Author: admin

ಯಾವುದೇ ಕ್ಷಣದಲ್ಲಾದರೂ ನಿಗಮಮಂಡಳಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ಕುರಿತು ಮಾನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಯಾವುದೇ ಕ್ಷಣದಲ್ಲಿ ನಿಗಮ ಮಂಡಳಿ ಪಟ್ಟಿ ಪ್ರಕಟವಾಗಲಿದೆ. 36 ಶಾಸಕರು 39 ಕಾರ್ಯಕರ್ತರ ಪಟ್ಟಿ ಪ್ರಕಟ ಆಗುತ್ತೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಚಿವರ ನಿರಾಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್,  ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು ಎಂದರು.

Read More

ತುಮಕೂರು: ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿ. ಮತ್ತು ಮಡಿಲು ಸೇವಾ ಟ್ರಸ್ಟ್(ರಿ), ಊರ್ಡಿಗೆರೆ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಊರ್ಡಿಗೆರೆ ಗ್ರಾ.ಪಂ. ಆವರಣದಲ್ಲಿ ಜನವರಿ 20ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ತುಮಕೂರಿನ ಅಪರೇಷನ್ಸ್  ವಿಪ್ರೋ ಎಂಟರ್ ಪ್ರೈಸಸ್ ನ ವೈಸ್ ಪ್ರೆಸಿಡೆಂಟ್ ವಿಶ್ವನಾಥ್ ಕಾರ್ಕಡ ಅವರು ಉದ್ಘಾಟನೆ ಮಾಡಲಿದ್ದಾರೆ. ಮಡಿಲು ಸೇವಾ ಟ್ರಸ್ಟ್ ನ ಮುಖ್ಯಸ್ಥ ಸಿ.ಕೆ.ಮುರಳೀಧರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಊರ್ಡಿಗೆರೆ ಗ್ರಾ.ಪಂ. ಅಧ್ಯಕ್ಷರಾದ ಅನ್ನಪೂರ್ಣಮ್ಮ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಊರ್ಡಿಗೆರೆ ಗ್ರಾ.ಪಂ. ಉಪಾಧ್ಯಕ್ಷರಾದ ಸುಗುಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಪ್ರಭ, ಮಡಿಲು ಸೇವಾ ಟ್ರಸ್ಟ್ ಟ್ರಸ್ಟಿ ಅಬ್ರಹಾಂ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರಾದ ಸಾ.ಚಿ.ರಾಜಕುಮಾರ್, ಪ್ರಾಧ್ಯಾಪಕರಾದ ಡಾ.ಪರಶುರಾಮ ಕೆ.ಜಿ. ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಊರ್ಡಿಗೆರೆ ಗ್ರಾ.ಪಂ. ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಒಳ ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ ಚಿತ್ರದುರ್ಗ ಸಮಾವೇಶ ಮಾಡಿ ನಿರ್ಣಯ ಮಾಡಲಾಗಿತ್ತು.  ನ್ಯಾ ಸದಾಶಿವ ಆಯೋಗದ ವರದಿ ಬಗ್ಗೆ ನಿರ್ಣಯಕ್ಕೆ ತೀರ್ಮಾನ ಮಾಡಲಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ವರದಿ ತಿರಸ್ಕಾರ ಮಾಡಿದ್ದರು. ಕಾನೂನಾತ್ಮಕವಾಗಿ ಒಳ ಮೀಸಲಾತಿ ಕೊಡಬೇಕಾಗುತ್ತದೆ. ನಾವೇ ಸಂವಿಧಾನ ತಿದ್ದುಪಡಿ ತರಲು ಆಗಲ್ಲ. ಹೀಗಾಗಿ ಶಿಫಾರಸ್ಸು ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ‘ಬಾಬ್ರಿ ಮಸೀದಿಯಂತೆ ಇತರೆ ಮಸೀದಿ ನಿರ್ನಾಮ ಮಾಡುತ್ತೇವೆ’ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕಿಡಿಕಾರಿದ ಡಾ.ಜಿ.ಪರಮೇಶ್ವರ್, ಅನಂತ್ ಕುಮಾರ್ ಹೆಗಡೆ ಸಂಯಮದಿಂದ ವರ್ತಿಸಲಿ. ಪೊಲೀಸರು ಹೆಗಡೆಗೆ ಸಮಯ ನೀಡಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳಬೇಕು.  ಅನಂತ್ ಕುಮಾರ್ ಹೆಗಡೆ ಮಾತು…

Read More

ಬೆಳಗಾವಿ: ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗೆ ಜಿಲ್ಲಾ ಮಟ್ಟದ ಜಾಗೃತ ಸಮಾವೇಶವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳಗಾವಿ ನಗರದ ಕುಮಾರ ದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರೋ.ಕೆ.ಡಿ ಮಂತ್ರೇಶಿ ಸಂವಿಧಾನ ಪ್ರತಿಯೊಬ್ಬ ನಾಗರೀಕನ ರಕ್ಷಣೆಗಾಗಿ ನಿಂತಿದೆ. ಸಂವಿಧಾನ ರಚನೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾಜ ಬದುಕುವ ದಾರಿಯನ್ನು ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಮಲ್ಲೇಶ್ ಚೌಗುಲೆ ಅವರು, ಸಂವಿಧಾನದ ರಚನೆಗಾಗಿ ನಾವೆಲ್ಲರು ಸೇರಿದ್ದೇವೆ. ಇದು ದಲಿತ ಸಂಘಟನೆಗಳಿಗೆ ಹಾಗೆ ಮಾತ್ರ ಸೀಮಿತವಲ್ಲ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕರ್ನಾಟಕದಲ್ಲಿ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ರಾಜು ಸೆಟ ಮಾತನಾಡಿ ಸಂವಿಧಾನ ಪ್ರತಿಯೊಬ್ಬರ ಜವಾಬ್ದಾರಿ ಶ್ರೀಮಂತ ಬಡವ ಎನ್ನದೆ ಸಮಾನತೆಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಆತ್ಮ ಸನ್ಮಾನ ಮತ್ತು…

Read More

ಬಾಗಲಕೋಟೆ: ಜನರಲ್ಲಿ ಎಚ್ ಐವಿ ಸೋಂಕಿನ ಬಗ್ಗೆ ಇರುವ ಆತಂಕ ಮತ್ತು ಗೊಂದಲಗಳನ್ನು ದೂರ ಮಾಡುವುದರ ಜೊತೆಗೆ, ಏಡ್ಸ್ ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯವನ್ನು ಹೊಗಲಾಡಿಸುವ ಕೆಲಸ ಮಾಡಬೇಕಿದೆ ಎಂದು, ನವನಗರದ ಜಿಲ್ಲಾಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕಿ ಸಾವಿತ್ರಿ ಬಿ. ಕೊಣ್ಣೂರ ಹೇಳಿದರು. ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್‌ ಘಟಕಗಳು, ರೆಡ್ ಕ್ರಾಸ್ ಹಾಗೂ ರೆಡ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಮಾರಕ ರೋಗವಾಗಿದ್ದು ಯುವಜನತೆ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಎಚ್ ಐವಿ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವುದರ ಜೊತೆಗೆ ಧೈರ್ಯ ತುಂಬುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಇಂತಹ ಸಾಂಕ್ರಾಮಿಕ ರೋಗಕ್ಕೆ ಆಪ್ತಸಲಹೆಗಾರರ ಅವಶ್ಯಕತೆ ತುಂಬಾ ಇದೆ. ಎಚ್ ಐವಿ ಸೋಂಕು, ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದಿರುವ ಸೂಜಿ, ಸಿರಿಂಜ್, ಸಂಸ್ಕರಿಸದ ರಕ್ತ ಹಾಗೂ ಸೋಂಕಿತ ತಾಯಿಯ…

