Author: admin

ತುಮಕೂರು: ನಗರದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಗಳ ಕೊರತೆ ಎದುರಾಗಿದ್ದು, ಇದರ ನೇರ ಪರಿಣಾಮ ಇಂದಿರಾ ಕ್ಯಾಂಟೀನ್‌ ಗಳ ಮೇಲೆ ಬೀರಿದೆ. ಅಡುಗೆಗೆ ಅಗತ್ಯವಾದ ಸಿಲಿಂಡರ್ ಲಭ್ಯವಿಲ್ಲದ ಕಾರಣ, ನಗರದ ಪ್ರಮುಖ ಇಂದಿರಾ ಕ್ಯಾಂಟೀನ್‌ ಸೇರಿದಂತೆ ವಿವಿಧ ಘಟಕಗಳು ಶುಕ್ರವಾರದಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ. ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಮುಖ್ಯ ಇಂದಿರಾ ಕ್ಯಾಂಟೀನ್‌ ನಲ್ಲಿ ಆಹಾರ ತಯಾರಿಸಿ ನಗರದ ಉಳಿದ 6 ಉಪಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ 3–4 ದಿನಗಳಿಂದ ಹೋಟೆಲ್‌ಗಳಿಗೆ ಪೂರೈಕೆಯಾಗುವ ವಾಣಿಜ್ಯ ಸಿಲಿಂಡರ್‌ ಗಳ ಅಭಾವ ಉಂಟಾಗಿದೆ. ಗುರುವಾರ ಇಡೀ ದಿನ ಸಿಬ್ಬಂದಿ ಸಿಲಿಂಡರ್‌ ಗಾಗಿ ಹುಡುಕಾಟ ನಡೆಸಿದರೂ ಸಿಗದೇ ಇದ್ದಾಗ, ಅನಿವಾರ್ಯವಾಗಿ ಕ್ಯಾಂಟೀನ್‌ ಗೆ ಬೀಗ ಹಾಕಲಾಗಿದೆ. ಕ್ಯಾಂಟೀನ್ ಮುಂಭಾಗದಲ್ಲಿ “ಗ್ಯಾಸ್ ಸಿಗದ ಕಾರಣ ಇಂದು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ. ದಯವಿಟ್ಟು ಸಹಕರಿಸಿ” ಎಂಬ ನಾಮಫಲಕವನ್ನು ಅಳವಡಿಸಲಾಗಿದ್ದು, ಎಂದಿನಂತೆ ಕಡಿಮೆ ದರದಲ್ಲಿ ಊಟ–ತಿಂಡಿ ನಿರೀಕ್ಷಿಸಿ ಬಂದ ಸಾರ್ವಜನಿಕರು ಮತ್ತು ಕಾರ್ಮಿಕರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.…

Read More

ಸರಗೂರು:  ಎಚ್ ಪಿ ವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣವಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಈ ಅಭಿಯಾನವು ಹದಿಹರೆಯದ ಬಾಲಕಿಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು. ಪಟ್ಟಣದ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಶುಕ್ರವಾರದಂದು ತಾಲೂಕು ಆರೋಗ್ಯಾಧಿಕಾರಿ ಇಲಾಖೆ ದಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ(ಎಚ್ ಪಿ ವಿ) ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠ ಸೇರಿದಂತೆ ಅನೇಕ ಮಾದರಿಯ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್‌ ಸೇರಿದಂತೆ ಇತರ ಗಂಭೀರ ಕಾಯಿಲೆಗಳು ಬರದಂತೆ ತಡೆಯಬಹುದು’ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 14ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ…

