Subscribe to Updates
Get the latest creative news from FooBar about art, design and business.
- ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗಲ್ಲ: ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟನೆ
- ನಾಗರಪಂಚಮಿ ದಿನವೇ ಹಾವು ಕಚ್ಚಿ ಮಹಿಳೆ ಸಾವು!
- ಅನಾಥಾಶ್ರಮಕ್ಕೆ ತಾಯಿ ತಂದೆಯರನ್ನು ಸೇರಿಸಬೇಡಿ: ಯುವ ಜನತೆಗೆ ಕೆ.ಎನ್. ರಾಜಣ್ಣ ಕಿವಿಮಾತು
- ಡಿಸಿ ಕಚೇರಿ ಬಳಿ ಜಿಲ್ಲಾ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಹೋರಾಟ: ಸಂಪುಟದಿಂದ ನಾಗೇಂದ್ರ ವಜಾಗೊಳಿಸಲು ಬಿಜೆಪಿ ಆಗ್ರಹ
- ತುಮಕೂರು: ಸೆ.15ರವರೆಗೆ ಗ್ರಾಮೀಣ ಗ್ಯಾರಂಟಿ ಕಾರ್ಡ್ ವಿತರಣೆ
- ಎಸ್ ಐಟಿ ಮುಖ್ಯ ರಸ್ತೆಯಲ್ಲಿ ಸುರಿಯುತ್ತಿರುವ ತ್ಯಾಜ್ಯ…! | 3 ದಿನಗಳಿಂದ ಕಸ ಎತ್ತುವಳಿ ಮಾಡದೆ ಸಮಸ್ಯೆ
- ಬೀದರ್: ನಾಗರ ಪಂಚಮಿ ದಿನವೇ ದುರಂತ – ಹಾವು ಕಡಿದು ವಾಟರ್ಮ್ಯಾನ್ ದುರ್ಮರಣ
- ಕಲಬುರಗಿ: ಕುಟುಂಬ ಕಲಹ; ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ
Author: admin
ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೈದ್ಯೆ ಮತ್ತು ಹೊರಗುತ್ತಿಗೆ ನೌಕರ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತುಮಕೂರಿನ ಉಪ್ಪಾರಹಳ್ಳಿಯ ಆಟೋ ಚಾಲಕ ಅವಿನಾಶ್ ಎಂಬುವವರು ತಮ್ಮ ತಾಯಿ ಮಂಗಳಮ್ಮ ಅವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಲು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಕಣ್ಣು ಪರೀಕ್ಷಿಸಿದ ತಜ್ಞ ವೈದ್ಯೆ ಸವಿತಾ, ಶಸ್ತ್ರಚಿಕಿತ್ಸೆಯ ಲೆನ್ಸ್ ಗಾಗಿ ₹6,000 ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವಿರುವುದನ್ನು ಪ್ರಶ್ನಿಸಿದ ಅವಿನಾಶ್ ಅವರಿಗೆ, “ಉಚಿತವಾಗಿ ಚಿಕಿತ್ಸೆ ಬೇಕಿದ್ದರೆ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಹೋಗಿ, ಇಲ್ಲಿ ಚಿಕಿತ್ಸೆ ಬೇಕಾದರೆ ಹಣ ಕೊಡಲೇಬೇಕು” ಎಂದು ವೈದ್ಯೆ ಖಡಾಖಂಡಿತವಾಗಿ ಹೇಳಿದ್ದರು ಎನ್ನಲಾಗಿದೆ. ಲೋಕಾಯುಕ್ತ ದಾಳಿ: ವೈದ್ಯೆಯ ನಡೆಯಿಂದ ಬೇಸತ್ತ ಅವಿನಾಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ವೈದ್ಯೆ ಸವಿತಾ ಅವರ ಸೂಚನೆಯಂತೆ ಹೊರಗುತ್ತಿಗೆ ನೌಕರ ಮನೋಜ್ ಎಂಬಾತ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಟಿ.ರಾಜು ನೇತೃತ್ವದ ತಂಡ ದಾಳಿ…
ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ಎದುರಿಸುತ್ತಿರುವ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸತ್ರ ನ್ಯಾಯಾಲಯ ಸೋಮವಾರ (ಮಾರ್ಚ್ 09) ವಜಾ ಮಾಡಿದೆ. ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ತನಿಖೆಗೆ ಸೂಚಿಸಿತ್ತು. ಅದರಂತೆ ಫೆಬ್ರವರಿ 25ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಮುತ್ಯಾ, ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು, ಸರ್ಕಾರಿ ವಕೀಲರ ಆಕ್ಷೇಪಣೆ ಹಾಗೂ…
ತುಮಕೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬರಗೂರು ಗ್ರಾಮ ಪಂಚಾಯಿತಿಯ ಕದಿರೇಹಳ್ಳಿ, ಯಲಪೇನಹಳ್ಳಿ, ಮತ್ತು ಯಲಪೇನಹಳ್ಳಿ ಗೊಲ್ಲರಹಟ್ಟಿಯ ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನ ವಿರೋಧಿಸಿ AIDSO ನೇತೃತ್ವದಲ್ಲಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ AIDSO ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರಾದ ಭರತ್ ಅವರು, “ಸತತವಾಗಿ ಬಂದ ಸರ್ಕಾರಗಳು ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾಡಿವೆ. ಶಿಕ್ಷಕರಿಗೆ ಶೈಕ್ಷಣಿಕ ಕೆಲಸಕ್ಕಿಂತ ಹೆಚ್ಚಾಗಿ ಜನಗಣತಿ, ಬೀದಿ ನಾಯಿಗಳ ಎಣಿಕೆಯಂತಹ ಕೆಲಸಗಳನ್ನು ನೀಡುವ ಮೂಲಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ. ಸರಿಯಾದ ಮೂಲಸೌಕರ್ಯ ಮತ್ತು ಶಿಕ್ಷಕರನ್ನು ನೀಡದೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇದೆ ಎಂಬ ನೆಪವೊಡ್ಡಿ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್–ಮ್ಯಾಗ್ನೆಟ್ ಶಾಲೆ ಸ್ಥಾಪಿಸಿ ರಾಜ್ಯದ 40 ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ಯೋಜನೆ ಪ್ರಕಾರ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬರಗೂರು ಶಾಲೆಯನ್ನ ಕೆಪಿಎಸ್ ಮ್ಯಾಗ್ನೆಟ್ ಎಂದು ಗುರುತಿಸಿ, ಅದರ ವ್ಯಾಪ್ತಿಯಲ್ಲಿ ಬರುವ…
ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯೊಬ್ಬರು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ ಸಾಯಿಸಲು ಯತ್ನಿಸಿ, ಬಳಿಕ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಭೀಕರ ಘಟನೆಯಲ್ಲಿ ಮಗು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಹೊಸಕೋಟೆ ಗ್ರಾಮದ ನಿವಾಸಿಗಳಾದ ದರ್ಶನ್ ಮತ್ತು ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆ.ಆರ್. ಪೇಟೆ ಪಟ್ಟಣದ ಜಯನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಈ ದಂಪತಿ ವಾಸವಿದ್ದರು. ಇಂದು ಬೆಳಿಗ್ಗೆ ದಂಪತಿ ನಡುವೆ ತೀವ್ರ ಗಲಾಟೆ ನಡೆದಿದ್ದು, ಇದರಿಂದ ಮನನೊಂದು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ತಾವೂ ಸಾಯುವ ಮೊದಲು ತಮ್ಮ ಎರಡು ವರ್ಷದ ಮಗು ಅನಾಥವಾಗಬಾರದೆಂಬ ಉದ್ದೇಶದಿಂದಲೋ ಏನೋ, ಮಗುವಿನ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾರೆ. ಮಗು ಪ್ರಜ್ಞೆ ತಪ್ಪಿಬಿದ್ದಾಗ ಅದು ಸಾವನ್ನಪ್ಪಿದೆ ಎಂದು ಭಾವಿಸಿದ ದರ್ಶನ್…
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚಿನಿಂದ ನಮ್ಮ ಮೆಟ್ರೋದಲ್ಲಿ ಆಟಿಕೆ ಗನ್ ಬಳಸಿ ‘ಪ್ರಾಂಕ್’ (Prank) ವಿಡಿಯೋ ಮಾಡಲು ಯತ್ನಿಸಿದ ಯುವಕನೊಬ್ಬ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಮಾರ್ಚ್ 9ರಂದು (ಇಂದು) ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈತ ತನ್ನ ಜೇಬಿನಲ್ಲಿ ಆಟಿಕೆ ಗನ್ (Toy Gun) ಇಟ್ಟುಕೊಂಡು ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡಲು ಯೋಜಿಸಿದ್ದನು. ಆದರೆ, ಆತನ ಜೇಬಿನಲ್ಲಿದ್ದ ಗನ್ ನೋಡಿ ಅಸಲಿ ಇರಬಹುದೆಂದು ಭಾವಿಸಿದ ಸಹ ಪ್ರಯಾಣಿಕರು ಗಾಬರಿಗೊಂಡು ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೆಟ್ರೋ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತಪಾಸಣೆ ನಡೆಸಿದಾಗ ಅದು ನಕಲಿ ಅಥವಾ ಆಟಿಕೆ ಗನ್ ಎಂದು ತಿಳಿದುಬಂದಿದೆ. ಕೇವಲ…
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ನಿಷೇಧಿಸುವ ಕುರಿತಾದ ಚರ್ಚೆಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. “ಆರ್ಎಸ್ಎಸ್ ಅನ್ನು ಯಾರೂ ಬ್ಯಾನ್ ಮಾಡಿಲ್ಲ, ಮಾಡೋದಕ್ಕೂ ಆಗಲ್ಲ” ಎಂದು ಅವರು ಬೆಂಗಳೂರಿನಲ್ಲಿಂದು ಸ್ಪಷ್ಟಪಡಿಸಿದರು. ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಂಘಟನೆಯ ನಿಷೇಧದ ಬಗ್ಗೆ ಸರ್ಕಾರ ಎಲ್ಲೂ ಪ್ರಸ್ತಾಪಿಸಿಲ್ಲ ಎಂದು ತಿಳಿಸಿದರು. ನಿಷೇಧದ ಪ್ರಸ್ತಾಪವಿಲ್ಲ: ನಮ್ಮ ಸರ್ಕಾರವಾಗಲಿ ಅಥವಾ ಮತ್ಯಾವುದೇ ಸರ್ಕಾರವಾಗಲಿ RSS ಅನ್ನು ನಿಷೇಧಿಸುವ ಬಗ್ಗೆ ಎಲ್ಲೂ ಹೇಳಿಲ್ಲ. ಈ ಕುರಿತ ಅನಗತ್ಯ ಚರ್ಚೆಗಳಿಗೆ ಅರ್ಥವಿಲ್ಲ ಎಂದು ಸಚಿವರು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ಮಾತನಾಡಿದ್ದನ್ನು ಉಲ್ಲೇಖಿಸಿದ ಜಾರಕಿಹೊಳಿ, “ಒಂದು ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೂ ಮತ್ತು ಅದರ ನಿರ್ದಿಷ್ಟ ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ” ಎಂದು ವಿವರಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ತುಮಕೂರು: ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು, ಧರ್ಮ ಮತ್ತು ಸಂಪ್ರದಾಯದ ಕಟ್ಟುಪಾಡುಗಳು ಹಾಗೂ ಬಂಡವಾಳಶಾಹಿಗಳ ಶೋಷಣೆಯಿಂದಾಗಿ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮಾರ್ಚ್ 8ರಂದು ನಗರದ ಜನ ಚಳುವಳಿ ಕೇಂದ್ರದಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ಸಿಐಟಿಯು ಮತ್ತು ಜನವಾದಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ದುಡಿಯುವ ಮಹಿಳೆಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಈ ಗಂಭೀರ ಅಭಿಪ್ರಾಯ ವ್ಯಕ್ತವಾಯಿತು. ಮೀನಾಕ್ಷಿ (ತುಮಕೂರು ಜಿಲ್ಲಾ ತಾಂತ್ರಿಕ ಸಂಸ್ಥೆಗಳ ಬೋಧಕೇತರ ನೌಕರರ ಸಂಘ): ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅಂದು ಬ್ರೆಡ್ ಪೀಸ್ ಗಾಗಿ ಮಹಿಳಾ ಕಾರ್ಮಿಕರು ಆರಂಭಿಸಿದ ಚಳುವಳಿ ಇಂದು ಜಾಗತಿಕ ಇತಿಹಾಸ ಸೃಷ್ಟಿಸಿದೆ. ಮಹಿಳೆಯರು ಎಲ್ಲಾ ತಾರತಮ್ಯಗಳ ವಿರುದ್ಧ ಐಕ್ಯತೆಯಿಂದ ಹೋರಾಡಬೇಕು,” ಎಂದರು. ಕರಿಯಮ್ಮ ಮಾತನಾಡಿ, ಗುತ್ತಿಗೆ ಆಧಾರಿತ ಮಹಿಳಾ ಕಾರ್ಮಿಕರ ನೋವನ್ನು ಹಂಚಿಕೊಂಡ ಅವರು, “ತಿಂಗಳ ಸಮಸ್ಯೆಯ ದಿನಗಳಲ್ಲೂ ವಿಶ್ರಾಂತಿ ಇಲ್ಲದೆ ದುಡಿಯಬೇಕಾದ ಸ್ಥಿತಿ ಇದೆ. ಏನಾದರೂ ಕಷ್ಟ ಹೇಳಿಕೊಂಡರೆ ಕೆಲಸ ಬಿಟ್ಟು…
ತುಮಕೂರು: ನಗರದ ಪೌರಕಾರ್ಮಿಕ ಅಯ್ಯಪ್ಪ ಅವರ ಮನೆ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಎಲ್ಲಾ ದಿನಬಳಕೆಯ ವಸ್ತುಗಳು ಹಾಗೂ ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದು, ಪೌರಕಾರ್ಮಿಕನ ಕುಟುಂಬವು ಬೀದಿಗೆ ಬಿದ್ದಿದೆ. ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕ ಅಯ್ಯಪ್ಪ ಅವರ ಕುಟುಂಬ ಈ ದುರ್ಘಟನೆಯಿಂದಾಗಿ ತೀವ್ರ ಆಘಾತಕ್ಕೊಳಗಾಗಿದೆ. ಜೀವನೋಪಾಯಕ್ಕಾಗಿ ಕಷ್ಟಪಡುತ್ತಿದ್ದ ಕುಟುಂಬಕ್ಕೆ ಈಗ ತಂಗಲು ಸೂರಿಲ್ಲದಂತಾಗಿದ್ದು, ಮುಂದಿನ ಜೀವನದ ಬಗ್ಗೆ ಆತಂಕ ಎದುರಾಗಿದೆ. ಜಿಲ್ಲಾಡಳಿತದ ನಡೆಗೆ ಆಕ್ರೋಶ: ಈ ವಿಷಯ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ. ಆದರೆ, ಕೇವಲ ಮಹಜರ್‌ನಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ ಎಂದು ಸಿಪಿಐ(ಎಂ) ನಗರ ಸಮಿತಿ ಕಿಡಿಕಾರಿದೆ. “ಬೆಂಕಿಯಿಂದ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಕ್ಕೆ ಕೇವಲ ದಾಖಲೆಗಳ ಪರಿಶೀಲನೆ ಸಾಲದು, ತಕ್ಷಣದ ಆರ್ಥಿಕ ನೆರವು ಬೇಕು” ಎಂದು ಸಮಿತಿ ಒತ್ತಾಯಿಸಿದೆ. ಸಿಪಿಐ(ಎಂ) ಪ್ರಮುಖ ಬೇಡಿಕೆಗಳು: ಅಗ್ನಿ ಅವಘಡದಲ್ಲಿ ಕಳೆದುಕೊಂಡ ವಸ್ತುಗಳ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು. ಕುಟುಂಬಕ್ಕೆ ವಾಸಿಸಲು…
