Author: admin

ನನಗೆ ಟಿಕೆಟ್ ನೀಡಿದ್ದಾರೆ, ಆದರೆ ರಾಜಕೀಯ ಪ್ರವೇಶ ಮಾಡಬೇಕೋ, ಬೇಡವೋ ಅನ್ನೋ ಗೊಂದಲವಿದೆ. ನಿಮ್ಮ ಅಭಿಪ್ರಾಯವೇನು..?” ಎಂದು ನಟಿ ಊರ್ವಶಿ ರೌಟೇಲಾ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಕೆಲ ಸಿನಿಮಾ ತಾರೆಯರಿಗೆ ಟಿಕೆಟ್ ನೀಡಲಾಗಿದೆ. ಇದರ ನಡುವೆ ಸದ್ದಿಲ್ಲದೆ ಊರ್ವಶಿ ರೌಟೇಲಾ ಚುನಾವಣಾ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಲಾಗಿದೆ. ಈ ಮಾಹಿತಿಯನ್ನು ಖುದ್ದು ಊರ್ವಶಿ ಬಹಿರಂಗಪಡಿಸಿದ್ದು, ಲೋಕಸಭಾ ಚುನಾವಣಾ ಕಾವು ಏರುತ್ತಿದ್ದಂತೆ ಮಾಧ್ಯಮಗಳಿಗೆ ಸಿಕ್ಕ ಊರ್ವಶಿಗೆ ಚುನಾವಣೆ ಆಸಕ್ತಿ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ರೌಟೇಲಾ, ನನಗೆ ಈಗಾಗಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ಎಂದಿದ್ದಾರೆ. ಟಿಕೆಟ್ ಸಿಕ್ಕಿದೆ. ಆದರೆ ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೋ, ಬೇಡವೇ? ಅನ್ನೋದು ನಿರ್ಧರಿಸಿಲ್ಲ. ಈ ಕುರಿತು ನನಗೆ ಕೆಲ ಗೊಂದಲಗಳಿವೆ ಎಂದು ರೌಟೇಲಾ ಹೇಳಿದ್ದಾರೆ. ಊರ್ವಶಿಗೆ ಟಿಕೆಟ್ ನೀಡಿದ ಪಕ್ಷ ಯಾವುದು? ಯಾವ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಅನ್ನೋ…

Read More

ತುಮಕೂರು: ರಾಜ್ಯದಲ್ಲಿ ಇವತ್ತು ನಮ್ಮ ಸರ್ಕಾರ ಇದೆ. ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಅಂದ್ರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ. ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀ‌ನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಪರ ಪ್ರಚಾರದ ಭಾಷಣದ ವೇಳೆ ಮಾತನಾಡಿದ ಅವರು, ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯನನ್ನು ಉಳಿಸುವ ಕೆಲಸ ನಾವೆಲ್ಲ ಮಾಡಬೇಕು. ಎಲ್ಲಾ ಕಾರ್ಯಕರ್ತರು ಸಿದ್ದರಾಮಯ್ಯ ನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗದ ಮಾಸ್ ಲೀಡರ್. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರಂಟಿಗಳ ಯಶಸ್ವಿಯಾಗಿ ಜಾರಿ ಮಾಡಿದ್ದಾರೆ. ಒಂದು ವೇಳೆ ಸರ್ಕಾರದ ಪರವಾಗಿ ಜನಮತ ಬರಲಿಲ್ಲ ಎಂದರೆ ಸಿಎಂ ಬದಲಾವಣೆ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ ಸಿಎಂ ಬದಲಾವಣೆಯ ಆತಂಕ ಸೃಷ್ಟಿಸಿ ಅಹಿಂದ…

Read More

ಕೊರಟಗೆರೆ: ಇಂದಿರಾಗಾಂಧಿಯ ಸ್ವಂತ ಜಿಲ್ಲೆ ಶಿವಮೊಗ್ಗನಾ. ಸೋನಿಯಾ ಗಾಂಧಿಯ ತವರೂರು ಬಳ್ಳಾರಿನಾ.ರಾಹುಲ್ ಗಾಂಧಿಯ ಊರು ಯಾವುದು ಹೇಳಿ. ಸಿಎಂ ಸ್ಟೀಪನ್ ಗುಲ್ಬರ್ಗಾದವ್ರಾ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೇ ಅನ್ನೋದು ಎಲ್ಲರಿಗೂ ತಿಳಿಸಿದೆ ಅಲ್ವಾ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಟಾಂಗ್ ನೀಡಿದರು. ಕೊರಟಗೆರೆ ಪಟ್ಟಣದ ಪಂಚಾಜನ್ಯ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ನಾನು 50ವರ್ಷದಿಂದ ತುಮಕೂರು ಜಿಲ್ಲೆಯಲ್ಲೇ ಇದ್ದವನು. ಯಾರೋ ಏನೋ ಆರೋಪ ಮಾಡ್ತಾರೇ ಅಂತಾ ನಾನು ಸ್ಪಷ್ಟನೇ ನೀಡೋದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಲ್ಲ ಅದು ಕೇವಲ ವಿರೋಧ ಪಕ್ಷದವರ ಆರೋಪವಷ್ಟೆ. ಕರ್ನಾಟಕದ 28ಕ್ಷೇತ್ರದಲ್ಲಿಯು ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ದೆಹಲಿ ಸಿಎಂ ಆದ್ರು ಅಷ್ಟೆ ಸಾಮಾನ್ಯ ಮನುಷ್ಯ ಆದ್ರು ಅಷ್ಟೇ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು. ಬಿಜೆಪಿ ಪಕ್ಷದ…

Read More

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಠೇವಣಿ ಇಡಲು ಉದ್ದೇಶಿಸಿದ್ದ, ದೇಶೀಯ ನಿರ್ಮಿತ ಪಿಸ್ತೂಲು ತಪಾಸಣೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಗುಂಡು ಹಾರಿದ್ದು, ಗುಂಡು ಠಾಣಾ ಬರಹಗಾರನ ಕಾಲಿಗೆ ಹೊಕ್ಕಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಮುಕುಂದ ರೆಡ್ಡಿ ಬಂದೂಕು ಹಸ್ತಾಂತರಿಸಲು ಆಗಮಿಸಿದ್ದರು. ಕಾನ್ಸ್ಟೇಬಲ್ ವೆಂಕಣ್ಣ ಅವರು ತಪಾಸಣೆಯನ್ನು ಪ್ರಾರಂಭಿಸಿದ್ದು, ದುರದೃಷ್ಟವಶಾತ್, ಪರೀಕ್ಷೆಯ ಸಮಯದಲ್ಲಿ, ಪಿಸ್ತೂಲ್ ನಿಂದು ಅನಿರೀಕ್ಷಿತವಾಗಿ ಗುಂಡು ಹೊರಬಂದಿದ್ದು ವೆಂಕಣ್ಣನ ಎದುರು ಕುಳಿತಿದ್ದ ಸ್ಟೇಷನ್ ಬರಹಗಾರ ಅಂಬುದಾಸ್ನ ಎಡ ಕಾಲಿಗೆ ಬಡಿಯಿತು. ಗುಂಡೇಟಿನಿಂದ ಅಂಬುದಾಸ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಂದೂಕಿನ ಸಂಪೂರ್ಣ ಪರೀಕ್ಷೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದುರದೃಷ್ಟಕರ ಘಟನೆಗೆ ಕಾರಣರಾದ ಕಾನ್ಸ್ಟೆಬಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಬೆಂಗಳೂರು: ಈ ಬಾರಿ ಬೆಳಗಾವಿಯಲ್ಲಿ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದು ನಮ್ಮ ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ. ಹಾಗಾಗಿ ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ವಶಕ್ಕೆ ಬರಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಬಳಗದೊಂದಿಗೆ ಅವರು ಮಾತನಾಡಿದರು. ಲೋಕಸಭೆಯ ಚುನಾವಣೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ ಡಿ.ಕೆ. ಶಿವಕುಮಾರ, ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ನಾವು ಅತ್ಯಧಿಕ ಸ್ಥಾನ ಗೆದ್ದಿದ್ದೇವೆ. ಅದೇ ಒಗ್ಗಟ್ಟು ಮತ್ತು ಪರಿಶ್ರಮ ಹಾಕಿ ಮೂರೂ ಕ್ಷೇತ್ರಗಳನ್ನು ಗೆಲ್ಲಿಸಬೇಕು. ನಮ್ಮಿಂದ ಯಾವುದೇ ಸಹಕಾರ ಬೇಕೆದ್ದರೂ ನೀಡಲು ಸಿದ್ಧರಿದ್ದೇವೆ. ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿ ಎಂದು ಸಲಹೆ ನೀಡಿದರು. ಪ್ರತಿಬಾರಿ ಒಂದೊಂದು ಅಲೆಯನ್ನೇ ನಂಬಿಕೊಳ್ಳುವ ಬಿಜೆಪಿಗೆ ಈ ಬಾರಿ ಯಾವ ಅಲೆಯೂ ಇಲ್ಲ. ಈಗ ಏನಿದ್ದರೂ ಕಾಂಗ್ರೆಸ್ ಅಲೆ. ಗ್ಯಾರಂಟಿಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿರುವ ಕಾಂಗ್ರೆಸ್…

Read More

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದರೆ, ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಿಸಿದೆ. ಈ ಬೆನ್ನಲ್ಲೇ ಇದೀಗ ವಿಧಾನಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಕೂಡ ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೂನ್‌ ತಿಂಗಳಲ್ಲಿ ಅವರ ವಿಧಾನಪರಿಷತ್‌ ಸದಸ್ಯ ಸ್ಥಾನದ ಅವಧಿಯೂ ಮುಕ್ತಾಯಗೊಳ್ಳುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು, ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ಅವರು ಎರಡೂ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶಿಸಿದ್ದ ತೇಜಸ್ವಿನಿ, ಕನಕಪುರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಸೋಲಿಸಿ ಮುನ್ನೆಲೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌ ಅವರನ್ನೇ ರಾಜಕೀಯ ಗುರುಗಳೆಂದಿದ್ದ ತೇಜಸ್ವಿನಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಾಗ ಡಿಕೆಶಿ ಸಹೋದರರ ವಿರುದ್ಧ ಕಟು ಶಬ್ದ ಬಳಸಿದ್ದರು. ಈಗ ಮತ್ತೆ…

Read More

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೂಡಾ ಪ್ರಶ್ನಿಸುತ್ತಿದೆ. ಈ ನಡುವೆ ಮುಖ್ಯಮಂತ್ರಿಯನ್ನು, ಪ್ರಧಾನಮಂತ್ರಿಯನ್ನು ಮತ್ತು ರಾಷ್ಟ್ರಪತಿಯನ್ನು ಬಂಧಿಸಬಹುದಾ ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಅದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ. ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯನ್ನು ಕೂಡ ಅವರ ಪದವಿಯಲ್ಲಿರುವಾಗಲೇ ಬಂಧಿಸಬಹುದು. ಕಾನೂನಿನ ದೃಷ್ಟಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಾಮಾನ್ಯ ವ್ಯಕ್ತಿ. ಅರೆಸ್ಟ್ ಮಾಡುವ ಕ್ರಮವನ್ನು ತಡೆಯಲು ಯಾವುದೇ ನಿಯಮಗಳಿಲ್ಲದ ಕಾರಣ ಅವರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಿದರೆ ಪ್ರಧಾನಿಯನ್ನು ಕೂಡಾ ಬಂಧಿಸಬಹುದು. ಆದರೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಇದೆ ದೊಡ್ಡ ವಿನಾಯಿತಿ: ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ (ಗಣರಾಜ್ಯದ ಅಧ್ಯಕ್ಷರು ಮತ್ತು ಗವರ್ನರ್ ಗಳು) ತಮ್ಮ ಅಧಿಕಾರದ ಅವಧಿ ಮುಗಿಯುವವರೆಗೆ, ಅಥವಾ ತಾವು ಅಧಿಕಾರದಲ್ಲಿ ಇರುವ ತನಕ ಅವರಿಬ್ಬರನ್ನು…

Read More

‘ಆಪರೇಷನ್ ಕಮಲ’ ಮತ್ತೆ ಸುದ್ದಿ ಮಾಡಿದೆ. ಅದರ ಭಾಗವಾಗಿ ಇದೀಗ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ನೀಡಲು ಬಿಜೆಪಿ ಪಕ್ಷವು ತಲಾ 50 ಕೋಟಿ ರೂಪಾಯಿಗಳ ಆಮಿಷ ಒಡ್ಡುತ್ತಿದೆ, ಅಲ್ಲದೆ ಅವರು ರಾಜೀನಾಮೆ ನೀಡಿ, ನಂತರ ನಡೆಯೋ ಉಪಚುನಾವಣೆಯಲ್ಲೂ ಕೂಡಾ ಹಣ ನೀಡುವುದಾಗಿ ಭರವಸೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪವನ್ನು ಮಾಡಿದ್ದಾರೆ. ನಿನ್ನೆ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ “ಆಪರೇಷನ್ ಕಮಲ” ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನ ಇವತ್ತೂ ಕೂಡಾ ನಡೆಯುತ್ತಿದೆ. ಈಗ ಶಾಸಕರಿಗೆ ಐವತ್ತು ಕೋಟಿ ಆಫರ್ ನೀಡುತ್ತಿದ್ದಾರೆ. ನೀವು ರಾಜೀನಾಮೆ ಕೊಡಿ, ನಿಮ್ಮ ಚುನಾವಣಾ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಅವರು ಕೊಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ನವರು ಗುರುತರವಾದ ಆರೋಪವನ್ನು ಮಾಡಿದ್ದಾರೆ. ಈ ಎಲ್ಲಾ ಹಣ ಎಲ್ಲಿಂದ ಬರುತ್ತದೆ? ಇದು ಕಪ್ಪು ಹಣ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಎಲ್ಲೆಲ್ಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ,…

Read More

ತುಮಕೂರು: ಮಾಜಿ ಸಂಸದ ಮೂಡಲಗಿರಿಯಪ್ಪ ಇಂದು ವಯಸ್ಸಾಹಜ ಕಾಯಿಲೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 85 ವರ್ಷ ವಯಸ್ಸಿನ ಮೂಡಲಗಿರಿಯಪ್ಪ ಅವರಿಗೆ ಕಳೆದ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಒಂದು ಗಂಟೆಗೆ ಮೃತಪಟ್ಟಿದ್ದಾರೆ. ಮೂಡಲಗಿರಿಯಪ್ಪ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಒಮ್ಮೆ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ಚುನಾಯಿತರಾಗಿದ್ದರು. ಇಂದು ಸಂಜೆ ವೇಳೆಗೆ ಅವರ ಪಾರ್ಥಿವ ಶರೀರವನ್ನು ತುಮಕೂರು ನಗರದ ಕುಂಚಿಟಿಗರ ಸಂಘದ ಸಭಾಭವನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ನಾಳೆ ಶಿರಾ ತಾಲೂಕಿನ ಚಿರತನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಇನ್ಮುಂದೆ ದೇವಸ್ಥಾನಗಳಿಗೆ ಹೆಂಗೆಂಗೋ, ಯಾವುದೋ ಡ್ರೆಸ್‌ ನಲ್ಲಿಹೋದ್ರೆ ಒಳಕ್ಕೆ ಪ್ರವೇಶಿಸೋಕೆ ಬಿಡಲ್ಲ, ಹೌದು, ರಾಜಧಾನಿಯ ಹಲವು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಶುರುಮಾಡಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಹಲವು ಕಡೆಗಳಲ್ಲಿ ಬಿಗಿ ಮಾಡಲಾಗಿದೆ. ರಾಜ್ಯದ ಕೆಲವು ದೇವಸ್ಥಾನಗಳ ಎದುರು ಭಾಗದಲ್ಲಿ ಈ ಬಗ್ಗೆ ಫಲಕ ಅಳವಡಿಸಿದ್ದರೂ ಕೆಲವರು ಕ್ಯಾರೇ ಅನ್ನುತ್ತಿರಲಿಲ್ಲ. ಇದೀಗ ಬೆಂಗಳೂರಿನ ಹಲವು ದೇವಸ್ಥಾನಗಳ ಮುಂದೆ ಈ ಕುರಿತು ಬೋರ್ಡ್ ಅಳವಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸೀರೆ, ಚೂಡಿದಾರ್‌ ಬಿಟ್ರೆ ಮಹಿಳೆಯರಿಗೆ ಬೇರೆ ಡ್ರೆಸ್‌ ಹಾಕಿಕೊಂಡು ಬಂದ್ರೆ ಒಳ ಪ್ರವೇಶವಿಲ್ಲ ಅನ್ನೋ ಬೋರ್ಡ್‌ಗಳನ್ನು ಕೆಲ ಪ್ರಸಿದ್ಧ ದೇವಸ್ಥಾನಗಳ ಮುಂದೆ ನೀವು ನೋಡಿರಬಹುದು. ಇದೀಗ ಸದ್ಯ ಸಾಂಪ್ರದಾಯಿಕ ಹಾಗೂ ಸಭ್ಯ ಉಡುಪು ಧರಿಸಿ ಬಂದವರಿಗೆ ಮಾತ್ರ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುತ್ತದೆ. ಶಾರ್ಟ್ಸ್, ಟೀ ಶರ್ಟ್, ನೈಟ್ ಪ್ಯಾಂಟ್ ಧರಿಸಿ ಬಂದವರಿಗೆ ಪ್ರದೇಶವಿಲ್ಲ ಎಂದು ಸೂಚಿಸುವ ಫಲಕಗಳನ್ನು ಬೆಂಗಳೂರಿನ ಕೆಲ ದೇವಸ್ಥಾನಗಳ ಎದುರಲ್ಲಿ ಬೋರ್ಡ್‌ ಅಳವಡಿಸಲಾಗಿದೆ. ಇತ್ತೀಚೆಗೆ, ದೇವಾಲಯದ ಒಳಗೆ ವಸ್ತ್ರ ಸಂಹಿತೆ ಪಾಲಿಸುವಂತೆ, ವಿದೇಶಿ…

Read More