Read More

ಸರಗೂರು:  ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಜಾತಿ, ಧರ್ಮಗಳನ್ನು ಮಧ್ಯದಲ್ಲಿ ತರಬಾರದು ಎಂದು ಸರಗೂರು ಪೊಲೀಸ್ ಠಾಣೆ ಉಪ ನಿರೀಕ್ಷಕ ಆರ್. ಕಿರಣ್ ತಿಳಿಸಿದರು. ಪಟ್ಟಣದ ಠಾಣೆ ಆವರಣದಲ್ಲಿ ಶುಕ್ರವಾರ ನಡೆದ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಮಾಜಿಕ ಸುವ್ಯವಸ್ಥೆ ಕದಲುವಂತಹ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಆದರೆ ಇತ್ತೀಚೆಗೆ ಅಪರಾಧಿಗಳ ಪರವಾಗಿ ಸಮುದಾಯ, ಸಂಘಟನೆಗಳು ಸಹಕಾರಕ್ಕೆ ಬರುತ್ತಿರುವುದು ಸರಿಯಲ್ಲ. ರಂಜಾನ್ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಗಲಾಟೆ, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮಾತನಾಡಿ, ರಂಜಾನ್ ಹಬ್ಬದ ವೇಳೆ ನಾನಾ ಮಸೀದಿಗಳ ಪಕ್ಕದಲ್ಲಿ ಟ್ರಾಫಿಕ್, ವಾಹನಗಳ ಶಬ್ದ ನಿಯಂತ್ರಣ ಮಾಡಬೇಕು. ಹಬ್ಬದ ಪ್ರಯುಕ್ತ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿರುತ್ತದೆ. ಆ ವೇಳೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ ಐ…

Read More

ತುಮಕೂರು: ಜಿಲ್ಲೆಯಲ್ಲಿ ಅಡುಗೆ ಅನಿಲ (LPG) ಸಿಲಿಂಡರ್‌ ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಈಗ ಇಂದಿರಾ ಕ್ಯಾಂಟೀನ್‌ ಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ನಗರದ ಇಂದಿರಾ ಕ್ಯಾಂಟೀನ್‌ ಗಳು ಮುಚ್ಚುವ ಹಂತಕ್ಕೆ ತಲುಪಿವೆ. ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಮುಖ್ಯ ಕ್ಯಾಂಟೀನ್‌ ನಲ್ಲಿ ಅಡುಗೆ ತಯಾರಿಸಿ ನಗರದ ವಿವಿಧೆಡೆ (ಕ್ಯಾತ್ಸಂದ್ರ, ಶಿರಾ ಗೇಟ್, ಮಂಡಿಪೇಟೆ, ಜಿಲ್ಲಾ ಆಸ್ಪತ್ರೆ ಮತ್ತು ಅಂತರಸನಹಳ್ಳಿ ಮಾರುಕಟ್ಟೆ) ಇರುವ ಕ್ಯಾಂಟೀನ್‌ ಗಳಿಗೆ ಊಟ–ತಿಂಡಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಗುರುವಾರದಿಂದ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಪ್ರತಿದಿನ ಅಡುಗೆ ತಯಾರಿಕೆಗೆ 1 ರಿಂದ 2 ಸಿಲಿಂಡರ್‌ ಗಳ ಅಗತ್ಯವಿದೆ. ಸಿಲಿಂಡರ್ ಲಭ್ಯವಿಲ್ಲದ ಕಾರಣ ಶುಕ್ರವಾರದಿಂದ ಕ್ಯಾಂಟೀನ್ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. “ಬೇರೆಯವರಿಂದ ಒಂದು ಸಿಲಿಂಡರ್ ಸಾಲವಾಗಿ ಕೇಳಿದ್ದೇವೆ, ಅದು ಸಿಕ್ಕರೆ ಮಾತ್ರ ಕ್ಯಾಂಟೀನ್ ನಡೆಯುತ್ತದೆ, ಇಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತದೆ” ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೋಟೆಲ್‌ಗಳಿಗೂ ಸಂಕಷ್ಟ:…

