Subscribe to Updates
Get the latest creative news from FooBar about art, design and business.
- ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗಲ್ಲ: ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟನೆ
- ನಾಗರಪಂಚಮಿ ದಿನವೇ ಹಾವು ಕಚ್ಚಿ ಮಹಿಳೆ ಸಾವು!
- ಅನಾಥಾಶ್ರಮಕ್ಕೆ ತಾಯಿ ತಂದೆಯರನ್ನು ಸೇರಿಸಬೇಡಿ: ಯುವ ಜನತೆಗೆ ಕೆ.ಎನ್. ರಾಜಣ್ಣ ಕಿವಿಮಾತು
- ಡಿಸಿ ಕಚೇರಿ ಬಳಿ ಜಿಲ್ಲಾ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಹೋರಾಟ: ಸಂಪುಟದಿಂದ ನಾಗೇಂದ್ರ ವಜಾಗೊಳಿಸಲು ಬಿಜೆಪಿ ಆಗ್ರಹ
- ತುಮಕೂರು: ಸೆ.15ರವರೆಗೆ ಗ್ರಾಮೀಣ ಗ್ಯಾರಂಟಿ ಕಾರ್ಡ್ ವಿತರಣೆ
- ಎಸ್ ಐಟಿ ಮುಖ್ಯ ರಸ್ತೆಯಲ್ಲಿ ಸುರಿಯುತ್ತಿರುವ ತ್ಯಾಜ್ಯ…! | 3 ದಿನಗಳಿಂದ ಕಸ ಎತ್ತುವಳಿ ಮಾಡದೆ ಸಮಸ್ಯೆ
- ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ
- ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ
Author: admin
ತುಮಕೂರು: ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಮನೆಯಿಂದ ಹೊರಗೆ ಬರದಂತೆ ಕಟ್ಟಿ ಹಾಕುವುದು ಅಥವಾ ಬಂಧಿಸಿಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇಂತಹ ಕೃತ್ಯವೆಸಗುವವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನೀಸಾ ಅವರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ ‘ವಿಕಲಚೇತನ ಮಕ್ಕಳು ಹಾಗೂ ಆರೈಕೆದಾರರೊಂದಿಗಿನ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಆರೈಕೆ ಕಷ್ಟವೆನಿಸಿದರೆ ಅವರನ್ನು ಡೇ ಕೇರ್ ಸೆಂಟರ್ ಗಳು ಅಥವಾ ವಿಶೇಷ ವಸತಿ ಶಾಲೆಗಳಿಗೆ ಸೇರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅವರನ್ನು ಮನೆಯಲ್ಲಿ ಬಂಧಿಸಬಾರದು ಎಂದು ಸಲಹೆ ನೀಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು. ಮೊಬಿಲಿಟಿ ಇಂಡಿಯಾ ಸಂಸ್ಥೆಯ ಅಲ್ಬಿನಾ ಶಂಕರ್ ಅವರು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ…
ಕುಣಿಗಲ್: ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ಒಂಟಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ನಾಗಮ್ಮ (70) ಕೊಲೆಯಾದ ದುರ್ದೈವಿ. ಇವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮಾರ್ಚ್ 9ರ ಸೋಮವಾರದಂದು ಈ ಕೃತ್ಯ ನಡೆದಿದ್ದು, ಮಂಗಳವಾರ ರಾತ್ರಿ ಅಕ್ಕಪಕ್ಕದ ನಿವಾಸಿಗಳು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ನಾಗಮ್ಮ ಅವರ ಮಗ ವರದರಾಜು ಅವರು ಮಾರ್ಚ್ 8ರಂದು ಮನೆಗೆ ಬಂದು ಸೋಲಾರ್ ಮತ್ತು ಪೈಪ್ ಲೈನ್ ಕೆಲಸ ಮುಗಿಸಿ ಅಂದೇ ಬೆಂಗಳೂರಿಗೆ ಮರಳಿದ್ದರು. ಇದನ್ನೇ ಹೊಂಚು ಹಾಕಿದ್ದ ಕಳ್ಳರು, ಸೋಮವಾರ ಮನೆಗೆ ನುಗ್ಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ನಂತರ ಅವರ ಮೈಮೇಲಿದ್ದ ಚಿನ್ನದ ಸರ, ಬಳೆ ಹಾಗೂ ಓಲೆಗಳನ್ನು ಕಿತ್ತುಕೊಂಡು, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ನಾಗಮ್ಮ ಅವರು ಎರಡು ದಿನಗಳಿಂದ ಮನೆಯಿಂದ ಹೊರಗೆ ಬಾರದಿದ್ದನ್ನು ಗಮನಿಸಿದ ನೆರೆಹೊರೆಯವರು ಸಂಶಯಗೊಂಡು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಅವರ ಮೃತದೇಹ ಕಂಡುಬಂದಿದೆ. ಕೂಡಲೇ ಕುಟುಂಬದವರಿಗೆ ಮತ್ತು…
ಕೊರಟಗೆರೆ: ತುಮಕೂರಿನ ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ನ ಗೌತಮ್ ಹಾಗೂ ಈತನ ಅಕ್ಕ ಶಿಲ್ಪ ದೌರ್ಜನ್ಯದಿಂದ ಚೀಟಿ ಹಣ ವಸೂಲಿ ಮಾಡಲು ನನ್ನ ಭಾವಚಿತ್ರವಿರುವ ಕರಪತ್ರಗಳನ್ನು ಕುರಂಕೋಟೆ ಗ್ರಾಮ ಹಾಗೂ ತಾಲೂಕಿನಾದ್ಯಂತ ಗೋಡೆಗಳಿಗೆ ಅಂಟಿಸಿ ಸೋಷಿಯಲ್ ಮೀಡಿಯಾದೊಂದಿಗೆ ಮಾನ ಹರಾಜು ಹಾಕಿ ವೈಯಕ್ತಿಕವಾಗಿ ನನ್ನ ಮತ್ತು ನನ್ನ ಕುಟುಂಬವನ್ನು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ನೊಂದ ವ್ಯಕ್ತಿ ಕುರಂಕೋಟೆ ಸಿದ್ದರಾಜು ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೩-೨೪ರಲ್ಲಿ ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಐದು ಲಕ್ಷ ಸಾಲ ಪಡೆದಿದ್ದೇನೆ, ಸಾಲ ಪಡೆಯುವ ವೇಳೆ ನಮ್ಮ ಗ್ರಾಮದ ಗೌತಮ್ ಎಂಬಾತನು ಮ್ಯಾನೇಜರ್ ಆಗಿದ್ದು, ೩.೫ ಲಕ್ಷ ವರೆಗೆ ವಾಪಸ್ ಲಿಮಿಟೆಡ್ ಗೆ ಪಾವತಿಸಿದ್ದೇನೆ ಎಂದು ಹೇಳಿದರು. ಬೈಕ್ ಅಪಘಾತವಾದ ಸಂದರ್ಭದಲ್ಲಿ ಗೌತಮ್ ರವರಿಗೆ ೬೫ ಸಾವಿರ ನಗದು ಹಣ, ಪೋನ್ ಪೇ ಮೂಲಕ ೧ ಲಕ್ಷ ಹಣ ಪಾವತಿಸಿದ್ದೇನೆ, ನೀಡಿದ ೬೫ ಸಾವಿರ ನಗದು ಹಣವನ್ನು ಲಿಮಿಟೆಡ್ ಗೆ ಸಂದಾಯ…
ಬಳ್ಳಾರಿ: ಸಾರ್ವಜನಿಕರಿಗೆ ಅರ್ಹತೆ ಮಾನದಂಡಗಳಡಿ ಸಾಲ–ಸೌಲಭ್ಯ ನೀಡಬೇಕು. ಬ್ಯಾಂಕ್ ಸೌಲಭ್ಯ ನೀಡುವಲ್ಲಿ ವಿಳಂಬವಾದಲ್ಲಿ ಆಯಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ ಸೌಲಭ್ಯ ಪಡೆಯುವಲ್ಲಿ ಬಳ್ಳಾರಿ ಜಿಲ್ಲೆ ಕಡಿಮೆ ಪ್ರಗತಿ ಸಾಧಿಸಿದೆ. ರಾಜ್ಯದ ಇತರೆ ಜಿಲ್ಲೆಗಳು ಹೆಚ್ಚು ಹೆಚ್ಚು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಮುಂಬರುವ ದಿನಗಳಲ್ಲಿ ಬಳ್ಳಾರಿ ಜಿಲ್ಲಿಯೂ ಪ್ರಗತಿ ಸಾಧಿಸುವಲ್ಲಿ ಬ್ಯಾಂಕ್ ಗಳ ಸಹಕಾರ ಅತಿ ಅಗತ್ಯವಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಜಿಲ್ಲೆಯ ಗ್ರಾಮೀಣ ಮತ್ತು ನಗರ…
ವಿಜಯಪುರ: ಇದೇ ಮಾರ್ಚ್ 18 ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸಬೇಕೆಂದು ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಹಾಗೂ ನಿರ್ವಹಣೆ ಕುರಿತ ಸಲಹೆ ನೀಡಿದರು. ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ತನ್ಮೂಲಕ ಪರೀಕ್ಷೆಯ ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದರು. ಬಿಇಒ, ತಹಶೀಲ್ದಾರ್ ಅವರು ತಾಲೂಕಿನಲ್ಲಿ ಸಭೆ ನಡೆಸಿ ಅಗತ್ಯ ಸೂಚನೆ ನೀಡಬೇಕು. ಮೈಕ್ರೊ ಪ್ಲ್ಯಾನಿಂಗ್ ಮಾಡಿಕೊಳ್ಳಬೇಕು ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪ-ದೋಷಗಳಾಗಬಾರದು. ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ…
