Subscribe to Updates
Get the latest creative news from FooBar about art, design and business.
- ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್
- ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
- ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳ ಆಯ್ಕೆ: ಪಾರದರ್ಶಕ ಆಯ್ಕೆ ಪ್ರಕ್ರಿಯೆ
- ಜುಲೈ 28ರಂದು ಭಾರತ–ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಾಗಾರ
- ತಿಮ್ಮಮ್ಮನಹಳ್ಳಿ ಗುಂಪು ಘರ್ಷಣೆ: 7 ಮಂದಿ ಬಂಧನ
- ಕಾಡಂಚಿನ ಗ್ರಾಮದ ಸಾಧಕ ಜಾಕಿ ಪ್ರತಾಪ್ ಗೆ ‘ಅಮ್ಮ ವಸುಂಧರೆ’ ಪ್ರಶಸ್ತಿ ಗೌರವ
Author: admin
ತುಮಕೂರು: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚೆಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ದಿನಗಳ ಕಾಲ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ಜರುಗಿತು. ದೇವಿಯ ಉತ್ಸವ ಪ್ರಾರಂಭವಾಗುತ್ತಿದ್ದಂತೆಯೇ ಗ್ರಾಮದ ಸುತ್ತ ಕುರ್ಜು ರಥವನ್ನು ಎಳೆದು, ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಗ್ರಾಮಸ್ಥರು ಆರತಿ ಸೇವೆ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಮಾರಮ್ಮನ ಜಾತ್ರೆ ಎಂದರೆ ಮಾಂಸಾಹಾರಿ (ನಾನ್–ವೆಜ್) ಊಟದ ವ್ಯವಸ್ಥೆ ಕಡ್ಡಾಯವಾಗಿರುತ್ತದೆ. ಅದೇ ರೀತಿ ಚೆಂಪುಗಾನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ನೆಂಟರು, ರಾಜಕೀಯ ಮುಖಂಡರು, ಅಧಿಕಾರಿಗಳು, ಸ್ನೇಹಿತರು ಮತ್ತು ಬಂಧುಗಳಿಗಾಗಿ ಗ್ರಾಮಸ್ಥರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುರಿಗಳನ್ನು ಕಡಿದು ವಿಶೇಷ ಬಾಡೂಟದ ವ್ಯವಸ್ಥೆ ಮಾಡಿದ್ದರು. ಪ್ರತಿಯೊಬ್ಬರ ಮನೆಯ ಮುಂದೆ, ರಸ್ತೆಯ ಇಕ್ಕೆಲಗಳಲ್ಲಿ ಶಾಮಿಯಾನ (ಪೆಂಡಾಲ್) ಹಾಕಿ ಬಾಡೂಟದ ವ್ಯವಸ್ಥೆ ಮಾಡಿದ್ದು ಈ ಜಾತ್ರೆಯ ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಊರಿನ ಹೊರಗಿನ ಮುತ್ಯಾಲಮ್ಮ, ತೋರೆ ಮಾರಮ್ಮ, ಸಪ್ಲಮ್ಮ, ಮಾವುತ್ತೂರಮ್ಮ ಸೇರಿದಂತೆ ಸಪ್ತ…
ಔರಾದ್: ತಾಲೂಕಿನ ಗುಡಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ವಿಬಿ-ಜಿ ರಾಮ್ ಜಿ (ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ – ಗ್ರಾಮೀಣ) ಯೋಜನೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದಾತ್ತ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕು ಪಂಚಾಯತ್ ಐಇಸಿ ಸಂಯೋಜಕ ಅಂಬಾದಾಸ್ ಪಾಟೀಲ್ ಅವರು ವಿವರಿಸಿದರು. ಯೋಜನೆಯ ಪ್ರಮುಖ ಮುಖ್ಯಾಂಶಗಳು: ಕೂಲಿ ದರ ಹೆಚ್ಚಳ: ಈ ಯೋಜನೆಯಡಿ ದಿನಗೂಲಿ ಮೊತ್ತವನ್ನು ರೂ. 370 ರಿಂದ ರೂ. 382ಕ್ಕೆ ಏರಿಕೆ ಮಾಡಲಾಗಿದೆ. ಉದ್ಯೋಗ ದಿನಗಳ ವಿಸ್ತರಣೆ: ವಾರ್ಷಿಕ ಉದ್ಯೋಗ ಖಾತರಿ ದಿನಗಳನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಹೆಚ್ಚಿದ ವಾರ್ಷಿಕ ಆದಾಯ: ಈ ಬದಲಾವಣೆಗಳಿಂದಾಗಿ, ಗ್ರಾಮೀಣ ರೋಜ್ ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವ ಒಂದು ಕುಟುಂಬವು ವರ್ಷಕ್ಕೆ…
