Author: admin

ತಿಪಟೂರು: ಸಂವಿಧಾನ ಒಂದು ಜಾತಿಗೆ ಅಥವಾ ವರ್ಗಕ್ಕೆ ಜನರಿಗೆ ಸೀಮಿತ ಎಂಬ ಭ್ರಮೆಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಸಿ.ಬಿ.ಶಶಿಧರ್ ತಿಳಿಸಿದರು. ಸ್ಪಂದನ ಟ್ರಸ್ಟ್ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ ಸಂವಿಧಾನದ ಅರಿವು ಹಾಗೂ ಸಂವಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರು ಶಿಬಿರಾರ್ಥಿಗಳ ಪೈಕಿ 20 ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಬೆಳ್ಳಿ ನಾಣ್ಯ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಐದು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬೆಳ್ಳಿ ನಾಣ್ಯಹಾಗೂ ತಲ 5,000 ಸಾವಿರ ರೂಪಾಯಿ  ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಉತ್ತಮ ಹತ್ತು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬೆಳ್ಳಿ ನಾಣ್ಯ ನೀಡಿ ತಲ ಎರಡೂವರೆ ಸಾವಿರ ರೂಪಾಯಿ ನೀಡಿಸನ್ಮಾನಿಸಲಾಯಿತು. ಉಳಿದ ಆರು ಶಿಬಿರಾರ್ಥಿ ಗಳಿಗೆ ಬೆಳ್ಳಿ ನಾಣ್ಯದೊಂದಿಗೆ ಪ್ರಶಸ್ತಿ ಪತ್ರನೀಡಲಾಯಿತು. ಈ ಕಾರ್ಯಕ್ರಮದೊಂದಿಗೆ ಮುಖಂಡರಾದ ವಕೀಲೆ ಪೌಸಿಯ ಖಾನ ರಂಗಸ್ವಾಮಿ ಶಾಂತಕುಮಾರ್ ಹಲವಾರು ಮುಖಂಡರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ಆನಂದ್…

Read More

ಬೀದರ್: ಜಿಲ್ಲೆಯ ವರ್ಷದ ಮೊದಲ ಮಳೆ ಸೋಮವಾರ ಬೀದರ್‌ ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತುಂತುರಿನಿಂದ ಸುರಿಯಿತು. ಬೀದರ್‌ ನಗರದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಜೋರು ಮಳೆಯಾದರೆ, ಹುಮನಾಬಾದ್‌ ನಲ್ಲಿ ಮಧ್ಯಾಹ್ನವೇ ಮಳೆ ಹನಿ ಬಿದ್ದವು, ಇನ್ನು ಔರಾದ್‌, ಭಾಲ್ಕಿ ಸೇರಿ ನಾನಾ ಕಡೆ ಸಂಜೆ ಕೆಲ ಹೊತ್ತು ತುಂತುರಾಗಿ ಸುರಿಯಿತು. ಬೇಸಿಗೆಯ ಆರಂಭದಲ್ಲೇ ಸುಡುಬಿಸಿಲಿನೊಂದಿಗೆ ಮಳೆಯ ಸಿಂಚನವಾಯಿತು. ಕೆಲವಡೆ ಗುಡುಗಿನ ಸದ್ದು, ತಣ್ಣನೆಯ ಗಾಳಿ ಬೀಸಿತು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಯಾದಗಿರಿ: ಸದಾ ವಿವಾದಾತ್ಮಕ ಮಾತುಗಳಿಂದಲೇ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಕುರಿತು ನೀಡಿದ ಹೇಳಿಕೆಯಿಂದ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಫೆಬ್ರವರಿ 21ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್‌ ನಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ರಾಷ್ಟ್ರನಾಯಕರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯತ್ನಾಳ್ ಹೇಳಿದ್ದೇನು? “ಮಹಾತ್ಮ ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಅವರು ಪಾಕಿಸ್ತಾನದ ರಾಷ್ಟ್ರಪಿತ. ನಾನು ಅವರನ್ನು ಭಾರತದ ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ, ನಮಗೆ ಅಂಬೇಡ್ಕರ್ ಅವರು ಇದ್ದರೆ ಸಾಕು” ಎಂದು ಯತ್ನಾಳ್ ಗುಡುಗಿದ್ದಾರೆ. ದೇಶದ ಮೊದಲ ಪ್ರಧಾನಿ ವಿಚಾರವಾಗಿಯೂ ಮಾತನಾಡಿದ ಅವರು, “ಜವಾಹರಲಾಲ್ ನೆಹರು ಅವರನ್ನು ಮೊದಲ ಪ್ರಧಾನಿ ಎಂದು ನಾನು ಒಪ್ಪಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ದೇಶದ ಮೊದಲ ಪ್ರಧಾನಿ” ಎಂದು ವಾದಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಮಂಗಳೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಲೂಡೋ ಕಾಯಿನ್ (ದಾಳ) ನುಂಗಿದ ಪರಿಣಾಮ ಎಂಟು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಗಳೂರು ಸಮೀಪದ ಉಳ್ಳಾಲದ ಕೊಲ್ಯದಲ್ಲಿ ನಡೆದಿದೆ. ಘಟನೆಯ ವಿವರ: ಮೃತ ಬಾಲಕಿಯನ್ನು ತನುಷ್ಕಾ ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ತನುಷ್ಕಾ ತೊಕ್ಕೊಟ್ಟಿನ ಸೆಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಮಧ್ಯಾಹ್ನ ತನುಷ್ಕಾ ತನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದಳು. ಈ ವೇಳೆ ಆಟದ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕಸ್ಮಿಕವಾಗಿ ನುಂಗಿದ್ದಾಳೆ. ಕಾಯಿನ್ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಬಾಲಕಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಬಾಲಕಿಯನ್ನು ಕುಟುಂಬಸ್ಥರು ಮತ್ತು ನೆರೆಹೊರೆಯವರು ಸೇರಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಶ್ವಾಸನಾಳದಲ್ಲಿ…

