ಹಿರಿಯೂರು: ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯು ಸೌಲಭ್ಯಗಳನ್ನು ಪಡೆಯಲು ಸಿ ಎಸ್ ಸಿ ( ಕಾಮನ್ ಸರ್ವಿಸ್ ಸೆಂಟರ್ ) ನ ಆನ್ ಲೈನ್ ನ ಮೂಲಕ ಮಧ್ಯವರ್ತಿಗಳ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ನೊಂದಣಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಇದರ ಬಗ್ಗೆ ತೀವ್ರವಾಗಿ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ಘಟಕ ಹೇಳಿದೆ
ಕಟ್ಟಡ ಕಾರ್ಮಿಕರ ಇಲಾಖೆ ದೊರೆಯುವ ಸೌಲಭ್ಯಗಳು ಯಾವುದು ಸಹ ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯದ ರೀತಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡದೆ ಇರುವುದು ಬೇಸಾರದ ವಿಷಯವಾಗಿದೆ ಎಂದು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಶಿವಕುಮಾರ್ ವಿ ಅವರು ತಿಳಿಸಿದ್ದಾರೆ .
ಸುಪ್ರಿಂ ಕೋರ್ಟ್ ಆದೇಶದಂತೆ ನಿಗದಿಪಡಿಸಿರುವಂತಹ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದೇ ಇರುವಂತಹ ಸೆಸ್ ಹಣವನ್ನು ಅವರಿಗಾಗಿಯೇ ಬಳಸಬೇಕು, ಎಂಬ ನಿರ್ದೇಶನವಿದ್ದರೂ ಸಮೇತ ಇದ್ಯಾವುದಕ್ಕೂ ಸಹ ಮನ್ನಣೆ ಕೊಡದ ಸರ್ಕಾರ ಮತ್ತು ಮಂಡಳಿಯು ನಕಲಿ ಕಟ್ಟಡ ಕಾರ್ಮಿಕರ ಇಲಾಖೆಯು ಮಧ್ಯವರ್ತಿಗಳ ನಿರ್ಧಾರಕ್ಕೆ ಕಡಿವಾಣ ಹಾಕದೇ ಇರುವುದೇ ದುರಾಷ್ಟಕರದ ವಿಷಯವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ರದ್ದುಪಡಿಸಿ ನಿಜವಾದ ಕಟ್ಟಡ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ಹಿರಿಯೂರು ತಾಲ್ಲೂಕಿನ ಹಿರಿಯೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯೂರು ಕಟ್ಟಡ ಕಾರ್ಮಿಕರ ನಿರೀಕ್ಷಕರ ಮುಖಾಂತರ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾನ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಕುಮಾರ್, ಮಾರುತಿರಾವ್ , ಆರ್.ರಾಘವೇಂದ್ರ, ಬಸವರಾಜ್, ಇಮ್ರಾನ್ ಸಾಬ್ ಜಾನ್, ಶ್ರೀನಿವಾಸ್, ಗೋಪಾಲಸ್ವಾಮಿ, ಸಿಕಂದರ್, ಹನುಮಂತ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy