ತಿಪಟೂರು: ಶ್ರೀ ನೇತಾಜಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಶ್ರೀ ನೇತಾಜಿ ಪತ್ತಿನ ಸಹಕಾರ ಸಂಘ ಸಹಯೋಗದೊಂದಿಗೆ ನಗರದ ನೇತಾಜಿ ಸಹಕಾರಿಯ ಭವನದ ಸಭಾಂಗಣದಲ್ಲಿ 30 ದಿನಗಳ ಕಾಲ ಉಚಿತ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರವನ್ನು ಜೂನ್ 01ರಿಂದ 30ರವರೆಗೆ ಬೆಳಿಗ್ಗೆ 5:30 ರಿಂದ 7ಗಂಟೆಯವರೆಗೆ ನಡೆಯುತ್ತದೆ.
ಟ್ರಸ್ಟ್ ಅಧ್ಯಕ್ಷ ಕೆ.ಎಂ.ರಾಜಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾಸಿಸುವ ಸಾರ್ವಜನಿಕರ ಮತ್ತು ಮಹಿಳೆಯರ ಜೀವನದಲ್ಲಿ ಅತಿ ಚಿಕ್ಕ ವಯಸ್ಸಿಗೆ ಆಹಾರ ಪದ್ಧತಿಯ ಬದಲಾವಣೆಯಲ್ಲಿ ಬಿ.ಪಿ, ಶುಗರ್, ಕೀಲು ನೋವು, ಶ್ವಾಸಕೋಶ, ಹೃದಯದ ತೊಂದರೆ, ಮೂತ್ರಪಿಂಡದ ಖಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗಿ, ಮಾನಸಿಕ ಒತ್ತಡ ಮುಂತಾದ ರೋಗಗಳಿಗೆ ಯೋಗಾಭ್ಯಾಸ ಉತ್ತಮವಾಗಿದ್ದು, ಮನುಷ್ಯನ ಜೀವ ಮತ್ತು ದೇಹಕ್ಕೆ ಉತ್ತಮ ವ್ಯಾಯಾಮವಾಗಿದೆ ಆದ್ದರಿಂದ ನಗರ ಮತ್ತು ತಾಲೂಕಿನ ಸಾರ್ವಜನಿಕರು ಈ ಉಚಿತ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