Read More

ಶಿವಮೊಗ್ಗ: ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತೀರ್ಥಹಳ್ಳಿಯ  ಬಿಳುಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಧೀಕ್ಷಾ(20) ಎಂದು ಗುರುತಿಸಲಾಗಿದೆ. ಯುವತಿ ಬಾಳೆಬೈಲು ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡ್ತಿದ್ದಳು. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಬೆಳಗ್ಗೆ ಯುವತಿ ಹೊರಗೆ ಬರದೇ ಇದ್ದಿದ್ದರಿಂದ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ನಗರದ ಬಿ. ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟ‌ರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಮಯದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್, ಭಾರತೀಯ ಜನತಾ ಪಾರ್ಟಿ ರಾಜ್ಯಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹಾಗೂ ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಔರಾದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ಬಿ. ಭೇಟಿ ನೀಡಿ, ಶಾಲೆ ಮಕ್ಕಳ ಹಾಜರಾತಿ, ಬಿಸಿಯೂಟಸೇರಿದಂತೆ ಅನೇಕ ವಿಷಯಗಳ ಮಾಹಿತಿ ಪಡೆದರು. ಶಾಲೆಯ ಸ್ವಚ್ಛತೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಪರಿಶೀಲಿದರು ಅಡುಗೆ ಕೋಣೆಯನ್ನು ವೀಕ್ಷಿಸಿ ಮಾತನಾಡಿದ ಅವರು, ಅಡುಗೆ ಕೋಣೆಯಲ್ಲಿ ಬರಿ ಕತ್ತಲು ನೋಡಿ, ಕತ್ತಲಿನಲ್ಲಿ ಅಡುಗೆ ಮಾಡುವುದಾದರೂ ಹೇಗೆ? ಅಡುಗೆ ಕೋಣೆ ಸ್ವಚ್ಛತೆ ಮಾಡುವಂತೆ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಎರಡು ದಿವಸದೊಳಗೆ ಸಂಪೂರ್ಣ ಅಡುಗೆ ಕೋಣೆ ಸ್ವಚ್ಛಗೊಳಿಸಿ ಬಣ್ಣ ಹಚ್ಚುವಂತೆ ಹೇಳಿದರು. ಇದೆ ವೇಳೆ ವಡಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಹೇಡೆ, ಬಲಭೀಮ ECO, ಈಶ್ವರ ECO, ರವಿಂದ್ರ ಡಿಗ್ಗಿ CRP ಮುಖ್ಯ ಶಿಕ್ಷಕ ಪ್ರೇಮಕುಮಾರ, ಶಿಕ್ಷಕರಾದ ಕಾಮಶೇಟ್ಟಿ, ಜಯಕುಮಾರ, ಸೇರಿದಂತೆ ಮೂರು ಶಾಲೆಯ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್

Read More

ಒಡಿಶಾ: ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಎರಡು ಬೈಕ್ ​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಸೊರಡ ಸಮೀಪದ ಕೇಶರಿಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದ್ದು, ಎರಡು ದ್ವಿಚಕ್ರ ವಾಹನಗಳಲ್ಲಿ ತಲಾ ಮೂವರು ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಮೃತರನ್ನು ಆಶುರಬಂದ್‌ ನ ಶ್ರೀಕಾಂತ್ ಗೌಡ, ದುಲಾದದ ಮನೋಜ್ ಡಾಕುವಾ, ಗೋಪಾಲಪುರ ಸಶನ್‌ ನ ಮಹೇಂದ್ರ ನಾಯಕ್, ಸೊರಡದ ಜಯಂತ್ ಬಡತ್ಯ ಮತ್ತು ಸನಾ ಸೊರಡದ ರಜನಿ ಗೌಡ ಎಂದು ಗುರುತಿಸಲಾಗಿದೆ. 43 ವರ್ಷದ ರಜನಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ 30ರಿಂದ 35ರೊಳಗಿನವರು ಎಂಬುದು ತಿಳಿದುಬಂದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಜಯಂತ್ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯ ಸ್ಥಿತಿ…

Read More

ಮೈಸೂರು ಜಿಲ್ಲೆ: ಮೂವರು ಅಯ್ಯಪ್ಪ ಮಾಲಾಧಾರಿಗಳು ಕಪಿಲಾ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಘಟನೆ ನಡೆದಿದ್ದು, ಮೃತ ಮೂವರು ತುಮಕೂರು ಮೂಲದ ನಿವಾಸಿಗಳಾಗಿದ್ದಾರೆ. ಸ್ನಾನ ಮಾಡಲು 6 ಮಂದಿ ನದಿಗೆ ಇಳಿದಿದ್ದಾಗ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ಅದರಲ್ಲಿ ಮೂವರು ಮಾಲಾಧಾರಿಗಳು ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಉಳಿದ ಮೂವರು ಕೊಡಗು ಮೂಲದವರಾಗಿದ್ದಾರೆ.

Read More