Read More

ಉತ್ತರ ಕನ್ನಡ: ರಾಜ್ಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮುಖ ಅಪ್‌ ಡೇಟ್ ನೀಡಿದ್ದಾರೆ. ಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಚುನಾವಣಾ ಸಮಯ: ಜೂನ್ 2026 ರ ವೇಳೆಗೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಯಾವ ಸಂಸ್ಥೆಗಳಿಗೆ ಚುನಾವಣೆ?: ಒಟ್ಟು 5,952 ಗ್ರಾಮ ಪಂಚಾಯಿತಿಗಳು, 239 ತಾಲ್ಲೂಕು ಪಂಚಾಯಿತಿಗಳು, 31 ಜಿಲ್ಲಾ ಪಂಚಾಯಿತಿಗಳು ಮತ್ತು ಐದು ಪ್ರಮುಖ ನಗರ ನಿಗಮಗಳಿಗೆ ಚುನಾವಣೆ ನಡೆಯಲಿದೆ. 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದ ಕಾರಣ ಪ್ರತಿಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿತ್ತು. ಸುಮಾರು 195 ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಗಿದಿದ್ದರೂ ಚುನಾವಣೆ ನಡೆದಿರಲಿಲ್ಲ. ಗೋಕರ್ಣ ಅಭಿವೃದ್ಧಿ: ಗೋಕರ್ಣವನ್ನು ಪಟ್ಟಣ ಪಂಚಾಯಿತಿ (TMC) ಆಗಿ ಮೇಲ್ದರ್ಜೆಗೇರಿಸುವ ಕುರಿತಾದ…

Read More

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಸಂಕಷ್ಟಗಳ ಸರಮಾಲೆ ಮುಂದುವರಿದಿದ್ದು, ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನೆಲೆ: ಇತ್ತೀಚೆಗಷ್ಟೇ ಮುಡಾ ಮಾಜಿ ಆಯುಕ್ತ ಜಿ.ಬಿ. ನಟೇಶ್ ವಿರುದ್ಧ ನಕಲಿ ದಾಖಲೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವಿಚಾರಣೆ ಮುಗಿಸಿ ಶನಿವಾರವಷ್ಟೇ ಅವರು ಬಿಡುಗಡೆಯಾಗಿದ್ದರು. ಆದರೆ, ಅದೇ ದಿನ ಸಂಜೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಹೊಸ ಎಫ್‌ಐಆರ್ (FIR) ದಾಖಲಾಗಿದೆ. ಎಲ್‌ ಐಸಿ ಕಾಲೋನಿಯ ನಿವಾಸಿ ಪವಿತ್ರಾ ಬಿ.ಎನ್. ಎಂಬುವವರು ಈ ದೂರು ನೀಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮೈಲಾರಪ್ಪ ಬಿ.ಸಿ. ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರ ಪ್ರಕಾರ, 2025ರ ಡಿಸೆಂಬರ್ 5ರಂದು ಅವರ ನಿವಾಸಕ್ಕೆ ಒಂದು ಪತ್ರ ಬಂದಿತ್ತು. ಅದರಲ್ಲಿ ಅವರ ದಿವಂಗತ ಪತಿ…

Read More

ಹಾಸನ: ಜಿಲ್ಲೆಯ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬುಲೆಟ್ ಬೈಕ್ ಚಲಾಯಿಸುತ್ತಿದ್ದ 23 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಯುವತಿಯನ್ನು ಸತ್ಯಮಂಗಲ ಬಡಾವಣೆಯ ನಿವಾಸಿ ಪ್ರಿಯಾ (23) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಸ್ನೇಹಿತೆ ಸ್ವಾತಿ (24) ಎಂಬುವವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣ: ಮೂಲಗಳ ಪ್ರಕಾರ, ಯುವತಿಯರು ಹೆಲ್ಮೆಟ್ ಧರಿಸದೆ ಬುಲೆಟ್‌ ನಲ್ಲಿ ‘ಜಾಲಿ ರೈಡ್’ ಹೊರಟ್ಟಿದ್ದರು. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿದ್ದ ಹಂಪ್ (ವೇಗ ನಿಯಂತ್ರಕ) ಗಮನಿಸದ ಕಾರಣ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಸಾವಿನಿಂದ ಅವರ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ. ನಮ್ಮತುಮಕೂರಿನ ಕ್ಷಣ…

Read More

 ರಾಘವೇಂದ್ರ ಅಡಿಗ ಎಚ್ಚೆನ್ ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್. ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ‌ ಅಬ್ಬರದ ಎಂಟ್ರಿ ನೀಡಿದ್ದಾರೆ. ಈ ಎಂಟ್ರಿ ನೋಡಿದರೆ ಮುಂದೊಮ್ಮೆ ಚಿತ್ರರಂಗದಲ್ಲಿ ಡಾಮಿನೇಟ್ ಮಾಡಬಲ್ಲ ಆಲ್ಫಾ ಪ್ರತಿಭೆಯಾಗಿ ಕಾಣಿಸುತ್ತಾರೆ. ಯಾಕೆಂದರೆ ಹೇಮಂತ್ ನಿಜವಾದ ಬದುಕಿನಲ್ಲಿಯೂ ಮುನ್ನುಗ್ಗುವ ವ್ಯಕ್ತಿತ್ವದವರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾ‌ ನಾಯಕನಾಗಬೇಕು ಎಂದು ಕನಸು ಕಂಡವರು. ಅದಕ್ಕಾಗಿ ಏನೆಲ್ಲ ಹಾರ್ಡ್ ವರ್ಕ್ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ಹಾಗಾಗಿಯೇ ಆಲ್ಫಾ‌ ಚಿತ್ರ ನೋಡುವಾಗ ಫೈಟ್ , ಡಾನ್ಸ್  ಎಲ್ಲವೂ ತುಂಬಿದ ಕಂಪ್ಲೀಟ್ ಪ್ಯಾಕೇಜ್ ಆಗಿ ಹೊರ ಬಂದಿದೆ. ಇದಕ್ಕೆಂದೇ ಎಲ್ಲವನ್ನೂ ಕಲಿತು, ಗಮನ ಸೆಳೆಯಲೇಬೇಕು ಅಂತ  ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆ್ಯಕ್ಷನ್ ಹೀರೋ ಆಗಬೇಕಾದರೆ ಫಿಟ್ ಆ್ಯಂಡ್ ಫೈನ್ ಆಗಿರಲೇಬೇಕು ಎಂದು ದೇಹ ದಂಡಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ  ಮೊದಲ ನೋಟಕ್ಕೆ ಮೈಕಟ್ಟಿನಿಂದಲೇ ಗಮನ ಸೆಳೆಯುತ್ತಿದ್ದಾರೆ. ತೆಲುಗಿನ‌ ಖ್ಯಾತ ಸಾಹಸ ನಿರ್ದೇಶಕ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ನ್ಯಾಯಾಲಯದಿಂದ ಸಣ್ಣ ಮಟ್ಟದ ರಿಲೀಫ್ ಸಿಕ್ಕಿದೆ. ಅಮಾನತುಗೊಂಡಿದ್ದ ಅವರ ಗನ್ ಲೈಸೆನ್ಸ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 (A2) ಆರೋಪಿಯಾಗಿರುವ ದರ್ಶನ್, ಈ ಹಿಂದೆ ಮಧ್ಯಂತರ ಜಾಮೀನು ಪಡೆದಿದ್ದಾಗ ಪೊಲೀಸರು ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿದ್ದರು. ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ನಡೆದಿದ್ದೇನು? ವಿಚಾರಣೆ ವೇಳೆ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ಅವರು, “ದರ್ಶನ್ ಅವರು 2008ರಿಂದಲೂ ಲೈಸೆನ್ಸ್ ಇರುವ ಗನ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ ಅನ್ನು ಈಗಾಗಲೇ ಸರಂಡರ್ ಮಾಡಲಾಗಿದೆ. ಕೇವಲ ದರ್ಶನ್ ಎಂಬ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತು ಮಾಡಲಾಗಿದೆ” ಎಂದು ವಾದ…

