Subscribe to Updates
Get the latest creative news from FooBar about art, design and business.
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
- ರೇಣುಕಾಸ್ವಾಮಿ ಕೊಲೆ ಕೇಸ್: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
- ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
- ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನ ಬ್ಯಾಟರಿ ಕಳವು!
- ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
- ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
- ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
- ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
Author: admin
ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಕ್ಕೇರಾ ಪುರಸಭೆಗೆ ನಡೆದ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, 23 ಸ್ಥಾನಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳು 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರ ಗದ್ದುಗೆ ಹಿಡಿದಿದೆ. ಬಿಜೆಪಿ ಅಭ್ಯರ್ಥಿಗಳು ಕೇವಲ 6 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ, ಇದರಿಂದ ಹಾಲಿ ಬಿಜೆಪಿ ಶಾಸಕ ರಾಜುಗೌಡ ಅವರಿಗೆ ಮುಖಭಂಗವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕೆಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಮಾಜ ಸೇವಕ ಕೆ ಟಿ ಶಾಂತಕುಮಾರ್ ಒತ್ತಾಯಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಥಮ ದರ್ಜೆ ಕಾಲೇಜಿನಲ್ಲಿ 160ಕ್ಕೂ ಹೆಚ್ಚು ಉಪನ್ಯಾಸಕರಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ಸಂಬಳ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಪಾಠ ನಡೆದಂತೆ ಆಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಸುಮಾರು 3,600 ಹೆಚ್ಚಿನ ಮಕ್ಕಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ. ಆದರೆ ಕಳೆದ 20ದಿನಗಳಿಂದ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸಿದೆ ಇರುವುದರಿಂದ ವಿದ್ಯಾರ್ಥಿಗಳಿಗಂತೂ ಸಾಕಷ್ಟು ತೊಂದರೆ ಆಗುತ್ತಿದೆ ಎಂದರು. ಸರಕಾರ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ಮತ್ತು ಸರಕಾರಿ ನೌಕರನಾಗಿ ಪರಿಗಣಿಸಬೇಕು. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರ ಸರಿಯಾದ ಸಂಬಳ ಮತ್ತು ಕಾಯಂ ಮಾಡದೇ ಇರುವುದರಿಂದ ಅತಿಥಿ ಉಪನ್ಯಾಸಕರಿಗೆ ಜೀವನ…
