nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!

    November 23, 2026
    Facebook Twitter Instagram
    ಟ್ರೆಂಡಿಂಗ್
    • ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ
    • ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!
    • ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    •  ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?
    • ದೇವವ್ರತರು ಭೀಷ್ಮರಾದದ್ದು ಹೇಗೆ? ಇಚ್ಛಾಮರಣದ ವರದ ಹಿಂದಿನ ರೋಚಕ ಕಥೆ‌‌ ಇಲ್ಲಿದೆ
    • ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 
    • ಕೇಂದ್ರ–ರಾಜ್ಯಗಳ ನಡುವಿನ ಉತ್ತಮ ಸಂಬಂಧವೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಆಧಾರ: ಡಾ.ಶ್ರೀಪಾದ ಕುಲಕರ್ಣಿ
    • 2027ರ ಸರ್ಕಾರಿ ರಜೆ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    ಲೇಖನ November 23, 2026

    ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!

    By Ganesh TumkuruNovember 23, 2026No Comments2 Mins Read
    kartika deepa

    ಹಿಂದೂ ಪಂಚಾಂಗದಲ್ಲಿ ಅತ್ಯಂತ ಪವಿತ್ರ ಮಾಸಗಳಲ್ಲಿ ಒಂದೆಂದು ಪರಿಗಣಿಸಲಾಗುವ ಕಾರ್ತಿಕ ಮಾಸದ ಪ್ರಮುಖ ಆಚರಣೆಗಳಲ್ಲಿ ಕಾರ್ತಿಕ ಹುಣ್ಣಿಮೆಯೂ ಒಂದು. ಶಿವ ಮತ್ತು ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವ ಹೊಂದಿರುವ ಈ ದಿನವನ್ನು ‘ತ್ರಿಪುರಾರಿ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ. 2026ರಲ್ಲಿ ಅಧಿಕ ಮಾಸದ ಹಿನ್ನೆಲೆಯಲ್ಲಿ ಕಾರ್ತಿಕ ಹುಣ್ಣಿಮೆಯನ್ನು ನವೆಂಬರ್ 24ರಂದು, ಮಂಗಳವಾರ ಆಚರಿಸಲಾಗುತ್ತಿದೆ.

    2026ರ ಕಾರ್ತಿಕ ಹುಣ್ಣಿಮೆ ತಿಥಿ ಮತ್ತು ಶುಭ ಮುಹೂರ್ತ

    ಪಂಚಾಂಗದ ಪ್ರಕಾರ, ಹುಣ್ಣಿಮೆ ತಿಥಿಯು ನವೆಂಬರ್ 23ರ ರಾತ್ರಿ 11:42ಕ್ಕೆ ಆರಂಭವಾಗಿ, ನವೆಂಬರ್ 24ರ ರಾತ್ರಿ 8:23ಕ್ಕೆ ಮುಕ್ತಾಯವಾಗಲಿದೆ. ಸೂರ್ಯೋದಯದ ತಿಥಿಯನ್ನು ಆಧರಿಸಿ ನವೆಂಬರ್ 24ರಂದು ಕಾರ್ತಿಕ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.ಈ ದಿನ ಸಂಜೆ 5:08ರಿಂದ ರಾತ್ರಿ 7:47ರವರೆಗೆ ಪ್ರದೋಷ ಕಾಲವಿದ್ದು, ಈ ಸಮಯದಲ್ಲಿ ದೀಪದಾನ, ಶಿವನ ಆರಾಧನೆ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸುವುದು ಶುಭಕರವೆಂದು ನಂಬಲಾಗಿದೆ.

    ತ್ರಿಪುರಾಸುರನ ಸಂಹಾರದ ಹಿನ್ನೆಲೆ

    ಪುರಾಣಗಳ ಪ್ರಕಾರ, ತಾರಕಾಸುರನ ಮೂವರು ಪುತ್ರರಾದ ತ್ರಿಪುರಾಸುರರು ಮೂರು ಲೋಕಗಳಲ್ಲಿಯೂ ಉಪಟಳ ನೀಡುತ್ತಿದ್ದರು. ಅವರ ಅಟ್ಟಹಾಸದಿಂದ ದೇವತೆಗಳು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಪರಮೇಶ್ವರನು ಕಾರ್ತಿಕ ಹುಣ್ಣಿಮೆಯ ದಿನ ಒಂದೇ ಬಾಣದಿಂದ ತ್ರಿಪುರಾಸುರರ ಮೂರು ಪಟ್ಟಣಗಳನ್ನು ನಾಶಪಡಿಸಿ ದೇವತೆಗಳನ್ನು ರಕ್ಷಿಸಿದನು. ಈ ವಿಜಯದ ಸಂಕೇತವಾಗಿ ಶಿವನನ್ನು ‘ತ್ರಿಪುರಾರಿ’ ಎಂದು ಕರೆಯಲಾಗುತ್ತದೆ.