ತಿಪಟೂರು: ಕೇವಲ 9.50 (ಒಂಭತ್ತುವರೆ) ರೂಪಾಯಿಗೋಸ್ಕರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಎಸ್ಬಿಐ ವ್ಯವಸ್ಥಾಪಕರು ರೈತನಿಗೆ ನೋಟಿಸ್ ನೀಡಿ, ಎಡವಟ್ಟು ಮಾಡಿದ್ದು ರೈತ ಕಂಗಾಲಾಗಿರುವ ಘಟನೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಬಿಳಿಗೆರೆ ಗ್ರಾಮದ ಬಿ.ಸಿ. ಪ್ರಭುಸ್ವಾಮಿ ಎಂಬ ರೈತ ಎಸ್ಬಿಐನಿಂದ ಕೆಸಿಸಿ ಸಾಲದಲ್ಲಿ ಸುಮಾರು 15 ವರ್ಷಗಳ ಹಿಂದೆ 3 ಲಕ್ಷ ಸಾಲ ಪಡೆದು, ಪಡೆದ ವರ್ಷದಲ್ಲಿ ಸಾಲವನ್ನು ಬ್ಯಾಂಕಿಗೆ ಕಟ್ಟಿ ಸಾಲದಿಂದ ಮುಕ್ತರಾಗಿರುತ್ತಾರೆ. ಪಹಣಿಯಲ್ಲಿಯೂ ಎಸ್ಬಿಐಗೆ ಆಧಾರ ಎಂದು ನಮೂದಾಗಿರುವುದಿಲ್ಲ. ಆದರೆ ಜೂನ್ 18ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಮ್ಮ ತಂದೆಯವರಿಗೆ ನೋಟಿಸ್ ನೀಡಿ, ನೀವು ಕಟ್ಟಬೇಕಾದ ಹಣ 9 ರೂಪಾಯಿ, 50 ಪೈಸೆ ಹಣವನ್ನು ಕಟ್ಟಿ ಇಲ್ಲವಾದರೆ, ಜುಲೈ 11ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಈ ಬಾಕಿ ಉಳಿದಿರುವ ಹಣವನ್ನು ಕಟ್ಟದೆ ಇದ್ದಲ್ಲಿ ಮತ್ತು ನ್ಯಾಯಾಲಯಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದು, ನಮ್ಮ…
ಕೊರಟಗೆರೆ: ಶಾಲಾ ಆವರಣದಲ್ಲಿ ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿ, ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಪ್ಪನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪುನೀತ್ ಎಂದು ಗುರುತಿಸಲಾಗಿದೆ. ಆತ ತುಮಕೂರಿನ ಊರುಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಸಂಜೆ ಸುಮಾರು 5.30 ಗಂಟೆ ವೇಳೆಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಬುಗುರಿ ಆಟವಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ವಿದ್ಯುತ್ ತಂತಿಯಲ್ಲಿದ್ದ ಸ್ಕಿನ್ ಕಳಚಿ, ಗೋಡೆಗೆ ವಿದ್ಯುತ್ ಹರಿದಿರುವ ಶಂಕೆ ವ್ಯಕ್ತವಾಗಿದೆ. ಗೋಡೆಯನ್ನು ಸ್ಪರ್ಶಿಸಿದ ಕ್ಷಣವೇ ಪುನೀತ್ಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ.ಸ್ಥಳೀಯರು ಕೂಡಲೇ ವಿದ್ಯಾರ್ಥಿಯನ್ನು ರಕ್ಷಿಸಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಘಟನೆ…
ತುಮಕೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಜಿಲ್ಲಾ ಶಾಖೆ ತುಮಕೂರು ಇವರ ವತಿಯಿಂದ ಜು.12 ಬೆಳಿಗ್ಗೆ 10.30ಕ್ಕೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಜಿ.ಸಿ.ರಸ್ತೆ, ತುಮಕೂರು ಇಲ್ಲಿ ಮರಾಠ ಕುಲತಿಲಕ ಹಿಂದೂ ಸ್ವರಾಜ್ಯ ಸ್ಥಾಪಕ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಗವಿಪುರಂನ ಶ್ರೀ ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಕೆಕೆಎಂಪಿ ರಾಜ್ಯಾಧ್ಯಕ್ಷ ಎಸ್. ಸುರೇಶ್ ಸಾರೆ ಅವರು ವಹಿಸುವರು. ಸಚಿವ ವಿ.ಸೋಮಣ್ಣ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಎಸ್.ಆರ್.ಸಿಂಧೆ, ಟಿ.ಆರ್.ಸುನಿಲ್ ಚವಾಣ್, ಟಿ.ಆರ್. ವೆಂಕಟರಾವ್ ಚವಾಣ್ ಅವರುಗಳು ಆಗಮಿಸುವರು. ಹೆಚ್.