Author: admin

ಹಿಜಾಬ್ ಟೆನ್ಶನ್ ನಡುವೆ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.‌ ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ (Coronavirus) ಭಯದ ನಡುವೆ ಕೇವಲ ಮೂರು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ, ಬೆಳಗ್ಗೆ 10:30ಕರಿಂದ ಮಧ್ಯಾಹ್ನ 01:45ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳಾಪಟ್ಟಿ: 28-3-2022- ಪ್ರಥಮ ಭಾಷೆ 30-3-2022- ದ್ವಿತೀಯ ಭಾಷೆ 1-4-2022- ಅರ್ಥ ಶಾಸ್ತ್ರ, ಕೋರ್ ಸುಬ್ಜೆಕ್ಟ್ಸ್ 4-4-2022- ಗಣಿತ, ಸಮಾಜಶಾಸ್ತ್ರ 6-4-2022- ಸಮಾಜ ವಿಜ್ಞಾನ 8-4-2022- ತೃತೀಯ ಭಾಷೆ 11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ. ಪರೀಕ್ಷೆಗೆ ತಯಾರಿ: ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ನಡೆಯಲಿರುವ ಪರೀಕ್ಷೆ * ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು * ಗಂಡು ಮಕ್ಕಳು -…

Read More

ಮಧುಗಿರಿ: ಮಧುಗಿರಿ ತಾಲೂಕಿನ ಕೆರಗಳಪಾಳ್ಯ ಬಳಿ ಇರುವ  ಬೈಲಾಂಜನೇಯ ದೇವಾಲಯ ತಾವರೆಕೊಳದ ಸಮೀಪ   ಭಾನುವಾರ ಬೆಳಗ್ಗೆ ಕೆ ಎಸ್‌ ಆ ರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ  ಅಪಘಾತ ಸಂಭವಿಸಿದ್ದು , ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ . ಮಧುಗಿರಿ ಕಡೆಯಿಂದ ಬೆಂಗಳೂರಿಗೆ ಹೊಗುತ್ತಿದ್ದ ಕೆ ಎಸ್‌ ಆರ್‌ ಟಿ ಸಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರು ಮಧುಗಿರಿ ತಾಲೂಕಿನ ಗೊಂದಿಹಳ್ಳಿ ಮೂಲದ ಸಾಂಬಶಿವಯ್ಯ(73) ಶಂಕ್ರಮ್ಮ(66)ನಿವಾಸಿಗಳು ಎನ್ನಲಾಗಿದ್ದು,   ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ  ರವಾನಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ವಿದೇಶಿ ವಿನಿಮಯ ಸಂಕಷ್ಟ ಮತ್ತು ಮುದ್ರಣ ಕಾಗದದ ದರ ಏರಿಕೆಯಿಂದ ಜರ್ಝರಿತವಾದ ಸುದ್ದಿ ಸಂಸ್ಥೆಗಳ ಪೈಕಿ ಎರಡು ಪ್ರಮುಖ ಪತ್ರಿಕೆಗಳು ತಮ್ಮ ದೈನಂದಿನ ಸಂಚಿಕೆ ಮುದ್ರಣವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿವೆ. ದ್ವೀಪ ರಾಷ್ಟ್ರ ಶ್ರೀಲಂಕ ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯ ಕೊರತೆಯನ್ನು ಅನುಭವಿಸುತ್ತಿದೆ. ಇದರಿಂದಾಗಿ ಮುದ್ರಣ ಕಾಗದ ಆಮದು ದರ ಏರಿಕೆ ಏರಿಕೆಯಾಗಿದ್ದು, ಕೊರತೆಯು ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ದಿ ಐಲ್ಯಾಂಡ್ ಇಂಗ್ಲಿಷ್ ದೈನಿಕ ಮತ್ತು ಅದರ ಸಹೋದರ ಸಂಸ್ಥೆ ಸಿಂಹಳಿ ಭಾಷೆಯ ದಿವಾಯಿನಾ ಮುಂದಿನ ಆದೇಶದವರೆಗೂ ಸಂಚಿಕೆ ಮುದ್ರಣವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. ಈ ಪ್ರಕಟಣೆಗಳ ಮಾತೃ ಸಂಸ್ಥೆ ಉಪಾಲಿ ನ್ಯೂಸ್ ಪೆಪರ್ ಲಿಮಿಟೆಡ್, ಶನಿವಾರ ತಮ್ಮ ಓದುಗರ ಬಳಿ ವಿಷಾದ ವ್ಯಕ್ತ ಪಡಿಸಿದ್ದು, ಶನಿವಾರದಿಂದ ಮುಂದಿನ ಸೂಚನೆಯವರೆಗೆ ಮುದ್ರಣವನ್ನು ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದೆ. ಪ್ರವಾಸೋದ್ಯಮ ಆಧಾರಿತ ಆದಾಯವನ್ನೇ ಅವಲಂಬಿಸಿದ ಶ್ರೀಲಂಕ ಕೋವಿಡ್ ನಿಂದಾಗಿ ಪ್ರವಾಸಿಗರ ಕೊರತೆಯಿಂದ ತೀವ್ರ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ. ಹಿಂದೆಂದು ಕಾಣದಷ್ಟು ವಿದೇಶಿ ವಿನಿಮಯದ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ…

Read More

ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳು ಜಗತ್ತಿಗೆ ಮಾದರಿ ಪುರುಷರು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಶನಿವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಸಚಿವ  ಎಂ.ಬಿ ಪಾಟೀಲ್,  ಸಿದ್ದಗಂಗಾ ಶ್ರೀಗಳ  ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಅದರ ಸಲುವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲು ಮಠಕೆ ಆಗಮಿಸಿ ರುವುದಾಗಿ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠದ ಸೇವೆ ಇಡೀ ಜಗತ್ತಿಗೆ ಮಾದರಿಯಾದ ಸೇವೆ ಮಠದಿಂದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು, ತಾವು ಕೂಡ ಹಲವು ಬಾರಿ ಶ್ರೀ ಮಠಕ್ಕೆ ಬೇಡಿ ಭೇಟಿಕೊಟ್ಟು ಹಲವು ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು. ಇನ್ನು ಶ್ರೀ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ತಾವು ಕೂಡ ಶ್ರೀಗಳ ಸೇವೆ ಮಾಡುವ…

Read More

ಈಗಾಗಲೇ ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾಗಿರುವ ವಾಹನ ಸವಾರರಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲವು ರಸ್ತೆಗಳನ್ನು ಬಂದ್ ಮಾಡಲು ಮುಂದಾಗಿದೆ. ಏ.4ರಿಂದ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಮೌರ್ಯ ವೃತ್ತದಿಂದ ಕೆ.ಆರ್ ಸರ್ಕಲ್‍ ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯಲಿದ್ದು, ಈ ರಸ್ತೆ ಬಂದ್ ಆಗಲಿದೆ. ಪ್ರತಿದಿನ ಈ ರಸ್ತೆ ಮೂಲಕ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಟ್ರಾಫಿಕ್‍ನಿಂದ ಕೂಡಿರುತ್ತದೆ. ಈಗಾಗಲೇ ರಸ್ತೆಯ ಅಕ್ಕಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆದರೆ ಇಡೀ ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ಕಾಡುತ್ತದೆ. ಶೇಷಾದ್ರಿ ರಸ್ತೆಗೆ ಪರ್ಯಾಯವಾಗಿ ಮತ್ತೊಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಸಂಚಾರಿ ಪೊಲೀಸ್ ಆಯುಕ್ತರ ಜೊತೆ ಮಾತುಕತೆ ಕೂಡ ನಡೆದಿದೆ. 70ರಿಂದ 80 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಕಾರಿಗಳು ಹೇಳಿದ್ದು, ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ…

Read More

ಬೆಂಗಳೂರು:  ನಗರದಲ್ಲಿ ಇಬ್ಬರು ಮಹಿಳೆಯರ ಕೊಲೆಯಾಗಿದೆ. ಒಂದು ಪ್ರಕರಣದಲ್ಲಿ ತವರಿನಿಂದ ಹಣ, ಆಭರಣ ತರುವಂತೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದರೆ, ಮತ್ತೊಂದು ಪ್ರಕರಣದಲ್ಲಿ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಹೆಚ್ಚಾಗಿ ಮಾತನಾಡುತ್ತೀಯ ಎಂದು ಪತಿ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಇದೀಗ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಚಾಕುವಿನಿಂದ ಇರಿದು ಕೊಲೆ ಯಾವಾಗಲೂ ಮೊಬೈಲ್  ನಲ್ಲಿ ಮಾತನಾಡುತ್ತೀಯ ಎಂದು ಪತ್ನಿ ಜತೆ ಜಗಳವಾಡಿದ ಪತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನೇಪಾಳ ಮೂಲದ ಕಮಲಾದೇವಿ (45) ಕೊಲೆಯಾದ ದುರ್ದೈವಿ. ಈಕೆ ಪತಿ ತೇಜ್ ಬಹದ್ದೂರ್ (52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ನೇಪಾಳ ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಮೊದಲು ಸಂಜಯನಗರದಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಬಿ.ಚನ್ನಸಂದ್ರದಲ್ಲಿ ವಾಸವಾಗಿದ್ದು, ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿದೆ.…

