nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026

    ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು

    November 23, 2026

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026
    Facebook Twitter Instagram
    ಟ್ರೆಂಡಿಂಗ್
    • ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ
    • ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು
    • ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ
    • ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!
    • ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    •  ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?
    • ದೇವವ್ರತರು ಭೀಷ್ಮರಾದದ್ದು ಹೇಗೆ? ಇಚ್ಛಾಮರಣದ ವರದ ಹಿಂದಿನ ರೋಚಕ ಕಥೆ‌‌ ಇಲ್ಲಿದೆ
    • ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
    ಕೊರಟಗೆರೆ September 29, 2026

    ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.

    By Ganesh TumkuruSeptember 29, 2026No Comments2 Mins Read
    pauti khata

    ಕೊರಟಗೆರೆ: ತಾಲ್ಲೂಕಿನಲ್ಲಿ ಪಹಣಿ ಪೌತಿ ಖಾತೆ ಆಂದೋಲನಕ್ಕೆ ತಹಶೀಲ್ದಾರ್ ಮಂಜುನಾಥ್ ಕೆ. ಅವರು ವೇಗ ನೀಡಿದ್ದು, ಖುದ್ದು ತಾವೇ ಹಳ್ಳಿಗಳಿಗೆ ಭೇಟಿ ನೀಡಿ ರೈತರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

    ತಾಲ್ಲೂಕಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಪಹಣಿ ಪೌತಿ ಖಾತೆ ಖಾತೆ ಆಂದೋಲನ ಪ್ರಗತಿಯಲ್ಲಿದ್ದು, ತಹಶೀಲ್ದಾರ್ ಮಂಜುನಾಥ್ ಕೆ. ಅವರು ಕೇವಲ ಕಚೇರಿಗೆ ಸೀಮಿತವಾಗದೆ, ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಪಹಣಿ ಇದ್ದರೆ ಸವಲತ್ತು ಸುಲಭ:

    ರೈತರು ತಮ್ಮ ಜಮೀನಿನ ಪಹಣಿ ಮತ್ತು ಪೌತಿ ಖಾತೆಯನ್ನು ತಿದ್ದುಪಡಿ ಮಾಡಿಸಿಕೊಂಡರೆ ಪಿಎಂ ಕಿಸಾನ್ ಸಮ್ಮಾನ್, ಬೆಳೆ ವಿಮೆ, ರಸಗೊಬ್ಬರ ಸಬ್ಸಿಡಿ, ಬೆಳೆ ಸಾಲ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

    ಹುಲಿಕುಂಟೆ ಗ್ರಾಮಕ್ಕೆ ಭೇಟಿ, ರೈತರ ಸಮಸ್ಯೆ ಆಲಿಕೆ:

    ಹುಲಿಕುಂಟೆ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಂಜುನಾಥ್ ಕೆ ಅವರು, ಗ್ರಾಮಸ್ಥರ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಆಲಿಸಿದರು.

    ಈ ವೇಳೆ ಮಾತನಾಡಿದ ಅವರು, “ಎಲ್ಲರೂ ಕಡ್ಡಾಯವಾಗಿ, ಪಡಿತರ ಚೀಟಿ ಇ-ಕೆವೈಸಿ ಮತ್ತು ಪಿಎಂ ಕಿಸಾನ್ ಇ–ಕೆವೈಸಿ ಮಾಡಿಸಿಕೊಳ್ಳಿ. ಇದರಿಂದ ಪಡಿತರ ಮತ್ತು ಕಿಸಾನ್ ಹಣ ನಿಲ್ಲುವುದಿಲ್ಲ. ಯಾರಿಗೆ ವೃದ್ಧಾಪ್ಯ ವೇತನ ಬರುತ್ತಿಲ್ಲವೋ ಅಂತಹವರು ನಮ್ಮ ಗಮನಕ್ಕೆ ತನ್ನಿ, ಕೂಡಲೇ ವೇತನ ಬರುವಂತೆ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದರು.