ಸರಗೂರು: ನಮ್ಮ ತಂದೆ ಕಾಲದಿಂದಲೂ ನಮಗೆ ಮಾದಿಗ ಸಮುದಾಯದವರು ಜೊತೆಯಲ್ಲಿ ಇದ್ದು ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಾದಿಗ ಸಮುದಾಯ 28 ಗ್ರಾಮಗಳು ಇವೆ. ಗ್ರಾಮಗಳಿಗೆ ಸಮುದಾಯದ ಭವನ ಹಾಗೂ ದೇವಸ್ಥಾನದ ನಿರ್ಮಾಣಕ್ಕೆ ನನ್ನ ಅನುದಾನವನ್ನು ನೀಡುತ್ತಾ ಬರುತ್ತಿದ್ದಾನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲ್ಲೂಕಿನ ಮೊಳೆಯೂರು ಕಾವಲ್ ಗ್ರಾಮದಲ್ಲಿ ಬೀದಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಸಿದ್ದಪ್ಪಾಜಿ ದೇವಸ್ಥಾನ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಪ್ಠಾಪನಾ ಕಾರ್ಯಕ್ರಮ ಭಾನುವಾರ ನಡೆಯಿಸಿ ನಂತರ ಮಾತನಾಡಿದರು. ದೇವರ ಕಾರ್ಯದ ಜೊತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಹೆಚ್ಚು ಒತ್ತು ನೀಡಬೇಕು. ನಾವುಗಳು ದೇವರ ಕಾರ್ಯಕ್ರಮ ನಡೆಯುತ್ತಿದೆ.ಅದರೆ ನಾವುಗಳಿಗೆ ಶಿಕ್ಷಣ ಮುಖ್ಯವಾಗಿ ಕಲ್ಪಿಸಿಕೊಡಬೇಕು ಎಂದು ಮಹಿಳೆಯರಿಗೆ ಹಾಗೂ ಪೋಷಕರಿಗೆ ಕರೆ ನೀಡಿದರು. ಸಿದ್ದಪ್ಪಾಜಿ ರಾಜಪ್ಪಾಜಿ ಇವರನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಯಬೇಕು. ಇಂತ ಕಾರ್ಯಕ್ರಮ ಮಾಡುವ ಜೊತೆಯಲ್ಲಿ ದೇವರ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಕರಿಸಿ ಕಾರ್ಯಕ್ರಮ ನಡೆಯಬೇಕು ಎಂದರು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ನಾವು ಕೂಡ ಪ್ರತಿ ವರ್ಷ ಕಪ್ಪಡಿ…
ತುಮಕೂರು: ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ನಗರದ ಹೊರವಲಯದ ಯಲ್ಲಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕೋಲಾರ ಜಿಲ್ಲೆ ಬಾಗೇಪಲ್ಲಿಯ ದೇವಮ್ಮ (ಅಲಿಯಾಸ್ ದೇವಿ) ಮತ್ತು ಕೊರಟಗೆರೆಯ ಚಿನ್ನರಾಮಾಂಜಿ (ಅಲಿಯಾಸ್ ರಾಮಾಂಜಿ) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇವರಿಂದ ಸುಮಾರು 913 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ 2021ರ ಮಾರ್ಚ್ 23ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ದೇವಮ್ಮನಿಗೆ 3 ವರ್ಷ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ಚಿನ್ನರಾಮಾಂಜಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಕ್ರಾಸ್ – ಚಿಕ್ಕರಾಂಪುರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓಬಳಯ್ಯ ಎಂಬಾತನಿಗೆ ನ್ಯಾಯಾಲಯವು 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ…