Subscribe to Updates
Get the latest creative news from FooBar about art, design and business.
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
- ಡಕಾಯಿತಿಗೆ ಸಂಚು: ಐವರ ಬಂಧನ
- ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
- ನ.30 ರಂದು ಅಮೋಘ ಸಂಗೀತ ಕಛೇರಿ
- ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ: ಗ್ರಾಮಸ್ಥರಿಂದ ವಿರೋಧ
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
Author: admin
ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಮಿತ್ರ ಪಕ್ಷ ಡಿಎಂಕೆ ಜೊತೆ ಕಾಂಗ್ರೆಸ್ ಸರ್ಕಾರ ಮಾತನಾಡಬೇಕು. ಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ. ಕೇಂದ್ರ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ತಪ್ಪು ಮಾಡಿದೆ ಎಂದರು.
ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಅಪರಾಧಿ ವಿಷ್ಣು (24) ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ. ಬಾಗಲಗುಂಟೆ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ರೂಪಾ ಕೆ.ಎನ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ ವಾದಿಸಿದ್ದರು.
ದೂರವಾಗಿದ್ದ ಪತ್ನಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡವರು. ಮದ್ಯವ್ಯಸನಿ ಪತಿಯೊಂದಿಗೆ ಜಗಳ ಮಾಡಿಕೊಂಡು ಮಹಿಳೆ ತವರು ಮನೆಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿಯ ಅತಿಯಾದ ಕುಡಿತದಿಂದ ಮನನೊಂದ ಮಹಿಳೆ ತನ್ನ ಮನೆಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತ್ನಿ ತೊರೆದ ಬಳಿಕ ರಾಜೇಶ್ ಮಕ್ಕಳೊಂದಿಗೆ ವಾಸವಾಗಿದ್ದ. ಪತ್ನಿಯನ್ನು ಮನೆಗೆ ಕರೆತರಲು ಪತಿ ಎಷ್ಟು ಸಾಧ್ಯವೋ ಅಷ್ಟು ಸಮಾಧಾನ ಮಾಡಿದರೂ ಪತ್ನಿ ಮಣಿಯದ ಕಾರಣದ ಪತಿ ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲವು ತಿಳಿಸಿದೆ.
ಮೆಟಾ ಅವರ ಇತ್ತೀಚಿನ ವೈಶಿಷ್ಟ್ಯವಾದ ವಾಟ್ಸಾಪ್ ಚಾನೆಲ್ ನಲ್ಲಿ 17 ಲಕ್ಷ ಅನುಯಾಯಿಗಳೊಂದಿಗೆ ಮೋದಿ. ನಿಮ್ಮ ಅನುಯಾಯಿಗಳೊಂದಿಗೆ ಪಠ್ಯ, ಚಿತ್ರಗಳು, ವೀಡಿಯೊಗಳು, ಸ್ಟಿಕ್ಕರ್ ಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಬಹುದಾದ ಅಂತಹ ಚಾನಲ್ ಗಳನ್ನು ಪ್ರಾರಂಭಿಸಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರು. ಮೊದಲ 24 ಗಂಟೆಗಳಲ್ಲಿ 1 ಮಿಲಿಯನ್ ಜನರು ವಾಟ್ಸಾಪ್ ನಲ್ಲಿ ಮೋದಿಯನ್ನು