Read More

ಕಾರವಾರ: ಅಂಕೋಲಾ ಮತ್ತು ಕುಮಟಾ ತಾಲೂಕಿನ ಜನತೆಯ ಬಹಳ ದಿನದ ಬೇಡಿಕೆಯಾದ, ಅಂಕೋಲಾದ ಮಂಜಗುಣಿ ಮತ್ತು ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೂ.34.21 ಕೋಟಿ ವೆಚ್ಚದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗಂಗಾವಳಿ ನದಿಯನ್ನು ದಾಟಲು ಬಹಳ ಕಷ್ಟ. ಮಳೆಗಾಲದಲ್ಲಿ ನದಿಯನ್ನು ದಾಟಲು ಸಾಧ್ಯವಿಲ್ಲ. ಈ ಭಾಗದ ಜನರು ಸೇತುವೆ ನಿರ್ಮಾಣಕ್ಕಾಗಿ ಬೇಡಿಕೆ ಮತ್ತು ಹೋರಾಟಗಳನ್ನು ಮಾಡಿದ್ದರು. 2017 ರಲ್ಲಿ ಇಲ್ಲಿಗೆ ಭೇಟಿ ನೀಡಿ, ಪರಿಶೀಲಿಸಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೆ, ನಾನೇ ಶಂಕುಸ್ಥಾಪನೆ ಮಾಡಿದ ಸೇತುವೆಯನ್ನು ಈಗ ಉದ್ಘಾಟಿಸುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದರು. ಬಹಳ ಹಿಂದೆಯೇ ಈ ಸೇತುವೆ ಪೂರ್ಣಗೊಳ್ಳಬೇಕಿತ್ತು ಆದರೆ ಕಾರಣಾಂತರದಿAದ ಹಿಂದಿನ ಸರ್ಕಾರ ಆಸಕ್ತಿ ವಹಿಸದಿದ್ದರಿಂದ ಈ ಸೇತುವೆ ಉದ್ಘಾಟನೆ ಮಾಡಲು ವಿಳಂಭವಾಯಿತು. ಒಂದು ವೇಳೆ ಸೇತುವೆಯಾಗದಿದ್ದರೆ ಸುಮಾರು 18 ಕಿ.ಮೀ. ಬಳಸಿ ಈ ಭಾಗದ ಜನರು ಗಂಗಾವಳಿ ಗ್ರಾಮವನ್ನು ತಲುಪಬೇಕಾಗಿತ್ತು. ಈ…

Read More