    ತ್ರಿಪುರಾಸುರರ ಸಂಹಾರದ ಸಂಭ್ರಮದಲ್ಲಿ ದೇವತೆಗಳು ಭೂಲೋಕಕ್ಕೆ ಆಗಮಿಸಿ, ಕಾಶಿಯ ಗಂಗಾ ತೀರದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು ಎಂಬುದು ಪೌರಾಣಿಕ ನಂಬಿಕೆ. ಈ ಹಿನ್ನೆಲೆಯಲ್ಲಿ ವಾರಾಣಸಿಯ ಘಾಟ್‌ಗಳಲ್ಲಿ ಕಾರ್ತಿಕ ಹುಣ್ಣಿಮೆಯಂದು ‘ದೇವ ದೀಪಾವಳಿ’ಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

    ಕಾರ್ತಿಕ ಹುಣ್ಣಿಮೆಯಂದು ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಸೂರ್ಯೋದಯಕ್ಕೂ ಮುನ್ನ ಗಂಗಾ, ಕಾವೇರಿ, ತುಂಗಭದ್ರಾ ಸೇರಿದಂತೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗಿ ಪುಣ್ಯ ಲಭಿಸುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ನದಿ ಸ್ನಾನಕ್ಕೆ ಸಾಧ್ಯವಾಗದವರು ಮನೆಯಲ್ಲಿಯೇ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬಹುದು.

    ಸಂಜೆಯ ವೇಳೆಯಲ್ಲಿ ಶಿವ ಮತ್ತು ವಿಷ್ಣು ದೇವಾಲಯಗಳಲ್ಲಿ, ತುಳಸಿ ಕಟ್ಟೆಯ ಮುಂದೆ ಹಾಗೂ ಮನೆಯ ಹೊಸ್ತಿಲಿನಲ್ಲಿ ತುಪ್ಪ ಅಥವಾ ಎಣ್ಣೆಯ ದೀಪಗಳನ್ನು ಬೆಳಗಿಸುವ ಸಂಪ್ರದಾಯವಿದೆ. ವರ್ಷದ 365 ದಿನಗಳ ಸಂಕೇತವಾಗಿ 365 ಬತ್ತಿಗಳನ್ನು ಬಳಸಿ ದೀಪ ಬೆಳಗಿಸುವುದಕ್ಕೂ ವಿಶೇಷ ಧಾರ್ಮಿಕ ಮಹತ್ವವಿದೆ ಎಂದು ಭಕ್ತರು ನಂಬುತ್ತಾರೆ.

    ಕಾರ್ತಿಕ ಹುಣ್ಣಿಮೆಯಂದು ಮನೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಅಥವಾ ಕಥೆಯನ್ನು ನೆರವೇರಿಸುವುದು ಶುಭಕರವೆಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.ಕಾರ್ತಿಕ ಮಾಸದ ಅಂತ್ಯದ ವೇಳೆಗೆ ಚಳಿಗಾಲ ಆರಂಭವಾಗುವುದರಿಂದ ಈ ದಿನ ಬಡವರು ಮತ್ತು ನಿರ್ಗತಿಕರಿಗೆ ಬೆಚ್ಚಗಿನ ಬಟ್ಟೆ, ಆಹಾರ, ಎಳ್ಳು ಹಾಗೂ ದೀಪಗಳನ್ನು ದಾನ ಮಾಡುವುದು ಶ್ರೇಷ್ಠ ಕಾರ್ಯವೆಂದು ಧಾರ್ಮಿಕ ಸಂಪ್ರದಾಯಗಳು ತಿಳಿಸುತ್ತವೆ. ಕಾರ್ತಿಕ ಹುಣ್ಣಿಮೆಯಂದು ಮಾಡುವ ದಾನಧರ್ಮಗಳಿಗೆ ಅಕ್ಷಯ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

     ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?

    November 23, 2026

    ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 

    November 22, 2026

    ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ

    November 21, 2026

    Leave A Reply Cancel Reply

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸರ್ಕಾರಿ ಶಾಲೆಗಳ ದತ್ತು ನೀತಿ ಮತ್ತು ಎಡಿಬಿ ಸಾಲದ ಒಪ್ಪಂದಕ್ಕೆ ವಿರೋಧ: AIDSO ನೇತೃತ್ವದಲ್ಲಿ ವಿದ್ಯಾರ್ಥಿ–ಪೋಷಕರ ಪ್ರತಿಭಟನೆ

    November 23, 2026

    ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೊಂದಿಗೆ ಮಾಡಿಕೊಂಡಿರುವ ಸಾಲದ ಒಪ್ಪಂದ ಹಾಗೂ ಸರ್ಕಾರಿ ಶಾಲೆಗಳನ್ನು…

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!

    November 23, 2026

     ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?

    November 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.