Read More

ಕರ್ನಾಟಕದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿ ಕೇಂದ್ರ ಸರ್ಕಾರ ಬೇಡಿಕೆ ಅನುಸಾರ ಅನುದಾನ ಹೆಚ್ಚಿಸಿ ಆದೇಶಿಸಿದೆಯಲ್ಲದೇ ಎರಡನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿದೆ.2020-21ನೇ ಸಾಲಿನಲ್ಲಿ ಕೇಂದ್ರ , ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್ವೈಪಿಡಿಎಂ ಅಡಿಯಲ್ಲಿ 400 ಕೋಟಿ ರೂ. ಬಿಡುಗಡೆ ಮಾಡಿತ್ತು. 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದೆ.ಕಳೆದ ಬಾರಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಿನ ಪಾಲು ಕೇಂದ್ರದ ಅನುದಾನ ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಹಂಚಿಕೆ ಮಾಡಿದ್ದ 500 ಕೋಟಿ ರೂ. ಗಳಲ್ಲಿ ಮೊದಲ ಕಂತಿನ ಅನುದಾನವನ್ನಾಗಿ ರಾಜ್ಯಕ್ಕೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200ಕೋಟಿ ರೂ.ಗಳನ್ನು ಮಾರ್ಚ್ 25ರಂದು ಬಿಡುಗಡೆ ಮಾಡಿದೆ.ಸದರಿ ಅನುದಾನ ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳನ್ನೊಳಗೊಂಡಿರುತ್ತದೆ. ಕೇಂದ್ರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.76ರಷ್ಟು ಸಾಮಾನ್ಯ…

Read More

ರಾಜ್ಯದಲ್ಲಿ ಕೋಮು ಆಧಾರಿತ ವ್ಯಾಪಾರ ವಹಿವಾಟುಗಳಿಗೆ ಕಡಿವಾಣ ಹಾಕುತ್ತಿರುವವರು ತಾಕತ್ತಿದ್ದರೆ ಮೇಲ್ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ವ್ಯಾಪಾರ ವಹಿವಾಟನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದವರು ಕರ್ನಾಟಕದಂತಾಗ ಬೇಕು ಎಂದು ಕೊಳ್ಳುತ್ತಿದ್ದಾರೆ. ಆದರೆ ಇವರು ಉತ್ತರ ಪ್ರದೇಶದ ಮಾದರಿ ಮಾಡಲು ಹೊರಟಿದ್ದಾರೆ. ಅಲ್ಲಿ ಅಭಿವೃದ್ಧಿಯಾಗಿದ್ದರೆ ಉತ್ತರ ಪ್ರದೇಶದವರು ಇಲ್ಲಿ ಬಂದು ಯಾಕೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹಿಜಾಬ್, ಹಿಂದೂ-ಮುಸ್ಲೀಂ, ಭಗವದ್ಗೀತೆ ಹೆಸರಿನಲ್ಲಿ ಸೌಹಾರ್ದತೆ ಕದಡಿದ್ದಾರೆ. ಹೀಗಾಗಿ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದಲ್ಲಿ 8.5 ಲಕ್ಷ ಜನ ಭಾರತದಲ್ಲಿ ಒಳ್ಳೆಯ ವಾತಾವರಣ ಇಲ್ಲ ಎಂದು ನಮ್ಮ ದೇಶದ ನಾಗರಿಕತೆಯನ್ನೇ ತೊರೆದಿದ್ದಾರೆ. ದೇಶ ಬಿಟ್ಟು ಬೇರೆ ದೇಶಗಳಿಗೆ ಹೋಗಿದ್ದಾರೆ. ಇವರು ಜಾತಿ, ಧರ್ಮದ ರಾಜಕಾರಣ ಮಾಡುತ್ತಿದ್ದಾರೆ. ಹಸಿವಿಗೆ ಯಾವ ಜಾತಿ, ಧರ್ಮ ಇದೆ ಎಂದು…