ಸಾಕ್ರಮೆಂಟೋ: ಓಮಿಕ್ರಾನ್ ಭೀತಿ ನಡುವೆ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್ ಪ್ರಕರಣಗಳು 50 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಮಟ್ಟದ ಪ್ರಕರಣಗಳನ್ನು ತಲುಪಿದ ಅಮೆರಿಕದ ಪ್ರಥಮ ರಾಜ್ಯವಾಗಿದೆ. 2020ರ ಜನವರಿ 25ರಂದು ಕ್ಯಾಲಿಫೋರ್ನಿಯಾದಲ್ಲಿ ಪ್ರಥಮ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿತ್ತು. ಆ ವರ್ಷದ ನವೆಂಬರ್ 11 ರಂದು ಅಂದರೆ 292 ದಿನಗಳ ಬಳಿಕ ಒಂದು ದಶಲಕ್ಷ ಸೋಂಕು ಪ್ರಕರಣಗಳು ಏರಿಕೆಯಾಗಿತ್ತು. 44 ದಿನಗಳ ಬಳಿಕ 2 ದಶಲಕ್ಷಕ್ಕೆ ಕೊರೊನಾ ಸೋಂಕು ಏರಿತು. ಕ್ಯಾಲಿಫೋರ್ನಿಯಾದ ಕೇಸ್‍ಲೋಡ್ ಕೂಡ ಇತರ ದೊಡ್ಡ ರಾಜ್ಯಗಳಿಗಿಂತ ಅಧಿಕವಾಗಿದೆ.ಟೆಕ್ಸಾಸ್‍ನಲ್ಲಿ 4.4 ದಶಲಕ್ಷ ಅಧಿಕ ಕೊರೊನಾ ಪ್ರಕರಣಗಳಿದ್ದರೆ ಭಾನುವಾರ ಫಾರಿಡಾದಲ್ಲಿ ಸೋಂಕಿನ ಪ್ರಕರಣಗಳು 3.09 ದಶಲಕ್ಷಕ್ಕೇರಿತ್ತು. ಅಮೆರಿಕಾದಲ್ಲಿ ಕೋವಿಡ್ ಪ್ರಕರಣಗಳ ಭಾರಿ ಹೆಚ್ಚಳದಿಂದಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಚಿಕಿತ್ಸೆ ಪಡೆಯಲು ಹಾಹಾಕಾರ ಉಂಟಾಗಿದೆ.3ನೇ ಅಲೆಗೆ ಅಮೆರಿಕ ತತ್ತರಿಸಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದ ಕೋವಿಡ್ ನಿಯಂತ್ರಣ ಮತ್ತು ನಿವಾರಣೆ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಸಿರಾ: ಸಿರಾ ನಗರ ಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಒಟ್ಟು 30 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಫಲಿತಾಂಶ ಹೀಗಿದೆ: ಕಾಂಗ್ರೆಸ್: 11 ಸ್ಥಾನದಲ್ಲಿ ಗೆಲುವು ಜೆಡಿಎಸ್: 07 ಸ್ಥಾನದಲ್ಲಿ ಗೆಲುವು ಬಿಜೆಪಿ: 4 ಸ್ಥಾನದಲ್ಲಿ ಗೆಲುವು ಇತರೇ: 8 ಸ್ಥಾನಗಳಲ್ಲಿ ಗೆಲುವು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ: ತಾಲೂಕಿನ ಕಸಬಾ ಕೆರೆಗಳ ಪಾಳ್ಯ ರಸ್ತೆಯಲ್ಲಿರುವ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಐ.ಎಸ್.ಐ. ಮಾರ್ಕ್ ಇಲ್ಲದೆ ಬಿಸ್ಲೇರಿ ನೀರನ್ನು ತಯಾರಿಸುತ್ತಾರೆ ಎಂದು ದೂರಿನ ಆಧಾರದ ಮೇಲೆ ತಹಸಿಲ್ದಾರ್ ಹಾಗೂ ಆಹಾರ ಶಿರಸ್ತೆದರ್ ಮತ್ತು ಅಧಿಕಾರಿಗಳು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಅರುಂಧತಿ ಕೆ. ಮಾತನಾಡಿ, ಬಿಸ್ಲೇರಿ ಅಂತ ಹೆಸರು ಹಾಕಿಕೊಂಡು ಐ.ಎಸ್.ಐ. ಮಾರ್ಕ್ ಇಲ್ಲದೆ, ನೀರನ್ನು ತಯಾರಿಸುತ್ತಿದ್ದಾರೆ ಎಂದು ದೂರು ಬಂತು, ಅದರ ಆಧಾರದ ಮೇಲೆ ನಾವು ಮತ್ತು ಆಹಾರ ಶಿರಸ್ತೇದಾರ್ ಹಾಗೂ ಅಧಿಕಾರಿಗಳು ಬಂದು ತಪಾಸಣೆ ಮಾಡಿದ್ದೇವೆ ಎಂದರು. ತಪಾಸಣೆ ವೇಳೆ ನಮಗೆ ಯಾರು ಕಂಡುಬಂದಿಲ್ಲ. ಈ ಜಾಗದ ಮಾಲೀಕರನ್ನು ವಿಚಾರಿಸಿದಾಗ, ನಾವು ಐಎಸ್ ಐ ಮಾರ್ಕ್ ಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಬಾಟಲಿಗಳು ಸಿಕ್ಕಿವೆ, ಲೇಬಲ್ ಗಳು ಸಿಕ್ಕಿಲ್ಲ, ದೂರಿನ ಆಧಾರದ ಮೇಲೆ ದಾಖಲಾತಿಗಳು ಕೊಡಿ ಎಂದು ನೋಟಿಸ್ ಕೊಟ್ಟಿದ್ದೇವೆ, ದಾಖಲಾತಿಗಳು ತರಿಸಿಕೊಂಡು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.…
ಸರಗೂರು: ಅಂಗವಿಕಲತೆ ಎಂಬುದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ. ನಂದ್‌ಕುಮಾರ್ ಅವರು ಹೇಳಿದರು. ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಸಮುದಾಯದ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಿಶೇಷ ಚೇತನ ವ್ಯಕ್ತಿಗಳ ನಾಯಕತ್ವ ಮತ್ತು ಭಾಗವಹಿಸುವಿಕೆ ಎಂಬ ಘೋಷ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ ಮಾತನಾಡಿದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ.ಆನಂದ್‌ಕುಮಾರ್ ಅವರು, ಅಂಗವಿಕಲತೆ ಎಂಬುದು ಕೇವಲ ಶಾಪವಲ್ಲ, ಅದೊಂದು ದೇವರ ವರ. ಅಂಗವಿಕಲತೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು ಎಂದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವಂತಹ ಅಂಗವಿಕಲ ಯುವಕರುಗಳಿಗೆ, ಮುಂದಿನ ದಿನಗಳಲ್ಲಿ ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಹಾಗೂ ಯಾವುದೇ ಕಾರಣಕ್ಕೂ ಗುರಿ ತಲುಪುವ ವರೆಗೂ ಯುವಕರು ಕುಗ್ಗ ಬೇಡಿ, ಎಂದು ಧೈರ್ಯ ತುಂಬಿದರು. ನಂತರ ವಡುವಲು ವಿರಕ್ತ ಮಠದ ಮಠಾಧ್ಯಕ್ಷರಾದ ಶ್ರೀ ಶ್ರೀ ಮಹಾದೇವಸ್ವಾಮಿಗಳು ಮಾತನಾಡಿ, ವಿಶೇಷಚೇತನರಿಗೆ…
ಬೆಂಗಳೂರು: ಕಾನೂನು ಬಾಹಿರವಾಗಿ ಇಲ್ಲವೇ ಬಲವಂತವಾಗಿ ಬಂದ್ ಬೆಂಬಲಿಸುವಂತೆ ಯಾರಾದರೂ ಒತ್ತಡ ಹಾಕಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‍ನಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕರಿಗೆ ಯಾವುದೇ ಸಂಘಟನೆಗಳು ಒತ್ತಡ ಇಲ್ಲವೇ ಬಲವಂತ ಮಾಡುವಂತಿಲ್ಲ. ಹಾಗೊಂದು ವೇಳೆ ಕಂಡುಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.ಸತತ ಎರಡು ಲಾಕ್‍ಡೌನ್ ಜಾರಿಯಿಂದಾಗಿ ರೈತರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಬಂದ್ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಂದ್‍ಗೆ ಕರೆ ಕೊಡುವ ಮುಖಂಡರು ಹತ್ತಾರು ಬಾರಿ ಯೋಚಿಸಬೇಕಿತ್ತು. ಬಂದ್ ಮಾಡುವುದರಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.ರಾಜ್ಯದಲ್ಲಿ ಎಂಇಎಸ್‍ನ್ನು ನಿಷೇಧಿಸಲು ಕಾನೂನಿನ ತೊಡಕುಗಳಿವೆ. ಈಗಾಗಲೇ ಮುಖ್ಯಮಂತ್ರಿಯವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಎಂಇಎಸ್ ನಿಷೇಧವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.ಯಾವುದೇ ಒಂದು…
ಹಿರಿಯೂರು: ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯು ಸೌಲಭ್ಯಗಳನ್ನು ಪಡೆಯಲು ಸಿ ಎಸ್ ಸಿ ( ಕಾಮನ್ ಸರ್ವಿಸ್ ಸೆಂಟರ್ ) ನ ಆನ್ ಲೈನ್ ನ ಮೂಲಕ ಮಧ್ಯವರ್ತಿಗಳ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ನೊಂದಣಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಇದರ ಬಗ್ಗೆ ತೀವ್ರವಾಗಿ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ಘಟಕ ಹೇಳಿದೆ ಕಟ್ಟಡ ಕಾರ್ಮಿಕರ ಇಲಾಖೆ ದೊರೆಯುವ ಸೌಲಭ್ಯಗಳು ಯಾವುದು ಸಹ ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯದ ರೀತಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡದೆ ಇರುವುದು ಬೇಸಾರದ ವಿಷಯವಾಗಿದೆ ಎಂದು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಶಿವಕುಮಾರ್ ವಿ ಅವರು ತಿಳಿಸಿದ್ದಾರೆ . ಸುಪ್ರಿಂ ಕೋರ್ಟ್ ಆದೇಶದಂತೆ ನಿಗದಿಪಡಿಸಿರುವಂತಹ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದೇ ಇರುವಂತಹ ಸೆಸ್ ಹಣವನ್ನು ಅವರಿಗಾಗಿಯೇ ಬಳಸಬೇಕು,…