    ವೃದ್ಧೆಗೆ ತಕ್ಷಣ ಸ್ಪಂದನೆ:

    ಗ್ರಾಮದ ಭೇಟಿ ವೇಳೆ ಓರ್ವ ವೃದ್ಧೆ “ನನ್ನ ಆಧಾರ್ ಕಾರ್ಡ್ ನವೀಕರಣ ಆಗುತ್ತಿಲ್ಲ, ಕಣ್ಣು ಮತ್ತು ಬೆರಳಚ್ಚು ಬರುತ್ತಿಲ್ಲ. ಇದರಿಂದ ನನ್ನ ಪಡಿತರ ಚೀಟಿ ಇ–ಕೆವೈಸಿ ಮಾಡಿಸಲು ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು. ತಕ್ಷಣ ಸ್ಪಂದಿಸಿದ ತಹಶೀಲ್ದಾರರು ಸ್ಥಳದಲ್ಲಿದ್ದ ಸಿಬ್ಬಂದಿಗೆ ವೃದ್ಧೆಯ ಸಮಸ್ಯೆ ಬಗೆಹರಿಸಿ, ಪಡಿತರ ದೊರೆಯುವಂತೆ ಮಾಡಲು ಸೂಚಿಸಿದರು.

    ಹವಾ ನಿಯಂತ್ರಿತ ಕೊಠಡಿಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಈ ಕಾಲದಲ್ಲಿ ತಹಶೀಲ್ದಾರ್ ರವರು ಹಳ್ಳಿಗಳಿಗೆ ಸ್ವತಃ ತಾವೇ ತೆರಳಿ ಜನಪರ ಕಾಳಜಿಯಿಂದ ಕೆಲಸ ಮಾಡುತ್ತಿರುವುದು ರೈತರ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜು, ರಾಘು ಗೌಡ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಂಬಾಡಿ ಬಳಿ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್; ತಪ್ಪಿದ ಭಾರೀ ಅನಾಹುತ

    November 22, 2026

    ನೇಗಲಾಲದ ಶ್ರೀ ಕಾವಲಮ್ಮ ದೇವಾಲಯಕ್ಕೆ 80 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ | ನ.21ರಂದು ಪ್ರಜಾ ಸೇವಾ ಆಂದೋಲನದಲ್ಲಿ ಡಾ.ಜಿ. ಪರಮೇಶ್ವರ್ ಅವರಿಂದ ರಸ್ತೆ ಲೋಕಾರ್ಪಣೆ

    November 20, 2026

    ಹೊಳವನಹಳ್ಳಿಯಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಭೆ ದಿಢೀರ್ ರದ್ದು! | ಕೊನೆ ಕ್ಷಣದಲ್ಲಿ ಸಭೆ ಮುಂದೂಡಿಕೆ; ನೂರಾರು ಫಲಾನುಭವಿಗಳಿಗೆ ನಿರಾಸೆ

    November 19, 2026

    Leave A Reply Cancel Reply

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ಅನಗತ್ಯ ಸ್ಪ್ಯಾಮ್ ಕರೆ, ಮೆಸೇಜ್‌ ಗಳಿಂದ ಬೇಸತ್ತಿದ್ದೀರಾ? ಇಲ್ಲಿದೆ ಪರಿಹಾರ

    November 23, 2026

    ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ ಅನಗತ್ಯ ಕರೆಗಳು ಮತ್ತು ಮೆಸೇಜ್‌ಗಳ ಕಾಟವೂ ಹೆಚ್ಚಾಗಿದೆ. ಕುಟುಂಬದವರು, ಸ್ನೇಹಿತರು ಅಥವಾ ಪರಿಚಿತರಿಂದ ಬರುವ ಮುಖ್ಯ…

    ಜಮೀನು, ಮನೆ ಪತ್ರಗಳು ಕಳೆದುಹೋದರೆ ಏನು ಮಾಡಬೇಕು? ದಾಖಲೆಗಳ ಸುರಕ್ಷತೆಗೆ ಇಲ್ಲಿವೆ ಉಪಾಯಗಳು

    November 23, 2026

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.