Subscribe to Updates
Get the latest creative news from FooBar about art, design and business.
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
Author: admin
ಬೆಂಗಳೂರು: ಇನ್ಮುಂದೆ ರೈಲುಗಳ ವಿಳಂಬ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಬೆಂಗಳೂರು–ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರು ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, 874.13 ಕೋಟಿ ರುಪಾಯಿ ವೆಚ್ಚದಲ್ಲಿ ಒಟ್ಟು 639.05 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಜಾರಿಯಾಗಲಿದೆ. ರೈಲುಗಳ ವಿಳಂಬ ಸಂಚಾರದಿಂದಾಗಿ, ರೈಲಿನ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಹೆಚ್ಚಾಗುತ್ತಿದ್ದು, ಆದರೆ ಬೆಂಗಳೂರಿನಿಂದ ಸರಿಯಾದ ಸಮಯಕ್ಕೆ ತಮ್ಮ ಊರು ತಲುಪಲು ಆಗ್ತಿಲ್ಲ. ತಮ್ಮ ಊರುಗಳಿಂದ ರಾಜಧಾನಿಗೆ ಬರಬೇಕೆಂದರು ಸರಿಯಾದ ಸಮಯಕ್ಕೆ ತಲುಪಲು ಆಗ್ತಿಲ್ಲ. ಎಎ ಎಲ್ಲಾ ಸಮಸ್ಯೆಗಳಿಗೆ ಕಾರಣ ಸರಿಯಾಗಿ ಸಿಗ್ನಲ್ ಸಿಗಲ್ಲ ಈ ಕಾರಣಕ್ಕಾಗಿ ಸೌತ್ ವೆಸ್ಟರ್ನ್ ರೈಲ್ವೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಪ್ಲಾನ್ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರ ರೈಲ್ವೆ ಬೋರ್ಡ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂನಿಂದ ರೈಲ್ವೆ ನಿಲ್ದಾಣದ ಟ್ರ್ಯಾಕ್ ಗಳಲ್ಲಿ ರೈಲುಗಳು ನಿಂತಿರುವ, ತೆರಳಿರುವ ರೈಲಿನ ಬಗ್ಗೆ ಪಕ್ಕಾ ಮಾಹಿತಿ ರೈಲ್ವೆ ಕಮಾಂಡ್ ಸೆಂಟರ್ ಸಿಗಲಿದೆ. ರೈಲುಗಳ ವಿಳಂಬ ಸಂಚಾರ…
ಆನಂದ ವಿ.ಕೆ. ಗಂಡ ತನ್ನ ದೇಹ ಬಯಕೆಯನ್ನು ಈಡೇರಿಸಿಕೊಳ್ಳಲು ಮಾತ್ರವೇ ತನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ, ಆತನಿಗೆ ತನ್ನ ಮೇಲೆ ನಿಜವಾದ ಪ್ರೀತಿ ಇಲ್ಲ ಎನ್ನುವುದು ಸಾಕಷ್ಟು ಮಹಿಳೆಯರ ಮೂಕರೋದನೆಯಾಗಿರುತ್ತದೆ. ಈ ರೀತಿಯ ಮನೋಭಾವನೆಗಳು ಸಂಗಾತಿಗಳ ನಡುವೆ ಅಂತರವನ್ನು ಸೃಷ್ಟಿಸಲು, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಕಾರಣವಾಗಬಹುದು. ದಾಂಪತ್ಯ ಜೀವನದಲ್ಲಿ ಲೈಂಗಿಕ ಕ್ರಿಯೆ ಎನ್ನುವುದು ಪ್ರಕೃತಿಯ ನಿಯಮದಂತೆ ನಡೆಯಬೇಕು. ಗಂಡು ಹೆಣ್ಣಿನ ಮಿಲನ ಪರಸ್ಪರ ದೈಹಿಕ ಸುಖದ ಕಾಮನೆಗಳನ್ನು ಈಡೇರಿಸಿಕೊಳ್ಳುವ ಕ್ರಿಯೆ ಆಗಿದ್ದರೂ, ಆ ವಿಚಾರದಲ್ಲಿ ಹೆಣ್ಣಿಗಾಗಲಿ ಗಂಡಿಗಾಗಲಿ ವಿರಸ ಮೂಡುವಂತಿರಬಾರದು. ಈ ವಿಚಾರದಲ್ಲಿ ಗಂಡಸರು ಹೆಚ್ಚು ಕಾಳಜಿ ವಹಿಸಬೇಕು. ಸಾಮಾನ್ಯವಾಗಿ ಎಲ್ಲ ವಿಚಾರಗಳಲ್ಲೂ ಗಂಡಿಗಿಂತ ಹೆಣ್ಣಿಗೆ ಹೊತ್ತು ಗೊತ್ತಿನ ಕಲ್ಪನೆ ಇರುತ್ತದೆ. ಹೆಣ್ಣು ರತಿಕ್ರಿಯೆ ಬೇಡ ಎಂದು ಹೇಳಲು ನಾನಾ ಕಾರಣಗಳಿರುತ್ತವೆ. ಆದರೆ ಆಕೆಗೂ ರತಿಕ್ರಿಯೆಯ ಆಕಾಂಕ್ಷೆಗಳು ಇರುತ್ತವೆ. ಆದರೆ, ಆಕೆ ಕೆಲವೊಂದು ಸಮಯದಲ್ಲಿ ವಿವೇಚನೆಯಿಂದ ರತಿಕ್ರಿಯೆಯನ್ನು ನಿರಾಕರಿಸಬಹುದು. ಆ ಸಂದರ್ಭದಲ್ಲಿ ಗಂಡು ಆಕೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮನೆ ಕೆಲಸಗಳ ಒತ್ತಡ…
ಗದಗ: ಕಾಂಗ್ರೆಸ್ ಮುಖಂಡರಾಗಿರುವ ಜನಪ್ರಿಯ ವೈದ್ಯ ಶಶಿಧರ್ ಹಟ್ಟಿ ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಹೆಸರು ಇರುವುದು ವಿಶೇಷವಾಗಿದೆ. ತನ್ನ ಆತ್ಮಹತ್ಯೆಗೆ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಕಾರಣ ಎಂದು ಶಶಿಧರ ಹಟ್ಟಿ ಬರೆದಿಟ್ಟಿದ್ದಾರೆ. “ನಿಜವೆಂದರೆ ಶಶಿಧರ ಹಟ್ಟಿ, ಶರಣಗೌಡ ಪಾಟೀಲ್ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ಭಾಗಿದಾರರು. ಆದರೆ, ಶಶಿಧರ ಹಟ್ಟಿ ಅವರು ಎಲ್ಲಾ ಲೆಕ್ಕವನ್ನು ಸರಿಯಾಗಿ ಕೊಟ್ಟರೂ ಪದೇಪದೆ ಶರಣಗೌಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ” ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ತನ್ನ ಆತ್ಮಹತ್ಯೆಗೆ ಕಾರಣವಾಗಿರುವ ಶರಣ ಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ರಿಗೆ ಈ ವಿಷಯ ತಿಳಿಸಿ ಎಂದು ಮನವಿ ಮಾಡಲಾಗಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಘಟನೆ ನಡೆದಿದೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ…
ಬೆಂಗಳೂರು: ಮಾಗಡಿ ಮುಖ್ಯರಸ್ತೆಯ ಕಡಬಗೆರೆ ಕ್ರಾಸ್ ಬಸ್ ನಿಲ್ದಾಣ ಬಳಿ ಯುವಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ಯುವಕ ಉತ್ತರ ಭಾರತ ಮೂಲದ ಯುವಕನೆಂದು ತಿಳಿದು ಬಂದಿದ್ದು, ಮೃತನ ಗುರುತು ಪತ್ತೆಯಾಗಿಲ್ಲ. ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಲಗಿದ್ದರಲ್ಲೆ ಯುವಕ ಮೃತಪಟ್ಟಿದ್ದಾನೆ. ಯುವಕನ ಶವ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ನ ಅರಣ್ಯದಂಚಿನಲ್ಲಿರುವ ಶಿವಪುರ ಹೊರವಲಯದಲ್ಲಿ ಹುಲಿ ದಾಳಿಗೆ ಇಬ್ಬರು ಕುರಿಗಾಹಿಗಳಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ. ಶಿವಶೆಟ್ಟಿ(55), ಜವರಯ್ಯ(65) ಗಾಯಗೊಂಡವರು. ಮೊದಲಿಗೆ ಕುರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಕುರಿಯನ್ನು ರಕ್ಷಿಸಲು ಕುರಿಗಾಹಿಗಳು ಯತ್ನಿಸಿದಾಗ ಕುರಿಗಾಹಿಗಳ ಮೇಲೆ ದಾಳಿ ಮಾಡಿದೆ. ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿಯಲ್ಲಿ ಇತ್ತೀಚೆಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಕಲ್ಲಹಳ್ಳಿ-ಸಂಪಿಗೆಪುರ ಮಾರ್ಗದಲ್ಲಿ ಹುಲಿ ಸಂಚರಿಸುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪದೇ ಪದೆ ಹುಲಿ ಕಾಣಿಸಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.
ಸಂಘಪರಿವಾರದ ಹೋರಾಟಗಾರ, ಬಿಜೆಪಿ ಕಟ್ಟಾಳು ನಾರಾಯಣಸಾ ಭಾಂಡಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ ಎಂದು ವರದಿ ತಿಳಿಸಿದೆ. ಬಿಜೆಪಿ ಘೋಷಣೆ ಬೆನ್ನಲ್ಲೇ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರು ಘೋಷಣೆಯಾಗುತ್ತೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಹೋರಾಟ ಹಾಗೂ ಹಿರಿತನ ಮನಗಂಡು ಪಕ್ಷದ ಹಿರಿಯರು ನನಗೆ ರಾಜ್ಯಸಭಾ ಸ್ಥಾನ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿ, ಗುರುತಿಸುವುದು ಬಿಜೆಪಿಯಲ್ಲಿ ಮಾತ್ರ ಎಂದು ನಾರಾಯಣಸಾ ಹೇಳಿದ್ದಾರೆ. ನಾರಾಯಣಸಾ ಭಾಂಡಗೆ ಸಂಘದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ತಮ್ಮ 17 ನೇ ವಯಸ್ಸಿಗೆ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದರು. ಬಾಗಲಕೋಟೆಯಲ್ಲಿ ಎಬಿವಿಪಿ ಸಂಸ್ಥಾಪಕ ಸದಸ್ಯರೂ ಆಗಿದ್ದರು. ವಿಶ್ವ ಹಿಂದೂ ಪರಿಷತ್ ನಲ್ಲೂ ಸೇವೆ ಸಲ್ಲಿಸಿದ್ದಾರೆ. 1973 ರಲ್ಲಿ ಅಂದಿನ ಜನಸಂಘ ಸೇರ್ಪಡೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಇಂದಿರಾ ಗಾಂಧಿ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ಕೊಟ್ಟಾಗ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿ ಬಂಧನಕ್ಕೆ ಒಳಗಾಗಿದ್ದರು. ತುರ್ತು ಪರಿಸ್ಥಿತಿ…
ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಭಾರತ ಸರ್ಕಾರದ ಮಧ್ಯಪ್ರವೇಶದ ಬಳಿಕ ಈ ಎಂಟು ಮಂದಿಯ ಮರಣ ದಂಡನೆಯನ್ನು ಸುಧೀರ್ಘ ಅವಧಿಯ ಕಾರಾಗೃಹ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು ಎಂದು ವರದಿ ತಿಳಿಸಿದೆ. ಕತಾರ್ ನಲ್ಲಿ ದಹ್ರಾ ಗ್ಲೋಬಲ್ ಪರವಾಗಿ ಗೂಢಚಾರಿಕೆ ಕಾರ್ಯ ನಿರ್ವಹಿಸುತ್ತಿದ್ದ ಈ ಎಂಟು ಮಂದಿಯನ್ನು ಬಿಡುಗಡೆ ಮಾಡಿದ ಅಲ್ಲಿನ ಸರ್ಕಾರಕ್ಕೆ ಭಾರತ ಕೃತಜ್ಞತೆ ಸಲ್ಲಿಸಿದೆ. ಈ ಪೈಕಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ವ್ಯಕ್ತಿಗಳು ಭಾರತಕ್ಕೆ ಮರಳಲು ಅನುವಾಗುವಂತೆ ಕತಾರ್ ನ ಅಮೀರ್ ಕೈಗೊಂಡ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶ್ಲಾಘಿಸಿದೆ. ದೇಶದ ಸಬ್ಮೆರಿನ್ ಯೋಜನೆಯ ಬಗ್ಗೆ ಗೂಢಚರ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಈ ಎಂಟು ಮಂದಿಯನ್ನು 2022ರ ಅಕ್ಟೋಬರ್ ನಲ್ಲಿ ಕತಾರ್ ನಲ್ಲಿ ಬಂಧಿಸಲಾಗಿತ್ತು. ಕತಾರ್ ನ್ಯಾಯಾಲಯ ಇವರಿಗೆ ಗಲ್ಲು ಶಿಕ್ಷೆ…
ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಮಗನ ಮದುವೆಯನ್ನು ದೇವಾಲಯದ ಎದುರು ಮಾಡಿಸಿದ ಘಟನೆ ನಡೆದಿದೆ. ಮಹಿಬೂಬ್ ಅಹ್ಮದ್ ಹಾರಕೂಡ ಎಂಬುವರ ಪುತ್ರ ಸಿಕಂದರ್ ಮದುವೆ ಗ್ರಾಮದ ಖಂಡೇಶ್ವರ ಪಾದಗಟ್ಟೆ ಎದುರು ವಿಜೃಂಭಣೆಯಿಂದ ನಡೆದಿದೆ. ಮದುವೆ ಶಾಸ್ತ್ರ ಮುಸ್ಲಿಂ ಧರ್ಮದ ಪ್ರಕಾರ ನಡೆದಿದ್ದು ಬಿಟ್ಟರೆ ಉಳಿದೆಲ್ಲವೂ ಲಿಂಗಾಯತ ಸಂಪ್ರದಾಯದ ಪ್ರಕಾರ ನಡೆಯಿತು ಎಂದು ವರದಿ ತಿಳಿಸಿದೆ. ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮನೆಗಳಿವೆ. ಇಲ್ಲಿಯವರೆಗೆ ಅವರೆಲ್ಲರೂ ಗ್ರಾಮದಲ್ಲಿರುವ ಎರಡೂ ದರ್ಗಾಗಳ ಎದುರು ವೇದಿಕೆ ಹಾಕಿ ಮದುವೆ ಮಾಡಿಸುತ್ತಿದ್ದರು. ಆದರೆ ಮಹಿಬೂಬ್ ಹಿಂದೂ ಸಮಾಜದವರೊಂದಿಗೆ ಕೂಡಿ ಖಂಡೇಶ್ವರನ ಪಾದುಕೆ ದೇಗುಲದ ಎದುರು ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ.
ಯುವಕನೋರ್ವ ನಡು ರಸ್ತೆಯಲ್ಲಿಯೇ ಗನ್ ಹಿಡಿದು ಹುಚ್ಚಾಟ ಮೆರೆದ ಘಟನೆ ಶಿವಮೊಗ್ಗದ ಸಾಗರ ಮಾರ್ಕೆಟ್ ರಸ್ತೆ ಹಿಂಭಾಗದಲ್ಲಿ ನಡೆದಿದೆ. ಈತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಜನರೆದುರು ಬಂದು ನಡುರಸ್ತೆಯಲ್ಲಿಯೇ ಶೂಟ್ ಮಾಡುತ್ತೇನೆ ಎಂದು ಅಲ್ಲಿನ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾನೆ. ಗನ್ ನೋಡಿ ಕೆಲಕಾಲ ಜನರು ಭಯಭೀತರಾಗಿದ್ದಾರೆ. ಅವಾಜ್ ಹಾಕಿದ ಯುವಕನಿಗೆ ಸ್ಥಳೀಯ ಯುವಕರು ಥಳಿಸಿದ್ದಾರೆ. ಪ್ರಕರಣ ಸಂಬಂಧ ಸಾಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಡಿಮೆ ವೆಚ್ಚದ ತಿನಿಸು, ಜಾತ್ರೆಗಳಲ್ಲೂ ಮಕ್ಕಳ ಮನಸೆಳೆಯೊ ಬಾಂಬೆ ಮಿಠಾಯಿ ಕಳೆದ ಇಪ್ಪತ್ತು ವರ್ಷಗಳಿಂದ ಹೆಚ್ಚಾಗಿ ಮುನ್ನೆಲೆಗೆ ಬಂದ ಈ ತಿಸಿಸು ಎನ್ನಲಾಗಿದೆ. ನೋಡಲು ಆಕರ್ಷಕವಾಗಿದ್ದು, ದರವೂ ಕಡಿಮೆ ಇರುವುದರಿಂದ ಎಲ್ಲರ ಕೈಗೆಟುಕುವ ರುಚಿಯಾದ ಸಿಹಿ ತಿಂಡಿಗಳಲ್ಲಿ ಬಾಂಬೆ ಮಿಠಾಯಿ ಪ್ರಮುಖವಾಗಿತ್ತು. ಆದರೆ ಇದೀಗ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಬಾಂಬೆ ಮಿಠಾಯಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚಿದ್ದು, ಪುದುಚೇರಿ ಸರ್ಕಾರವು ಕಳೆದ ವಾರದಿಂದ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಿದೆ. ಸದ್ಯ ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಬಾಂಬೆ ಮಿಠಾಯಿಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ರೊಡಮೈನ್-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಪುದುಚೇರಿಯಾದ್ಯಂತ ಇನ್ನು ಬಾಂಬೆ ಮಿಠಾಯಿ ಮಾರಾಟ ನಿಷೇಧಿಸಿರುವುದಾಗಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ತಿಳಿಸಿದ್ದಾರೆ. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮಕ್ಕಳಿಗೆ…