ಧಾರವಾಡ: ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಈ ಹಿಂದೆ ದಿನಪತ್ರಿಕೆ ಮತ್ತು ಟಿವಿ ಚಾನೆಲ್ ಗಳಲ್ಲಿ ಸೀಮಿತ ಅವಕಾಶವಿತ್ತು. ಇದೀಗ ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದಂತಾಗಿದ್ದು, ನೈಜ ಪ್ರಜಾಪ್ರಭುತ್ವ ಸಾಧಿಸಿದಂತಾಗಿದೆ ಎಂದು ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ಎಸ್.ಬಾಲಸುಬ್ರಮಣ್ಯ ಅವರು ಅಭಿಪ್ರಾಯಪಟ್ಟರು. ಅವರು ಇಂದು (ಮಾ.10) ಬೆಳಿಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಮೀಡಿಯಾ ಫೆಸ್ಟ್ 2026 ರ ಅಂಗವಾಗಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳ ವಿಶ್ವಾಸಾರ್ಹತೆ ವಿಷಯದ ಕುರಿತು ಮಾತನಾಡಿದರು. ಪತ್ರಿಕೆ, ರೇಡಿಯೋ, ಟಿವಿ ಚಾನೆಲ್‍ಗಳಿಗಿಂತ ಸೋಷಿಯಲ್ ಮೀಡಿಯಾ ಈಗ ಜನಪ್ರಿಯವಾಗಿದೆ. ಅದರ ಮುಂದುವರಿದ ಭಾಗವಾಗಿ ಕೃತಕ ಬುದ್ಧಿಮತ್ತೆ, ರೋಬೋಟ್ ತಂತ್ರಜ್ಞಾನ ಪ್ರವರ್ಧಮಾನಕ್ಕೆ ಬಂದಿದೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಂದಾಗಿ ತಕ್ಷಣದ ಸಂವಹನ…
ಧಾರವಾಡ: ಸ್ಪರ್ಧಾತ್ಮಕತೆಯನ್ನು ಹೊಂದಿದ ಕ್ಷೇತ್ರ ಪತ್ರಿಕೋದ್ಯಮವಾಗಿದೆ. ದಿನಪತ್ರಿಕೆಗಳು ದಿನನಿತ್ಯ ಸುದ್ಧಿ, ಜಾಹೀರಾತು, ಪ್ರಕಟಣೆಯಲ್ಲಿ ಪಾರದರ್ಶಕತೆ ಹಾಗೂ ಸಮಾಜದ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಪತ್ರಕರ್ತರು ಪಾರದರ್ಶಕವಾಗಿ ಸುದ್ದಿಗಳನ್ನು ಪ್ರಕಟಿಸುವದರಿಂದ ಅನೇಕ ಸಾಮಾಜಿಕ ತೊಡಕುಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ ಅವರು ಹೇಳಿದರು. ಅವರು ಇಂದು (ಮಾ.10) ಮಧ್ಯಾಹ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮೀಡಿಯಾ ಫೆಸ್ಟ್ 2026 ರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪತ್ರಕರ್ತರು ತಮ್ಮ ಪಕ್ಷಾತೀತ ಮತ್ತು ನಿರ್ಭಿಡೆಯ ಕೆಲಸದಿಂದ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ವ್ಯವಸ್ಥೆಯ ಅಂಕುಡೊಂಕು ತಿದ್ದಲು ಪ್ರತಿನಿತ್ಯ ಅವರು ಪ್ರಕಟಿಸುವ ವಿವಿಧ ರೀತಿಯ ಸುದ್ದಿಗಳು ಸಹಕಾರಿಯಾಗಿವೆ. ಪತ್ರಕರ್ತನಿಗೆ ಅನ್ಯಾಯ, ಅವ್ಯವಸ್ಥೆ ಎದುರಿಸುವ ತಾಕತ್ತು ಇರಬೇಕು. ಯಾವುದೇ ಮುಲಾಜುಗಳಿಗೆ ಒಳಗಾಗದೇ ಸದಾಕಾಲ ಸತ್ಯದ ಪರವಾಗಿ ನಿಲ್ಲಬೇಕು. ಇದು ಪತ್ರಿಕೋದ್ಯಮದ ವೃತ್ತಿಪರತೆಯನ್ನು ಮತ್ತು…