ಫಾಲೋ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈಗಾಗಲೇ ವಾಟ್ಸಾಪ್ ಚಾನೆಲ್ ಗಳನ್ನು ಆರಂಭಿಸಿದ್ದಾರೆ. ಪ್ರಸ್ತುತ 51 ಲಕ್ಷ ಜನರು ಭಾರತೀಯ ಕ್ರಿಕೆಟ್ ತಂಡವನ್ನು ತಮ್ಮ ವಾಟ್ಸಾಪ್ ಚಾನೆಲ್ ನಲ್ಲಿ ಅನುಸರಿಸುತ್ತಿದ್ದಾರೆ. ಅದೇ ರೀತಿ ಅಕ್ಷಯ್ ಕುಮಾರ್ 41 ಲಕ್ಷ ಹಾಗೂ ಕತ್ರಿನಾ ಕೈಫ್ 84 ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ ಮುಂತಾದ ಅನೇಕ ಸೆಲೆಬ್ರಿಟಿಗಳು ವಾಟ್ಸಾಪ್ ಚಾನೆಲ್ ಗಳನ್ನು ಪ್ರಾರಂಭಿಸಿದ್ದಾರೆ. WhatsApp ಚಾನಲ್ ಗೆ ಸೇರಲು WhatsApp ಗೆ ಹೋಗಿ ಮತ್ತು ‘ಅಪ್ ಡೇಟ್ ಗಳು’ ಟ್ಯಾಬ್ ಗೆ ನ್ಯಾವಿಗೇಟ್ ಮಾಡಿ. ಪರದೆಯ ಕೆಳಭಾಗದಲ್ಲಿರುವ…
ಎರಡು ವರ್ಷದ ಬಾಲಕನನ್ನು ಕೊಂದು ಶವವನ್ನು ಸ್ಪೀಕರ್ ಬಾಕ್ಸ್ ನಲ್ಲಿ ಬಚ್ಚಿಟ್ಟ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ. ಪೊಲೀಸರು ಬಾಲಕನ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. ಸಹೋದರನ ಜತೆಗಿನ ಆಸ್ತಿ ವಿವಾದವೇ ಕೊಲೆಗೆ ಕಾರಣ. ಕಳೆದ 17ರಿಂದ ಮಗು ನಾಪತ್ತೆಯಾಗಿತ್ತು. ಜಿಲ್ಲೆಯ ತಿರುಪ್ಪಲಪಂಥಾಲ್ ಗ್ರಾಮದ ಮಾರಿಯಮ್ಮನ್ ಕೋವಿಲ್ ಬೀದಿಯಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕರಾಗಿದ್ದ ಗುರುಮೂರ್ತಿ ಮತ್ತು ಅವರ ಪತ್ನಿ ಜಗತೀಶ್ವರಿ ದಂಪತಿಯ ಎರಡು ವರ್ಷದ ಮಗ ಮೃತಪಟ್ಟಿದ್ದಾನೆ. 17ರಂದು ಮಗು ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ನಾಪತ್ತೆಯಾಗಿತ್ತು. ರಾತ್ರಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತಿರುಪ್ಪಲಪಂಟಾಲ್ ಪೊಲೀಸರು ನಾಲ್ಕು ದಿನಗಳ ಕಾಲ ತನಿಖೆ ನಡೆಸುತ್ತಿದ್ದರು. ಇದೇ ವೇಳೆ ನಿನ್ನೆ ಗುರುಮೂರ್ತಿ ಅವರ ಮನೆಯಲ್ಲಿದ್ದ ಸ್ಪೀಕರ್ ಬಾಕ್ಸ್ ಒಂದರಿಂದ ದುರ್ವಾಸನೆ ಬರಲಾರಂಭಿಸಿದೆ. ಅನುಮಾನಗೊಂಡ ಕುಟುಂಬಸ್ಥರು ಸ್ಪೀಕರ್ ಬಾಕ್ಸ್ ತೆರೆದು ನೋಡಿದಾಗ ನಾಪತ್ತೆಯಾಗಿದ್ದ ಎರಡು ವರ್ಷದ ತಿರುಮೂರ್ತಿ ಶವ ಪತ್ತೆಯಾಗಿದೆ. ಇದನ್ನು ಕಂಡು ಬೆಚ್ಚಿಬಿದ್ದ ಮಗುವಿನ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು…
ಹುಬ್ಬಳ್ಳಿ: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ರಾಜ್ಯದ ರೈತರನ್ನು ಬಲಿಕೊಟ್ಟು ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ‘ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಸರ್ಜನೆ ಮಾಡಬೇಕು. ನಮಗೆ ಕುಡಿಯೋಕೆ ನೀರಿಲ್ಲ. ಆದ್ರೆ, ಕಾಂಗ್ರೆಸ್ ಸರ್ಕಾರ ನೀರು ಬಿಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದಿಟ್ಟಿದೆ ಎಂದು ಕಿಡಿಕಾರಿದ್ದಾರೆ.
ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪಿಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಗೆ ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಡಿಸಿಪಿಗಳಿಗೆ ನಗರ ಆಯುಕ್ತ ಬಿ. ದಯಾನಂದ್ ಸೂಚನೆ ನೀಡಿದ್ದಾರೆ. ನಗರದ ಪಶ್ಚಿಮ, ಪೂರ್ವ, ಉತ್ತರ, ದಕ್ಷಿಣ ವಲಯ ಹಾಗೂ ವೈಟ್ ಫೀಲ್ಡ್ ಸೇರಿ ಎಲ್ಲೆಡೆ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ರಾಮನಗರ: ಮೊರಾರ್ಜಿ ವಸತಿ ಶಾಲೆ ಗೋಡೆ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಹೊಸೂರು ಗೊಲ್ಲಳ್ಳಿಯಲ್ಲಿ ನಡೆದಿದೆ. ವಿದ್ಯಾರ್ಥಿ ಕೌಶಿಕ್ (12) ಮೃತ ದುರ್ದೈವಿ. ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಗೋಡೆಯ ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದ ಕೌಶಿಕ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ನೀರು ಸಂಗ್ರಹಕ್ಕೆ ತಡೆಗೋಡೆ ನಿರ್ಮಿಸಲಾಗಿತ್ತು. ನೀರಿನ ಪ್ರಮಾಣ ತಡೆಯಲಾಗದೇ ಗೋಡೆ ಕುಸಿದಿದೆ.
ಬೆಂಗಳೂರು: ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ರಾಘವೇಂದ್ರ (21) ಮೃತಪಟ್ಟಿದ್ದು, ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ‘ಕೊಪ್ಪಳದ ರಾಘವೇಂದ್ರ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಹೋಟೆಲೊಂದರಲ್ಲಿ ಸಹಾಯಕ ಕೆಲಸಕ್ಕೆ ಸೇರಿದ್ದರು. ಸ್ನೇಹಿತರ ಜೊತೆ ಕೊಠಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ‘ಸೆ. 17ರಂದು ರಾಘವೇಂದ್ರ, ಇಬ್ಬರು ಸ್ನೇಹಿತರ ಜೊತೆ ಕೊಠಡಿಯತ್ತ ನಡೆದುಕೊಂಡು ಹೊರಟಿದ್ದರು. ಹೋಟೆಲ್ ಬಳಿ ರಸ್ತೆ ದಾಟುತ್ತಿದ್ದರು. ಆಗ ಕಾರು ಡಿಕ್ಕಿಯಾಗಿ ದಾರುಣ ಸಾವನ್ನಪ್ಪಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯದಿಂದಾಗಿ , ಮಳೆ ಬಂದಾಗಲೆಲ್ಲಾ ದಕ್ಷಿಣ ಬೆಂಗಳೂರಿನ ರಾಮಕೃಷ್ಣನಗರ ಮತ್ತು ಇಲಿಯಾಸ್ ನಗರದಲ್ಲಿ ಹತ್ತಾರು ಮನೆಗಳಿಗೆ ಕೊಳಚೆ ನೀರು ನುಗ್ಗುತ್ತಿದೆ. ಈ ಸಂಬಂಧ ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪದೇ ಪದೇ ಜಲಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಂಗಾಧರನಗರ ಮತ್ತು ಯಲಚೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಒಳಚರಂಡಿ ಸಂಪರ್ಕ ಮಾರ್ಗದ ಕಾಮಗಾರಿಯನ್ನು ಬಿಡಬ್ಲ್ಯುಎಸ್ ಎಸ್ ಬಿ ಪೂರ್ಣಗೊಳಿಸದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದರಿಂದಾಗಿ ಕೇವಲ 1.5 ಮೀಟರ್ ಅಗಲದ ಬಿಬಿಎಂಪಿ ರಾಜಕಾಲುವೆಗೆ ಕೊಳಚೆ ನೀರು ಸೇರುತ್ತಿದೆ. BWSSB ಲಿಂಕ್ ಲೈನ್ ಪೂರ್ಣಗೊಳಿಸಲು 40 ಮೀಟರ್ ಒಳಚರಂಡಿ ಪೈಪ್ ಲೈನ್ ಹಾಕುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ. ಯಲಚೇನಹಳ್ಳಿಯಲ್ಲಿನ ಉಪ ಒಳಚರಂಡಿ ಮಾರ್ಗವನ್ನು ಸಂಪರ್ಕಿಸುವ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದಿರುವುದು ಮತ್ತು ಪೈಪ್ ಲೈನ್ ವಿಸ್ತರಿಸದಿರುವ ಕಾರಣ ರಾಜಕಾಲುವೆಗೆ ಚರಂಡಿ ನೀರು ಹರಿಯುತ್ತದೆ. ಮಳೆ ಬಂದರೆ ಬಿಎಸ್ ಡಬ್ಲ್ಯುಡಿಯಿಂದ ಕೊಳಚೆ ನೀರು ಉಕ್ಕಿ ಹರಿದು ತಗ್ಗು ಪ್ರದೇಶದಲ್ಲಿರುವ…