Read More

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ನೂರಾರು ಗ್ರಾಹಕರು ಗುರುವಾರ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸಿಲಿಂಡರ್ ಬುಕ್ ಮಾಡಿ ಹಲವು ದಿನಗಳಾದರೂ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. “ಸಿಲಿಂಡರ್ ಬುಕ್ ಮಾಡಿ ನಾಲ್ಕು ದಿನಗಳಾಗಿವೆ. ಏಜೆನ್ಸಿಯವರನ್ನು ವಿಚಾರಿಸಿದರೆ ಇನ್ನೂ ಒಂದು ವಾರ ಕಾಯಬೇಕು ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡಲು ಅನಿಲವಿಲ್ಲದೆ ಪರದಾಡುವಂತಾಗಿದೆ” ಎಂದು ಸ್ಥಳೀಯ ನಿವಾಸಿ ಅಂಬಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ನಿವಾಸಿ ಗೋಪಿ ಅವರು ಮಾತನಾಡಿ, “ಸಾಮಾನ್ಯ ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಮಾತ್ರ ದಾಸ್ತಾನು ಇಲ್ಲ ಎಂಬ ಸಬೂಬು ಹೇಳಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಏಜೆನ್ಸಿ ಸ್ಪಷ್ಟನೆ: ಈ ಕುರಿತು ಪ್ರತಿಕ್ರಿಯಿಸಿದ ಗ್ಯಾಸ್ ಏಜೆನ್ಸಿಯ ಆದರ್ಶ್, “ಸದ್ಯ ಪಟ್ಟಣದಲ್ಲಿ 2,500ಕ್ಕೂ ಹೆಚ್ಚು ಸಿಲಿಂಡರ್ ಬುಕಿಂಗ್‌…

Read More

ಪಾವಗಡ: ತಾಲೂಕಿನ ತುಮಕೂರು ರಸ್ತೆಯಲ್ಲಿರುವ ಖಾಸಗಿ ಎಲ್‌ ಪಿಜಿ ಏಜೆನ್ಸಿಯ ಮುಂದೆ ಗುರುವಾರ ಗೃಹಬಳಕೆಯ ಸಿಲಿಂಡರ್‌ ಗಳಿಗಾಗಿ ಜನರು ಸಾಲುಗಟ್ಟಿ ನಿಂತ ಪ್ರಸಂಗ ನಡೆಯಿತು. ಮುಂದಿನ ದಿನಗಳಲ್ಲಿ ಸಿಲಿಂಡರ್ ಅಭಾವ ಉಂಟಾಗಬಹುದು ಎಂಬ ಆತಂಕದಲ್ಲಿ ನೂರಾರು ಗ್ರಾಹಕರು ಬೆಳ್ಳಂಬೆಳಗ್ಗೆಯೇ ವಿತರಣಾ ಕೇಂದ್ರದ ಮುಂದೆ ಜಮಾಯಿಸಿದ್ದರು. ಕಳೆದ ನಾಲ್ಕು ದಿನಗಳಿಂದ ಗ್ಯಾಸ್ ಬುಕ್ ಮಾಡಿ ಒಟಿಪಿ (OTP) ಬಂದಿದ್ದರೂ ಸಹ, ಸರ್ವರ್ ಸಮಸ್ಯೆಯ ನೆಪವೊಡ್ಡಿ ಸಿಬ್ಬಂದಿ ಸಿಲಿಂಡರ್ ವಿತರಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಹೋಟೆಲ್ ಉದ್ದೇಶಕ್ಕೆ ಹಾಗೂ ಮನೆ ಬಳಕೆಗಾಗಿ ಸಿಲಿಂಡರ್ ಪಡೆಯಲು ಜನ ಸಾಮಾನ್ಯರು ಪರದಾಡುವಂತಾಗಿದೆ. ಬೆಲೆ ಏರಿಕೆಯ ಭೀತಿ ಮತ್ತು ಸಿಲಿಂಡರ್ ಸಿಗದೇ ಇರಬಹುದು ಎಂಬ ಆತಂಕದಿಂದ ಅನೇಕರು ಅಗತ್ಯಕ್ಕಿಂತ ಹೆಚ್ಚಿನ ದಾಸ್ತಾನು ಮಾಡಿಕೊಳ್ಳಲು ಮುಂದಾಗುತ್ತಿರುವುದು ಬೇಡಿಕೆ ಹೆಚ್ಚಲು ಕಾರಣ ಎನ್ನಲಾಗಿದೆ. ಏಜೆನ್ಸಿ ಸ್ಪಷ್ಟನೆ: ಈ ಕುರಿತು ಪ್ರತಿಕ್ರಿಯಿಸಿದ ವಿತರಣಾ ಕೇಂದ್ರದ ಪ್ರತಿನಿಧಿ ಕಾರ್ತಿಕ್ ಅವರು, “ನಮ್ಮಲ್ಲಿ ಸಿಲಿಂಡರ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸರ್ವರ್ ಸಮಸ್ಯೆಯಾಗುತ್ತಿದ್ದು,…

Read More

ತುಮಕೂರು: ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ದೂರು ದಾಖಲಾದ 24 ತಾಸಿನೊಳಗೆ ಕುಣಿಗಲ್ ಉಪವಿಭಾಗದ ಪೊಲೀಸರು ಸೆರೆಹಿಡಿದಿದ್ದಾರೆ. ಎಸ್ಪಿ ಕೆ.ವಿ.ಅಶೋಕ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಈ ಪ್ರಕರಣದ ಆರೋಪಿಯನ್ನು ಘಟನೆ ನಡೆದು 24 ಗಂಟೆಗಳೊಳಗೆ ಬಂಧಿಸಿರುವುದಾಗಿ ಅವರು ತಿಳಿಸಿದರು. ಮುತ್ತುರಾಜ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಿದ್ದ ನಾಗಮ್ಮ ಎಂಬುವರ ಬಳಿ ಸಾಲ ಪಡೆದಿದ್ದ. ಸಾಲದ ಹಣ ತೀರಿಸುವಂತೆ ವೃದ್ಧೆ ನಾಗಮ್ಮ ಅವರು ಕೇಳುತ್ತಿದ್ದರಿಂದ ಹತ್ಯೆಗೆ ಸ್ಕೆಚ್ ಹಾಕಿ ಮಾ.9ರಂದು ರಾತ್ರಿ 7.30 ರಿಂದ 8ರ ಸಮಯದಲ್ಲಿ ಮನೆಗೆ ನುಗ್ಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಆಕೆ ಧರಿಸಿದ್ದ ಚಿನ್ನದ ಮಾಂಗಲ್ಯ ಸರ ಒಂದು ಜೊತೆ ಓಲೆ ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದನು. ಘಟನೆಯ ನಂತರ ಬೆಂಗಳೂರಿನಲ್ಲಿದ್ದ ಮೃತ ನಾಗಮ್ಮ ಅವರ ಪುತ್ರ ವರದರಾಜು ಅವರು ಮಾ.11ರಂದು ಹುಲಿಯೂರುದುರ್ಗ…

Read More

ತುಮಕೂರು: ತುಮಕೂರು –ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ತುಮಕೂರು–ಊರುಕೆರೆ ಭಾಗದಲ್ಲಿ ನಾನ್ ಇಂಟರ್ ಲಾಕಿಂಗ್ ಕಾಮಗಾರಿಯ ನಿಮಿತ್ತ, ಮಾ. 15—16–17ರಂದು ಕೆಳಕಂಡ ರೈಲು ಸೇವೆಗಳಲ್ಲಿ ಭಾಗಶಃ ಪೂರ್ಣ ರದ್ದು ಹಾಗೂ ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಮಾ.15 ರಂದು ರದ್ದತಿಯಾಗುವ ರೈಲುಗಳ ವಿವರ: ರೈಲು ಸಂಖ್ಯೆ 56202 ಮೈಸೂರು–ಚಾಮರಾಜನಗರ ಪ್ಯಾಸೆಂಜರ್, ರೈಲು ಸಂಖ್ಯೆ 56281 ಚಾಮರಾಜನಗರ — ತುಮಕೂರು ಪ್ಯಾಸೆಂಜರ್, ರೈಲು ಸಂಖ್ಯೆ 16567 ತುಮಕೂರು — ಶಿವಮೊಗ್ಗ ಟೌನ್ ಎಕ್ಸ್‌ ಪ್ರೆಸ್ ಸೇವೆ, ರೈಲು ಸಂಖ್ಯೆ 66569 ಯಶವಂತಪುರ — ತುಮಕೂರು ಮೆಮು, ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು — ತುಮಕೂರು ಮೆಮು ಈ ರೈಲು ಸೇವೆಯನ್ನು ಹಿರೇಹಳ್ಳಿ– ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಇದೇ ರೀತಿ ರೈಲು ಸಂಖ್ಯೆ 66568 ತುಮಕೂರು — ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು –…

