ಎಂದು ಉಲ್ಲೇಖಿಸಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಪತ್ನಿಯ ಚುನಾವಣಾ ಪ್ರಚಾರಕ್ಕೆ ನಟ ಶಿವರಾಜ್ ಕುಮಾರ್ ಕೂಡ ಸಾಥ್ ನೀಡಿದ್ದರು ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಟಾಟಾ ಗ್ರೂಪ್ ಒಡೆತನಕ್ಕೆ ಸೇರಿದ ಏರ್ ಇಂಡಿಯಾಗೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಮತ್ತೆ 80 ಲಕ್ಷ ರೂ. ದಂಡ ವಿಧಿಸಿದೆ. ವಿಮಾನದ ಕರ್ತವ್ಯದ ಸಮಯದ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ನಿಯಮಗಳ ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ. “ವರದಿಗಳು ಮತ್ತು ಪುರಾವೆಗಳ ವಿಶ್ಲೇಷಣೆಯ ವೇಳೆ ಏರ್ ಇಂಡಿಯಾದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರೂ ವಿಮಾನ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲವು ಸಂದರ್ಭಗಳಲ್ಲಿ ಹಾರಾಟ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇದು ಏರ್ ಕ್ರಾಫ್ಟ್ ರೂಲ್ಸ್ – 1937ರ ನಿಯಮ 28 ‘ಎ’ನ ಉಪ ನಿಯಮ (2)ರ ಉಲ್ಲಂಘನೆಯಾಗಿದೆ,” ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ. ”ವಿಮಾನಯಾನ ಸಂಸ್ಥೆ ಹಲವು ಬಾರಿ ಸಿಬ್ಬಂದಿಗೆ ಸಾಪ್ತಾಹಿಕ ವಿಶ್ರಾಂತಿ, ಸುದೀರ್ಘ ವ್ಯಾಪ್ತಿಯ ವಿಮಾನಯಾನಗಳ ಮೊದಲು ಮತ್ತು ನಂತರ ಸಾಕಷ್ಟು ವಿಶ್ರಾಂತಿ ನೀಡಿಲ್ಲ ಹಾಗೂ ಫ್ಲೈಟ್ ಸಿಬ್ಬಂದಿಗೆ ಲೇಓವರ್ ನಲ್ಲಿ ಬೇಕಾದಷ್ಟು ವಿರಾಮವನ್ನು ನೀಡಿಲ್ಲ ಎಂದು ಗೊತ್ತಾಗಿದೆ. ಇದು…
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಹೇಳುವುದು ಪ್ರಾಯೋಗಿಕವಾಗಿ ಸರಿಯಲ್ಲ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಹೇಳಿದ್ದಾರೆ. ಗುರುವಾರ(ಮಾ.21) ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಆಮ್ ಆದ್ಮಿ ಪಕ್ಷದ ಮುಖಂಡರು, ಕೇಜ್ರಿವಾಲ್ ಜೈಲಿನಿಂದಲೇ ತಮ್ಮ ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಈ ರೀತಿಯಾದ ಆಡಳಿತ ನಡೆಸಬಹುದೇ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಪಿ.ಡಿ.ಟಿ. ಆಚಾರಿ ಮಾತನಾಡಿ, ಆಮ್ ಆದ್ಮಿ ಪಕ್ಷವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದೆ. ಆಪ್ ಶಾಸಕಾಂಗ ಪಕ್ಷವು ಕೇಜ್ರಿವಾಲ್ ಅವರ ಮೇಲೆ ಯಾವುದೇ ಅವಿಶ್ವಾಸ ಮಂಡನೆಯ ಪ್ರಸ್ತಾಪ ದಾಖಲಿಸಿಲ್ಲ. ಯಾವುದೇ ನ್ಯಾಯಾಲಯವು ರಾಜೀನಾಮೆ ನೀಡುವಂತೆ ಆದೇಶಿಸಿಲ್ಲ. ಇದನ್ನೆಲ್ಲ ಗಮನಿಸಿದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿಲ್ಲ. ಆದರೆ, ಜೈಲಿನಿಂದಲೇ ಆಡಳಿತ…