ಎನ್.ಚಂದ್ರಶೇಖರ್ ಶಿವಾಜಿ ಕುರಿತು ಉಪನ್ಯಾಸ ನೀಡುವರು. ಟಿ.ಎಚ್.ಜನಾರ್ಧನ್ ಸೋನಾಲೆ, ಆರ್.ನಾಗೇಶ್ರಾವ್ ಗಾಯಕ್ವಾಡ್, ಟಿ.ವಿ.ಶ್ರೀನಿವಾಸರಾವ್ ಸಾಳಂಕೆ ಅವರುಗಳು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಿರ್ಮಲಾಬಾಯಿ, ಗೋಪಿರಾವ್ ಲಾಟೆ, ಹೇಮೋಜಿರಾವ್ ಸಿಂಧೆ ಅವರುಗಳನ್ನು ಸನ್ಮಾನಿಸಲಾಗುವುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ತುಮಕೂರು: ನಗರದ ಬಿ.ಹೆಚ್. ರಸ್ತೆಯ ತೋಟಗಾರಿಕೆ ಇಲಾಖೆ ರಸ್ತೆಯಲ್ಲಿರುವ ತುಮಕೂರು ಜಿಲ್ಲಾ ಬಲಿಜ ಸಂಘದ ವತಿಯಿಂದ ಆಗಸ್ಟ್ 2 ರಂದು ಹಮ್ಮಿಕೊಳ್ಳಲಾಗಿರುವ ಶ್ರೀ ಯೋಗಿ ನಾರೇಯಣ ಯತೀಂದ್ರರ 191 ನೇ ವರ್ಷದ ಜೀವ ಸಮಾಧಿ ಮಹೋತ್ಸವದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ. 2025–26 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಎಸ್ ಎಸ್ ಎಲ್ ಸಿ, 2ನೇ ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಬಿ.ಇ. ಮತ್ತು ಎಂಬಿಬಿಎಸ್ ಸೇರಿದಂತೆ ಇತರೆ ಉನ್ನತ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಬಲಿಜ ಸಮುದಾಯದ ಗ್ರಾಮೀಣ ಹಾಗೂ ನಗರ ಭಾಗದ ಅರ್ಹ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಸಂಚಾಲಕರುಗಳಾದ ಮಧುಗಿರಿ ಜಯರಾಮ್ (ಮೊಬೈಲ್: 9741669937) ಹಾಗೂ ಕೆ.ಶ್ರೀನಿವಾಸ್ (ದೂ.ಸಂಖ್ಯೆ: 9964231713) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಹೆಚ್. ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಬೀದರ್: ತಾಲೂಕಿನ ಘೋಡಂಪಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂಜೆ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪಾಲ್ಗೊಂಡಿದ್ದ ಬೀದರ್ ಹಾಲು ಒಕ್ಕೂಟದ ಮಾನ್ಯ ನಿರ್ದೇಶಕರಾದ ಭೀಮರಾವ ಬಳತೆ ಅವರು ನೂತನ ಕಟ್ಟಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಹೊಸ ಕಟ್ಟಡ ನಿರ್ಮಾಣದಿಂದ ಸಂಘದ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿ ಹಾಗೂ ಸಂಘವು ಉನ್ನತ ಮಟ್ಟದ ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ರಾಜೇಶ್ವರಿ ಪಂಡರಿನಾಥ್, ಕಾರ್ಯದರ್ಶಿ ನಂದಿನಿ ರಘುನಾಥ್ ರೆಡ್ಡಿ ಹಾಗೂ ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಅಲ್ಲದೆ, ಕೆಎಂಎಫ್ (KMF) ಅಧಿಕಾರಿಗಳಾದ ಸೋಮಶೇಖರ ಸ್ವಾಮಿ (ಇಒ), ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ರಂಜನಾ ಹಾಗೂ ಶ್ರೀಕಾಂತ ಅವರು ಭಾಗವಹಿಸಿ, ನೂತನ ಕಟ್ಟಡ ನಿರ್ಮಾಣ ಕಾರ್ಯವು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿ…
ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಪ್ರಮುಖ ಸಭೆಯಲ್ಲಿ, ಎಲ್ಲಾ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಮಿತಿಯ ವಿವಿಧ ಬಣಗಳ ಸಂಚಾಲಕರು, “ದಲಿತ ಸಂಘರ್ಷ ಒಕ್ಕೂಟವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಬದಲಿಗೆ, ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ನೊಂದವರ ಧ್ವನಿಯಾಗಿ ಹೋರಾಟ ನಡೆಸುವುದು ನಮ್ಮ ಮುಖ್ಯ ಗುರಿಯಾಗಿದೆ” ಎಂದು ತಿಳಿಸಿದರು. ಇದೇ ವೇಳೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಅವರಿಗೆ ಎಲ್ಲರೂ ಶುಭ ಹಾರೈಸಿದರು. ಬಳಿಕ ಮಾತನಾಡಿದ ನೂತನ ಒಕ್ಕೂಟ ಉಸ್ತುವಾರಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ, “ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಗೌರವಿಸುವ ಜೊತೆಗೆ ಅದನ್ನು ರಕ್ಷಿಸುವ ಕೆಲಸವನ್ನು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕಿದೆ. ಸಮಾಜದ ಹಾಗೂ ಸಾರ್ವಜನಿಕರ ವಿವಿಧ…
ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಯಶವಂತಪುರ ಗ್ರಾಮದ ನಿವಾಸಿಯಾದ ಡಿ.ಸುರೇಶ್ ಅವರು ಮುಂಬಡ್ತಿ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ (BEO) ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ, ಅವರ ಸ್ವಗ್ರಾಮದ ನಿವಾಸಿಗಳು ಹಾಗೂ ಶಿಕ್ಷಕ ವೃಂದದವರು ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸಿ ಸನ್ಮಾನಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಯಶವಂತಪುರ ಶಿವಲಿಂಗಯ್ಯ, “ಡಿ.ಸುರೇಶ್ ಅವರು ನಮ್ಮ ಕಾಡಂಚಿನ ಕಟ್ಟಕಡೆಯ ಗ್ರಾಮದ ಹೆಮ್ಮೆಯ ಪುತ್ರ. ನಮ್ಮ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಬಾಲ್ಯದಲ್ಲಿ ತಂದೆ–ತಾಯಿಗೆ ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಲೇ ಉನ್ನತ ವ್ಯಾಸಂಗ ಪೂರೈಸಿದರು. ನಮ್ಮ ಗ್ರಾಮದ ಮೊಟ್ಟಮೊದಲ ಸರ್ಕಾರಿ ನೌಕರರಾಗಿ ಶಿಕ್ಷಣ ಇಲಾಖೆಗೆ ಪಾದರ್ಪಣೆ ಮಾಡಿದ ಇವರು ರಾಯಚೂರು, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ,” ಎಂದು ಸ್ಮರಿಸಿದರು. ಮುಂದುವರಿದು ಮಾತನಾಡಿದ ಅವರು,…
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಗೋಟಾ (ಹಾಳಗೋರ್ಟಾ) ಗ್ರಾಮದಲ್ಲಿ ಶನಿವಾರ ಮುಂಜಾನೆ ಅತ್ಯಂತ ಕರುಣಾಜನಕ ಹಾಗೂ ಬರ್ಬರ ಘಟನೆಯೊಂದು ನಡೆದಿದೆ. ಮನೆಯೊಳಗೆ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಸಂಬಂಧಿಕನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅನಿತಾ (32) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ. ಆರೋಪಿಯನ್ನು ಅದೇ ಗ್ರಾಮದ ಕೈಲಾಸ್ ವೈಜಿನಾಥ್ (ಕೈಲಾಸ್ ಬಿರಾದಾರ್) ಎಂದು ಗುರುತಿಸಲಾಗಿದ್ದು, ಈತ ಮೃತ ಮಹಿಳೆಯ ಸಂಬಂಧಿ ಎಂದು ತಿಳಿದುಬಂದಿದೆ. ಘಟನೆಯ ವಿವರ: ಶನಿವಾರ ಬೆಳಿಗ್ಗೆ ಅನಿತಾ ಅವರು ತಮ್ಮ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸಂಚು ರೂಪಿಸಿ ನುಗ್ಗಿದ ಆರೋಪಿ ಕೈಲಾಸ್, ಏಕಾಏಕಿ ಕೊಡಲಿಯಿಂದ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಅನಿತಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಖಟಕಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ನಿಗೂಢ: ಸಂಬಂಧಿಕನೇ ಆಗಿರುವ…