Read More

ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಲು ಆಸ್ತಿಗಳ ‘ಮಾರ್ಗಸೂಚಿ ದರ’ವನ್ನು (Guideline Rate) ಕಾಲಕಾಲಕ್ಕೆ ಪರಿಷ್ಕರಿಸುವುದು ಅತ್ಯಗತ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಬುಧವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಕೆ.ಎಸ್. ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಆಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ವಿವರಣೆ ನೀಡಿದರು. ಪ್ರಸ್ತುತ ಅಧಿಕೃತ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಗಳ ನಡುವೆ ಭಾರಿ ವ್ಯತ್ಯಾಸವಿದೆ. ಕೆಲವು ಕಡೆ ಮಾರ್ಗಸೂಚಿ ದರ ಕೇವಲ 2 ಲಕ್ಷ ರೂಪಾಯಿ ಇದ್ದರೆ, ಮಾರುಕಟ್ಟೆ ದರ 80 ಲಕ್ಷ ರೂಪಾಯಿಗಳವರೆಗೂ ಇರುತ್ತದೆ. ಈ ಅಂತರದಿಂದಾಗಿ ರೈತರಿಗೆ ಕಡಿಮೆ ಪರಿಹಾರ ಸಿಗುತ್ತಿದೆ. ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಗಳ ನಡುವಿನ ವ್ಯತ್ಯಾಸವೇ ‘ಚೆಕ್’ ಮತ್ತು ‘ಕ್ಯಾಶ್’ ಮೂಲಕ ನಡೆಯುವ ಕಪ್ಪು ಹಣದ ವ್ಯವಹಾರಗಳಿಗೆ ಪ್ರಮುಖ ಕಾರಣವಾಗಿದೆ. ದರ ಪರಿಷ್ಕರಣೆಯಿಂದ ಇದನ್ನು ತಡೆಗಟ್ಟಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.…

Read More

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನಕ್ಕೆ ಸತತವಾಗಿ ಗೈರುಹಾಜರಾಗುತ್ತಿರುವ ಹಾಗೂ ಶಾಸಕರ ಅಹವಾಲುಗಳಿಗೆ ಸ್ಪಂದಿಸದ ಸಚಿವರ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಹ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರು ಒತ್ತಾಯಿಸಿದ್ದಾರೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಈ ಬೆಳವಣಿಗೆ ನಡೆದಿದೆ.  ಅನಿವಾರ್ಯ ಕಾರಣಗಳಿಲ್ಲದಿದ್ದರೂ ಅನೇಕ ಸಚಿವರು ಸದನಕ್ಕೆ ಗೈರಾಗುತ್ತಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯನ್ನೂ ಮೀರಿ ಸಚಿವರು ನಡೆದುಕೊಳ್ಳುತ್ತಿರುವುದು ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಸಚಿವರು ವಿಳಂಬ ಮಾಡುತ್ತಿದ್ದಾರೆ ಎಂದು ಶಾಸಕರು ದೂರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಷಮತೆಯ ಮೌಲ್ಯಮಾಪನವಾಗಬೇಕು ಎಂದು ಹಿರಿಯ ಶಾಸಕರು ಆಗ್ರಹಿಸಿದ್ದಾರೆ. ಸಿಎಂ ಸೂಚನೆ: ಶಾಸಕರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಿಎಸ್ಟಿ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಗ್ಯಾಸ್ ಬೆಲೆ ಏರಿಕೆ ವಿಚಾರದಲ್ಲಿ ಬಿಜೆಪಿಯನ್ನು ಸದನದಲ್ಲಿ ಸಮರ್ಥವಾಗಿ ಎದುರಿಸುವಂತೆ ಶಾಸಕರಿಗೆ…

Read More