Author: admin

ಬೆಂಗಳೂರು:  ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ರಜತ್ ಕಿಶನ್ ಅವರನ್ನು ಕೊಲೆ ಮಾಡುವುದಾಗಿ ಪತ್ನಿ ಅಕ್ಷಿತಾಗೆ ಕೊಲೆ ಬೆದರಿಕೆ ಸಂದೇಶ ಬಂದ ಹಿನ್ನೆಲೆ ರಜತ್ ಡಿಜಿಐಜಿಪಿಗೆ ದೂರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದ ವೇಳೆ ರಜತ್ ಕಿಶನ್ ಸ್ಥಳದಲ್ಲಿದ್ದರು. ಈ ಹಿನ್ನೆಲೆ ರಜತ್ ಪತ್ನಿ ಅಕ್ಷಿತಾಗೆ ಕೆಲವು ಕಿಡಿಗೇಡಿಗಳು ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆನ್ನಲಾಗಿದೆ. ಈ ಸಂಬಂಧ  ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಜತ್, ನನ್ನ ಪತ್ನಿ ಅಕ್ಷಿತಾಗೆ, ಕೊಲೆ ಮಾಡ್ತೀವಿ ಅಂಥ ಬೆದರಿಕೆ ಸಂದೇಶ ಬಂದಿತ್ತು. ಇದು ಬಹಳ ಕೆಟ್ಟದ್ದು. ನಾವು ಯಾವುದೇ ಜಾತಿ, ಧರ್ಮ ಜಾಗ ದೇವಸ್ಥಾನ ಬಗ್ಗೆ ಮಾತಾಡಿಲ್ಲ. ನಾವು ಹೋಗಿದ್ದು ಸೌಜನ್ಯ ಪರ ನ್ಯಾಯಕ್ಕಾಗಿ. ಕತ್ತರಿಸ್ತೀನಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಹಾಡಹಗಲೇ ನಮ್ಮ ಕಣ್ಣಮುಂದೆನೇ ಎಲ್ಲ ನಡೆದಿದ್ದು. ಹಲ್ಲೆ ಮಾಡಿದವರ ಮೇಲೆ ದೂರು ಕೊಟ್ಟಿದ್ದೇನೆ. ನನ್ನ ಪತ್ನಿಗೆ ಬೆದರಿಕೆ ಸಂದೇಶ ಹಾಕಿದವರ ವಿರುದ್ಧವೂ ದೂರು ಕೊಟ್ಟಿದ್ದೇವೆ. ನಾವು ಕೊಟ್ಟ…

Read More

ಹಾಸನ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಹೂ ಕೀಳಲು ಹೋದ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಬೆಳಮೆ ಗ್ರಾಮದಲ್ಲಿ ನಡೆದಿದೆ. ರಾಮೇಶ್ವರ ಗ್ರಾಮದಲ್ಲಿ ವಾಸವಿದ್ದ ಬಿಕ್ಕೋಡು ಗ್ರಾಮದ ದೇವರಾಜ್ (38) ಮೃತಪಟ್ಟವರಾಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ದೇವರಾಜ್ ಅಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ. ಸತತ ಮೂರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹ ಮೇಲೆತ್ತಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಇತ್ತೀಚೆಗಿನ ದಿನಗಳಲ್ಲಿ ಜನರು ತಮ್ಮ ದೈನಂದಿನ ಒತ್ತಡದ ಬದುಕಿನಲ್ಲಿ ಬ್ರೆಡ್ ಜಾಮ್ ನಂತಹ ಅತ್ಯಂತ ಸುಲಭದ ಆಹಾರಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಇದು ಜನರಲ್ಲಿ ನಾನಾ ರೀತಿಯ ರೋಗಗಳಿಗೆ ಅಪೌಷ್ಠಿಕತೆಗೆ ಕಾರಣವಾಗುತ್ತಿದೆ. ತರಕಾರಿಗಳು, ಕಾಳುಗಳನ್ನು ಜನ ಮರೆಯುತ್ತಿರುವುದರಿಂದಾಗಿ ಸಣ್ಣ ವಯಸ್ಸಿನಲ್ಲೇ ವೃದ್ಧರಿಗೆ ಬರುವಂತಹ ಕಾಯಿಲೆಗಳಿಗೆ ತುತ್ತಾಗುವಂತಹ ಸನ್ನಿವೇಶಗಳು ನಮ್ಮ ಸುತ್ತಮುತ್ತ ನೋಡಬಹುದಾಗಿದೆ. ಹಿಂದಿನ ಕಾಲದಲ್ಲಿ ನನೆಸಿಟ್ಟ ಕಾಳುಗಳನ್ನು ಸೇವನೆ ಮಾಡುವಂತಹ ಹವ್ಯಾಸ ಹೊಂದಿದ್ದ ಜನರು ಹೆಚ್ಚು ಕಾಲದ ವರೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಜನರು ಚಳಿಗಾಲ ಬರುತ್ತಿದ್ದಂತೆಯೇ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.  ಅಂತಹ ಸಮಸ್ಯೆಗಳಿಗೆ ನನೆಸಿಟ್ಟ ಹೆಸರು ಕಾಳುಗಳು ಉತ್ತಮವಾಗಿದೆ. ನೆನೆಸಿಟ್ಟ ಕಾಳುಗಳು ನಮ್ಮ ದೇಹಕ್ಕೆ ಹೆಚ್ಚಿನ ರೋಗ ನಿರೋಧಕ ಸಾಮರ್ಥ್ಯವನ್ನು ನೀಡುತ್ತದೆ. ಮೊಳಕೆ ಕಟ್ಟಿದ ಹೆಸರುಕಾಳನ್ನು ಸಲಾಡ್‌ ಗಳಲ್ಲಿ ಬೆರೆಸಿ ಬಳಸಬಹುದು. ಮೊಳಕೆಯೊಡೆದ ಹೆಸರುಕಾಳು ದೇಹದಲ್ಲಿರುವ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಮೊಳಕೆಯೊಡೆದ ಹೆಸರುಕಾಳು ಸೇವಿಸಿದರೆ ದೇಹದಲ್ಲಿನ…

Read More

ಚಿಕ್ಕಮಗಳೂರು:   ಭದ್ರಾ ಅಭಯಾರಣ್ಯದ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾದಾಟದಲ್ಲಿ ಹುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಲಕ್ಕವಳ್ಳಿ ವಲಯದ ಕೂಟ್ ರಸ್ತೆಯಲ್ಲಿ ಹುಲಿಯ ಮೃತದೇಹ ಪತ್ತೆ‌ಯಾಗಿದೆ. ಅರಣ್ಯ ಸಿಬ್ಬಂದಿ  ಗಸ್ತು ತಿರುಗುತ್ತಿದ್ದ ವೇಳೆ  ಹುಲಿಯ ಕಳೆಬರಹ ಕಂಡು ಬಂದಿದೆ. 7 ವರ್ಷ ಪ್ರಾಯದ ಹೆಣ್ಣು ಹುಲಿ ಮೃತಪಟ್ಟಿದೆ. ಎರಡು ಹುಲಿಗಳ ಮಧ್ಯೆ ಕಾದಾಟದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟಿರುವ ಹುಲಿಯ ದೇಹದ ಮೇಲೆ ಕಾದಾಟ ನಡೆಸಿರುವ ಗಾಯದ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ರಕ್ತ ಮಾದರಿ, ದೇಹದ ಕೆಲ ಭಾಗ ಪ್ರಯೋಗಲಕ್ಕೆ ರವಾನೆ ಮಾಡಲಾಗಿದೆ.  ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯಿಂದ ಕೆ.ಎನ್‌. ರಾಜಣ್ಣ ಹೆಸರು ಕೈಬಿಡಲಾಗಿದೆ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸುತ್ತಾರೆ. ಬಳ್ಳಾರಿ ಉಸ್ತುವಾರಿಯಾಗಿದ್ದ ಸಚಿವ ನಾಗೇಂದ್ರ ಅವರ ಅನುಪಸ್ಥಿತಿಯಲ್ಲಿ ಈ ಬಾರಿ ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡುತ್ತಾರೆ ಎಂಬ ಪಟ್ಟಿಯನ್ನು ಒಳಗೊಂಡ ಆದೇಶವನ್ನು ಎರಡು ವಾರದ ಹಿಂದೆ ರಾಜ್ಯ ಸರ್ಕಾರ ಪ್ರಕಟ ಮಾಡಿತ್ತು. ಅದರಲ್ಲಿ ರಾಜಣ್ಣ ಅವರರಿಗೆ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ್ದರಿಂದ ಆ ಜಿಲ್ಲೆಯ ಕಾರ್ಯಕ್ರಮದ ಧ್ವಜಾರೋಹಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ಗುರುವಾರ ಹೊಸ ಆದೇಶ ಹೊರಬಿದ್ದಿದ್ದು, ರಾಜಣ್ಣ ಹೆಸರು ಕೈಬಿಡಲಾಗಿದೆ.  ಸೋಮವಾರ ಪ್ರಕಟವಾದ ಆದೇಶದ ಪ್ರಕಾರ, ಹಾಸನದಲ್ಲಿ ಕೃಷ್ಣಬೈರೇಗೌಡ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿಯಲ್ಲಿ ಸಚಿವ ರಹೀಂ ಖಾನ್‌ ಧ್ವಜಾರೋಹಣ ಮಾಡಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಬೀಜಿಂಗ್‌:  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ವಿಧಿಸಿರುವ ಪ್ರತಿಸುಂಕ ಸಂಬಂಧ ಚೀನಾ ದೇಶ ಅಚ್ಚರಿಯ ಪ್ರತಿಕ್ರಿಯೆಯನ್ನು ನೀಡಿದೆ. ಭಾರತದ ಸರಕುಗಳ ಮೇಲೆ ಶೇ. 25+25 = 50 ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿರುವ ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿಯಾಗಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್‌ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್‌ ಸುಂಕ ನೀತಿಗೆ ಪ್ರತಿಕ್ರಿಯೆ ನೀಡಿರುವ ಫೀಹಾಂಗ್‌, ಬೆದರಿಕೆ ಹಾಕುವವರಿಗೆ ಮುಟ್ಟಿ ಕೊಳ್ಳುವಂತೆ ತಿರುಗೇಟು ನೀಡಿದರೆ ಒಂದು ಮೈಲಿ ದೂರ ಓಡಿ ಹೋಗಿ ನಿಲ್ಲುತ್ತಾರೆ. ಇಂಥ ಪುಂಡ ನೀತಿಗಳನ್ನು ಧೈರ್ಯವಾಗಿ ಎದುರಿಸಿದರೆ ತೆಪ್ಪಗಾಗುತ್ತಾರೆ, ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಟ್ರಂಪ್‌ ಪ್ರತಿಸುಂಕ ಕ್ರಮಗಳು ವಿಶ್ವ ವ್ಯಾಪಾರ ಒಕ್ಕೂಟವನ್ನು ದುರ್ಬಲಗೊಳಿಸಲಿವೆ. ವಿಶ್ವಸಂಸ್ಥೆಯ ನಿಮಯಗಳಿಗೆ ವಿರುದ್ಧವಾಗಿದೆ ಎಂದು ಫೀಹಾಂಗ್‌ ಹೇಳಿದ್ದಾರೆ. ಟ್ರಂಪ್‌ ಸುಂಕ ಬೆದರಿಕೆ ನಡುವೆ ಭಾರತ–ಚೀನಾ ಪರಸ್ಪರ ಹತ್ತಿರವಾಗುತ್ತಿವೆ. ತಿಂಗಳ ಅಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ…

Read More

ಉತ್ತರಕನ್ನಡ: 2ನೇ ತರಗತಿ ಬಾಲಕನಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಮೂಡುವಂತೆ ಥಳಿಸಿರುವ ಘಟನೆ  ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ಶಿಕ್ಷಕಿಯು ವಿದ್ಯಾರ್ಥಿಗೆ ಸಣ್ಣ ಕೋಲಿನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಹಗಿದೆ. ಶಾಲೆ ಬಿಟ್ಟ ನಂತರ ಮನೆಗೆ ಹೋದ ಬಾಲಕ, ಮನೆಯಲ್ಲಿ ನೋವು ತಡೆದುಕೊಳ್ಳಲಾರದೇ ಅಳಲು ಆರಂಭಿಸಿದ್ದಾನೆ. ಮನೆಯವರು ಮೈಮೇಲಿನ ಶರ್ಟ್‌ ಬಿಚ್ಚಿ ನೋಡಿದಾಗ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಬಾಲಕನ ತಾಯಿ, ಗ್ರಾಮದ ಪ್ರಮುಖರಲ್ಲಿ ತಮ್ಮ ಮಗನಿಗೆ, ಶಿಕ್ಷಕಿ ಹೊಡೆದಿರುವುದನ್ನು ತೋರಿಸಿ ಕಣ್ಣೀರು ಹಾಕಿದ್ದಾರೆ. ಶಾಲೆ ಬಿಟ್ಟ ನಂತರ ಮಾಹಿತಿ ತಿಳಿಯುತ್ತಿದ್ದಂತೆ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿದ್ದು, ಬಾಲಕನ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶಿಕ್ಷಕಿ, ತಾನು ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ. ನನ್ನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ. ಶಿಕ್ಷಕಿಯ ಮಾತು…

Read More

ಕೊರಟಗೆರೆ: ತಾಲೂಕಿನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆಯಲಾಗಿದೆ. ಮಹಿಳೆಯ ಹತ್ಯೆ ಮಾಡಿದ ನಂತರ ಮೃತದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈ ಭಾಗವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಒಂದು ಕಡೆ ಬಿಸಾಡಿದರೆ, ಅದರಿಂದ ಕೇವಲ ಇನ್ನೂಂದು ಕಿ.ಲೋ. ದೂರದಲ್ಲಿಯೇ ಇನ್ನೊಂದು ಕೈ ಪತ್ತೆಯಾಗಿದೆ. ಸ್ವಲ್ಪ ದೊರದಲ್ಲಿಯೇ ಕರುಳನ್ನು ಚೀಲದಲ್ಲಿ ಕಟ್ಟಿ ಎಸೆಯಲಾಗಿದೆ. ಇನ್ನಷ್ಟು ದೂರದಲ್ಲಿ ದೇಹದ ಮುಂಡದ ಭಾಗವನ್ನು ಛಿದ್ರ ಛಿದ್ರಗೊಳಿಸಿ ಬಿಸಾಡಲಾಗಿದೆ. ಕೈ ಒಂದು ಕಡೆ, ಕರುಳೊಂದು ಕಡೆ, ಮುಂಡವೇ ಇನ್ನೊಂದು ಕಡೆ ಪತ್ತೆಯಾಗಿದೆ ಎನ್ನಲಾಗಿದೆ. ಸಿದ್ದರಬೆಟ್ಟದಿಂದ ತೋವಿನಕೆರೆಗೆ ಸಂರ್ಪಕಿಸುವ ರಸ್ತೆ ಬದಿಯಲ್ಲೂ ಕೂಡ ಮೂಟೆ ಕಟ್ಟಿದ ಚೀಲ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ಹೊಟ್ಟೆಯ ಭಾಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ನವದೆಹಲಿ: ಭಾರತದ ಮೇಲೆ ದುಪ್ಪಟ್ಟು ತೆರಿಗೆ ಹೇರುವುದಾಗಿ ಅಮೆರಿಕಾ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ದಿವಂಗತ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆದ ಮೂರು ದಿನಗಳ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಮಾತನಾಡಿದರು. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ಯಾವುದೇ ಬೆಲೆ ತೆರಲೂ ಸಿದ್ಧವಿದೆ ಎಂದು ಹೇಳಿದ್ದಾರೆ. ನಮಗೆ, ರೈತರ ಹಿತಾಸಕ್ತಿಯೇ ಪ್ರಮುಖ ಆದ್ಯತೆ. ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ವೈಯಕ್ತಿಕವಾಗಿ ಬೆಲೆ ತೆರಬೇಕಾದರೂ ನಾನು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ರಾಯಚೂರು: ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿದು ಅಂಗನವಾಡಿ ಶಿಕ್ಷಕಿ ಗಂಭೀರವಾಗಿ ಗಾಯಗೊಂಡ ಘಟನೆ  ಅರಕೇರಾ ತಾಲೂಕಿನ ಆಲ್ದರ್ತಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂಗನವಾಡಿ ಶಿಕ್ಷಕಿ ಮೇಲೆಯೇ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದ್ದು, ಅಂಗನವಾಡಿ ಶಿಕ್ಷಕಿ ಮಹಾದೇವಮ್ಮಗೆ ಗಂಭೀರ ಗಾಯಗಳಾಗಿವೆ. ತಲೆ, ಕೈ, ಬೆನ್ನಿಗೆ ತೀವ್ರ ಪೆಟ್ಟುಗಳಾಗಿ ಶಿಕ್ಷಕಿ ಕುಸಿದು ಬಿದ್ದಿದ್ದಾರೆ. ಛಾವಣಿ ಮೇಲ್ಪದರ ಬಿದ್ದ ರಭಸಕ್ಕೆ ಶಿಕ್ಷಕಿ ಕುಳಿತಿದ್ದ ಕುರ್ಚಿ ಮುರಿದುಹೋಗಿದೆ. ಕೂಡಲೇ ಸಹಾಯಕ್ಕೆ ಬಂದ ಗ್ರಾಮಸ್ಥರು ಗಾಯಗೊಂಡ ಶಿಕ್ಷಕಿಯನ್ನ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More