Read More

ಬೆಂಗಳೂರಿನಲ್ಲಿ ಸಂತೆಗಳೆಂದರೆ ಏನೋ ಆಕರ್ಷಣೆ ಜನರು ಹೊಸತನ್ನು ಬಯಸಿ ಆ ಕಡೆಗೆ ಹೋಗಿ ಬರೋಣವೆಂದು ಸಾಗುವುದು ಸಹಜ. ಅದರಲ್ಲಿಯೂ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರಸಂತೆಯ ಸೌಂದರ್ಯ ಸವಿಯಲು ವಾರದ ಕೊನೆಯ ದಿನದ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಬಿಡುತ್ತಾರೆ. ಏಕೆಂದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 19ನೆಯ ಚಿತ್ರಸಂತೆಗೆ ಇನ್ನೂ ಬೆರಳೆಣಿಕೆಯಷ್ಟು ದಿನ ಇರುವುದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಮ್ಮಿಕೊಂಡಿರುವ ವಾರ್ಷಿಕ ಚಿತ್ರಸಂತೆಗೆ ಹಲವಾರು ಕಲಾವಿದರು ಕಲಾಸಕ್ತರು ಕಾಯುತ್ತಿರುವುದು ವಿಶೇಷವಲ್ಲ. ಚಿತ್ರಸಂತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ವಹಿಸಲಿದ್ದಾರೆ. ಪ್ರತಿವರ್ಷ ನಡೆಯುವ ಚಿತ್ರಸಂತೆಯ ಒಂದೊಂದು ವಿಷಯವನ್ನು ಆಧರಿಸಿ ಆಯೋಜನೆ ಮಾಡಲಾಗುತ್ತದೆ.ಈ ವರ್ಷ ನಮಗೆಲ್ಲ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕ್ಷಣಕ್ಕಾಗಿ 19ನೇ ಚಿತ್ರಸಂತೆಯನ್ನು ಹಲವಾರು ಸ್ವತಂತ್ರ ಯೋಧರಿಗಾಗಿ ಆಯೋಜನೆ ಮಾಡುತ್ತಿದೆ. ಚಿತ್ರಕಲಾ ಪರಿಷತ್ ನಾಡಿನ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಸಮ್ಮಾನ್ ಮತ್ತು ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರಧಾನ ಮಾಡುತ್ತಾ…

Read More

ತಿಪಟೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಸಾರ್ವಜನಿಕ ಶಿಕ್ಷಣ ಇಲಾಖೆ  ಸಹಯೋಗದಲ್ಲಿ   ಈ ದಿನ “ಮಕ್ಕಳು ಎದುರುಸುತ್ತಿರುವ ಪ್ರಚಲಿತ ಸಮಸ್ಯೆಗಳು” ಕುರಿತು ಸಂವಾದ ಕಾರ್ಯಕ್ರಮ  ತಿಪಟೂರಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಜೆ ರಾಮಮೋಹನ್ ಅಧ್ಯಕ್ಷರು, ನಗರಸಭೆ ತಿಪಟೂರು ಇವರು ನೆರವೇರಿಸಿದರು. ಪ್ರಾಂಶುಪಾಲ ಪರಶಿವಮೂರ್ತಿ, ಉಪ ಪ್ರಾಂಶುಪಾಲ ಚನ್ನೆಗೌಡ ಉಪಸ್ಥಿತರಿದ್ದರು ಬಿ.ಎಸ್. ನಂದಕುಮಾರ್ ಮಕ್ಕಳ ಕಲ್ಯಾಣ ಸಮಿತಿ ತುಮಕೂರು ಇವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕು.ರಶ್ಮೀ ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು, ದೈಹಿಕ ಶಿಕ್ಷಣಾಧಿಕಾರಿ ಶಮಂತ, ನಗರಸಭೆ ಆರೋಗ್ಯ ನಿರೀಕ್ಷಕ  ಶ್ರೀನಿವಾಸ್ , ಎ.ಎಸ್.ಐ. ಶಂಕರಪ್ಪ, ಶಿಕ್ಷಕರಾದ ಮಧು ಹಾಜರಿದ್ದರು. ವಿವಿಧ ಪ್ರೌಢಶಾಲೆಯ 70ಕ್ಕೂ ಹೆಚ್ಚು ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.ಸಹ ಶಿಕ್ಷಕ ಸಂತೋಷಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More