ತುಮಕೂರು: ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು 5 ಜನರನ್ನು ಕೋರಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 12 ದಿನಗಳ ಹಿಂದೆ ದಕ್ಷಿಣ ಕನ್ನಡದ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ. ಕ್ರಾನ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ತುಮಕೂರಿಗೆ ತೆರಳಿದ್ದರು. ಈ ಮೂವರು ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ‘ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ’ ಎಂದು ಸುಳ್ಳು ಹೇಳಿ ಆರೋಪಿಗಳು ಈ ಮೂವರನ್ನು ಹಣ ದೋಚುವ ಪ್ಲಾನ್ ಮಾಡಿ ಕರೆಸಿಕೊಂಡು ನಂತರ…
ಗೃಹಿಣಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಲಿಂಗಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ. ಲಿಂಗಾಪುರ ಗ್ರಾಮದ ಪ್ರೇಮಕುಮಾರಿ(26) ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆಕೆಯ ತಂದೆ ರಾಜೇಂದ್ರ ಪುತ್ರಿಯ ಗಂಡ ಮತ್ತು ಅವರ ಮನೆಯವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2022 ಮಾರ್ಚ್ 6 ರಂದು 150 ಗ್ರಾಂ ಚಿನ್ನಾಭರಣ, 5 ಲಕ್ಷ ರೂ. ವರದಕ್ಷಿಣೆ ನೀಡಿ ರಾಘವೇಂದ್ರನಿಗೆ ಮಗಳನ್ನು ಮದುವೆ ಮಾಡಲಾಗಿತ್ತು. ಮದುವೆಯಾದ ಆರು ತಿಂಗಳ ನಂತರ, ಅಳಿಯ ಮತ್ತು ಮನೆಯವರು ನನ್ನ ಮಗಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು, ಪ್ರೇಮಕುಮಾರಿ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಕಿರುಕುಳ ತಾಳಲಾರದೆ ಮಗಳು ನಮ್ಮ ಮನೆಗೆ ಬಂದಿದ್ದಳು. ನ್ಯಾಯ ಪಂಚಾಯಿತಿ ಮಾಡಿದರೂ ಪತಿ ಮನೆಯವರು ಕರೆದುಕೊಂಡು ಹೋಗಲಿಲ್ಲ. ನಮ್ಮ…
ತುಮಕೂರು: ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ವೈರ್ ಮೈಮೇಲೆ ಬಿದ್ದ ಪರಿಣಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಬಾಯಿ ಜಾದವ್ (36) ಮೃತ ದುರ್ದೈವಿಯಾಗಿದ್ದಾರೆ. ಮೃತ ದುರ್ದೈವಿಯಾದ ಲಕ್ಷ್ಮೀ ಬಾಯಿ ಜಾದವ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದವರಾಗಿದ್ದಾರೆ. ಇತ್ತೀಚೆಗಷ್ಟೇ ಮೃತ ಲಕ್ಷ್ಮೀಬಾಯಿಗೆ ಮದುವೆ ನಿಶ್ಚಯವಾಗಿತ್ತು. ಇವರು ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದ ಲಕ್ಷ್ಮೀಬಾಯಿ, ಕೆಲಸ ಮುಗಿಸಿ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಜೊತೆ ಕುಣಿಗಲ್ ಗೆ ಬೈಕ್ ನಲ್ಲಿ ಲಕ್ಷ್ಮೀ ಬಾಯಿ ಬರುತ್ತಿದ್ದರು. ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್ ಗೆ, ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಕೇಬಲ್ ವೈರ್ ಬಿದ್ದಿದೆ. ಕೇಬಲ್ ವೈರ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್…
ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರ ಬಂಧನವಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನು ಶುಕ್ರವಾರ(ಮಾ.22) ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೋಲ್ ಆಗುತ್ತಾ ಸುದ್ದಿಯಲ್ಲಿ ಇರುತ್ತಿದ್ದ ಸೋನು ದಿಢೀರನೆ ಪೊಲೀಸರ ಅತಿಥಿಯಾಗಿದ್ದಾರೆ. ಅದಕ್ಕೆ ಕಾರಣ ಆಕೆಯ ಪ್ರಚಾರದ ಹುಚ್ಚು ಎನ್ನಲಾಗಿದೆ. ಸೋನು ಗೌಡ ಜನಪ್ರಿಯತೆಗಾಗಿ ಚಿತ್ರ ವಿಚಿತ್ರ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ಕ್ಯಾರೆ ಎನ್ನದೇ ಹಾಟ್ ಹಾಟ್ ಫೋಟೊ, ವೀಡಿಯೋ ತೇಲಿಬಿಡುತ್ತಿದ್ದರು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಇತ್ತೀಚೆಗೆ ಆಕೆ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಈ ಸಂಬಂಧ ಪೋಸ್ಟ್ ಕೂಡ ಮಾಡಿದ್ದರು. ಸಾಕಷ್ಟು ಜನ ಆಕೆಯ ನಡೆಗೆ ಮೆಚ್ಚುಗೆ ಸೂಚಿಸಿದ್ದರು. ಸೋನು ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿದ್ದಾರೆ ಎನ್ನುವ ಆರೋಪದಡಿ ಆಕೆಯನ್ನು ಬಂಧಿಸಲಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ. ಈ ಸಂಬಂಧ ಜೆ.ಜೆ. ಆ್ಯಕ್ಟ್ ಅಡಿ…
ಇಂದಿಗೂ ಎಲ್ಲವೂ ಮನುಷ್ಯರ ಕೈಯಲ್ಲಿಲ್ಲ. ಇದಕ್ಕೆ ಹಲವು ಉದಾಹರಣೆಗಳು ಇದೆ. ಅಂತಹ ಒಂದು ಪ್ರಕರಣ ಬ್ರೆಜಿಲ್‌ನಿಂದ ವರದಿಯಾಗಿದೆ. ಡೈಲಿ ಸ್ಟಾರ್ ವರದಿ ಪ್ರಕಾರ ಮಹಿಳೆಯೊಬ್ಬರು 56 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ವಿಚಿತ್ರ ಪ್ರಕರಣವೊಂದು ನಡೆದಿದೆ. ಕೊನೆಗೆ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಬೇಕಾಯಿತು. ಮುಂದೆ ಆಕೆ ತನ್ನ ಪ್ರಾಣವನ್ನು ಕಳೆದುಕೊಂಡಳ್ಳಬೇಕಾಯಿತು. 81ರ ಹರೆಯದ ಡೇನಿಯೆಲ್ಲಾ ವೀರಾ ಎಂಬಾಕೆಯೇ ಈ ಮಹಿಳೆ. 56 ವರ್ಷಗಳ ಕಾಲ ಮಹಿಳೆಯ ಹೊಟ್ಟೆಯಲ್ಲಿ ಒಂದು ಮಗು ಉಳಿದುಕೊಂಡಿತು ಮತ್ತು ಅದರ ಬಗ್ಗೆ ಅವಳಿಗೆ ತಿಳಿದಿರಲಿಲ್ಲ. ಬ್ರೆಜಿಲ್‌ನ ಪರಾಗ್ವೆ ಗಡಿ ದಾಟುತ್ತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆದರೆ ತಾನು ಮಗುವನ್ನು ಹೊತ್ತಿರುವ ವಿಷಯ ಆಕೆಗೆ ತಿಳಿದಿರಲಿಲ್ಲ. ವೈದ್ಯರ ಬಳಿ ಹೋದಾಗ ಆಕೆಯ ಹೊಟ್ಟೆಯಲ್ಲಿ ಕ್ಯಾಲ್ಸಿಫೈಡ್ ಭ್ರೂಣ (ಕಲ್ಲಿನ ಭ್ರೂಣ) ಇರುವುದು ಪತ್ತೆಯಾಗಿದೆ. 7 ಮಕ್ಕಳ ತಾಯಿ ಡೇನಿಯಲಾ ಅವರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಮಾರ್ಚ್ 14 ರಂದು, ವೈದ್ಯರು ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದರು,…
ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಐದು ಗ್ಯಾರಂಟಿ ಯೋಜನೆಗಳು ಬೆಳಗಾವಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಮತ್ತು ಮಹಿಳೆಯರ ಬದುಕಿನ ಸಂಕಟವನ್ನು ಕಡಿಮೆ ಮಾಡಿವೆ. ಇದಕ್ಕಾಗಿ ಯುವತಿಯರು ಮತ್ತು ಮಹಿಳೆಯರು ಶೇ.80 ರಷ್ಟು ನಮ್ಮ ಪರವಾಗಿ ಇದ್ದಾರೆ ಎನ್ನುವ ಸಕಾರಾತ್ಮಕ ವರದಿ ಸಮೀಕ್ಷೆಗಳಿಂದ ಹೊರ ಬಂದಿವೆ. ನಾವು ಜನರ ಮನೆ ಬಾಗಿಲಿಗೆ ಹೋಗಿ ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ 5-6 ಸಾವಿರ ರೂಪಾಯಿ ಕೊಡುತ್ತಿರುವ ಮತ್ತು ವರ್ಷಕ್ಕೆ 50-60 ಸಾವಿರ ಪ್ರತಿ ಕುಟುಂಬದ ಖಾತೆಗೆ ಜಮೆ ಆಗುತ್ತಿರುವುದನ್ನು ಮನವರಿಕೆ ಮಾಡಿಸಿ, ಜನರ ನಡುವೆ ಗಟ್ಟಿಯಾಗಿ ನಿಂತು ಗೆದ್ದು ಬನ್ನಿ ಎಂದು ಸಿಎಂ ಕರೆ ನೀಡಿದರು. ಮುಖ್ಯಮಂತ್ರಿಗಳ ಭರವಸೆಯ ಮಾತುಗಳಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬೆಳಗಾವಿಯಲ್ಲಿ ನಾವು ಎಲ್ಲರೂ ಒಟ್ಟಾಗಿ ಅಖಾಡಕ್ಕೆ ಇಳಿದಿದ್ದೇವೆ. ಎರಡೂ ಕ್ಷೇತ್ರದಲ್ಲೂ ಗೆದ್ದು ಬಂದು…
ವಿಪಕ್ಷಗಳ ನಾಯಕರ ಬ್ಯಾಂಕ್ ಖಾತೆ ಸೀಜ್ ವಿಚಾರ ಸಂಬಂಧ, ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ, ವಿಪಕ್ಷಗಳ ವಿರುದ್ದ ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದರು. ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸರ್ಕಾರ, ವಿರೋಧ ಪಕ್ಷಗಳ ವಿರುದ್ಧ ಖಾತೆ ಮುಟ್ಟುಗೋಲು, ಮುಖ್ಯಮಂತ್ರಿಗಳ ಬಂಧನ ಹೀಗೆ ಷಡ್ಯಂತ್ರ ಮಾಡುತ್ತಿದೆ. ಈ ಬಾರಿ ಲೋಕಸಭೆ ಚುನಾವಣೆ ಸಮಯದಲ್ಲೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೆ. ಆದರೆ, ಎಐಸಿಸಿ ನಾಯಕರು ಬೇಡ ಎಂದರು. ಈಗ ಎಐಸಿಸಿ ಖಾತೆಯಲ್ಲಿನ 290 ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮೂಲಕ ಮುಟ್ಟುಗೋಲು ಹಾಕಿಸಿದ್ದಾರೆ. ನಮ್ಮದು ವ್ಯವಹಾರಿಕ ಸಂಸ್ಥೆಯಲ್ಲ. ನಾವು ಜನರ ದೇಣಿಗೆ ಮಾತ್ರ ಸಿಗುತ್ತಿದೆ. ನಮಗೆ ಚುನಾವಣಾ ಬಾಂಡ್ ಮೂಲಕ ನಮಗೆ ಸಿಕ್ಕಿರೋದು ಕೇವಲ 11% ಮಾತ್ರ. ಆದರೆ ಬಿಜೆಪಿ ಅವರಿಗೆ 57% ಸಿಕ್ಕಿದೆ. ಇಂದು ಪತ್ರಿಕೆಗಳಲ್ಲಿ ಯಾರು ಯಾರಿಗೆ ಎಷ್ಟು ದೇಣಿಗೆ ನೀಡಿದ್ದಾರೆ…