ಬೆಂಗಳೂರು: ನೆರೆಯ ತೆಲಂಗಾಣ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಾಳೇಶ್ವರಂ ಯೋಜನೆಯನ್ನು ರಾಜ್ಯದ ಚಾಮರಾಜನಗರ ರೈತರು ಕಂಡು ಹರ್ಷ ವ್ಯಕ್ತಪಡಿಸಿದ್ದು, ಯೋಜನೆಯ ಜಾರಿಯಿಂದ ರೈತರಿಗೆ ಆಗಿರುವ ಅನುಕೂಲಗಳನ್ನು ಪರಾಮರ್ಶಿಸಿದರು. ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸ ಕೈಗೊಂಡಿರುವ ರೈತರು 2014ರಲ್ಲಿ ಚಾಮರಾಜನಗರದಲ್ಲಿ ಮೆಘಾ ಇಂಜಿನಿಯರಿಂಗ್ ಅಂಡ್ ಇನಾಸ್ಟ್ರಕ್ಚರ್ ಸಂಸ್ಥೆಯು ಯಶಸ್ವಿಯಾಗಿ ಜಾರಿ ಮಾಡಿರುವ ಆಲಂಬೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರುಗಳಾಗಿದ್ದು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.ಚಾಮರಾಜನಗರದ ಆಲಂಬೂರ್ ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ವಿನಿಂದ ಲಾಭ ಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯಿತ್ರಿ ಪಂಪ್‍ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದ ಗೋದಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ…
ಬೆಂಗಳೂರು: ದಕ್ಷಿಣಾ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಆನೇಕಲ್ ತಾಲೂಕಿನ ಬಳ್ಳೂರು ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರಿಗೆ ಓಮಿಕ್ರಾನ್ ವಕ್ಕರಿಸಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಕಳೆದ 23ರಂದು ದಕ್ಷಿಣಾ ಆಫ್ರಿಕಾದಿಂದ ವಾಪಾಸ್ಸಾಗಿದ್ದ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದ ಆತ ನೇರವಾಗಿ ಬಳ್ಳೂರು ಅಪಾರ್ಟ್‍ಮೆಂಟ್‍ಗೆ ಆಗಮಿಸಿದ್ದ. ಅದರೆ, ಆತನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಆತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು 24ನೇ ತಾರೀಖು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದರು.ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಜೊತೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಲ್ಲರ ಸ್ವಾಬ್ ಪರೀಕ್ಷೆ ನಡೆಸಲಾಗಿದೆ. ಅದೃಷ್ಟವಶಾತ್ ಆತನೊಂದಿಗೆ ಸಂಪರ್ಕ ಹೊಂದಿದವರ ಎಲ್ಲ ವರದಿ ನೆಗಿಟಿವ್ ಬಂದಿರುವುದರಿಂದ ಜನ ನಿಟ್ಟುಸಿರುಬಿಡುವಂತಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಬಳ್ಳೂರು ಅಪಾರ್ಟ್‍ಮೆಂಟ್ ಬಳಿ ಬೀಡುಬಿಟ್ಟಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…