ಬೆಂಗಳೂರು: ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ತರಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಅವರು ಭಾರತ ದೇಶದ ನಿಜ ಭಾಗ್ಯವಿಧಾತ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ನಗರದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಏರ್ಪಡಿಸಿದ್ದ “ಭೀಮ ಗಾಯನ”ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಸಂವಿಧಾನ ಪೀಠಿಕೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಐಕ್ಯತೆ ಮತ್ತು ಭ್ರಾತೃತ್ವದ ಬದ್ಧತೆಯನ್ನು ಪ್ರತಿಪಾದಿಸುತ್ತದೆ.ಅಂಬೇಡ್ಕರ್ ರಚಿತ ಈ ಸಂವಿಧಾನದ ಪೀಠಿಕೆಯೇ ಅವರು ಒಬ್ಬ ವಿಶ್ವ ಮಾನವ ಎಂಬುದನ್ನು ಸಾಬೀತು…
ಬೆಂಗಳೂರು: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ಕೊರತೆಯಿಂದಾಗಿ ರಾಜ್ಯದ ಜನತೆ ಮತ್ತು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮಾತ್ರ ಈ ಬಗ್ಗೆ ಸಂಸತ್ತಿನಲ್ಲಿ ತುಟಿ ಬಿಚ್ಚದೆ ಮೌನ ವಹಿಸಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬೆಂಗಳೂರಿನ ಹೋಟೆಲ್‌ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬಂದಿದೆ. ಹೋಟೆಲ್ ಮಾಲೀಕರು ಈಗಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ಕೊರತೆಯು ಸಾರ್ವಜನಿಕರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಶಿವಕುಮಾರ್ ಹೇಳಿದರು. “ಬಿಜೆಪಿ ಸಂಸದರು ಬೇರೆಲ್ಲಾ ವಿಷಯಗಳ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಸಾಮಾನ್ಯ ಜನರಿಗೆ ತೊಂದರೆಯಾದಾಗ ಯಾಕೆ ಮೌನವಾಗಿದ್ದಾರೆ? ಅವರು ಕೂಡಲೇ ಈ ವಿಷಯವನ್ನು…
ನವದೆಹಲಿ: ದೇಶದಲ್ಲಿ ಅಡುಗೆ ಅನಿಲ (LPG) ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಗ್ರಾಹಕರು ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕ್ಕಿಂಗ್ ಮಾಡಲು ಕನಿಷ್ಠ 21 ರಿಂದ 25 ದಿನಗಳ ಕಾಲ ಕಾಯುವುದು ಕಡ್ಡಾಯವಾಗಿದೆ. ಈ ಮೊದಲು ಗ್ರಾಹಕರು 15 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ ಮಾಡುತ್ತಿದ್ದರು. ಆದರೆ ಹೊಸ ನಿಯಮದ ಪ್ರಕಾರ, ಈ ಅವಧಿಯನ್ನು ಕನಿಷ್ಠ 25 ದಿನಗಳಿಗೆ ಏರಿಸಲಾಗಿದೆ. ಗ್ಯಾಸ್ ಸಿಲಿಂಡರ್ ಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆ (Black Marketing) ವ್ಯವಹಾರವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಎಲ್ ಪಿಜಿ ಕೊರತೆಯಾಗದಂತೆ ನೋಡಿಕೊಳ್ಳಲು ತೈಲ ಸಂಸ್ಕರಣಾಗಾರಗಳಿಗೆ ಉತ್ಪಾದನೆ ಹೆಚ್ಚಿಸಲು ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗಿಂತ ಗೃಹ ಬಳಕೆದಾರರಿಗೆ (Domestic LPG) ಹೆಚ್ಚಿನ ಆದ್ಯತೆ ನೀಡುವಂತೆ ಆದೇಶಿಸಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಸದ್ಯಕ್ಕೆ ಪೆಟ್ರೋಲ್, ಡೀಸೆಲ್…