ತುಮಕೂರು: ಮೀನುಗಾರಿಕೆ ಇಲಾಖೆಯು ಮೀನುಗಾರಿಕೆಯಲ್ಲಿ ತೊಡಗಿರುವ ಅರ್ಹ ಮೀನುಗಾರರು, ಮೀನು ಕೃಷಿಕರು, ಸಂಘಗಳಿಗೆ 2026–27ನೇ ಸಾಲಿನಲ್ಲಿ ವಿವಿಧ ಜಿಲ್ಲಾ ವಲಯ ಯೋಜನೆಗಳ ಕಾರ್ಯಕ್ರಮದಡಿ ಸೌಲಭ್ಯ ವಿತರಣೆ ಸಹಾಯಧನ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ.
ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಹಾಗೂ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಮೀನುಗಾರಿಕೆ ಸಲಕರಣೆಗಳಾದ ನೈಲಾನ್ ಬಲೆ, ತಕ್ಕಡಿ, ಪ್ಲಾಸ್ಟಿಕ್ ಕ್ರೇಟ್ಸ್ , ಲೈಫ್ ಜಾಕೆಟ್, ಫೈಬರ್ ಗ್ಲಾಸ್ ಹರಿಗೋಲು, ಇನ್ಸು ಲೇಟೆಡ್ ಬಾಕ್ಸ್ ಇತ್ಯಾದಿಗಳನ್ನು 20,000 ರೂ.ಗಳವರೆಗೆ ಉಚಿತವಾಗಿ ನೀಡಲಾಗುವುದು.
ಜಿಲ್ಲಾ ವಲಯದಲ್ಲಿ ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಮತ್ಸ್ಯವಾಹಿನಿ ಯೋಜನೆಯಡಿ ಮೀನು ಮಾರಾಟಕ್ಕಾಗಿ ಮೀನು ಮಾರಾಟಗಾರರಿಗೆ ತ್ರಿಚಕ್ರ ವಾಹನ (ಆಟೋ), ದ್ವಿಚಕ್ರ ವಾಹನ (ಮೊಪೆಡ್) ಹಾಗೂ ಸೈಕಲ್‌ನೊಂದಿಗೆ ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯವಾಣಿ ಸಂಖ್ಯೆ: 8277200300, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ತುಮಕೂರು ಹಾಗೂ ಪಾವಗಡ-9844665991ನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


